‘ಸೀರಿಯಸ್ ಕಾಮಿಡಿ’: ಸುಪ್ರಿಂ ಕೋರ್ಟ್ ತಲುಪಿದ ರೆಸಾರ್ಟ್‌ ಓನರ್ ಜೋಕ್!
ಸುದ್ದಿ ಸಾರ

‘ಸೀರಿಯಸ್ ಕಾಮಿಡಿ’: ಸುಪ್ರಿಂ ಕೋರ್ಟ್ ತಲುಪಿದ ರೆಸಾರ್ಟ್‌ ಓನರ್ ಜೋಕ್!

ಕೆಲವೊಮ್ಮೆ ಬಿಕ್ಕಟ್ಟಿನ ಸನ್ನಿವೇಶಗಳೂ ನಗುವನ್ನು ಹುಟ್ಟಿಸುತ್ತವೆ. ಕರ್ನಾಟಕದ ರಾಜಕೀಯ ಬೆಳವಣಿಗೆಗಳೂ ಇದಕ್ಕೆ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಹುಟ್ಟಿದ ಜೋಕ್‌ ಸುಪ್ರಿಂ ಅಂಗಳವನ್ನೂ ತಲುಪಿದೆ. 

#ಬ್ರೇಕಿಂಗ್_ನ್ಯೂಸ್: ತನ್ನ ಬಳಿ‌ 116 ಶಾಸಕರ ಬೆಂಬಲವಿದೆ ಅವರೆಲ್ಲಾ ನನ್ನ ಜೊತೆಯಿದ್ದಾರೆ ನನ್ನನ್ನೇ ಸಿಎಂ ಮಾಡಬೇಕೆಂದು ರಾಜ್ಯಪಾಲರಿಗೆ ಪತ್ರ ನೀಡಿದ #ಈಗಲ್ಟನ್_ರೆಸಾರ್ಟ್ ಮಾಲೀಕ.

ಹೀಗೊಂದು ಜೋಕ್ ಕಳೆದ 24 ಗಂಟೆಗಳಲ್ಲಿ ನಾನಾ ರೂಪದಲ್ಲಿ ವೈರಲ್ ಆಗಿ ಹೋಗಿದೆ. ಇದರ ಇಂಗ್ಲಿಷ್ ಹಾಗೂ ಹಿಂದಿ ಅವತರಣಿಕೆಗಳೂ ಕೂಡ ಚಲಾವಣೆಯಲ್ಲಿವೆ. ಅಷ್ಟರ ಮಟ್ಟಿಗೆ, ರಾಜ್ಯದ ರಾಜಕಾರಣ ಮತ್ತು ವಿಶ್ವಾಸಮತ ಯಾಚನೆ ಎಂಬ ಸಂವಿಧಾನದ ಪ್ರಕ್ರಿಯೆ ಕಾಮಿಡಿಗೆ ಒಳಗಾಗಿದೆ.

ಸ್ವಾರಸ್ಯಕರ ಬೆಳವಣಿಗೆಯಲ್ಲಿ ಶುಕ್ರವಾರ ಸುಪ್ರಿಂ ಕೋರ್ಟ್ ವಿಚಾರಣೆ ವೇಳೆ ಈ ಜೋಕ್ ನ್ಯಾಯಾಲಯದಲ್ಲಿ ನಗು ಹುಟ್ಟಿಸಿದೆ.

ಶುಕ್ರವಾರ ಬೆಳಗ್ಗೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ನ ತ್ರಿಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಂಡಿತು. ಈ ಸಮಯದಲ್ಲಿ ನಾನಾ ವಿಚಾರಗಳ ಮೇಲೆ ವಾದಿ ಹಾಗೂ ಪ್ರತಿವಾದಿಗಳ ನಡುವೆ ವಾದ ಪ್ರತಿವಾದಗಳು ನಡೆದವು.

