samachara
www.samachara.com
ಭಯವನ್ನೇ ಬಂಡವಾಳ ಮಾಡಿಕೊಂಡ ಭಜರಂಗದಳ; ಮ್ಯಾನ್ ಪವರ್ ಉದ್ಯಮದ ಸೀಕ್ರೆಟ್ಸ್!
ಸುದ್ದಿ ಸಾಗರ

ಭಯವನ್ನೇ ಬಂಡವಾಳ ಮಾಡಿಕೊಂಡ ಭಜರಂಗದಳ; ಮ್ಯಾನ್ ಪವರ್ ಉದ್ಯಮದ ಸೀಕ್ರೆಟ್ಸ್!

"ಅವರ್ಯಾರೋ ಬಂದಿದ್ದರು. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೆ. ನನ್ನದು ಈಶ್ವರಿ ಮ್ಯಾನ್‌ಪವರ್ ಸಪ್ಲೈ ಏಜೆನ್ಸಿ ಅಂತ ಇದೆ. ಟೆಂಡರ್ ಮೂಲಕ ಸೆಕ್ಯುರಿಟಿ ನೀಡುವ ಗುತ್ತಿಗೆ ಪಡೆಯುತ್ತೇನೆ. ಇದರಲ್ಲಿ ಯಾವ ಒತ್ತಡವೂ ಇಲ್ಲ..." ಎಂದವರು ಭಜರಂಗದಳದ ನಾಯಕ ಶರಣ್ ಪಂಪವೆಲ್. 

ಇತ್ತೀಚೆಗೆ ಬಿಡುಗಡೆಗೊಂಡ ಧೀರೇಂದ್ರ. ಕೆ. ಝಾ ಅವರ  Shadow Armies: Fringe Organizations and Foot Soldiers of Hindutva ಎಂಬ ಕೃತಿಯಲ್ಲಿ ಶರಣ್ ಅವರ ಉದ್ಯಮ ಹಾಗೂ ಸಂಘಟನೆ ಕುರಿತು ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ಇದರ ಆಯ್ದ ಭಾಗವನ್ನು 'ಸ್ಕ್ರಾಲ್ ಡಾಟ್ ಇನ್' ಸುದ್ದಿ ತಾಣ ಪ್ರಕಟಿಸುತ್ತಿದ್ದಂತೆ ಚರ್ಚೆಯೊಂದು ಹುಟ್ಟಿಕೊಂಡಿದೆ. ಕರ್ನಾಟಕದ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಶರಣ್ ಪಂಪ್‌ವೆಲ್ ಹಾಗೂ ಅವರ ಭಜರಂಗ ಸಂಘಟನೆಯ ಕಾರ್ಯಚರಣೆಗಳ ಪರಿಚಯ ಇದ್ದರೂ, ಧೀರೇಂದ್ರ ಅವರ ಕೃತಿಯಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ಈ ಹಿನ್ನೆಲೆಯಲ್ಲಿ 'ಸಮಾಚಾರ' ಶರಣ್ ಅವರನ್ನು ಸಂಪರ್ಕಿಸಿದಾಗ, "ನಾನು ಅವರಿಗೆ ಇದ್ದ ವಿಚಾರ ಹೇಳಿದ್ದೆ. ಒಂದು ಕಡೆ ಕೆಲಸ ಮತ್ತೊಂದು ಕಡೆ ಸಂಘಟನೆ. ಕೆಲಸ ಮಾಡದೇ ಸಂಘಟನೆ ಕಟ್ಟಲು ಸಾಧ್ಯವಿಲ್ಲ ಅಲ್ವಾ? ಅದನ್ನೇ ನಾನೂ ಮಾಡುತ್ತಿದ್ದೇನೆ. ಇದನ್ನು ಲೇಖಕರಿಗೆ ವಿವರಿಸಿದ್ದೆ. ಆದರೆ ಅವರು ತಪ್ಪು ಅಭಿಪ್ರಾಯ ಬರುವಂತೆ ಬರೆದಿದ್ದಾರೆ ಎಂದು ಗೊತ್ತಾಯಿತು,'' ಎಂದು ಸಮಜಾಯಿಷಿ ನೀಡಿದರು.

