ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ ಕಾರ್‌ಗಳಿಗೂ ನೋಂದಣಿ ಸಂಖ್ಯೆ ಕಡ್ಡಾಯ
ಸುದ್ದಿ ಸಾರ

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ ಕಾರ್‌ಗಳಿಗೂ ನೋಂದಣಿ ಸಂಖ್ಯೆ ಕಡ್ಡಾಯ

ದೆಹಲಿ ಹೈಕೋರ್ಟ್‌ ಆದೇಶದ ಪ್ರಕಾರ ಇನ್ನು ಮುಂದೆ ದೇಶದ ಎಲ್ಲಾ ಸಾಂವಿಧಾನಿಕ ಮುಖ್ಯಸ್ಥರ ವಾಹನಗಳಿಗೂ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಕಾರ್‌ಗಳಿಗೂ ಇನ್ನು ಮುಂದೆ ನೋಂದಣಿ ಸಂಖ್ಯೆ ಹಾಕಬೇಕಾದ್ದು ಕಡ್ಡಾಯ.

“ಎಲ್ಲಾ ವಾಹನಗಳಲ್ಲೂ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ. ಇದಕ್ಕೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ವಾಹನಗಳು ಹೊರತಲ್ಲ” ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ ಕಾರ್‌ಗಳಿಗೂ ನೋಂದಣಿ ಸಂಖ್ಯೆ ಕಡ್ಡಾಯ

ಸಾಂವಿಧಾನಿಕ ಮುಖ್ಯಸ್ಥರ ವಾಹನಗಳಿಗೂ ನೋಂದಣಿ ಸಂಖ್ಯೆ ಕಡ್ಡಾಯಗೊಳಿಸಬೇಕೆಂದು ಕೋರಿ ಸ್ವಯಂಸೇವಾ ಸಂಸ್ಥೆಯೊಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಾಂವಿಧಾನಿಕ ಮುಖ್ಯಸ್ಥರು ಬಳಸುವ ಎಲ್ಲಾ ವಾಹನಗಳೂ ನೋಂದಣಿಯಾಗಿರಬೇಕು ಮತ್ತು ನೋಂದಣಿ ಸಂಖ್ಯೆಯನ್ನು ವಾಹನದಲ್ಲಿ ಹಾಕುವುದನ್ನು ಕಡ್ಡಾಯಗೊಳಿಸಬೇಕು ಎಂಬುದು ಮನವಿ ಮಾಡಲಾಗಿತ್ತು.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಗಳ ರಾಜ್ಯಪಾಲರು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳ ವಾಹನಗಳಲ್ಲಿ ನೋಂದಣಿ ಸಂಖ್ಯೆಯ ಬದಲಿಗೆ ರಾಷ್ಟ್ರ ಲಾಂಛನ ಬಳಸಲಾಗುತ್ತಿದೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ ಕಾರ್‌ಗಳಿಗೂ ನೋಂದಣಿ ಸಂಖ್ಯೆ ಕಡ್ಡಾಯ

ಹೀಗೆ ನೋಂದಣಿ ಸಂಖ್ಯೆಯ ಬದಲಿಗೆ ರಾಷ್ಟ್ರ ಲಾಂಛನ ಬಳಸುವುದು ಮೋಟಾರ್‌ ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಸ್ವಯಂಸೇವಾ ಸಂಸ್ಥೆ ಅರ್ಜಿಯಲ್ಲಿ ಹೇಳಿತ್ತು.

ಆರ್‌ಟಿಐ ಅಡಿ ಕೇಳಲಾಗಿದ್ದ ಮಾಹಿತಿಗೆ ಉತ್ತರಿಸಿದ್ದ ಕೇಂದ್ರ ಸರಕಾರ ಪ್ರೊಟೊಕಾಲ್‌ ವಿಭಾಗದಡಿ 14 ಕಾರ್‌ಗಳು ನೋಂದಣಿಯಾಗಿವೆ ಎಂದು ಹೇಳಿತ್ತು. ಆದರೆ, ಭದ್ರತೆಯ ಕಾರಣದಿಂದ ರಾಷ್ಟ್ರಪತಿ ಭವನದ ವಾಹನಗಳ ನೋಂದಣಿ ಸಂಖ್ಯೆ ನೀಡಲು ನಿರಾಕರಿಸಿತ್ತು.

ದೆಹಲಿ ಹೈಕೋರ್ಟ್‌ ಸೂಚನೆಯಂತೆ ಇನ್ನು ಮುಂದೆ ಸಾಂವಿಧಾನಿಕ ಮುಖ್ಯಸ್ಥರ ಕಾರ್‌ಗಳಲ್ಲೂ ನೋಂದಣಿ ಸಂಖ್ಯೆಗಳು ಕಾಣಿಸಿಕೊಳ್ಳಲಿವೆ.