ಮರೀನಾ ಬೀಚ್‌ ಮಣ್ಣು ಸೇರಿದ ತಮಿಳುನಾಡಿನ ‘ಕಲೈನಾರ್’
ಸುದ್ದಿ ಸಾರ

ಮರೀನಾ ಬೀಚ್‌ ಮಣ್ಣು ಸೇರಿದ ತಮಿಳುನಾಡಿನ ‘ಕಲೈನಾರ್’

ಕರುಣಾನಿಧಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಚೆನ್ನೈನ ಮರೀನಾ ಬೀಚ್‌ನ ಅಣ್ಣಾದೊರೈ ಸಮಾಧಿ ಬಳಿ ನಡೆಯಿತು.

ಕರುಣಾನಿಧಿ ಅವರ ಅಂತ್ಯಕ್ರಿಯೆ ಚೆನ್ನೈನ ಮರೀನಾ ಬೀಚ್‌ನ ಅಣ್ಣಾದೊರೈ ಸಮಾಧಿ ಸಮೀಪ ಬುಧವಾರ ಸಂಜೆ ನಡೆಯಿತು.

ರಾಜಾಜಿ ಹಾಲ್‌ನಿಂದ ಹೊರಟ ಅಂತಿಮಯಾತ್ರೆ ಶಿವಾನಂದ ರಸ್ತೆ, ಅಣ್ಣಾ ರಸ್ತೆ, ಕಾಮರಾಜರ್‌ ರಸ್ತೆ ಮಾರ್ಗವಾಗಿ ಸಂಜೆ 6 ಗಂಟೆ ಸುಮಾರಿಗೆ ಮರೀನಾ ಬೀಚ್‌ ತಲುಪಿತು.

Also read: ‘ಕಲೈನಾರ್‌ ಕರುಣಾನಿಧಿ’: ಹೋರಾಟ- ರಾಜಕೀಯ- ಬದುಕು- ಉದ್ಯಮಗಳ ಅಪರೂಪದ ಅಧ್ಯಾಯಗಳು

ಇದಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನದ ವೇಳೆ ಕಾಲ್ತುಳಿತದಿಂದ ಇಬ್ಬರು ಸಾವನ್ನಪ್ಪಿದ್ದರು.

ಮರೀನಾ ಬೀಚ್‌ ತಲುಪಿದ ಪಾರ್ಥಿವ ಶರೀರಕ್ಕೆ ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಕುಟುಂಬ ಸದಸ್ಯರು ಹಾಗೂ ಗಣ್ಯರು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶವಪೆಟ್ಟಿಗೆಯಲ್ಲಿರಿಸಿದ್ದ ಪಾರ್ಥಿವ ಶರೀರವನ್ನು 7 ಗಂಟೆಗೆ ಮಣ್ಣಿಗೆ ಸೇರಿಸಲಾಯಿತು.