‘ದಿಕ್ಸೂಚಿ’: ವೃತ್ತಿ ಮಾರ್ಗದರ್ಶಿ ಆನ್‍ಲೈನ್ ಕೋರ್ಸ್‌
ಸುದ್ದಿ ಸಾರ

‘ದಿಕ್ಸೂಚಿ’: ವೃತ್ತಿ ಮಾರ್ಗದರ್ಶಿ ಆನ್‍ಲೈನ್ ಕೋರ್ಸ್‌

10 ವಾರಗಳ ‘ಆನ್ ಲೈನ್’ ಕೋರ್ಸ್‌ ಇದಾಗಿದ್ದು, ಮೊದಲ ಮತ್ತು ಕೊನೆಯ ವಾರ ನೇರ ತರಗತಿ ನಡೆಯಲಿದೆ. ಈ ಸಂದರ್ಭದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರಲಿದೆ.

ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನ ‘ದಿಕ್ಸೂಚಿ’ ವೃತ್ತಿ ಮಾರ್ಗದರ್ಶಿ (ಕೆರಿಯರ್ ಗೈಡೆನ್ಸ್) ಆನ್‍ಲೈನ್ ಸರ್ಟಿಫಿಕೇಟ್ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ವೃತ್ತಿ ಮಾರ್ಗದರ್ಶನದ ಕುರಿತು ಕೋಚಿಂಗ್ ನೀಡುವವರಿಗೆ ಈ ಕೋರ್ಸ್‌ನಿಂದ ಅನುಕೂಲವಾಗಲಿದೆ. 10 ವಾರಗಳ ‘ಆನ್ ಲೈನ್’ ಕೋರ್ಸ್‌ ಇದಾಗಿದ್ದು, ಮೊದಲ ಮತ್ತು ಕೊನೆಯ ವಾರ ನೇರ ತರಗತಿ ನಡೆಯಲಿದೆ. ಈ ಸಂದರ್ಭದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರಲಿದೆ.

ಈ ಕೋರ್ಸ್‌ನಲ್ಲಿ ಕೆರಿಯರ್ ಗೈಡೆನ್ಸ್, ಕೆರಿಯರ್ ಇನ್‌ಫರ್ಮೇಶನ್‌, ಕೆರಿಯರ್ ಕೋಚಿಂಗ್ ಮಾಡುವ ವಿಧಾನಗಳನ್ನು ಕಲಿಯಬಹುದಾಗಿದೆ. ಕೆರಿಯರ್ ಗೈಡನ್ಸ್ ರಿಸೋರ್ಸ್ ಕಿಟ್‌ ಅನ್ನು ಕೂಡ ನೀಡಲಾಗುತ್ತದೆ.

“ಟೀಚಿಂಗ್, ಕೋಚಿಂಗ್, ಟ್ಯೂಶನ್ ಕ್ಲಾಸ್, ಕೌನ್ಸೆಲಿಂಗ್, ಸ್ವಸಹಾಯ ಸಂಘ, ಸ್ವ-ಉದ್ಯೋಗ, ಸ್ವ-ಉದ್ಯಮಿಯಾಗಿರುವವರು ಮತ್ತು ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ಈ ಕೋರ್ಸ್‌ ಸಹಕಾರಿಯಾಗಲಿದೆ. ಕಳೆದ 25 ವರ್ಷಗಳಿಂದ ಯುವ ಜನತೆಯೊಂದಿಗೆ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಕೋರ್ಸ್‌ ಅನ್ನು ವಿನ್ಯಾಸ ಮಾಡಲಾಗಿದೆ” ಎನ್ನುತ್ತಾರೆ ಬದುಕು ಕಮ್ಯೂನಿಟಿ ಕಾಲೇಜಿನ ಮನ್‌ದೀಪ್‌.

ಆರ್ಥಿಕತೆಯು ಕಲಿಕೆಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಕೋರ್ಸ್‌ ಕಲಿಕೆಯ ಅವಧಿಯಲ್ಲಿ ಕಲಿಕಾ ವೇತನದ ಸಹಾಯಧನವೂ ಲಭ್ಯವಿರುತ್ತದೆ.

ಚಿತ್ರಕೃಪೆ: samvadabaduku.org
ಚಿತ್ರಕೃಪೆ: samvadabaduku.org

ಒಟ್ಟು 25 ಅಭ್ಯರ್ಥಿಗಳಿಗೆ ಕೋರ್ಸ್‌ನಲ್ಲಿ ಅವಕಾಶವಿದ್ದು, ಆಸಕ್ತರು ವೈಯಕ್ತಿಕ ಮಾಹಿತಿಯನ್ನು ಒಳಗೊಂಡ ರೆಸ್ಯೂಮ್ ಅನ್ನು ಏಪ್ರಿಲ್ 18, 2018ರ ಒಳಗೆ careerbaduku@gmail.comಗೆ ಈ ಮೇಲ್ ಮಾಡಬಹುದು.

ವಿಳಾಸ: ಸಂವಾದ, 135/7, 2 ನೇ ಕ್ರಾಸ್, ಡಯಾಗನಲ್ ರಸ್ತೆ, ಸಿಟಿ ಸೆಂಟ್ರಲ್ ಲೈಬ್ರರಿ, ಜಯನಗರ, 3 ನೇ ಬ್ಲಾಕ್, ಬೆಂಗಳೂರು - 560011, ಸಂಪರ್ಕಕ್ಕೆ :- 8050599001, 9449662566,

ಹೆಚ್ಚಿನ ಮಾಹಿತಿಗಾಗಿ samvadabaduku.org ವೆಬ್‌ಸೈಟ್‌ ಕೂಡ ನೋಡಬಹುದು.