ವಿಶ್ವ ಆರ್ಥಿಕ ವೇದಿಕೆಯಲ್ಲಿನ ಮೋದಿ ಮಾತಿಗೆ ಬಜೆಟ್‌ನಲ್ಲಿ ಸಿಗದ ಕಿಮ್ಮತ್ತು
ಸುದ್ದಿ ಸಾಗರ

ವಿಶ್ವ ಆರ್ಥಿಕ ವೇದಿಕೆಯಲ್ಲಿನ ಮೋದಿ ಮಾತಿಗೆ ಬಜೆಟ್‌ನಲ್ಲಿ ಸಿಗದ ಕಿಮ್ಮತ್ತು

ಮೋದಿ ತಮ್ಮ ದಾವೋಸ್ ಭಾಷಣದಲ್ಲಿ ಕೈಗಾರಿಕೆಗಳಿಗೆ ನೀಡುತ್ತಿರುವ ಸಾಹಾಯಧನದ ಕುರಿತು ಮಾತನಾಡಿದ್ದರು. ಅವರ ಮಾತುಗಳನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಸರಿಯಾಗಿ ಅರ್ಥವಾಗಿಲ್ಲ ಎನಿಸುತ್ತದೆ.

ನಿನ್ನೆ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ ಪರ-ವಿರೋಧ ಚರ್ಚೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ  ‘ದಿ ಪ್ರಿಂಟ್’ ಪತ್ರಿಕೆಯು ಅರ್ಥಶಾಸ್ತ್ರಜ್ಞ ನರೇಂದ್ರ ಪಾಣಿಯವರ ಬಜೆಟ್ ಕುರಿತಾದ ವಿಶ್ಲೇಷಣೆಯನ್ನು ಪ್ರಕಟಿಸಿದೆ. ಆ ವರದಿಯ ಕನ್ನಡಾನುವಾದ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ದಾವೋಸ್‌ನ ತಮ್ಮ ಭಾಷಣದಲ್ಲಿ, "ಕೈಗಾರಿಕೆಗಳಿಗೆ ಹಲವಾರು ಸಹಾಯಧನಗಳನ್ನು ನೀಡುತ್ತಿರುವ ಕಾರಣದಿಂದ ನಮ್ಮ ಕೈಗಾರಿಕೆಗಳು ಜಾಗತಿಕ ಸ್ಫರ್ಧೆಯಿಂದ ಹಿಂದುಳಿಯುವಂತಾಗಿವೆ" ಎಂದಿದ್ದರು. ಅರುಣ್ ಜೇಟ್ಲಿ ಅದನ್ನು ಸರಿಯಾಗಿ ಅರ್ಥೈಸಿಲ್ಲವೆಂದು ತೋರುತ್ತದೆ.

ಸಾಮಾನ್ಯವಾಗಿ ಚುನಾವಣಾ ಬಜೆಟ್ ಮತದಾರ ಸ್ನೇಹಿ ಹಣಕಾಸು ಯೋಜನೆಗಳನ್ನು ಒಳಗೊಂಡು, ಹಣಕಾಸಿನ ನಿರ್ವಹಣೆಯಲ್ಲಿ ಪ್ರಾಮಾಣಿಕವಾಗಿರುತ್ತವೆ. ಆದರೆ ಈ ಸರ್ಕಾರ ಕೇವಲ ಖಾಲಿ ಭರವಸೆಗಳನ್ನು ಮಾರಾಟ ಮಾಡುವ ಬಗ್ಗೆ ವಿಶ್ವಾಸ ಹೊಂದಿದೆ.

