samachara
www.samachara.com
ಝಾಕಿರ್‌ ನಾಯ್ಕ್‌ ಭಾರತದ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ: ಮಲೇಷ್ಯಾ ಪ್ರಧಾನಿ
ಸುದ್ದಿ ಸಾಗರ

ಝಾಕಿರ್‌ ನಾಯ್ಕ್‌ ಭಾರತದ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ: ಮಲೇಷ್ಯಾ ಪ್ರಧಾನಿ

ಭಾರತದ ವಿದೇಶಾಂಗ ಇಲಾಖೆಯ ಹೇಳಿಕೆಯ ಮರುದಿನವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಲೇಷ್ಯಾ ಪ್ರಧಾನಿ ಭಾರತದ ಮನವಿ ತಿರಸ್ಕರಿಸಿರುವ ಹೇಳಿಕೆ ನೀಡಿದ್ದಾರೆ.

Team Samachara

ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ನನ್ನು ಭಾರತದ ವಶಕ್ಕೆ ನೀಡಲು ಸಾಧ್ಯವಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಥೀರ್‌ ಮೊಹಮ್ಮದ್‌ ಶುಕ್ರವಾರ ಹೇಳಿದ್ದಾರೆ.

“ಈವರೆಗೂ ಝಾಕಿರ್‌ ನಾಯ್ಕ್‌ ಯಾವುದೇ ತೊಂದರೆ ಮಾಡಿಲ್ಲ. ಅಲ್ಲದೆ ಆತನಿಗೆ ನಮ್ಮ ನೆಲದ ಶಾಶ್ವತವಾಸಿ ಸ್ಥಾನ ನೀಡಲಾಗಿದೆ. ಹೀಗಾಗಿ ಆತನನ್ನು ಭಾರತದ ವಶಕ್ಕೆ ಒಪ್ಪಿಸಲಾಗದು” ಎಂದು ಮಹಥೀರ್‌ ತಿಳಿಸಿದ್ದಾರೆ.

ತಮ್ಮ ಉಗ್ರ ಟಿವಿ ಭಾಷಣಗಳ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಝಾಕಿರ್‌ 2016ರಲ್ಲಿ ಭಾರತ ಬಿಟ್ಟಿದ್ದ ಹಾಗೂ ಮುಸ್ಲಿಮರು ಹೆಚ್ಚಾಗಿರುವ ಮಲೇಷ್ಯಾಕ್ಕೆ ತೆರಳಿದ್ದ ಎನ್ನಲಾಗಿದೆ. ಮಲೇಷ್ಯಾ ಸರಕಾರ ಝಾಕಿರ್‌ಗೆ ಶಾಶ್ವತವಾಸಿ ಸ್ಥಾನ ನೀಡಿದೆ.

ಝಾಕಿರ್‌ ನಾಯ್ಕ್‌ನನ್ನು ಭಾರತದ ವಶಕ್ಕೆ ಒಪ್ಪಿಸಬೇಕು ಎಂದು ಭಾರತ ಸರಕಾರ ಮಲೇಷ್ಯಾಕ್ಕೆ ಜನವರಿ ತಿಂಗಳಲ್ಲಿ ಮನವಿ ಸಲ್ಲಿಸಿತ್ತು. ಈ ಮನವಿಯ ಬಗ್ಗೆ ಮಲೇಷ್ಯಾ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿತ್ತು.

ವಿದೇಶಾಂಗ ಇಲಾಖೆಯ ಹೇಳಿಕೆಯ ಮರುದಿನವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಲೇಷ್ಯಾ ಪ್ರಧಾನಿ ಭಾರತದ ಮನವಿ ತಿರಸ್ಕರಿಸಿರುವ ಹೇಳಿಕೆ ನೀಡಿದ್ದಾರೆ.

ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ, ದೇಶದ್ರೋಹ ಆರೋಪಗಳ ಸಂಬಂಧ ಎನ್‌ಐಎ ಝಾಕಿರ್‌ ವಿರುದ್ಧ ತನಿಖೆ ನಡೆಸುತ್ತಿದೆ.