- ಅಮಿತಾಬ್ ಬಚ್ಚನ್
ಸುದ್ದಿ ಸಾರ

ನಟ ಅಮಿತಾಬ್ ವ್ಯವಹಾರಗಳಿಗೆ ಇನ್ನೊಂದಿಷ್ಟು ಸಾಕ್ಷಿ

ಪನಾಮ ಪೇಪರ್ಸ್ ಪ್ರಕರಣದ ಸುತ್ತ

Summary

ತೆರಿಗೆದಾರರ ಸ್ವರ್ಗ ಎಂದೇ ಜನಪ್ರಿಯವಾಗಿರುವ ಪನಾಮಾದಲ್ಲಿ ಬಾಲಿವುಡ್ ನಟ ಅಮಿತಾಭ್ ಸೇರಿ ಹಲವು ಖ್ಯಾತನಾಮರು ಕಪ್ಪು ಹಣ ಇಟ್ಟಿದ್ದಾಗಿ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು.ಈ ಸಂದರ್ಭದಲ್ಲಿ ಅಮಿತಾಭ್ ಈ ಆರೋಪವನ್ನು ನಿರಾಕರಿಸಿದ್ದರು.

ಅಲ್ಲದೆ, ತನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಹೇಳಿದರು. ಆದರೆ ಅಮಿತಾಭ್ ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಈಗ ಸಾಕ್ಷ್ಯ ದೊರೆತಿದೆ.'ಮೊಸಾಕ್ ಫೋನ್ಸಿಕಾ' ದಾಖಲೆಗಳ ಪ್ರಕಾರ ಅಮಿತಾಭ್ 1993 ರಿಂದ 1997 ರ ತನಕ ನಾಲ್ಕು ಸಾಗರೋತ್ತರ ಶಿಪ್ಪಿಂಗ್ ಕಂಪೆನಿಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.

ಈಗ ಎರಡು ಕಂಪೆನಿಗಳಲ್ಲಿ ಅಮಿತಾಭ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು ಅಲ್ಲದೇ ಬೋರ್ಡ್ ಮೀಟಿಂಗ್‍ಗಳಲ್ಲಿ ಟೆಲಿಫೋನ್ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು ಎಂದು ದಾಖಲೆಗಳು ಬಹಿರಂಗಪಡಿಸಿವೆ.1994ರ ಡಿಸೆಂಬರ್ 12ರಂದು ಬಹಾಮಾ ಮತ್ತು ಬ್ರಿಟಿಸ್ ವರ್ಜಿನ್ ಐಸ್‍ಲ್ಯಾಂಡ್‍ನ ಎರಡು ಕಂಪೆನಿಗಳ ಮೀಟಿಂಗ್‍ನಲ್ಲಿ ಬಚ್ಚನ್ ಪಾಲ್ಗೊಂಡಿದ್ದರು ಎಂಬುದಕ್ಕೂ ಈಗ ದಾಖಲೆಗಳು ಸಾಕ್ಷಿ ನುಡಿಯುತ್ತಿವೆ.

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಸೊಸೆ, ನಟಿ ಐಶ್ವರ್ಯ ರೈ 'ಪನಾಮ ಪೇಪರ್ಸ್' ಬಿಡುಗಡೆಯಾದ ಸಮಯದಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿದ್ದರು. ತೆರಿಗೆ ತಪ್ಪಿಸಿಕೊಳ್ಳಲು ಸಾಗರೋತ್ತರ ದೇಶದಲ್ಲಿ ಕಂಪನಿ ಶುರುಮಾಡಿದ್ದರು ಎಂಬ ಗಂಭೀರ ಆರೋಪ ಇವರ ಮೇಲೆ ಬಂದಿತ್ತು. ಅಮಿತಾಬ್ ಆರೋಪವನ್ನು ಅಲ್ಲಗೆಳೆದಿದ್ದರು.