ಇಷ್ಟಕ್ಕೂ ಶರಣ್ ಮತ್ತು ಭಜರಂಗದಳದ ಕುರಿತು ಕೃತಿಯಲ್ಲಿ ಇರುವುದೇನು? ಅದರ ಭಾವಾನುವಾದ ಇಲ್ಲಿದೆ...

*

ಅದೊಂದು ಮಂಗಳೂರಿನ ಬಲಪಂಥೀಯ ಸಂಘಟನೆ. ಚರ್ಚ್ ದಾಳಿ, ಹಿಂದೂ-ಮುಸ್ಲಿಂ ಜೋಡಿಗಳ ಮೇಲೆ 'ನೈತಿಕ ಪೊಲೀಸ್ ಗಿರಿ' ಹೀಗೆ ಹೊಡಿಬಡಿಯ ಇತಿಹಾಸ ಅದರದ್ದು. ಸದಾ ಮುಸ್ಲಿಂ ಸಮುದಾಯದ ಮೇಲೆ ಕೆರಳಿ ಕೆಂಡಕಾರುವ ಈ ಸಂಘಟನೆಗೊಬ್ಬ ನಾಯಕ; ಆತನದ್ದು ಭದ್ರತಾ ಸೇವೆ ನೀಡುವ 'ಸೆಕ್ಯೂರಿಟಿ ಏಜೆನ್ಸಿ'ಯ ಉದ್ಯಮ. ಒಂದು ಬೆದರಿಸುವ ಚಟುವಟಿಕೆ, ಇನ್ನೊಂದು ಭದ್ರತೆ ನೀಡುವ ವ್ಯವಹಾರ; ಹೀಗಾದಾಗ ಸಂಘಟನೆ ಮತ್ತು ವ್ಯವಹಾರದ ನಡುವಿನ ಸಮೀಕರಣ ಏನಾಗಿರಬಹುದು ಎನ್ನುವುದೇ ಈ ಕಥೆ.

ಅಂದ ಹಾಗೆ ಈ ಸಂಘಟನೆಯ ಹೆಸರು ಭಜರಂಗ ದಳ; ವಿಶ್ವ ಹಿಂದೂ ಪರಿಷತ್‌ನ ಕೂಸು. ಈ ಸಂಘಟನೆಯ ಮಂಗಳೂರು ಭಾಗದ ಅನಭಿಷಿಕ್ತ ದೊರೆಯೇ ಶರಣ್ ಪಂಪ್‌ವೆಲ್; ದಕ್ಷಿಣ ಕರ್ನಾಟಕದ ಪ್ರಾಂತ ಭಜರಂಗ ದಳದ ಸಂಚಾಲಕಆತನದ್ದೊಂದು ಭದ್ರತಾ ಸೇವೆ ನೀಡುವ ಸಂಸ್ಥೆ; ಹೆಸರು 'ಈಶ್ವರಿ ಮ್ಯಾನ್ ಪವರ್ ಸಲ್ಯೂಷನ್ಸ್'. ಸಂಘಟನೆಯ ವಿಚಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ಮೇಲೆ ಸದಾ ಕೆಂಡ ಕಾರುವ ಈತ, ಭದ್ರತಾ ಸೇವೆ ನೀಡುವುದು ಮಾತ್ರ ಅದೇ ಸಮುದಾಯದ ಉದ್ಯಮಿಗಳಿಗೆ. ಹಾಗಂಥ ಇದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ ಎನ್ನುತ್ತಿವೆ ಆತ ಬೆಳೆಸಿಕೊಂಡ ಬಂದ ಉದ್ಯಮದ ತಂತ್ರಗಾರಿಕೆ.