ಅರುಣ್ ಜೇಟ್ಲಿಯ ಚುನಾವಣಾ ಪೂರ್ವ ಕೊನೆಯ ಪೂರ್ಣ ಬಜೆಟ್, ಈ ಸರ್ಕಾರದ ಯೋಚನೆಗಳೇನು ಎಂಬುದನ್ನು ತಿಳಿಸುತ್ತದೆ. ಹಿಂದಿನಿಂದ ನಡೆದು ಬಂದ ಆರ್ಥಿಕ ಸಂಪ್ರದಾಯಗಳನ್ನು ಮೀರಿ ಮತದಾರರನ್ನು ಆಕರ್ಷಿಸಲೆಂದೇ ವಿನ್ಯಾಸಗೊಳಿಸಲಾದ ಯೋಜನೆಗಳನ್ನು ಚುನಾವಣಾ ಪೂರ್ವ ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ. ಆದರೆ ಈ ಸರಕಾರ ಭರವಸೆಗಳನ್ನು ಮಾರಾಟ ಮಾಡುವ ಬಗ್ಗೆ ವಿಶ್ವಾಸ ಹೊಂದಿದೆ. ಇದು ಒಂದೆಡೆಯಾದರೆ ಪ್ರಮುಖ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿ ಅದಕ್ಕೆ ಅಗತ್ಯವಿರುವ ಹಣವನ್ನು ಎಲ್ಲಿಂದ ಹೊಂದಿಸಲಾಗುವುದು ಎಂಬ ಮಾಹಿತಿಯನ್ನು ನೀಡಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಒಂದು ಗಮನಾರ್ಹ ಉದಾಹರಣೆಯೆಂದರೆ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ. ಈ ಯೋಜನೆಯಡಿಯಲ್ಲಿ ಭಾರತದ 50 ಕೋಟಿ ಜನರಿಗೆ ಸೇವೆ ಒದಗಿಸಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಪ್ರತಿಯೊಂದು ಕುಟುಂಬಕ್ಕೆ ವರ್ಷವೊಂದಕ್ಕೆ 5 ಲಕ್ಷ ರೂಗಳ ಅರೋಗ್ಯ ಸೇವೆಯನ್ನು ಒದಗಿಸಲಿರುವ ಈ ಯೋಜನೆಯು ವಿಶ್ವದ ಅತಿದೊಡ್ಡ ಸರಕಾರೀ ಅನುದಾನದ ಅರೋಗ್ಯ ಸಂರಕ್ಷಣಾ ಯೋಜನೆ ಎನಿಸಿದೆ. ಆದರೆ ವಿತ್ತ ಸಚಿವರು, “ಈ ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕೆ ಸಾಕಷ್ಟು ಹಣವನ್ನು ಒದಗಿಸಲಾಗುವುದು,” ಎಂದು ಹೇಳಿರುವುದನ್ನು ಬಿಟ್ಟರೆ ಹಣದ ಮೂಲಗಳೇನು ಎಂಬುದರ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟನೆ ನೀಡಿಲ್ಲ.

ಬಜೆಟ್‌ನಲ್ಲಿ ಹಿರಿಯ ನಾಗರಿಕರ ಬಡ್ಡಿ ಆದಾಯದ ಮೇಲಿನ ಕಡಿತವನ್ನು 10,000 ರಿಂದ 50,000 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಆದರೆ ಇದು ಜಾರಿಗೆ ಬರುವುದು 2019ರ ಏಪ್ರಿಲ್ 1 ರಿಂದ. ಅದಕ್ಕಾಗಿ ಇನ್ನು ಒಂದು ವರ್ಷ ಕಾಯಬೇಕು. ರೂ.40,000 ಪ್ರಮಾಣವನ್ನು ಕಡಿತಗೊಳಿಸುವ ಯೋಜನೆಯು 2019-20ರ ಕಂದಾಯ ವರ್ಷದಿಂದ ಮಾತ್ರ ಜಾರಿಗೆ ಬರಲಿದೆ.

