ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಬಿಯರ್ ಕುಡಿಸಿದ ‘ಟ್ವಿಟರ್ ಹುಡುಗಿಯರು’!
ಸುದ್ದಿ ಸಾರ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಬಿಯರ್ ಕುಡಿಸಿದ ‘ಟ್ವಿಟರ್ ಹುಡುಗಿಯರು’!

“ಇತ್ತೀಚೆಗೆ ಹುಡುಗಿಯರೂ ಬಿಯರ್ ಕುಡಿಯುತ್ತಿರುವುದನ್ನು ಗಮನಿಸಿದರೆ, ನನಗೆ ಭಯ ಶುರುವಾಗಿದೆ,” ಎಂದಿದ್ದಾರೆ ಗೋವಾ ಸಿಎಂ ಮನೋಹರ್ ಪರಿಕ್ಕರ್. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಪ್ರತಿಕ್ರಿಯೆ ನೀಡುವ ಮೂಲಕ ಹುಡುಗಿಯರು ಮನೋಹರ್ ಪರಿಕ್ಕರ್ ಅವರ ಕಾಲೆಳೆದಿದ್ದಾರೆ.

ಗೋವಾ ರಾಜ್ಯ ಸರಕಾರದ ಶಾಸಕಾಂಗ ಕಚೇರಿ ಆಯೋಜಿಸಿದ್ದ ‘ಯುವ ಜನರ ಸಂಸತ್ತು’ ಕಾರ್ಯಕ್ರಮದಲ್ಲಿ ಪರಿಕ್ಕರ್ ಭಾಗವಹಿಸಿ ಮಾತನಾಡಿದ್ದರು.  “ಗೋವಾ ರಾಜ್ಯವನ್ನು ವ್ಯಸನ ಮುಕ್ತವಾಗಿಸುವ ಅಭಿಯಾನ ಜಾರಿಯಲ್ಲಿದೆ. ಆದರೆ, ಅದು ಮದ್ಯಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿಲ್ಲ. ಇತ್ತೀಚೆಗೆ ಹುಡುಗಿಯರೂ ಬಿಯರ್ ಕುಡಿಯುತ್ತಿರುವುದನ್ನು ಗಮನಿಸಿದರೆ, ನನಗೆ ಭಯ ಶುರುವಾಗಿದೆ” ಎಂದಿದ್ದರು.ಅವರ ಈ ಮಾತುಗಳು ವೈರಲ್‌ ಆಗುತ್ತಿದ್ದಂತೆಯೆ, ಬಿಯರ್ ಪ್ರಿಯ ಅನೇಕ ಹುಡುಗಿಯರು ಇಂದು (ಶನಿವಾರ) ಬಿಯರ್ ಬಾಟಲಿಗಳನ್ನು ಟ್ವೀಟರ್‌ನಲ್ಲಿ ಹಾಕುವ ಮೂಲಕ ಪರಿಕ್ಕರ್ ಕಾಲೆಳೆದಿದ್ದಾರೆ. ಟ್ವೀಟರ್‌ನಲ್ಲಿ ಗಮನ ಸೆಳೆದ ಕೆಲ ಟ್ವೀಟ್‌ಗಳು ಇಲ್ಲಿವೆ...ಮಹಿಳೆಯರೇ, ನಾವು ಬಿಯರ್ ಕುಡಿದು ಖುಷಿ ಪಡೋಣ...

ತಾವು ಬಿಯರ್ ಕುಡಿಯುವುದನ್ನು ಖುಷಿಯಿಂದ ಹಂಚಿಕೊಂಡ ಶಿಕಾ...

ಸ್ಟ್ರಾ ಮೂಲಕ ಬಿಯರ್ ಕುಡಿಯುತ್ತಿರುವ ಚಿತ್ರ ಹಾಕಿ ಗಮನ ಸೆಳೆಯುತ್ತಿರುವ ಭಾವನಾ ಅರೋರಾ..

ಮಹಿಳೆಯರೇ ಬನ್ನಿ, ಈ ವೀಕೆಂಡ್‌ನ್ನು ಸಂಭ್ರಮಿಸೋಣ. ಈ ಹ್ಯಾಶ್ ಟ್ಯಾಗ್ ಬಳಸಿ ನಿಮ್ಮ ಬಿಯರ್‌ ಬಾಟಲಿಗಳನ್ನು ಹಂಚಿಕೊಳ್ಳಿ...

ಇದು ಕಲಿಯುಗವೇ ಹೌದು, ಇಲ್ಲಿ ಹುಡುಗಿಯರು ಬಿಯರ್ ಕುಡಿಯುತ್ತಾರೆ, ಮಹಿಳೆಯರು ದೊಡ್ಡದಾಗಿ ನಗುತ್ತಾರೆ...

ಹುಡುಗಿಯರು ಬಿಯರ್ ಕುಡಿಯುವಾಗ ನೀವು (ಪರಿಕ್ಕರ್) ಹೀಗೆ ನೋಡುತ್ತೀರಿ...

ಹುಡುಗಿಯರು ಕೇವಲ ಬಿಯರ್ ಮಾತ್ರ ಕುಡಿಯುವುದಿಲ್ಲ, ವಿಸ್ಕಿಯನ್ನೂ ಕುಡಿಯುತ್ತಾರೆ...

ಗಮನ ಸೆಳೆದ  ಪ್ರಾಸಪದ್ಯ...

ನಾನು ಬಿಯರ್ ಕುಡಿಯುವುದಿಲ್ಲ, ಕೇವಲ ವಿಸ್ಕಿ ಮಾತ್ರ ಕುಡಿಯುತ್ತೇನೆ ಎಂದು ಕಾಲೆಳೆದ ಟ್ವೀಟ್...

ಹುಡುಗಿಯರು ಬಿಯರ್ ಕುಡಿಯುವುದೇ ನಿಮ್ಮನ್ನು ಭಯಪಡಿಸಿದರೆ ಇಲ್ಲಿ ನೋಡಿ...

ಮಹಿಳೆಯರ ಸ್ವಾತಂತ್ರ ಮತ್ತು ಅವರ ಆಯ್ಕೆಯನ್ನು ಗೌರವಿಸುವ ಯಾವುದಾದರೂ ಗುಂಪು ಇದೆಯಾ?...