ಈಶ್ವರಿ ಮ್ಯಾನ್ ಪವರ್ ಸಲ್ಯೂಷನ್ಸ್:

"ತಾನು ಎಲ್ಲಾ ಕಾನೂನುಗಳನ್ನು ಪಾಲನೆ ಮಾಡಿಯೇ ಈ ಭದ್ರತಾ ಸೇವೆ ನೀಡುವ ಉದ್ಯಮ ಕಟ್ಟಿದ್ದೇನೆ ಎನ್ನುತ್ತಾರೆ," 40ರ ಹರೆಯದ ಶರಣ್ ಪಂಪ್‌ವೆಲ್. “ನಾವು ಅವರಿಗೆ ಭದ್ರತೆ ನೀಡುತ್ತೇವೆ ಎಂಬ ಕಾರಣಕ್ಕೆ ಉದ್ಯಮಿಗಳು ನಮ್ಮ ಜತೆ ಕೈಜೋಡಿಸುತ್ತಾರೆ ಎನ್ನುವುದು,” ಶರಣ್ ಅಭಿಮತ. ಆದರೆ ಅಂತರಾಳದ ಸತ್ಯ ಹಾಗಿಲ್ಲ. ಇಲ್ಲಿನ ಸ್ಥಳೀಯ ವರ್ತಕರಲ್ಲಿ ಭಜರಂಗ ದಳದ ಚಟುವಟಿಕೆಗಳ ಬಗ್ಗೆ ಸಣ್ಣ ಭಯವಿದೆ. ಅದನ್ನೇ ಸದುಪಯೋಗಪಡಿಸಿಕೊಂಡು ಇದೇ ಭಜರಂಗ ದಳದ ಕಾರ್ಯಕರ್ತರೇ ತುಂಬಿಕೊಂಡಿರುವ 'ಈಶ್ವರಿ ಮ್ಯಾನ್ ಪವರ್' ಮೂಲಕ ಭದ್ರತಾ ಸೇವೆ ನೀಡುತ್ತಾರೆ ಶರಣ್ ಪಂಪ್ವೆಲ್.

ಭದ್ರತಾ ಸೇವೆಗೆ ಬೇಕಾದ 'ಬೇಡಿಕೆ'ಯನ್ನು ಭಜರಂಗ ದಳ ಸಂಘಟನೆ ಮೂಲಕ ಸೃಷ್ಟಿಸಲಾಗುತ್ತದೆ; ಅದಕ್ಕಾಗಿ ಬೆದರಿಕೆದಾಳಿಯಂಥ ತಂತ್ರಗಳನ್ನು ಬಳಸಲಾಗುತ್ತದೆ. ಭದ್ರತಾ ಸೇವೆ ನೀಡುವ ಮೂಲಕ ಭಿತ್ತಿದ ಭಯವನ್ನು ಬೆಳೆಯಾಗಿ ಪರಿವರ್ತನೆ ಮಾಡಲಾಗುತ್ತದೆ. ಹೀಗೆ ಯಶಸ್ವಿ ಉದ್ಯಮಿಯಾಗಿ ರೂಪಿಗೊಂಡಿದ್ದಾರೆ ದಕ್ಷಿಣ ಕನ್ನಡ ಭಜರಂಗದಳದ ಫೈರ್ ಬ್ರಾಂಡ್ ಲೀಡರ್ ಶರಣ್ ಪಂಪ್‌ವೆಲ್.

ಬಲ್ ರೋಲ್:

