‘ಸೇನೆಗಿಂತ ಸಂಘ ದೊಡ್ಡದು’: ಮೋಹನ್ ಭಾಗವತ್ ಹೇಳಿಕೆಯೂ; ಸೈನ್ಯದ ಅವಮಾನವೂ...
ಸುದ್ದಿ ಸಾಗರ

‘ಸೇನೆಗಿಂತ ಸಂಘ ದೊಡ್ಡದು’: ಮೋಹನ್ ಭಾಗವತ್ ಹೇಳಿಕೆಯೂ; ಸೈನ್ಯದ ಅವಮಾನವೂ...

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಸಂಘಟನೆಯನ್ನು ಹೊಗಳುವ ಭರದಲ್ಲಿ 'ಸೈನ್ಯಕ್ಕಿಂತ ತಮ್ಮ ಸಂಘಟನೆ (ಆರ್‌ಎಸ್‌ಎಸ್‌) ಶಕ್ತಿ ದೊಡ್ಡದು' ಎಂಬಂತ ಮಾತುಗಳನ್ನಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಳಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟ್ವೀಟರ್‌ನಲ್ಲಿ #RSSInsultsArmy ಮತ್ತು #ApologiseRSS ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡುವ ಮೂಲಕ  ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ."ಯುದ್ಧದ ಸಂಧರ್ಭದಲ್ಲಿ ತಯಾರಾಗಲು ಸೈನ್ಯವು 6 ರಿಂದ 7 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದರೆ, ಆರ್‌ಎಸ್‌ಎಸ್‌ ಸಂಘಟನೆ ಕೇವಲ 3 ದಿನಗಳಲ್ಲಿ ತಯಾರಿರುತ್ತದೆ, ಇದುವೇ ನಮ್ಮ ಸಂಘಟನೆಯ ಸಾಮರ್ಥ್ಯ. ಸಂವಿಧಾನ ಹಾಗೂ ಕಾನೂನು ನಮಗೆ ಅನುಮತಿ ನೀಡಿದಲ್ಲಿ, ಯುದ್ಧದ ಸಂಧರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂಸೇವಕರು ಸೈನ್ಯಕ್ಕಿಂತಲೂ ಮೊದಲೇ ಮುಂದಾಳತ್ವವನ್ನು ತೆಗೆದುಕೊಳ್ಳಲು ತಯಾರಾಗಿದ್ದಾರೆ," ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಭಾನುವಾರ ಬಿಹಾರದ ಮುಝಫ್ಫರಪುರದಲ್ಲಿ ಆಯೋಜಿಸಲಾದ ಆರ್‌ಎಸ್‌ಎಸ್‌ 5 ದಿನಗಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ ಈ ಮೇಲಿನ ಹೇಳಿಕೆಯನ್ನು ಮೋಹನ್ ಭಾಗವತ್ ನೀಡಿದ್ದಾರೆ. 67 ವರ್ಷದ ಅವರು ಹತ್ತು ದಿನಗಳ ಕಾಲ ಬಿಹಾರ ಪ್ರವಾಸವನ್ನು ಕೈಗೊಂಡಿದ್ದಾರೆ. ಭಾರತೀಯ ಸೇನೆಯೊಂದಿಗೆ ತಮ್ಮ ಸಂಘಟನೆಯ ಕೌಶಲ್ಯಗಳನ್ನು ಈ ರೀತಿ ಹೋಲಿಸಿದ್ದು, 'ಸೈನ್ಯಕ್ಕೆ ಅವಮಾನ ಮಾಡಿದಂತಾಗಿದೆ' ಎಂಬ ಟೀಕೆಗಳನ್ನು ಅವರು ಎದುರಿಸುತ್ತಿದ್ದಾರೆ.

ಬಹುಶಃ ಈ ಕಾರಣಕ್ಕೆ ಏನೋ, ಅದೇ ಭಾಷಣದಲ್ಲಿ ಸ್ಪಷ್ಟೀಕರಣ ರೂಪದಲ್ಲಿ ಮಾತನಾಡಿದ ಭಾಗವತ್, "ಆರ್‌ಎಸ್‌ಎಸ್‌ ಒಂದು ಸೈನ್ಯವಲ್ಲ. ನಾವು ಒಂದು ಕುಟುಂಬ ಸಂಘಟನೆ. ಆದರೆ ಮಿಲಿಟರಿಯಲ್ಲಿರುವಂತೆ ಶಿಸ್ತು ಮತ್ತು ಸನ್ನದ್ಧತೆಯನ್ನು ನಾವು ಹೊಂದಿದ್ದೇವೆ. ಬಿಕ್ಕಟ್ಟಿನ ಕಾಲದಲ್ಲಿ ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಲು ಆರ್‌ಎಸ್‌ಎಸ್‌ ಕಾರ್ಯಕರ್ತರು ಸದಾ ಸಿದ್ಧರಾಗಿದ್ದಾರೆ," ಎಂದರು.ಜತೆಗೆ, "ಭಾರತ ದೇಶ ಹಿಂದೂ ರಾಷ್ಟ್ರವಾದ ನಂತರ, ಆರ್‌ಎಸ್‌ಎಸ್‌ ಅಗತ್ಯವೇ ಇರುವುದಿಲ್ಲ. ಆಗ ಆರ್‌ಎಸ್‌ಎಸ್‌ ಸದಸ್ಯರು ಸ್ನೇಹಿತರಂತೆ ಪರಸ್ಪರ ಭೇಟಿಯಾಗುತ್ತಾರೆ. ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಹಾಜರಾಗಲೇಬೇಕು. ಪ್ರತಿದಿನವೂ ಅಲ್ಲದಿದ್ದರೂ, ಪ್ರತಿ ತಿಂಗಳಿಗೊಮ್ಮೆ ಭೇಟಿಯಾಗಬೇಕು," ಎಂದು ಹಿಂದೂ ರಾಷ್ಟ್ರ ನಿರ್ಮಾಣ ನಂತರದ ಕಲ್ಪನೆಯನ್ನು ಬಿಚ್ಚಿಟ್ಟರು.

