samachara
www.samachara.com
5ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ; ಸಾಧನೆ ದೊಡ್ಡದಾದರೂ ಪ್ರಯೋಜನ ಕಡಿಮೆ!
ಚಿತ್ರಕೃಪೆ: ಬಿಸಿನೆಸ್ ಸ್ಟ್ಯಾಂಡರ್ಡ್
ಸುದ್ದಿ ಸಾರ

5ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ; ಸಾಧನೆ ದೊಡ್ಡದಾದರೂ ಪ್ರಯೋಜನ ಕಡಿಮೆ!

ಭಾರತದ ಆರ್ಥಿಕತೆ ಹೀಗೆ ನಾಗಾಲೋಟದಲ್ಲಿ ಮುಂದುವರಿದರೂ ಬ್ರಿಟನ್ ದೇಶದ ಜೀವನ ಮಟ್ಟವನ್ನು ತಲುಪಲು ದಶಕಗಳೇ ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಕಾರಣ ಭಾರತದಲ್ಲಿ ಹೆಚ್ಚಿರುವ ಜನ ಸಂಖ್ಯೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಈಗಾಗಲೇ ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದ 6ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ವರ್ಷಾಂತ್ಯಕ್ಕೆ ಬ್ರಿಟನ್‌ ಅನ್ನೂ ಹಿಂದಿಕ್ಕಿ ಭಾರತ 5ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ವಿಶ್ವ ಬ್ಯಾಂಕ್‌ನ ನಿವ್ವಳ ಉತ್ಪನ್ನದ ಅಂಕಿ ಅಂಶಗಳು ಹೇಳುತ್ತಿವೆ. ಹೀಗೆ ಆರ್ಥಿಕತೆ ಬೆಳೆಯುತ್ತಿದ್ದರೂ ವೈಯಕ್ತಿಕ ಮಟ್ಟಕ್ಕೆ ಬಂದಾಗ ಮಾತ್ರ ಇದರ ಪಾತ್ರ ತೀರಾ ಸಣ್ಣದು. ಕಾರಣ ಭಾರತದ ಜನಸಂಖ್ಯೆ.

ವಿಶ್ವಬ್ಯಾಂಕ್‌ನ 2017ರ ವರದಿ ಪ್ರಕಾರ ಭಾರತದ ಆರ್ಥಿಕತೆ ಫ್ರಾನ್ಸ್‌ಗಿಂತ 15 ಬಿಲಿಯನ್ ಡಾಲರ್ ಅಧಿಕವಾಗಿದೆ. ಸದ್ಯ ಅಮೆರಿಕಾ, ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿದೆ ಭಾರತವಿದೆ. ಇವುಗಳಲ್ಲಿ ಚೀನಾ ಮತ್ತು ಅಮೆರಿಕಾದ ಆರ್ಥಿಕತೆ ಸದ್ಯಕ್ಕೆ ಹಿಂದಿಕ್ಕಲಾರದಷ್ಟು ಬೃಹತ್ತಾಗಿವೆ.

ಆದರೆ ಬ್ರಿಟನ್ ದೇಶದ ಆರ್ಥಿಕ ಗಾತ್ರ ಭಾರತಕ್ಕಿಂತ ಕೇವಲ 25 ಬಿಲಿಯನ್ ಡಾಲರ್ ಹೆಚ್ಚಿನದಾಗಿದ್ದು ಸದ್ಯದಲ್ಲೇ ಹಿಂದಿಕ್ಕಬಹುದಾಗಿದೆ. ಪ್ರಸ್ತುತ 2.6 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿರುವ ಭಾರತ ಈ ವರ್ಷದ ಅಂತ್ಯದೊಳಗೆ ಶೇಕಡಾ 7.3ರ ಜಿಡಿಪಿ ಬೆಳವಣಿಗೆ ದರದ ಅನ್ವಯ ಬ್ರಿಟನ್ ದೇಶವನ್ನು ಹಿಂದಿಕ್ಕಲಿದೆ.

5ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ; ಸಾಧನೆ ದೊಡ್ಡದಾದರೂ ಪ್ರಯೋಜನ ಕಡಿಮೆ!

ತಲಾ ಆದಾಯ ಮತ್ತು ಆರ್ಥಿಕತೆ ಗಾತ್ರ

ಭಾರತದ ಆರ್ಥಿಕತೆ ಹೀಗೆ ನಾಗಾಲೋಟದಲ್ಲಿ ಮುಂದುವರಿದರೂ ಬ್ರಿಟನ್ ದೇಶದ ಜೀವನ ಮಟ್ಟವನ್ನು ತಲುಪಲು ದಶಕಗಳೇ ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಕಾರಣ ಭಾರತದಲ್ಲಿ ಹೆಚ್ಚಿರುವ ಜನ ಸಂಖ್ಯೆ. ಬ್ರಿಟನ್ ದೇಶದ ತಲಾ ಆದಾಯ 42,515 ಡಾಲರ್ ಇದ್ದರೆ ಭಾರತೀಯರ ತಲಾ ಅದಾಯ ಜುಜುಬಿ 1,964 ಡಾಲರ್ ಮಾತ್ರ.

5ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ; ಸಾಧನೆ ದೊಡ್ಡದಾದರೂ ಪ್ರಯೋಜನ ಕಡಿಮೆ!

ಈ ವರ್ಷ ಬ್ರಿಟನ್ ಆರ್ಥಿಕತೆಯ ಗಾತ್ರವನ್ನು ಭಾರತ ಹಿಂದಿಕ್ಕಿದರೂ ತಲಾ ಆದಾಯದ ವಿಚಾರದಲ್ಲಿ ಸಾಧ್ಯವಿಲ್ಲ ಎನ್ನುವುದು ಸತ್ಯ. ಜೊತೆಗೆ ನಾಲ್ಕನೇ ಸ್ಥಾನದಲ್ಲಿರುವ ಜರ್ಮನಿಯನ್ನೂ ಹಿಂದಿಕ್ಕಲೂ ಹಲವು ವರ್ಷಗಳೇ ಬೇಕು . ಸದ್ಯದ ಅಂದಾಜು ಪ್ರಕಾರ ಭಾರತ 2024ರಲ್ಲಿ ಈ ಗುರಿ ತಲುಪುವ ನಿರೀಕ್ಷೆ ಇದೆ. ಇದಲ್ಲದೆ 2030ರ ಹೊತ್ತಿಗೆ ಜಪಾನನ್ನೂ ಹಿಂದಿಕ್ಕಿ ಭಾರತ ವಿಶ್ವದ ಮೂರನೇ ಬೃಹತ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅಲ್ಲಿಂದ ನಂತರ ಚೀನಾ ಮತ್ತು ಅಮೆರಿಕಾವನ್ನು ಯಾವತ್ತು ಹಿಂದಿಕ್ಕಲಿದೆಯೋ ಗೊತ್ತಿಲ್ಲ.