ಇಲ್ಲಿನ ಮಾಲ್, ಅಂಗಡಿಗಳು, ಅಪಾರ್ಟ್ ಮೆಂಟ್‌ಗಳ ಮಾಲೀಕರಲ್ಲಿ ಅಭದ್ರತೆಯನ್ನು ಭಜರಂಗದಳದ ಮೂಲಕ ಸೃಷ್ಟಿಸಲಾಗುತ್ತದೆ. ನಂತರ ಅಲ್ಲಿನ ಭದ್ರತೆ ತಮ್ಮ ಭದ್ರತಾ ಸಿಬ್ಬಂದಿಯ ಸೇವೆ ನೀಡುವ ಆಫರ್ನ್ನು ಶರಣ್ ಮುಂದಿಡುತ್ತಾರೆಹೀಗೆ ಮಾಲೀಕರ ಭದ್ರತೆಯನ್ನು ಕಿತ್ತು ಹಾಕಿ ತಮ್ಮ ವ್ಯವಹಾರವನ್ನು ಕುದುರಿಸಲಾಗುತ್ತದೆ. ಆದರೆ ವಿಚಿತ್ರ ಎಂದರೆ ನಿನ್ನೆ ಅಭದ್ರತೆ ಸೃಷ್ಟಿಸಲು ಬಳಕೆಯಾದವರೇ, ನಾಳೆ ಯೂನಿಫಾರಂ ತೊಟ್ಟು ಭದ್ರತೆ ನೀಡಲು ಬರುತ್ತಾರೆ; ಅವರೊದ್ದು ಒಂಥರಾ ಡಬಲ್ ಆ್ಯಕ್ಟಿಂಗ್.

ಸೂಪರ್ ವೈಸರ್ ಮತ್ತು ಕಂಪೆನಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಭಜರಂಗದಳದ ಕಾರ್ಯಕರ್ತರು,” ಎನ್ನುತ್ತಾರೆ ಶರಣ್ ಪಂಪ್‌ವೆಲ್. “ನಗರದ ಭಜರಂಗದಳ ನಾಯಕನಾಗಿ ಕಾರ್ಯಕರ್ತರ ದಿನದ ಅಗತ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಬಳಿ ಕೆಲಸ ಕೇಳಿ ಬಂದ ಯಾರನ್ನೂ ನಾನು ಹಿಂದಕ್ಕೆ ಕಳುಹಿಸುವುದಿಲ್ಲ. ನಗರದಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಕೆಲವು ಮುಸ್ಲಿಂ ಭದ್ರತಾ ಸಿಬ್ಬಂದಿಗಳೂ ನಮ್ಮಲ್ಲಿದ್ದಾರೆ,” ಎನ್ನುತ್ತಾರೆ ಅವರು.

ಶರಣ್ ಪಂಪ್‌ವೆಲ್ ಭಜರಂಗ ದಳಕ್ಕೆ ಕಾಲಿಟ್ಟು ಬಹುಬೇಗ ಪ್ರವರ್ಧಮಾನಕ್ಕೆ ಬಂದವರಲ್ಲಿ ಪ್ರಮುಖರು. 2005ರಲ್ಲಿ ಮಂಗಳೂರು ವಿಭಾಗದ ಭಜರಂಗ ದಳ ಸೇರಿದ ಅವರು ಇದೇ ವಿಭಾಗದ ಸಂಚಾಲಕರಾಗಿ 2011ರಲ್ಲಿ ಆಯ್ಕೆಯಾಗುತ್ತಾರೆ. ಮೂರೇ ವರ್ಷಗಳಲ್ಲಿ ಅಂದರೆ 2014ರಲ್ಲಿ ಭಜರಂಗ ದಳದ ದಕ್ಷಿಣ ಕರ್ನಾಟಕದ ಸಂಚಾಲಕ ಹುದ್ದೆ ಶರಣ್ ಪಾಲಿಗೆ ಒಲಿದು ಬರುತ್ತದೆ. ಇದರ ಮಧ್ಯೆ ಹಲವು ಚರ್ಚ್ ದಾಳಿಗಳುನೈತಿಕ ಪೊಲೀಸ್ ಗಿರಿ ಚಟುವಟಿಕೆಗಳು ನಡೆದಿವೆ ಎನ್ನಿ. ಕರ್ನಾಟಕದ ಭಜರಂಗದಳದಲ್ಲಿ ಉತ್ತರ ಮತ್ತು ದಕ್ಷಿಣ ಪ್ರಾಂತಗಳಿದ್ದು ಅದರಲ್ಲಿ ದಕ್ಷಿಣ ಪ್ರಾಂತ ಪ್ರಮುಖವಾದದ್ದು. ಅದರಲ್ಲೂ ಮಂಗಳೂರಿನಲ್ಲಿ ಭಜರಂಗ ದಳದ ಬೇರುಗಳು ಗಟ್ಟಿ ಮುಟ್ಟಾಗಿದೆ.ಇದರ ಹಿಂದೆ ಶರಣ್ ಪಂಪ್ ವೆಲ್ ಶ್ರಮ, ವಿಶಿಷ್ಟ 'ಬಿಸಿನೆಸ್' ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.