ಭರವಸೆಗಳನ್ನು ಮಾರಾಟ ಮಾಡುವಲ್ಲಿ ವಿಶ್ವಾಸ ಹೊಂದಿರುವ ಈ ಸರಕಾರವು ತನ್ನ ವಿತ್ತ ಸಚಿವರಿಗೆ ಜಿಡಿಪಿಯ ಶೇ.3.3ರಷ್ಟು ವಿತ್ತೀಯ ಕೊರತೆಯನ್ನು ನೀಗಿಸುವ ಅವಕಾಶ ನೀಡಿದೆ. ಆದರೆ ಇದು ಸಾಕಾಗುವುದಿಲ್ಲ.ಇಡೀ ಆಯವ್ಯಯವು ಜಿಎಸ್‌ಟಿಯಲ್ಲಿ ಏನಾಗಲಿದೆ ಎಂಬುದರ ಸುತ್ತ ನಿಂತಿದೆ.  ಜಿಎಸ್‌ಟಿಯಂದ ಬರಲಿರುವ ಆದಾಯ ರೂ.7.43 ಲಕ್ಷ ಕೋಟಿ. ಈ ವರ್ಷದ ಜಿಎಸ್‌ಟಿ ಪರಿಷ್ಕೃತ ಅಂದಾಜು ಸುಮಾರು 3 ಲಕ್ಷ ಕೋಟಿಗಳಾಗಬಹುದು. ಈ ಪರಿಷ್ಕೃತ ಮೊತ್ತವು ವಿತ್ತೀಯ ವರ್ಷದ ಅಗತ್ಯತೆಗಳ ಒಂದು ಭಾಗವನ್ನಷ್ಟೆ ಪೂರೈಸಬಲ್ಲದು. ಅದರೊಂದಿಗೆ ಜಿಎಸ್‌ಟಿಯನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ. ಆದರೆ ಇದರೊಳಗಿನ ಏರಿಳಿತಗಳು ಸರಕಾರಕ್ಕೆ ಹಣಕಾಸಿನ ಆಘಾತಗಳನ್ನು ತಂದೊಡ್ಡಬಹುದು.

ಜಿಎಸ್‌ಟಿಯು ಆರ್ಥಿಕತೆಯ ಆಳತೆಯಲ್ಲಷ್ಟೇ ಅಲ್ಲದೆ, ಆರ್ಥಿಕತೆಗೆ ಅದನ್ನು ಅರಿಗಿಸಿಕೊಳ್ಳಲೂ ಕಷ್ಟವಾಗಿಸಬಹುದು. ಒಟ್ಟಾರೆ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ತನ್ನ ಫ್ಯಾಷನಬಲ್ ಕ್ರಮಗಳನ್ನಷ್ಟೇ ಅನುಷ್ಟಾನಕ್ಕೆ ತರಲು ಹೊರಟಿರುವ ಸರಕಾರದ ಒಲವು ನಷ್ಟವನ್ನುಂಟು ಮಾಡುತ್ತದೆ. ಆಹಾರದ ಸಹಾಯ ಧನದಲ್ಲಿ ಈ ವಿಷಯವು ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಸಹಾಯಧನವು ಒಂದು ಕಡೆ ಅಕ್ಕಿ ಗೋಧಿಗಳ ಸಾಗಾಣಿಕಾ ಮತ್ತು ಸಂಗ್ರಹಣಾ ವೆಚ್ಚವನ್ನು ಗೌಣವಾಗಿಸಿ, ಮತ್ತೊಂದೆಡೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಬಂದ ಆದಾಯದ ನಡುವಿನ ಅಂತರವನ್ನು ಸರಿದೂಗಿಸುತ್ತದೆ.

