ಮರಾಠ ಮೀಸಲಾತಿ ಹೋರಾಟ; ನಾಳೆ ಮುಂಬೈ ಬಂದ್‌
ಸುದ್ದಿ ಸಾರ

ಮರಾಠ ಮೀಸಲಾತಿ ಹೋರಾಟ; ನಾಳೆ ಮುಂಬೈ ಬಂದ್‌

ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಒತ್ತಾಯಿಸುತ್ತಿರುವ ಮರಾಠ ಸಮುದಾಯ ಗುರುವಾರ ಮುಂಬೈ ಬಂದ್‌ಗೆ ಕರೆ ನೀಡಿದೆ.

ಮರಾಠ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿರುವ ಮರಾಠ ಸಮುದಾಯದ ಸಂಘಟನೆಗಳು ಗುರುವಾರ ಮುಂಬೈ ಬಂದ್‌ಗೆ ಕರೆ ನೀಡಿವೆ.

ಮುಂಬೈನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿ, ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಬಂದ್‌ ಮಾಡಲು ಕೆಲವು ಸಂಘಟನೆಗಳು ನಿರ್ಧರಿಸಿವೆ. ಆದರೆ, ಕೆಲ ಸಂಘಟನೆಗಳು ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ಬಂದ್‌ಗೆ ಒತ್ತಾಯಿಸಿವೆ.

ಬಂದ್‌ ವಿಚಾರವಾಗಿ ಮರಾಠ ಸಮುದಾಯದ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಸಕಲ್‌ ಮರಾಠ ಸಮಾಜ್‌ ಒಕ್ಕೂಟ ಮುಂಬೈ ಬಂದ್‌ಗೆ ಕರೆ ನೀಡಿದೆ. ಯಾವುದೇ ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ಶಾಂತಿಯುತ ಬಂದ್‌ ನಡೆಸುತ್ತೇವೆ ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.

Also read: ಮರಾಠ ಮೀಸಲಾತಿ; ಪೋಷಕರ ಪ್ರತಿರೋಧಕ್ಕೆ ಸಮುದಾಯದ ಮಕ್ಕಳು ಶಾಲೆಯಿಂದ ಹೊರಗೆ

ಮರಾಠ ಮೀಸಲಾತಿ ಹೋರಾಟ ಕಳೆದೊಂದು ತಿಂಗಳಿಂದೀಚೆಗೆ ತೀವ್ರ ಸ್ವರೂಪ ಪಡೆಯುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಬಂದ್‌ ನಡೆಸಿದ್ದ ಸಂಘಟನೆಗಳು ಈಗ ವಾಣಿಜ್ಯ ನಗರಿ ಮುಂಬೈ ಬಂದ್‌ಗೆ ಕರೆ ನೀಡಿವೆ. ಬಂದ್‌ ಹೆಸರಿನಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೀಡಿದ್ದಾರೆ.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರಕಾರ ಲಿಖಿತ ರೂಪದಲ್ಲಿ ಭರವಸೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಮರಾಠ ಸಮುದಾಯದ ಸಂಘಟನೆಗಳು ಹೇಳಿವೆ.

Also read: ದಲಿತ VS ಮರಾಠ: ಜಾತಿ ಸಂಘರ್ಷಕ್ಕೆ ಮುನ್ನುಡಿ ಬರೆದ ಮಹಾರಾಷ್ಟ್ರ ಬಹುಸಂಖ್ಯಾತರ ಹತಾಶೆಯ ಹೋರಾಟ!