'ನಿಧಾನ ಸೌಧ'ದಲ್ಲಿ ಕಡತಗಳನ್ನು ಬಾಕಿ ಉಳಿಸಿಕೊಂಡ ಸಚಿವರು!
ಸುದ್ದಿ ಸಾರ

'ನಿಧಾನ ಸೌಧ'ದಲ್ಲಿ ಕಡತಗಳನ್ನು ಬಾಕಿ ಉಳಿಸಿಕೊಂಡ ಸಚಿವರು!

ಕಡತ ವಿಲೇವಾರಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ.

ಅನೇಕ ಇಲಾಖೆಗಳ ಸಾಧನೆ ಅವಲೋಕಿಸಿದರೆ ಸಿಎಂ ಆದೇಶಕ್ಕೆ ಸಚಿವರ್ಯಾರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗುತ್ತದೆ. ಪರಿಣಾಮ ಕಡತ ವಿಲೇವಾರಿಯಲ್ಲಿ ಸಿದ್ದು ಟೀಮ್ ಕಳಪೆ ಸಾಧನೆ ಮಾಡಿದ್ದು, ಕೇವಲ ಶೇ.12 ರಷ್ಟು ಮಾತ್ರ ಕಡತ ವಿಲೇವಾರಿಯಾಗಿದೆ.

ಒಂದೆಡೆ ಸಚಿವ ಸಂಪುಟ ಪುನರಚನೆಯ ತೂಗುಕತ್ತಿ ಸಚಿವರ ಮೇಲೆ ಇದ್ರೆ, ಕಡತ ವಿಚಾರದಲ್ಲಿನ ಕಳಪೆ ಸಾಧನೆ ಸಚಿವರನ್ನ ಸಂಕಟಕ್ಕೆ ಸಿಲುಕಿಸುವ ಸಾಧ್ಯತೆಗಳು ದಟ್ಟವಾಗಿವೆ. ಇಲಾಖೆಗಳಲ್ಲಿ ಕಡತ ವಿಲೇವಾರಿ ಆಗ್ತಿಲ್ಲ ಅಂತ ಪದೇ ಪದೇ ಸಚಿವರಿಗೆ ಎಚ್ಚರಿಗೆ ನೀಡಿದ್ದ ಸಿಎಂ, ಈ ಬಾರಿ ಸಚಿವರ ವಿರುದ್ಧ ಗರಂ ಆಗಿದ್ದಾರೆ.

ಎಲ್ಲಾ ಇಲಾಖೆಗಳಿಂದ ಒಟ್ಟಾರೆ ಶೇ. 12 ರಷ್ಟು ಮಾತ್ರ ಕಡತ ವಿಲೇವಾರಿ ಆಗಿದ್ದು, ಇದರ ಹೊಣೆ ಸಚಿವರೇ ಹೊರಬೇಕಾಗುತ್ತದೆ ಅಂತಾ ಸಿಎಂ ಹೇಳಿದ್ದಾರೆ. ಇಲಾಖೆಗಳಿಗೆ ನೋಟಿಸ್ ನೀಡಿ ಸ್ಪಷ್ಟನೆ ಕೊಡಿ ಅಂತಾ ತಾಕೀತು ಮಾಡಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತೀರಾ ಕಳಪೆ ಸಾಧನೆ ಮಾಡಿದ್ದು ಶೇ.6 ರಷ್ಟು ಮಾತ್ರ ಕಡತಗಳು ವಿಲೇವಾರಿ ಆಗಿವೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವರ ಸಾಧನೆಗೆ ಕಡತ ವಿಲೇವಾರಿ ಕೂಡಾ ಮಾನದಂಡ ಅಂತ ಸಿಎಂ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ಯಾವ ಇಲಾಖೆಯಲ್ಲಿ ಎಷ್ಟು ಕಡತಗಳು: 

 • ಕೃಷಿ ಇಲಾಖೆ ಶೇ.13.55
 • ಕಂದಾಯ ಇಲಾಖೆ ಶೇ.8.19
 • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಶೇ.6.74
 • ಹಿಂದುಳಿದ ವರ್ಗಗಳ ಇಲಾಖೆ ಶೇ.27.84
 • ಅರಣ್ಯ ಇಲಾಖೆ ಶೇ.9.64
 • ತೋಟಗಾರಿಕಾ ಇಲಾಖೆ ಶೇ.12.26
 • ವಸತಿ ಇಲಾಖೆ ಶೇ.11.55
 • ಆರೋಗ್ಯ ಇಲಾಖೆ ಶೇ.7.81
 • ಜಲಸಂಪನ್ಮೂಲ ಇಲಾಖೆ ಶೇ.13.9
 • ಅಲ್ಪಸಂಖ್ಯಾತರ ಇಲಾಖೆ ಶೇ.12.5
 • ಸಮಾಜ ಕಲ್ಯಾಣ ಇಲಾಖೆ ಶೇ.11.82
 • ನಗರಾಭಿವೃದ್ದಿ ಇಲಾಖೆ ಶೇ.17.44