ಹೈಕೋರ್ಟ್‌ಗೊಬ್ಬ ಪ್ರಾಮಾಣಿಕ ನ್ಯಾಯಾಧೀಶ: ನರೇಂದ್ರ ಪ್ರಸಾದ್ ನೇಮಕಕ್ಕೆ ಹರ್ಷ
ಸುದ್ದಿ ಸಾರ

ಹೈಕೋರ್ಟ್‌ಗೊಬ್ಬ ಪ್ರಾಮಾಣಿಕ ನ್ಯಾಯಾಧೀಶ: ನರೇಂದ್ರ ಪ್ರಸಾದ್ ನೇಮಕಕ್ಕೆ ಹರ್ಷ

ನಾಲ್ಕು ವರ್ಷಗಳ ಕಾಲ ಪ್ಲೀಡರ್ ಆಗಿ ಕೆಲಸ ಮಾಡಿದ್ದ ನರೇಂದ್ರ ಪ್ರಸಾದ್ 2012ರಲ್ಲಿ ಸರಕಾರಿ ವಕೀಲರಾಗಿ ಹೈಕೋರ್ಟ್‌ನಲ್ಲಿಯೇ ನೇಮಕಗೊಂಡರು. ಈ ಅವಧಿಯಲ್ಲಿ ಅವರು ಕೆಲವೇ ಪ್ರಾಮಾಣಿಕ ಸರಕಾರಿ ವಕೀಲರ ಪಟ್ಟಿಯಲ್ಲಿದ್ದರು.

ನ್ಯಾಯಾಂಗದೆಡೆಗೆ ವಿಶ್ವಾಸ ಕಳೆದು ಹೋಗುತ್ತಿರುವ ಈ ದಿನಗಳಲ್ಲಿ ಕರ್ನಾಟಕದ ಹೈಕೋರ್ಟ್‌ಗೆ ನಡೆದಿರುವ ಹೊಸ ನೇಮಕಾತಿ ನ್ಯಾಯಾಂಗ ವಲಯದಲ್ಲಿ ಖುಷಿ ಕೊಟ್ಟಿದೆ.

ಸರಕಾರಿ ವಕೀಲರಾಗಿ ಕಳೆದ ಎಂಟು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಎಚ್. ಟಿ. ನರೇಂದ್ರ ಪ್ರಸಾದ್ ಅವರನ್ನು ಹೈಕೋರ್ಟ್‌ ನ್ಯಾಯಾಧೀಶರನ್ನಾಗಿ ಹಿರಿತನದ ಆಧಾರದ ಮೇಲೆ ನೇಮಕ ಮಾಡಲಾಗಿದೆ.

ಶನಿವಾರ ಅವರಿಗೆ ರಾಜಭವನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಮಡಬೂರಿನವರಾದ ನರೇಂದ್ರ ಪ್ರಸಾದ್ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದವರು. ನಂತರ ಶಿವಮೊಗ್ಗದ ಡಿವಿಎಸ್‌ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಬಿಎಸ್ಸಿ ಸಿರಿಕಲ್ಚರ್‌ನಲ್ಲಿ ಪದವಿ ಪಡೆದವರು. ಮೈಸೂರಿನ ಶಾರದಾ ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿಸಿ, ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್ ಬಳಿ ಪ್ರಾಕ್ಟೀಸ್ ಶುರುಮಾಡಿದರು.

ನಾಲ್ಕು ವರ್ಷಗಳ ಕಾಲ ಪ್ಲೀಡರ್ ಆಗಿ ಕೆಲಸ ಮಾಡಿದ್ದ ನರೇಂದ್ರ ಪ್ರಸಾದ್ 2012ರಲ್ಲಿ ಸರಕಾರಿ ವಕೀಲರಾಗಿ ಹೈಕೋರ್ಟ್‌ನಲ್ಲಿಯೇ ನೇಮಕಗೊಂಡರು. ಈ ಅವಧಿಯಲ್ಲಿ ಅವರು ಕೆಲವೇ ಪ್ರಾಮಾಣಿಕ ಸರಕಾರಿ ವಕೀಲರ ಪಟ್ಟಿಯಲ್ಲಿದ್ದರು.

ಇದೀಗ ಅವರನ್ನು ಹೈಕೋರ್ಟ್‌ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಇವರ ಜತೆಗೆ ದಕ್ಷಿಣ ಕನ್ನಡ ಮೂಲದ ಮೊಹಮದ್ ನವಾಝ್ ಕೂಡ ನ್ಯಾಯಾಧೀಶರಾಗಿ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದಾರೆ.

“ನರೇಂದ್ರ ಪ್ರಸಾದ್ ತರಹದ ವ್ಯಕ್ತಿತ್ವಗಳು ಅಪರೂಪ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ನಂಬಿಕೆ ಉಳಿಸಿಕೊಳ್ಳಬೇಕಾದರೆ ಇಂತವರು ಉನ್ನತ ಹುದ್ದೆಗಳಿಗೆ ಬರುವ ಅವಶ್ಯಕತೆ ಇತ್ತು,’’ ಎಂದು ವಕೀಲರೊಬ್ಬರು ‘ಸಮಾಚಾರ’ದ ಜತೆ ಹರ್ಷ ವ್ಯಕ್ತಪಡಿಸಿದರು.

ನೇಮಕಾತಿ ಅಧಿಸೂಚನೆ. 
ನೇಮಕಾತಿ ಅಧಿಸೂಚನೆ.