ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್‌; ಪೊಲೀಸರ ಗುಂಡಿಗೆ 15 ನಕ್ಸಲರ ಬಲಿ
ಸುದ್ದಿ ಸಾರ

ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್‌; ಪೊಲೀಸರ ಗುಂಡಿಗೆ 15 ನಕ್ಸಲರ ಬಲಿ

ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸರ ಎನ್‌ಕೌಂಟರ್‌ಗೆ 15 ನಕ್ಸಲರು ಬಲಿಯಾಗಿದ್ದಾರೆ.

ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ 15 ಮಂದಿ ನಕ್ಸಲರು ಸೋಮವಾರ ಸಾವನ್ನಪ್ಪಿದ್ದಾರೆ. ಸುಕ್ಮಾ ಜಿಲ್ಲೆಯ ಕೊಂಟ ಮತ್ತು ಗೋಲಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರ ಎನ್‌ಕೌಂಟರ್‌ ನಡೆದಿದೆ.

ದಕ್ಷಿಣ ಸುಕ್ಮಾ ಪ್ರದೇಶದ ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ನಕ್ಸರನ್ನು ಸುತ್ತುವರಿದ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಈ ಎನ್‌ಕೌಂಟರ್‌ ನಡೆಸಿದ್ದಾರೆ. ಛತ್ತೀಸ್‌ಗಡದಲ್ಲಿ ಆಗಸ್ಟ್‌ ತಿಂಗಳ ಆರಂಭದಲ್ಲೇ ನಡೆಯುತ್ತಿರುವ ಎರಡನೇ ನಕ್ಸಲ್‌ ಎನ್‌ಕೌಂಟರ್‌ ಇದು. ಆಗಸ್ಟ್‌ 3ರಂದು ಛತ್ತೀಸ್‌ಗಡದ ಬಿಜಾಪುರದಲ್ಲಿ ಒಬ್ಬ ನಕ್ಸಲ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು.

Also read: ‘ನಕ್ಸಲ್‌ ಪ್ಯಾಕೇಜ್‌’: ಅಕ್ರಮಗಳ ಸಂತೆಯಲ್ಲಿ ಸುಧಾರಣೆಯ ಸೋಗು!

ಒಂದು ಕಡೆ ಶಸ್ತ್ರತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ಮುಖ್ಯಮಂತ್ರಿ ರಮಣ್‌ ಸಿಂಗ್‌ ನಕ್ಸಲರಲ್ಲಿ ಮನವಿ ಮಾಡಿದ್ದರೆ, ಮತ್ತೊಂದು ಕಡೆ ಪೊಲೀಸರು ನಕ್ಸಲರನ್ನು ನಿರ್ನಾಮ ಮಾಡಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಛತ್ತೀಸ್‌ಗಡದಲ್ಲಿ ಪೊಲೀಸರ ವಿರುದ್ಧ ನಕ್ಸಲರು, ನಕ್ಸಲರ ವಿರುದ್ಧ ಪೊಲೀಸರು ಸರಣಿಯಲ್ಲಿ ದಾಳಿ ಪ್ರತಿದಾಳಿ ನಡೆಸುತ್ತಲೇ ಇದ್ದಾರೆ. ಈ ಬಾರಿ ನಕ್ಸಲರನ್ನು ನಿರ್ನಾಮ ಮಾಡಲು ಹೊರಟಿರುವ ನಕ್ಸಲ್‌ ನಿಗ್ರಹ ಪಡೆ ನಕ್ಸಲರ ಪ್ರಾಬಲ್ಯವಿರುವ ಸುಕ್ಮಾ ಜಿಲ್ಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.