ಯಡಿಯೂರಪ್ಪ ವಿರುದ್ಧದ ಮೇಲ್ಮನವಿ ಭವಿಷ್ಯ ನಿರ್ಧಾರಕ್ಕೆ ದಿನಾಂಕ ನಿಗದಿ
ಸುದ್ದಿ ಸಾರ

ಯಡಿಯೂರಪ್ಪ ವಿರುದ್ಧದ ಮೇಲ್ಮನವಿ ಭವಿಷ್ಯ ನಿರ್ಧಾರಕ್ಕೆ ದಿನಾಂಕ ನಿಗದಿ

Summarytoggle summary

ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲಿನ ಅಕ್ರಮ ಡಿ- ನೋಟಿಫಿಕೇಷನ್ ಪ್ರಕರಣಗಳ ವಿಚಾರಣೆ ಕುರಿತು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಜೂನ್ 7ಕ್ಕೆ ನಿಗದಿಮಾಡಿದೆ.

ಯಡಿಯೂರಪ್ಪ ಮೇಲಿನ ಹಲವು ಪ್ರಕರಣಗಳನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರದ ವತಿಯಿಂದ ಮೇಲ್ಮನವಿ ಸಲ್ಲಿಸಲಾಗಿದೆ.ಈ ಅರ್ಜಿಯ ವಿಚಾರಣೆಯನ್ನು ಜೂನ್ ಮೊದಲ ವಾರದಲ್ಲಿ ಸುಪ್ರಿಂ ಕೋರ್ಟ್ ಕೈಗೆತ್ತಿಕೊಳ್ಳಿದ್ದು, ಅಂಗೀಕರಿಸುವ ಅಥವಾ ತಿರಸ್ಕರಿವು ಕುರಿತು ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ರಾಚೇನಹಳ್ಳಿ, ಬಿಳೇಕಳ್ಳಿ ಸೇರಿದಂತೆ 15 ಡಿ ನೋಟಿಫಿಕೇಷನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಯಡಿಯೂರಪ್ಪ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ವಿಚಾರಣೆ ಹಂತದಲ್ಲಿಯೇ ತಮ್ಮ ಮೇಲಿನ ಆರೋಪಗಳನ್ನು ಕೈಬಿಡಬೇಕು ಹಾಗೂ ಆರೋಪಗಳನ್ನು ರದ್ದುಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಇದರಿಂದಾಗಿ ಯಡಿಯೂರಪ್ಪ ಮತ್ತೆ ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಳ್ಳಲು ಹಾದಿ ಸುಗಮವಾಗಿತ್ತು. ಆದರೆ, ರಾಜ್ಯ ಸರಕಾರ ಹೈಕೋರ್ಟ್ ತೀರ್ಪಿನ ವಿರುದ್ಧ ಕಾನೂನು ಇಲಾಖೆಯ ಸಲಹೆ ಮೇರೆಗೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ಜೂನ್ ಮೊದಲ ವಾರ ನಡೆಯಲಿರುವ ಅರ್ಜಿ ವಿಚಾರಣೆ ಯಡಿಯೂರಪ್ಪ ಅವರ ಭವಿಷ್ಯದ ಕಾನೂನು ಹೋರಾಟದ ಸ್ವರೂಪವನ್ನು ನಿರ್ಧರಿಸಲಿದೆ.