ವಿಚಿತ್ರ ಬಿಸಿನೆಸ್ ಮಾಡೆಲ್!:

ಭಯವನ್ನೇ ಬಂಡವಾಳ ಮಾಡಿಕೊಂಡ ಭಜರಂಗದಳ; ಮ್ಯಾನ್ ಪವರ್ ಉದ್ಯಮದ ಸೀಕ್ರೆಟ್ಸ್!

ಭಜರಂಗ ದಳ ಆರ್ಥಿಕವಾಗಿ ಸದೃಢವಾಗಿ ಬಳೆಯಲು ಈ ಚಟುವಟಿಕೆಗಳು ಅನಿವಾರ್ಯ ಎಂದು ಸಂಸ್ಥೆಯೂ ನಂಬಿಕೊಂಡಿದೆಹೀಗಾಗಿ ಶರಣ್ ನಾಯಕತ್ವದಲ್ಲಿ ಸೆಕ್ಯುರಿಟಿ ಸರ್ವಿಸ್ ಕೂಡಾ ಮುಂದುವರಿದಿದೆ. “ನನ್ನನ್ನು ಮಂಗಳೂರು ವಲಯದ ಸಂಚಾಲಕನನ್ನಾಗಿ ನೇಮಿಸಿದಂದಿನಿಂದ ಈ ವ್ಯವಹಾರ ಆರಂಭಿಸಿದ್ದೇನೆ. ಸದ್ಯ ನನಗೆ ಸಿಟಿ ಸೆಂಟರ್, ಫೋರಂ ಫಿಝಾ ಹಾಗೂ ಬಿಗ್ ಬಜಾರ್ ಮಾಲ್ ಗಳ ಕಾಂಟ್ರಾಕ್ಟ್ ಗಳಿವೆ. ಇದಲ್ಲದೆ ನಗರದ ಹಲವು ಅಂಗಡಿ, ಅಪಾರ್ಟ್ಮೆಂಟ್‌ಗಳ ಕಾಂಟ್ರಾಕ್ಟ್ ಕೂಡಾ ಇದೆ,” ಎನ್ನುತ್ತಾರೆ ಅವರು.

ಸಿಟಿ ಸೆಂಟರ್ ಮತ್ತು ಫೋರಂ ಫಿಝಾ ದೇಶದ ಟಾಪ್ 20 ಮಾಲ್ ಗಳಲ್ಲಿ ಸ್ಥಾನ ಪಡೆದಿವೆಎಂಬುದು ಗಮನಾರ್ಹ. ನ್ನು ಬಿಗ್ ಬಜಾರ್ ಮಾಲ್ ಕೂಡಾ ನಗರ ಪ್ರಮುಖ ಮಾಲ್. ಹೀಗೆ ಮಂಗಳೂರಿನ ಬಹು ಮುಖ್ಯ ಭದ್ರತಾ ಸೇವೆಯನ್ನೆಲ್ಲಾ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ ಭಜರಂಗ ದಳದ ಸಂಚಾಲಕರು.

