‘ಮೋದಿ ಡ್ರೆಸ್‌ಕೋಡ್’: ಮೊದಲ ದಿನ; ಮೂರು ಸಭೆ; ಮೂರು ಜುಬ್ಬಗಳು!
ಸುದ್ದಿ ಸಾರ

‘ಮೋದಿ ಡ್ರೆಸ್‌ಕೋಡ್’: ಮೊದಲ ದಿನ; ಮೂರು ಸಭೆ; ಮೂರು ಜುಬ್ಬಗಳು!

ಸಂತೆಮರಹಳ್ಳಿಯಲ್ಲಿ ನೀಲಿ ಬಣ್ಣದ ಜುಬ್ಬ ಧರಿಸಿದ್ದ ಮೋದಿ, ಉಡುಪಿಯಲ್ಲಿ ಉರಿ ಬಿಸಿಲಿನಲ್ಲಿ ಬಿಳಿ ಬಣ್ಣದ ಜುಬ್ಬ ತೊಟ್ಟು ದೇವೇಗೌಡರನ್ನು ನೆನೆಸಿಕೊಂಡರು. ಇಳಿ ಸಂಜೆ ಹೊತ್ತಿಗೆ ಬೆಳಗಾವಿ ತಲುಪಿದ ಮೋದಿ ಕೇಸರಿ ಜುಬ್ಬದಲ್ಲಿ ಗಮನ ಸೆಳದರು.

ಪ್ರಧಾನಿ ಮೋದಿ ತಮ್ಮ ಭಾಷಣಗಳ ಜತೆಜತೆಗೆ ಧಿರಿಸುಗಳ ವಿಚಾರದಲ್ಲಿಯೂ ಗಮನಸೆಳೆಯುವ ರಾಜಕಾರಣಿ. ಕರ್ನಾಟಕದ ಚುನಾವಣಾ ಪ್ರವಾಸದ ಮೊದಲ ದಿನ ಕೂಡ ಅವರು ಧರಿಸಿದ ಬಟ್ಟೆಗಳು, ಸಭೆಯಿಂದ ಸಭೆಗೆ ಬದಲಾದ ಜುಬ್ಬಗಳು ಗಮನ ಸೆಳೆದವು.

ಮಂಗಳವಾರ ಬೆಳಗ್ಗೆ ಚಾಮರಾಜನಗರದ ಸಂತೆಮರಳ್ಳಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ನಾಮಧಾರಿಗಳು ಹಾಗೂ ಕಾಮ್‌ಧಾರಿಗಳು’ ಎನ್ನುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯವೈಖರಿ ಭಿನ್ನ ಅಂತ ಹೇಳಿದ್ದರು. ಈ ಸಮಯದಲ್ಲಿ ಮಾತನಾಡಿದ ಅವರು, “ನಾವು ಬಟ್ಟೆಗಿಲ್ಲದ ಜನ,’’ ಎಂದೂ ಜನರ ಮುಂದೆ ಹೇಳಿಕೊಂಡರು.

ಆದರೆ, ಮೋದಿ ಉಡುಪಿ ತಲುಪುವ ಹೊತ್ತಿಗೆ ಸಂತೆಮರಳ್ಳಿಯಲ್ಲಿ ಹಾಕಿಕೊಂಡಿದ್ದ ನೀಲಿ ಬಣ್ಣದ ಜುಬ್ಬ ಬದಲಾಗಿತ್ತು. ಉಡುಪಿಯ ಉರಿ ಬಿಸಿಲಿನಲ್ಲಿ ದೇವೇಗೌಡರನ್ನು ನೆನಪಿಸಿಕೊಂಡ ಮೋದಿ ಬಿಳಿ ಬಣ್ಣದ ಜುಬ್ಬ ತೊಟ್ಟು ಗಮನ ಸೆಳೆದರು. ಅಲ್ಲಿಂದ ಮುಂದೆ ಇಳೀ ಸಂಜೆ ಹೊತ್ತಿಗೆ ಬೆಳಗಾವಿ ತಲುಪಿದ ಅವರು ಕೇಸರಿ ಬಣ್ಣದ ಜುಬ್ಬ ತೊಟ್ಟಿದ್ದರು.

‘ಮೋದಿ ಡ್ರೆಸ್‌ಕೋಡ್’: ಮೊದಲ ದಿನ; ಮೂರು ಸಭೆ; ಮೂರು ಜುಬ್ಬಗಳು!

ಮೋದಿ ಧರಿಸುವ ಬಟ್ಟೆಗಳ ಕಾರಣಕ್ಕೆ ವಿವಾದಕ್ಕೀಡಾಗಿದ್ದ ಇತಿಹಾಸ ಇದೆ. 2015ರ ಜನವರಿ 25ರಂದು ಅಂದಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮರನ್ನು ಮೋದಿ ಭೇಟಿಯಾಗಿದ್ದರು. ಈ ಸಮಯದಲ್ಲಿ ಅವರು ಸುಮಾರು 10 ಲಕ್ಷ ಬೆಲೆಬಾಳುವ ಸೂಟ್ ಧರಿಸಿದ್ದರು. ಸಾಮಾನ್ಯ ಕುಟುಂಬದ ಹಿನ್ನೆಲೆಯನ್ನೇ ಮುಂದಿಟ್ಟುಕೊಂಡು ಜನಮನ್ನಣೆ ಗಳಿಸಿದ್ದ ಮೋದಿ ದುಬಾರಿ ಧಿರಿಸು ವಿವಾದಕ್ಕೀಡಾಗಿತ್ತು.