ಮೊಘಲ್ ಸ್ಥಳನಾಮ ಕೇಸರೀಕರಣ; ರಾಜೇ ರಾಜ್ಯದಲ್ಲಿ ಹೆಸರಿನ ರಾಜಕಾರಣ!
ಸುದ್ದಿ ಸಾರ

ಮೊಘಲ್ ಸ್ಥಳನಾಮ ಕೇಸರೀಕರಣ; ರಾಜೇ ರಾಜ್ಯದಲ್ಲಿ ಹೆಸರಿನ ರಾಜಕಾರಣ!

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸ್ಥಳನಾಮಗಳ ಕೇಸರೀಕರಣ ನಡೆಯುತ್ತಿದೆ. ಉತ್ತರ ಪ್ರದೇಶದ ಬಳಿಕ ಈಗ ರಾಜಸ್ತಾನದ ಸರದಿ.

ಉತ್ತರ ಪ್ರದೇಶದಲ್ಲಿ ಕೇಸರೀಕರಣ ಮುಂದುವರಿದಿರುವ ಬೆನ್ನಲ್ಲೇ ರಾಜಸ್ತಾನದಲ್ಲಿ ಮೊಘಲ್‌ ಸ್ಥಳನಾಮಗಳನ್ನು ಬದಲಿಸುವ ಪರ್ವ ಆರಂಭವಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜಸ್ತಾನದಲ್ಲಿ ಮೊಘಲರ ಕಾಲದ ಊರುಗಳ ಹೆಸರುಗಳ ಕೇಸರೀಕರಣ ನಡೆಯುತ್ತಿದೆ.

ಭಡಮೇರ್‌ ಜಿಲ್ಲೆಯ ಮಿಯಾ ಕಾ ಬಡ ಗ್ರಾಮ 'ಮಹೇಶ್‌ ನಗರ’ವಾಗಿ, ಜುನ್‌ಜುನು ಜಿಲ್ಲೆಯ ಇಸ್ಮಾಯಿಲ್‌ಪುರ ‘ಪಿಚನ್ವಾ ಖರ್ದ್‌’ಆಗಿ, ಅಜ್ಮೀರ್‌ ಜಿಲ್ಲೆಯ ಸಲೇಮಾಬಾದ್‌ ‘ಶ್ರೀನಿಂಬರ್ಕ್‌ ತೀರ್ಥ’ವಾಗಿ ಹಾಗೂ ನರ್ಪದಾ ‘ನರ್‌ಪುರ’ಆಗಿ ಬದಲಾಗಿವೆ.

Also read: ಕೇಸರಿಮಯ ಉತ್ತರ ಪ್ರದೇಶ; ಕಚೇರಿ, ಪ್ರತಿಮೆ ಬಳಿಕ ಮುಘಲ್‌ಸರಾಯ್‌ ರೈಲು ನಿಲ್ದಾಣದ ಸರದಿ!

ಚುನಾವಣೆಗೂ ಮುನ್ನಾ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರ ರಾಜಸ್ತಾನದಲ್ಲಿ ಬಹುಸಂಖ್ಯಾತರ ಏಲೈಕೆಗಾಗಿ ಈ ರೀತಿ ಸ್ಥಳನಾಮಗಳನ್ನು ಬದಲಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಸರಕಾರ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಸ್ಥಳೀಯರ ಮದುವೆ ಕಾರಣವನ್ನು ಮುಂದಿಟ್ಟಿದೆ.

ಮೊಘಲ್‌ ಕಾಲದ ಸ್ಥಳನಾಮವಿರುವ ಬಹುತೇಕ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನ ಊರುಗಳ ಹೆಸರುಗಳಿಂದ ತಮ್ಮ, ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಹೀಗಾಗಿ ಗ್ರಾಮಗಳ ಹೆಸರು ಬದಲಿಸಿ ಎಂದು ಪೋಷಕರು ಮನವಿ ಮಾಡಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಈ ಗ್ರಾಮಗಳಲ್ಲಿ ಮುಸ್ಲಿಮರ ಕುಟುಂಬಗಳ ಸಂಖ್ಯೆ ಕಡಿಮೆ ಇದ್ದು ಹಿಂದೂಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುಸಂಖ್ಯಾತರ ಮನವಿಗೆ ಸ್ಪಂದಿಸಲಾಗಿದೆ ಎಂದಿದೆ ಸರಕಾರ.

ಚುನಾವಣೆ ಸಮೀಪದಲ್ಲಿ ಓಲೈಕೆಗಾಗಿ ರಾಜಸ್ತಾನದಲ್ಲಿ ಹೆಸರಿನ ರಾಜಕಾರಣ ಮಾಡುತ್ತಿರುವ ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳನ್ನೆಲ್ಲಾ ಕೇಸರಿಮಯಗೊಳಿಸಲು ಹೊರಟಿದೆ.