ವಿಶೇಷ ಅಂದರೆಸಿಟಿ ಸೆಂಟರ್ ಮತ್ತು ಫೋರಂ ಫಿಜಾ ಮಾಲ್ ನಲ್ಲಿ ಹೆಚ್ಚಿನ ಅಂಗಡಿಗಳು ಮುಸ್ಲಿಮರಿಗೆ ಸೇರಿವೆ. ಭಜರಂಗ ದಳದಿಂದ ಪ್ರತಿ ಬಾರಿ ದಾಳಿಗೆ ಗುರಿಯಾಗುವ ಸಮುದಾಯವೂ ಇದೆ. ಹೀಗಿದ್ದೂ ಇವರೆಲ್ಲಾ ಇದೇ ಶರಣ್ ಪಂಪ್‌ವೆಲ್ ಸಂಸ್ಥೆಯಿಂದ ಭದ್ರತೆ ಪಡೆಯುತ್ತಾರೆ. ಇವೆಲ್ಲದರ ಮಧ್ಯೆ ಒಂದು ಅಂಶವನ್ನು ಗಮನಿಸಲೇಬೇಕು. ಮುಸ್ಲಿಂ ಸಮುದಾಯದವರನ್ನು ಶರಣ್ ಸಂಸ್ಥೆ ಗಿರಾಕಿಗಳಾಗಿ ಪಡೆಯುತ್ತಿದ್ದಂತೆ ನಗರದಲ್ಲಿ ಕೋಮು ಸೌಹಾರ್ದತೆ ಒಂದು ಹಂತಕ್ಕೆ ಉತ್ತಮವಾಗಿದೆ. ಆದರೆ ಇಲ್ಲೂ ಅಪಾಯಗಳಿವೆ ಎಂಬುದನ್ನು ಮರೆಯುವಂತಿಲ್ಲ; ತನ್ನ ಸಿಬ್ಬಂದಿಗಳಿಂದಾಗಿ ಅವರ ಪ್ರತಿ ಮಾಹಿತಿಯೂ ಶರಣ್ ಬೆರಳ ತುದಿಯಲ್ಲಿದೆ.

ಬಿಸಿನೆಸ್ ಸೀಕ್ರೆಟ್:

ಮುಸ್ಲಿಂ ವರ್ತಕರು, ಮಾಲ್ ಗಳ ಮಾಲಿಕರಿಂದ ನಾವು ಸಾಕಷ್ಟು ವ್ಯವಹಾರ ಪಡೆಯುತ್ತೇವೆ. ಇದಕ್ಕೆ ಪ್ರಾಥಮಿಕ ಕಾರಣ ಅವರು ನಮ್ಮ ಮೇಲೆ ಇಟ್ಟ ನಂಬಿಕೆ,” ಎನ್ನುವುದು ಶರಣ್ ವಾದ. ಆದರೆ ಉದ್ಯಮದ ನಿಜವಾದ ಗುಟ್ಟನ್ನು ಅವರು ಬಿಟ್ಟುಕೊಡುವುದೇ ಇಲ್ಲ. ಅದರೆ ಬಗ್ಗೆ ಜಾಣ ಮೌನ ವಹಿಸುತ್ತಾರೆ. ನಿಜವಾದ ಉದ್ಯಮದ ಗುಟ್ಟು ಏನೆಂದರೆ ಮುಸ್ಲಿಂ ಸಮುದಾಯದಲ್ಲಿರುವ ಭಯ.

