‘ಮತ್ತೆ ನೆನಪಾದ ವಾಜಪೇಯಿ’: ಅನಾರೋಗ್ಯದಿಂದ ಏಮ್ಸ್‌ಗೆ ದಾಖಲು
ಸುದ್ದಿ ಸಾರ

‘ಮತ್ತೆ ನೆನಪಾದ ವಾಜಪೇಯಿ’: ಅನಾರೋಗ್ಯದಿಂದ ಏಮ್ಸ್‌ಗೆ ದಾಖಲು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆರೋಗ್ಯ ಸಮಸ್ಯೆಗಳಿಂದಾಗಿ ದೆಹಲಿಯ ಆಲ್ ಇಂಡಿಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

93 ವರ್ಷದ ವಾಜಪೇಯಿ ಅವರು ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದು, ಹಲವು ವರ್ಷಗಳಿಂದ ಅವರು ಹಾಸಿಗೆ ಬಿಟ್ಟು ಹೊರಗೆ ಓಡಾಡಲು ಆಗದ ಸ್ಥಿತಿಯಲ್ಲಿ ಇದ್ದರು.

ವೈದ್ಯರ ತಂಡ ಹಲವು ವರ್ಷಗಳಿಂದ ನಿಗದಿತವಾಗಿ ಅವರನ್ನು ಪರೀಕ್ಷೆ ಮಾಡುತ್ತಿದ್ದರು. ಈ ಬಾರಿ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಏಮ್ಸ್‌ಗೆ ಒಳರೋಗಿಯಾಗಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಏಮ್ಸ್‌ ನಿರ್ದೇಶಕರಾಗಿರುವ ಡಾ. ರಂದೀಪ್ ಗುಲೇರಿಯಾ, ವಾಜಪೇಯಿ ಅವರ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಶರೀರ ಶಾಸ್ತ್ರಜ್ಞ ಡಾ. ರಂದೀಪ್ ಗುಲೇರಿಯಾ ಕಳೆದ ಮೂರು ದಶಕಗಳಿಂದ ಮಾಜಿ ಪ್ರಧಾನಿಯ ಆಪ್ತ ವೈದ್ಯರಾಗಿ ಆರೋಗ್ಯವನ್ನು ನೋಡಿಕೊಂಡು ಬರುತ್ತಿದ್ದು, ಅವರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ವಾಜಪೇಯಿ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ವಿದೇಶಾಂಗ ಇಲಾಖೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 1996ರಲ್ಲಿ ಎನ್‌ಡಿಎ ಪಕ್ಷಗಳ ಸಹಕಾರೊಂದಿಗೆ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಪ್ರಧಾನಿಯಾಗಿ ಕೇವಲ 13 ದಿನಗಳ ಕಾಲ ಕೆಲಸ ಮಾಡಿದ್ದರು. ಆ ನಂತರ ಅವರ ಸರ್ಕಾರ ವಿಶ್ವಾಸ ಮತದ ಕೊರತೆಯ ಕಾರಣದಿಂದ ಬಿದ್ದು ಹೋಗಿತ್ತು.

ಲೋಕಸಭೆಗೆ 10 ಬಾರಿ ಆಯ್ಕೆಯಾಗಿದ್ದ ಅವರು, ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದು 1998 ರಿಂದ 2004ರ ನಡುವೆ ಮತ್ತೆ ಪೂರ್ಣ ಪ್ರಮಾಣದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಆರೋಗ್ಯ ಸಮಸ್ಯೆಗಳ ಕಾರಣದಿಂದ ಅವರು 2009ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದರು.

2015ರಲ್ಲಿ ಕೊಡಮಾಡಲ್ಪಟ್ಟ ಭಾರತ ರತ್ನ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ವಾಜಪೇಯಿ ಅವರಿಗೆ ಸಂದಿವೆ.

Also read: 'ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ'; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ...?