samachara
www.samachara.com
‘ಆಟವಾಡಿ, ಫಿಟ್‌ ಆಗಿರಿ’: ಮನದ ಮಾತಿನಲ್ಲಿ ಮೋದಿ
ಸುದ್ದಿ ಸಾರ

‘ಆಟವಾಡಿ, ಫಿಟ್‌ ಆಗಿರಿ’: ಮನದ ಮಾತಿನಲ್ಲಿ ಮೋದಿ

ಭಾನುವಾರದ ಮನದ ಮಾತು (ಮನ್‌ ಕಿ ಬಾತ್‌) ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋದಿ, “ಕ್ರೀಡಾ ದಿನದ ಶುಭಾಶಯ ತಿಳಿಸುತ್ತಾ ದೇಶದ ಜನತೆ ಫಿಟ್‌ ಆಗಿರುವುದು ಮುಖ್ಯ” ಎಂದಿದ್ದಾರೆ.

Team Samachara

“ಆಟವಾಡಿ ಫಿಟ್ ಆಗಿರಿ. ಫಿಟ್‌ ಆಗಿರುವುದು ದೇಶದ ಹಿತದೃಷ್ಟಿಯಿಂದ ಅತಿಮುಖ್ಯ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರದ ಮನದ ಮಾತು (ಮನ್‌ ಕಿ ಬಾತ್‌) ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋದಿ, “ಕ್ರೀಡಾ ದಿನದ ಶುಭಾಶಯ ತಿಳಿಸುತ್ತಾ ದೇಶದ ಜನತೆ ಫಿಟ್‌ ಆಗಿರುವುದು ಮುಖ್ಯ” ಎಂದಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುತ್ತಿರುವ ಕ್ರೀಡಾಪಟುಗಳನ್ನು ಅಭಿನಂದಿಸಿದ ಮೋದಿ, ಕ್ರೀಡೆಗೆ ದೇಶದ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ.

ಕೇರಳ ಪ್ರವಾಹದ ಬಗ್ಗೆ ಮಾತನಾಡಿದ ಮೋದಿ, ಇಡೀ ದೇಶದ ಜನತೆ ಕೇರಳ ಹಾಗೂ ನೈಸರ್ಗಿಕ ವಿಕೋಪ ಸಂಭವಿಸಿದ ಪ್ರದೇಶಗಳ ಜನರೊಂದಿಗಿದ್ದಾರೆ. ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದವರು ಬದುಕಿನ ವಿಶ್ವಾಸ ಕಳೆದುಕೊಳ್ಳುವುದು ಬೇಡ ಎಂದಿದ್ದಾರೆ.

ಎಂಜಿನಿಯರ್‌ಗಳ ದಿನದ ಸಂದರ್ಭದಲ್ಲಿ ಸರ್‌.ಎಂ. ವಿಶ್ವೇಶ್ವರಯ್ಯ ಅವರನ್ನು ನೆನೆದ ಮೋದಿ, ಅವರ ಕಾರ್ಯತತ್ಪರತೆ ಹಾಗೂ ಅವರ ಯೋಜನೆಗಳು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ.

ಮೋದಿ ತಮ್ಮ ಮಾತಿನಲ್ಲಿ ಹೆಚ್ಚು ದೀರ್ಘವಾಗಿ ಪ್ರಸ್ತಾಪಿಸಿದ್ದು ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು. ದೇಶದಲ್ಲಿ ರಾಜಕೀಯ ಸಂಸ್ಕೃತಿ ಸುಧಾರಿಸಲು, ಆಡಳಿತದಲ್ಲಿ ಹೊಸತನನ ಬರಲು ವಾಜಪೇಯಿ ಕೊಡುಗೆ ಅಪಾರವಾದುದು ಎಂದು ಮೋದಿ ಹೇಳಿದರು.

ಅತ್ಯಾಚಾರ ಪ್ರಕರಣಗಳಲ್ಲಿ ಕಠಿಣ ಹಾಗೂ ತ್ವರಿತ ನ್ಯಾಯದಾನವಾಗುತ್ತಿರುವುದನ್ನು ಪ್ರಸ್ತಾಪಿಸಿದ ಮೋದಿ, ಇಂತಹ ತ್ವರಿತ ನ್ಯಾಯದಾನದಿಂದ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಬೀಳುವ ವಿಶ್ವಾಸವಿದೆ ಎಂದರು.