ಶಾಸಕ ವಿಜಯ್ ಕುಮಾರ್ ನಿಧನ: ಜಯನಗರದಲ್ಲಿ ಚುನಾವಣೆ ಮುಂದಕ್ಕೆ
ಸುದ್ದಿ ಸಾರ

ಶಾಸಕ ವಿಜಯ್ ಕುಮಾರ್ ನಿಧನ: ಜಯನಗರದಲ್ಲಿ ಚುನಾವಣೆ ಮುಂದಕ್ಕೆ

ಬೆಂಗಳೂರು ದಕ್ಷಿಣದ ಜಯನಗರ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಬಿ. ಎನ್. ವಿಜಯ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ಮುಂದಕ್ಕೆ ಹೋಗಲಿದೆ.

ಬೆಂಗಳೂರು ದಕ್ಷಿಣದ ಜಯನಗರ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಬಿ. ಎನ್. ವಿಜಯ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ಮುಂದಕ್ಕೆ ಹೋಗಲಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಜಯದೇವ ಆಸ್ಪತ್ರೆಗೆ ದಾಖಲಾದ ವಿಜಯ್ ಕುಮಾರ್ ನಡುರಾತ್ರಿ ಮೃತಪಟ್ಟಿದ್ದಾರೆ. ಸದ್ಯ ಅವರ ಮೃತದೇಹವನ್ನು ಜಯನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಸಂಘಪರಿವಾರದ ಹಿನ್ನೆಲೆಯ ವಿಜಯ್ ಕುಮಾರ್ ಸಜ್ಜನ ರಾಜಕಾರಣಿ ಎನ್ನಿಸಿಕೊಂಡಿದ್ದರು. ಬ್ರಹ್ಮಚಾರಿಯಾಗಿದ್ದ ಅವರು ಕ್ಷೇತ್ರದಲ್ಲಿ ಮೂರನೇ ಬಾರಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.

ಜನರ ಸಮಸ್ಯೆಗಳ ವಿಚಾರ ಬಂದಾಗ ಸುಲಭಕ್ಕೆ ಸಿಗುತ್ತಿದ್ದ ಶಾಸಕ ಪೈಕಿ ವಿಜಯ್ ಕುಮಾರ್ ಕೂಡ ಒಬ್ಬರಾಗಿದ್ದರು. ಮುಂಜಾನೆಯೇ ಕ್ಷೇತ್ರದ ರಸ್ತೆಗಳಲ್ಲಿ ಕಾಣಸಿಗುತ್ತಿದ್ದ ಅವರು ಜನರ ಅವಹಾಲುಗಳಿಗೆ ಕಿವಿಯಾಗುತ್ತಿದ್ದರು.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಪ್ರಕ್ರಿಯೆ ಮುಗಿಯುವ ಮುನ್ನವೇ ಮೃತಪಟ್ಟರೆ ಚುನಾವಣೆಯನ್ನು ಮುಂದಕ್ಕೆ ಹಾಕಲಾಗುತ್ತದೆ. ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಸಲು ಪಕ್ಷಕ್ಕೆ ಅವಕಾಶ ನೀಡಲಾಗುತ್ತದೆ.

ವಿಜಯ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭೆಯ ಚುನಾವಣೆ ಮುಂದಕ್ಕೆ ಹೋಗಲಿದೆ. ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಾಮಪತ್ರ ಅಂಗೀಕಾರಗೊಂಡ ಉಳಿದ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕಾಂಗ್ರೆಸ್ ಪಕ್ಷದಿಂದ ಸೌಮ್ಯ ರೆಡ್ಡಿ, ಲಂಚ ಮುಕ್ತ ಕರ್ನಾಟಕದ ರವಿ ಕೃಷ್ಣಾ ರೆಡ್ಡಿ ಮತ್ತಿತರು ಕಣದಲ್ಲಿದ್ದರು.

2013ರಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೊಣ್ಣೇಗೌಡ ನಿಧನರಾಗಿದ್ದರು. ಹಾಗಾಗಿ‌ ಅಲ್ಲಿ ಹೊಸದಾಗಿ ಮತದಾನಕ್ಕೆ ಮರುದಿನಾಂಕ ನಿಗದಿ‌ಮಾಡಲಾಗಿತ್ತು.