ಕರುಣಾನಿಧಿ ಆರೋಗ್ಯ ಅಸ್ಥಿರ; 24 ಗಂಟೆವರೆಗೂ ಏನೂ ಹೇಳಲಾಗದು ಎಂದ ವೈದ್ಯರು
ಸುದ್ದಿ ಸಾರ

ಕರುಣಾನಿಧಿ ಆರೋಗ್ಯ ಅಸ್ಥಿರ; 24 ಗಂಟೆವರೆಗೂ ಏನೂ ಹೇಳಲಾಗದು ಎಂದ ವೈದ್ಯರು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ 94 ವರ್ಷದ ಎಂ. ಕರುಣಾನಿಧಿ ಆರೋಗ್ಯ ಅಸ್ಥಿರವಾಗಿದೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಸೋಮವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿರುವ ಕಾವೇರಿ ಆಸ್ಪತ್ರೆ ವೈದ್ಯರು ಮುಂದಿನ 24 ಗಂಟೆಯವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ವಯೋಸಹಜ ಅನಾರೋಗ್ಯ ಕಾರಣದಿಂದ ಜುಲೈ 28ರಂದು ಕರುಣಾನಿಧಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರುಣಾನಿಧಿ ಆರೋಗ್ಯ ಅಸ್ಥಿರ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಕಾವೇರಿ ಆಸ್ಪತ್ರೆಯ ಹೊರಭಾಗದಲ್ಲಿ ಜಮಾಯಿಸಿದ್ದಾರೆ.

ಕರುಣಾನಿಧಿ ಆಸ್ಪತ್ರೆಗೆ ಸೇರಿದ ಬಳಿಕ ಅವರು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳೂ ತಮಿಳುನಾಡಿನ ಹಲವೆಡೆ ಹಬ್ಬಿದ್ದವು.

ಕರುಣಾನಿಧಿ ಆಸ್ಪತ್ರೆಗೆ ಸೇರಿರುವ ವಿಷಯ ತಿಳಿದೇ 21 ಮಂದಿ ಅಭಿಮಾನಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಡಿಕೆಎಂ ಇತ್ತೀಚೆಗೆ ಹೇಳಿತ್ತು.