ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲಪಡಿಸಲು ಒತ್ತಾಯ
ಸುದ್ದಿ ಸಾರ

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲಪಡಿಸಲು ಒತ್ತಾಯ

ಎಸಿಬಿ ರದ್ದುಗೊಳಿಸಿ ಕರ್ನಾಟಕ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ತುಂಬುವಂತೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಒತ್ತಾಯಿಸಿದೆ.

ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ಬಲಗೊಳಿಸಬೇಕು ಮತ್ತು ಆ ಮೂಲಕ ರಾಜ್ಯ ಸರಕಾರ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ತೋರಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ‘ಲೋಕಾಯುಕ್ತ ಬಲಪಡಿಸಿ’ ವಿಚಾರ ಸಂಕಿರಣದಲ್ಲಿ ಈ ಕುರಿತ ನಿರ್ಣಯ ತೆಗೆದುಕೊಳ್ಳಲಾಗಿದೆ.

ನಿರ್ಣಯಗಳು ಹೀಗಿವೆ:

  • ಕೂಡಲೇ ಎಸಿಬಿಯನ್ನು ರದ್ದುಗೊಳಿಸಿ ಸರಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಈ ಮುಂಚಿನಂತೆ ಲೋಕಾಯುಕ್ತದ ಸುಪರ್ದಿಗೆ ತರಬೇಕು.
  • ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಯನ್ನು ತಕ್ಷಣವೇ ತುಂಬಬೇಕು.
  • ಅಧಿಕಾರಿಗಳ ಅಧಿಕಾರ ದುರುಪಯೋಗ ಮತ್ತು ಕರ್ತವ್ಯಲೋಕ ಸಾಬೀತಾದ ಪ್ರಕರಣಗಳಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಕ್ರಮ ಕೈಗೊಳ್ಳಲು ಸರಕಾರಕ್ಕೆ ಮಾಡುವ ಶಿಫಾರಸುಗಳನ್ನು ಸರಕಾರ ಮರುಪರಿಶೀಲನೆ ಮಾಡದೆ ಒಂದು ತಿಂಗಳ ಅವಧಿಯ ಒಳಗೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
  • ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ವಿಚಾರಣೆಗೆ ತೆಗೆದುಕೊಂಡಿರುವ ಪ್ರತೀ ಪ್ರಕರಣದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು.
  • ಕರ್ತವ್ಯಲೋಪ ಅಥವಾ ದುರಾಡಳಿತಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ವಿಚಾರಣೆ ಮಾಡುವ ಮತ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು.
  • ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ನೀಡಿರುವ ಎರಡು ವರದಿಗಳನ್ನು ಸರಕಾರ ಅನುಷ್ಠಾನಕ್ಕೆ ತರಬೇಕು.

Also read: ಮರಳಿ ಬಂತು ಸಂಭ್ರಮದ ಉಗಾದಿ: ಲೋಕಾಯುಕ್ತ 'ಸಮಾಧಿ'ಗೆ ಇಂದು ವರ್ಷದ ತಿಥಿ!

ವಿಧಾನಸಭೆಯ ಮಾಜಿ ಸ್ಪೀಕರ್‌ ಕೃಷ್ಣ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ, ರವಿಕೃಷ್ಣಾ ರೆಡ್ಡಿ ಸೇರಿದಂತೆ ಹಲವರು ಈ ನಿರ್ಣಯಗಳಿಗೆ ಸಹಿ ಹಾಕಿದ್ದಾರೆ.

Also read: ‘1984ರಿಂದ ಚೂರಿ ಇರಿತದವರೆಗೆ’: ಕರ್ನಾಟಕ ಲೋಕಾಯುಕ್ತ ಸಾಗಿ ಬಂದ ಹಾದಿ