ಬಿಹಾರದ ವಿರೋಧ ಪಕ್ಷ 'ರಾಷ್ಟ್ರೀಯ ಜನತಾ ದಳ' ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಖಂಡಿಸಿದೆ. "ಭಾರತೀಯ ಸೇನೆಯ ಸೈನಿಕರು ದೇಶಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಸೇನೆಯು ಅತ್ಯಂತ ಗೌರವಾನ್ವಿತವಾಗಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೇಳಿಕೆಯು ಭಾರತೀಯ ಸೈನ್ಯಕ್ಕಿಂತ ಆರ್‌ಎಸ್‌ಎಸ್‌ ಸಾಮರ್ಥ್ಯ ಹೆಚ್ಚಿನದು ಎಂದು ಹೇಳಿದಂತಾಗುತ್ತದೆ. ಈ ಮೂಲಕ ಭಾರತೀಯ ಸೇನೆಗೆ ಅವರು ಅವಮಾನ ಮಾಡಿದ್ದಾರೆ. ಹಾಗಾಗಿ ಮೋಹನ್ ಭಾಗವತ್ ಈ ಕೂಡಲೇ ಕ್ಷಮೆ ಯಾಚಿಸಬೇಕು," ಎಂದು ರಾಷ್ಟ್ರೀಯ ಜನತಾದಳದ ವಕ್ತಾರ ಶ್ರೀತುಂಜಯ್ ತಿವಾರಿ ಆಗ್ರಹಿಸಿದ್ದಾರೆ.

ಟ್ವೀಟರ್‌ನಲ್ಲಿ ಕಂಡು ಬಂದ ಪ್ರತಿಕ್ರಿಯೆಗಳು:

"ಮೋಹನ್ ಭಾಗವತ್ ಅವರ ಹೇಳಿಕೆ ಪ್ರತಿಯೊಬ್ಬ ಭಾರತೀಯನನ್ನೂ ಅವಮಾನ ಮಾಡಿದೆ," ಎಂದಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ..

ಸೈನ್ಯ ಮತ್ತು ಆರ್‌ಎಸ್‌ಎಸ್‌ ನಡುವಿನ ಹೋಲಿಕೆ ಬಗ್ಗೆ ಗಮನ ಸೆಳೆದ ಟ್ವೀಟ್...

ಆರ್‌ಎಸ್‌ಎಸ್‌ ಯಾರಾರಿಗೆ ಅವಮಾನ ಮಾಡಿದೆ ಎಂದು ಹೇಳುತ್ತಿರುವ ಟ್ವೀಟ್...

ಮೋಹನ್ ಭಾಗವತ್ ಪಾಕಿಸ್ತಾನಕ್ಕೆ ನೀಡುತ್ತಿರುವ ಸಂದೇಶವಾದರೂ ಏನು? ನಮ್ಮ ಸೈನ್ಯ ಯುದ್ಧಕ್ಕೆ ತಯಾರಾಗಿಲ್ಲವೇ?..

ಬ್ರೀಟಿಷರ ವಿರುದ್ಧ ಹೋರಾಡುವಾಗ ನಿಮ್ಮ ಸಂಘಟನೆ (ಆರ್‌ಎಸ್‌ಎಸ್‌) ಎಲ್ಲಿ ಅಡಗಿ ಕುಳಿತಿತ್ತು? ಎಂಬ ಪ್ರಶ್ನೆ ಎತ್ತಿದ ಟ್ವೀಟ್...

ದೇಶದ್ರೋಹಿ ಹೇಳಿಕೆ ನೀಡದ್ದಕ್ಕೆ ಕ್ಷಮೆ ಯಾಚಿಸಿ...

ಆರ್‌ಎಸ್‌ಎಸ್‌ ಭಾರತ ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಮಹಾತ್ಮಾ ಗಾಂಧಿಯನ್ನು ಕೊಂದಿದ್ದಾ?...

ಸೈನ್ಯಕ್ಕೆ ಅವಮಾನ ಮಾಡುವುದು ದೇಶಕ್ಕೆ ಅವಮಾನ ಮಾಡಿದಂತೆ ಎಂದಿದೆ ಕಾಂಗ್ರೆಸ್...

ನಿಮ್ಮ ನಾಚಿಕೆಗೆಟ್ಟ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಡಿ ಮೋಹನ್ ಭಾಗವತ್...