ನಡುವೆ, ಬಿಜೆಪಿ ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಮುಖುಲ್ ರೋಹ್ಟಗಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಬಂಧಿಸಿಟ್ಟಿದೆ’ ಎಂದು ನ್ಯಾಯಾಲಯ ಗಮನಕ್ಕೆ ತರಲು ಪ್ರಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸಿಕ್ರಿ, “ನಾವು ಸಾಮಾಜಿಕ ಜಾಲತಾಣಗಳಲ್ಲಿ ರೆಸಾರ್ಟ್‌ ಮಾಲೀಕರು ಸರಕಾರ ರಚನೆಗೆ ಅವಕಾಶ ಕೋರಿದ ಜೋಕ್‌ ನೋಡುತ್ತಿದ್ದೇವೆ’ ಎಂದರು.

ಗಂಭೀರ ಸನ್ನಿವೇಶಗಳ ನಡುವೆಯೂ ಹುಟ್ಟಿಕೊಳ್ಳುವ ಇಂತಹ ತಮಾಷೆಗಳ ವ್ಯಾಪ್ತಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಕರ್ನಾಟಕದ ರಾಜಕೀಯ ಬಿಟ್ಟಕ್ಕು ವ್ಯಂಗ್ಯ ಚಿತ್ರಕಾರರ ಕ್ರಿಯಾಶೀಲತೆಯನ್ನೂ ಓರೆಗೆ ಹಚ್ಚಿದೆ. ಸತೀಶ್ ಆಚಾರ್ಯ ಬರೆದ ಈ ವ್ಯಂಗ್ಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಒಳಗಾಗಿದೆ.

‘ಸೀರಿಯಸ್ ಕಾಮಿಡಿ’: ಸುಪ್ರಿಂ ಕೋರ್ಟ್ ತಲುಪಿದ ರೆಸಾರ್ಟ್‌ ಓನರ್ ಜೋಕ್!
ಸತೀಶ್ ಆಚಾರ್ಯ. 

ಇನ್ನು, ಕೆಲವರು ಸಿಎಂ ಹುದ್ದೆಗಾಗಿ ಎದುರಾಗಿರುವ ಬಿಕ್ಕಟ್ಟಿಗೆ ಕಾರ್ಪೊರೇಟ್ ಮಾದರಿಯ ಸಿಂಪಲ್ ಪರಿಹಾರವನ್ನೂ ಮುಂದಿಟ್ಟಿದ್ದಾರೆ. ಇದು ಅಸಾಧ್ಯ ಅಂತ ಅನ್ನಿಸಿದರು, ಒಮ್ಮೆ ಅಲೋಚನೆ ಮಾಡಿದರೆ ನಿಮ್ಮಲ್ಲಿ ನಗು ಹುಟ್ಟಿಸುತ್ತದೆ.

‘ಸೀರಿಯಸ್ ಕಾಮಿಡಿ’: ಸುಪ್ರಿಂ ಕೋರ್ಟ್ ತಲುಪಿದ ರೆಸಾರ್ಟ್‌ ಓನರ್ ಜೋಕ್!

ಇನ್ನು, ಒಟ್ಟಾರೆ ಬೆಳವಣಿಗೆಯಲ್ಲಿ ಬಿಜೆಪಿ ತೋರಿಸಿದ ಅಧಿಕಾರದ ಹಪಾಹಪಿ ಹಾಗೂ ಅದಕ್ಕಾಗಿ ಅದು ಬಳಸಿಕೊಂಡ ಮಾರ್ಗವನ್ನು ಈ ಕೆಳಗಿನ ಕ್ರಿಯಾಶೀಲತೆ ಬಿಚ್ಚಿಟ್ಟಿದೆ.

‘ಸೀರಿಯಸ್ ಕಾಮಿಡಿ’: ಸುಪ್ರಿಂ ಕೋರ್ಟ್ ತಲುಪಿದ ರೆಸಾರ್ಟ್‌ ಓನರ್ ಜೋಕ್!