samachara
www.samachara.com
ಕುಲಭೂಷಣ್‌ ಜಾಧವ್ ಪ್ರಕರಣ: 2019ರ ಫೆಬ್ರುವರಿಯಲ್ಲಿ ಮತ್ತೆ ICJ ಮುಂದೆ ವಿಚಾರಣೆಗೆ
ಸುದ್ದಿ ಸಾರ

ಕುಲಭೂಷಣ್‌ ಜಾಧವ್ ಪ್ರಕರಣ: 2019ರ ಫೆಬ್ರುವರಿಯಲ್ಲಿ ಮತ್ತೆ ICJ ಮುಂದೆ ವಿಚಾರಣೆಗೆ

ಅಂತರರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್‌ ಜಾಧವ್‌ ಪ್ರಕರಣದ ವಿಚಾರಣೆಯನ್ನು 2019ರ ಫೆಬ್ರುವರಿ ತಿಂಗಳಲ್ಲಿ ನಡೆಸಲಿದೆ.

ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯ 2019ರ ಫೆಬ್ರುವರಿ ತಿಂಗಳಲ್ಲಿ ವಿಚಾರಣೆ ನಡೆಸಲಿದೆ ಎಂದು ಜಿಯೊ ಟಿವಿ ವರದಿ ಮಾಡಿದೆ.

ಫೆಬ್ರುವರಿ ತಿಂಗಳಲ್ಲಿ ಒಂದು ವಾರ ಕಾಲ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಅಂತರರಾಷ್ಟ್ರೀಯ ನ್ಯಾಯಾಲಯದ 10 ಮಂದಿ ನ್ಯಾಯಮೂರ್ತಿಗಳ ಪೀಠವು 2017ರ ಮೇ 18ರಂದು ಮುಂದಿನ ಆದೇಶದವರೆಗೆ ಕುಲಭೂಷಣ್‌ ಜಾಧವ್‌ಗೆ ಮರಣದಂಡನೆ ಶಿಕ್ಷೆ ಜಾರಿ ಮಾಡದಂತೆ ಆದೇಶಿಸಿತ್ತು.

Also read: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ಒಡ್ಡಿದ ಅಂತರರಾಷ್ಟ್ರೀಯ ಕೋರ್ಟ್; ಸದ್ಯಕ್ಕೆ ಭಾರತ ನಿರಾಳ

ಕುಲಭೂಷಣ್ ಜಾಧವ್‌ ಇರಾನ್‌ನಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎಂಬ ವಾದ ಮಾಡಿದ್ದ ಪಾಕಿಸ್ತಾನದ ಜಾಧವ್‌ ವಿರುದ್ಧ ಬೇಹುಗಾರಿಕೆ ಹಾಗೂ ದೇಶದ ವಿರುದ್ಧ ಸಂಚು ನಡೆಸುತ್ತಿರುವ ಆರೋಪ ಹೊರಿಸಿದೆ. ಈ ಪ್ರಕರಣದಲ್ಲಿ ಸೇನಾ ನ್ಯಾಯಾಲಯ ಜಾಧವ್‌ಗೆ ಮರಣದಂಡನೆ ವಿಧಿಸಿದೆ.

ಆದರೆ, ಪಾಕಿಸ್ತಾನದ ವಾದ ಸಂಪೂರ್ಣ ಸುಳ್ಳು ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿರುವ ಭಾರತ, ಜಾಧವ್‌ ಭಾರತೀಯ ನೌಕಾದಳದಿಂದ ನಿವೃತ್ತಿಯಾದ ಬಳಿಕ ವ್ಯಾವಹಾರಿಕ ಉದ್ದೇಶಕ್ಕಾಗಿ ಇರಾನ್‌ಗೆ ತೆರಳಿದ್ದರು. ಈ ವೇಳೆ ಜಾಧವ್‌ ಅವರನ್ನು ಅಪಹರಿಸಿ ಅವರ ಮೇಲೆ ಬೇಹುಗಾರಿಕೆ ಆರೋಪ ಹೊರಿಸಲಾಗಿದೆ ಎಂದಿತ್ತು.

Also read: ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು 'ಅಂತಾರಾಷ್ಟ್ರೀಯ ನ್ಯಾಯಾಲಯ'ದ ಹೂರಣ?