ಈ ಅಂತರವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೆಚ್ಚದಲ್ಲಿನ ಹೆಚ್ಚಳದ ಕಾರಣದಿಂದಾಗಿ ಅಷ್ಟೇ ಅಲ್ಲದೇ, ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅಗತ್ಯವಾದ ಆಹಾರ ವಸ್ತುಗಳ ಖರೀದಿಯನ್ನು ಕಡಿಮೆ ಮಾಡುವುದರಿಂದಲೂ ಅಗಬಹುದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಜವಾದ ಬಡವರನ್ನು ಗುರುತಿಸುವಲ್ಲಿ ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಂದರೆ ಬಡವರಲ್ಲಿ ಕೆಲವರು ಇನ್ನೂ ಹಸಿವಿನಲ್ಲಿದ್ದಾರೆ ಎಂದಾಗುತ್ತದೆ. ಇದು ಅಹಾರದ ಮೇಲಿನ ಸಹಾಯಧನಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. 2018-19ಕ್ಕೆ ನೀಡಿರುವ ಸಹಾಯಧನವು ರೂ 29,041 ಕೋಟಿಗಳಾಗಿದ್ದು, ಪ್ರಸಕ್ತ ವರ್ಷದ ಅಂದಾಜುಗಳಿಗಿಂತ ಹೆಚ್ಚಾಗಿದೆ.

ವಿದೇಶಿ ಕಂಪನಿಗಳ ಪೈಪೋಟಿಯಿಂದ ದೇಶೀ ಕಂಪನಿಗಳನ್ನು ರಕ್ಷಿಸುವ ಸಲವಾಗಿ ಹಲವಾರು ರೀತಿಯ ಸಹಾಯಧನಗಳನ್ನು ನೀಡುವುದು, ವಿದೇಶಿ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಸಲ್ಲದು ಎಂದು ಪ್ರಧಾನಿ ಮೋದಿ ದಾವೋಸ್ ಭಾಷಣದಲ್ಲಿ ಹೇಳಿದ್ದರು. ಅವರ ಯೋಚನೆಗೆ ವಿರುದ್ಧವಾಗಿ ಜೇಟ್ಲಿ ಕೆಲವು ಕೈಗಾರಿಕೆಗಳಿಗೆ ರಕ್ಷಣೆ ನೀಡಲು ಸಿದ್ಧರಾಗಿದ್ದಾರೆ. ಮೊಬೈಲ್ ಫೋನ್‌ಗಳ ಮೇಲೆ ಶೇ. 15-20ರಷ್ಟು ಹೆಚ್ಚಿನ ಅಮದು ಸುಂಕವನ್ನು ವಿಧಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ.

ಕೆಲವು ನಿರ್ಧಿಷ್ಟ ಕೈಗಾರಿಕೆಗಳನ್ನು ರಕ್ಷಿಸುವ ನೆಲೆಗಟ್ಟಿನಲ್ಲಿ ವಿತ್ತ ಸಚಿವರು ಹೆಜ್ಜೆ ಇಟ್ಟಿದೆಯಾದರೂ, ಭಾರತದ ಮಾರುಕಟ್ಟೆಯಲ್ಲಿ ಚೀನಾ ವಸ್ತುಗಳಿಗೆ ಅವಕಾಶವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತಲೆಬಾಗಿದೆ.

ಅರುಣ್ ಜೇಟ್ಲಿಯ 2018ರ ಬಜೆಟ್ ಚುನಾವಣೆಯಿಂದ ದೇಶೀ ಕೈಗಾರಿಕೆಗಳ ರಕ್ಷಣೆಯವರೆಗೂ ಎಲ್ಲಾ ರೀತಿಯ ಕಾಳಜಿಯನ್ನು ಹೊಂದಿದೆ. ಆದರೆ ಮೋದಿ ಸರಕಾರದ ಆರ್ಥಿಕ ನೀತಿ ವಿಧಾನಗಳನ್ನು ಮೀರಲು ಅದರಿಂದ ಸಾಧ್ಯವಾಗಿಲ್ಲ.

ನರೇಂದ್ರ ಪಾಣಿ, ಆರ್ಥಿಕ ತಜ್ಞರು ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಪ್ರಾಧ್ಯಾಪಕರು.