samachara
www.samachara.com
ಕಾಶ್ಮೀರಿ ಯುವಕರಿಗೆ ಗುಂಡೇಟು: ಸೈನಿಕರ ವಿರುದ್ಧ ಸೇನಾ ತನಿಖೆ
ಸುದ್ದಿ ಸಾರ

ಕಾಶ್ಮೀರಿ ಯುವಕರಿಗೆ ಗುಂಡೇಟು: ಸೈನಿಕರ ವಿರುದ್ಧ ಸೇನಾ ತನಿಖೆ

samachara

samachara

ಕಾಶ್ಮೀರಾದ ಹಂದ್ವಾರದಲ್ಲಿ ಮಿಲಿಟರಿ ಗುಂಡೇಟಿಗೆ ಇಬ್ಬರು ಯುವಕರು ಬಲಿಯಾದ ಪ್ರಕರಣಕ್ಕೆ ಸಂಬಂಧಪ್ಟಂತೆ ಸೇನೆ ತನಿಖೆಗೆ ಆದೇಶಿಸಿದೆ.

 ಜಮ್ಮು ಮತ್ತು ಕಾಶ್ಮೀರಾ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೂಡ ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಸೇನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದಂಪುರದ ನಾರ್ತರ್ನ್ ಕಮಾಂಡ್ ಏರಿಯಾದ ಲೆ. ಜನರಲ್ ಡಿ. ಎಸ್. ಹೂಡ, "ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ,'' ಎಂದು ತಿಳಿಸಿದ್ದಾರೆ.
"ಇಂತಹ ಘಟನೆಗಳು ಜಮ್ಮು ಮತ್ತು ಕಾಶ್ಮೀರಾ ರಾಜ್ಯದಲ್ಲಿ ನಡೆಸುತ್ತಿರುವ ಶಾಂತಿ ಸ್ಥಾಪನಾ ಪ್ರಕ್ರಿಯೆಗಳಿಗೆ ಸಮಸ್ಯೆ ಉಂಟು ಮಾಡುತ್ತವೆ,'' ಎಂದು ಮುಖ್ಯಮಂತ್ರಿ ಮುಫ್ತಿ ಆಕ್ರೋಶವನ್ನು ಹೊರಹಾಕಿದ್ದರು.
ಕಾಶ್ಮೀರಾದ ಹಂದ್ವಾರದಲ್ಲಿ ಸೇನೆಯಿಂದ ಯುವಕರು ಬಲಿಯಾದ ಘಟನೆ ಜರುಗುತ್ತಿದ್ದಂತೆ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು. ಸೋಮವಾರ ಇಡೀ ದಿನ ಸ್ಥಳದಲ್ಲಿ ಬಿಗುವಿನ ವಾತಾವರಣ ಇತ್ತು. ಸೇನಾ ಬಂಕರ್ಗೆ ನುಗ್ಗಿದ ಸ್ಥಳೀಯರು ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ, ಬೆಂಕಿ ಹಚ್ಚುವ ಪ್ರಯತ್ನವನ್ನೂ ಮಾಡಿದ್ದರು.
ಯುವಕರ ಕಗ್ಗೊಲೆ ಪ್ರಕರಣರದ ಬಗ್ಗೆ ಹಂದ್ವಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.