ಭಾರತ-ಪಾಕಿಸ್ತಾನದ ನಡುವೆ ಹುಳಿ ಹಿಂಡಿದ ವನಿ ಎಂಬ 21 ರ ತರುಣನ ಅಂಚೆ ಚೀಟಿ
ಸುದ್ದಿ ಸಾರ

ಭಾರತ-ಪಾಕಿಸ್ತಾನದ ನಡುವೆ ಹುಳಿ ಹಿಂಡಿದ ವನಿ ಎಂಬ 21 ರ ತರುಣನ ಅಂಚೆ ಚೀಟಿ

‘ಕಾಶ್ಮೀರ ಹುತಾತ್ಮರ ದಿನ’ದಂದು ಬುರ್ಹಾನ್‌ ವನಿಯ ಚಿತ್ರವಿರುವ ಸ್ಟ್ಯಾಂಪ್‌ನ್ನು  ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಇದರಲ್ಲಿ ವನಿಯನ್ನು ‘ಸ್ವಾತಂತ್ರ್ಯದ ಐಕಾನ್‌’ ಎಂದು ಚಿತ್ರಿಸಿರುವುದು ಭಾರತವನ್ನು ಕೆರಳಿಸಿದೆ.

ಜುಲೈ 8, 2016ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸೇನಾ ಪಡೆಯ ಗುಂಡಿಗೆ ಬಲಿಯಾದ 21ರ ತರುಣ ಬುರ್ಹಾನ್‌ ವನಿಯ ಹೆಸರು ಮತ್ತೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಪಾಕಿಸ್ತಾನ ಬಿಡುಗಡೆ ಮಾಡಿದ ಅಂಚೆ ಚೀಟಿ.

‘ಕಾಶ್ಮೀರ ಹುತಾತ್ಮರ ದಿನ’ದಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್‌ ಆಗಿದ್ದ ಬುರ್ಹಾನ್‌ ವನಿಯ ಚಿತ್ರವಿರುವ ಸ್ಟ್ಯಾಂಪ್‌ ಸೇರಿ 20 ಪೋಸ್ಟಲ್‌ ಸ್ಟ್ಯಾಂಪ್‌ಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಇದರಲ್ಲಿ ವನಿಯನ್ನು ‘ಸ್ವಾತಂತ್ರ್ಯದ ಐಕಾನ್‌’ ಎಂದು ಪಾಕಿಸ್ತಾನ ಚಿತ್ರಿಸಿರುವುದು ಭಾರತವನ್ನು ಕೆರಳಿಸಿದೆ.

ಜತೆಗೆ ಶನಿವಾರ ಮೂವರು ಪೊಲೀಸ್‌ ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೂರವಾಗಿ ಉಗ್ರರು ಹತ್ಯೆ ಮಾಡಿದ್ದರು. ಈ ಹತ್ಯೆ ಮತ್ತು ವನಿ ಅಂಚೆ ಚೀಟಿಗೆ ವಿರೋಧ ವ್ಯಕ್ತಪಡಿಸಿರುವ ಭಾರತ ಎರಡೂ ದೇಶಗಳ ನಡುವೆ ನಡೆಯಬೇಕಾಗಿದ್ದ ವಿದೇಶಾಂಗ ಸಚಿವರ ಮಟ್ಟದ ದ್ವಿಪಕ್ಷೀಯ ಮಾತುಕತೆಯಿಂದ ಹಿಂದೆ ಸರಿದಿದೆ.

ಅಂದುಕೊಂಡಂತೆ ನಡೆದಿದ್ದರೆ ಈ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ನಡುವೆ ಸಭೆ ನಡೆಯಬೇಕಾಗಿತ್ತು. ಆದರೆ ಎರಡು ವರ್ಷ ಹಿಂದೆ ಸಾವನ್ನಪ್ಪಿದ್ದ ಬುರ್ಹಾನ್‌ ವನಿಯ ಅಂಚೆ ಚೀಟಿ ಮತ್ತು ಮೂವರು ಪೊಲೀಸರ ಸಾವು ಈ ಸಭೆಗೆ ಅಡ್ಡಿ ಪಡಿಸಿದೆ.

ಅಂಚೆ ಚೀಟಿಯ ರೂಪದಲ್ಲಿ ಬುರ್ಹಾನ್‌ ವನಿಯನ್ನು ವೈಭವೀಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖುರೇಷಿ, "ಕಾಶ್ಮೀರದಲ್ಲಿ ಪ್ರತಿವರ್ಷ ನೂರಾರು, ಸಾವಿರಾರು ಜನರು ಹೋರಾಡುತ್ತಾರೆ, ಅದರಲ್ಲಿ ಎಲ್ಲರೂ ಉಗ್ರರಲ್ಲ,” ಎಂದಿದ್ದಾರೆ.

ಅಷ್ಟಕ್ಕೂ ಬುರ್ಹಾನ್‌ ವನಿ ಯಾರು?

Also read: ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?