samachara
www.samachara.com
ಇ ಕಾಮರ್ಸ್ ವೆಬ್ ತಾಣ ಬಳಸಿ ಬೈಕ್ ದರೋಡೆ ಮಾಡಿದ ಬಾಲಕ!
ಸುದ್ದಿ ಸಾರ

ಇ ಕಾಮರ್ಸ್ ವೆಬ್ ತಾಣ ಬಳಸಿ ಬೈಕ್ ದರೋಡೆ ಮಾಡಿದ ಬಾಲಕ!

samachara

samachara

ಇ- ಕಾಮರ್ಸ್

ವೆಬ್ಸೈಟ್ ಜಾಹೀರಾತುಗಳನ್ನು ಬಳಸಿಕೊಂಡು ಕಳ್ಳತನ ಮಾಡಿದ ಆರೋಪದ ಮೇಲೆ ದಿಲ್ಲಿಯ ಬಾಲಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಇಲ್ಲಿನ ಉತ್ತಮ ನಗರ ನಿವಾಸಿ ಅನ್ವರ್ ಎಂಬಾತ ತನ್ನ ಸ್ಪೋರ್ಟ್ಸ್ ಬೈಕ್ ಮಾರಾಟ ಮಾಡಲು ಇ- ಕಾಮರ್ಸ್ ವೆಬ್ ತಾಣದಲ್ಲಿ ಜಾಹೀರಾತನ್ನು ಪ್ರಕಟಿಸಿದ್ದ. ಇದಕ್ಕೆ ಕರೆ ಮಾಡಿದ್ದ ಇಬ್ಬರು ಬಾಲಕರು ಬೈಕ್ ಖರೀದಿಸುವುದಾಗಿ ಹೇಳಿಕೊಂಡಿದ್ದರು.

ಅನ್ವರ್ ಬೈಕ್ ತಂದು ತೋರಿಸುತ್ತಲೇ ಟೆಸ್ಟ್ ರೈಡ್ ತೆಗೆದುಕೊಂಡ ಹೋದ ಬಾಲಕರು ನಾಪತ್ತೆಯಾಗಿದ್ದರು. ಈ ಕುರಿತು ಎರಡು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಲಾಗಿತ್ತು.

ನಂತರ ಬೈಕ್ ಜತೆ ಪರಾರಿಯಾಗಿದ್ದ ಬಾಲಕ ತನ್ನ ಫೇಸ್ಬುಕ್ ಖಾತೆಯಲ್ಲಿ ಕದ್ದ ದ್ವಿಚಕ್ರ ವಾಹನದ ಜತೆ ತೆಗೆಸಿಕೊಂಡು ಫೊಟೋವನ್ನು ಹಂಚಿಕೊಂಡಿದ್ದ. ಇದನ್ನು ಗುರುತಿಸಿದ ಅನ್ವರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸದ್ಯ ಬಾಲಕನನ್ನು ಬಂಧಿಸಿದ್ದು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆತನಿಗೆ ಸಹಾಯ ಮಾಡಿದ ಸ್ನೇಹಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇ- ಕಾಮರ್ಸ್ ವೆಬ್ ತಾಣಗಳಲ್ಲಿ ಜಾಹೀರಾತು ನೀಡುವ ಜತೆ ವ್ಯಾಪಾರ ಮಾಡುವವರು ಮತ್ತು ಗ್ರಾಹಕರ ನಡುವೆ ನೇರ ಸಂಪಕಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಬಳಸಿಕೊಂಡು ದಿಲ್ಲಿಯ ಬಾಲಕ ಅಪರಾಧ ಕೃತ್ಯವನ್ನು ಎಸಗಿದ್ದಾನೆ. ಬದಲಾದ ಕಾಲದಲ್ಲಿ ಅಪರಾಧಗಳ ಸ್ವರೂಪಗಳೂ ಬದಲಾಗುತ್ತಿರುವುದಕ್ಕೆ ಈ ಘಟನೆ ಉದಾಹರಣೆ.