ಅವರು (ಭಜರಂಗ ದಳ) ಯಾವ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಹಾಗಾಗಿ ಇದು ನಮ್ಮ ಉದ್ಯಮವನ್ನು ಸಲೀಸಾಗಿ ಮುನ್ನಡೆಸಿಕೊಂಡು ಹೋಗಲು ಅವರಿಂದಲೇ ರಕ್ಷಣೆ ಪಡೆಯುವುದು ಅನಿವಾರ್ಯ,” ಎನ್ನುತ್ತಾರೆ ಸಿಟಿ ಸೆಂಟರ್ ಮಾಲ್ನ ಮುಸ್ಲಿಂ ವರ್ತಕರೊಬ್ಬರು. ಈ ಮೂಲಕ ಈಶ್ವರಿ ಮ್ಯಾನ್ ಪವರ್ ಕಡೆಯಿಂದ ಭದ್ರತಾ ಸೇವೆ ಪಡೆದುಕೊಳ್ಳುತ್ತಿರುವ ಗುಟ್ಟನ್ನು ಅವರು ರಟ್ಟು ಮಾಡುತ್ತಾರೆ. “ಮಂಗಳೂರಿನಂಥ ನಗರದಲ್ಲಿ ಇಂಥವರಿಂದ ನೀವು ಭದ್ರತೆ ಪಡೆಯದಿದ್ದರೆ ದಾಳಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಶರಣ್ ಸಂಸ್ಥೆಯಿಂದ ಭದ್ರತಾ ಸೇವೆ ಪಡೆಯುವುದರಿಂದ ಅಂತಿಮವಾಗಿ ನಿಮಗೆ ನಷ್ಟವೇನೂ ಇಲ್ಲ. ನೀವು ಭದ್ರತಾ ಸಿಬ್ಬಂದಿಗಳನ್ನೂ ಪಡೆದುಕೊಳ್ಳುತ್ತಿರಿಮಾತ್ರವಲ್ಲ ಯಾವುದೇ ಹಿಂದುತ್ವ ಸಂಘಟನೆಗಳ ದಾಳಿಯಾಗುವುದಿಲ್ಲ ಎಂಬ ಖಾತರಿಯೂ ಸಿಗುತ್ತದೆ,” ಎನ್ನುತ್ತಾರೆ ಆ ವರ್ತಕರು. ಉದ್ಯಮ ನಾಶವಾಗಲು ಒಂದೇ ಒಂದು ದಾಳಿ ಸಾಕು. ಹೀಗಾಗಿ ಇದು ಅನಿವಾರ್ಯ ಎಂಬುದು ಅವರ ಸಮಜಾಯಿಷಿ.

ಸರಕಾರದ ನಿರ್ಲಕ್ಷ್ಯ:

ಹಾಗಂಥ ಮಂಗಳೂರಿನಲ್ಲಿ ಭಜರಂಗ ದಳ ಭದ್ರತಾ ಸೇವೆ ನೀಡುವ ದಂಧೆಯನ್ನು ಹುಟ್ಟು ಹಾಕಲು ಸಾಧ್ಯವಿರಲಿಲ್ಲ. ಆದರೆ ಯಾವಾಗ ನಗರದ ಸಾಮಾನ್ಯ ಜನರಿಗೆ ಮತ್ತು ಉದ್ಯಮಿಗಳಿಗೆ ಪೊಲೀಸರಿಗೆ ದೂರು ನೀಡುವುದು ವ್ಯರ್ಥ, ಈ ರೀತಿ ಸಮಸ್ಯೆ ಸೃಷ್ಟಿಸುವವರಿಗೆ ಸರಕಾರದಿಂದ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದು ಅನಿಸಿತೋ ಆಗ ಇಂಥಹ ಭದ್ರತಾ ಮಾದರಿಗಳಿಗೆ ಮೊರೆ ಹೋದರುಕಾನೂನು ಮತ್ತು ಸುವ್ಯವಸ್ಥೆ ಹತೋಟಿಯಲ್ಲಿ ಇರುವುದಿಲ್ಲವೋ ಆಗ ಈ ರೀತಿಯ ಎಂದೂ ನಡೆಯದ ಹೊಂದಾಣಿಕೆಗಳು ನಡೆಯುತ್ತವೆ. ಅಂತಿಮವಾಗಿ ಸಮಸ್ಯೆ ಕೊಡುವವರ ಜತೆಯೇ ಒಪ್ಪಂದ ಮಾಡಿಕೊಳ್ಳುತ್ತಾರೆಅದು ಅವರ ಪಾಲಿನ ಅನಿವಾರ್ಯ ಕರ್ಮವೂ ಹೌದು.

ಹೀಗೆ ಸಮಾಜದ ಕೆಳ ವರ್ಗದಿಂದ ಬಂದ ನಿರುದ್ಯೋಗಿ ಯುವಕರನ್ನು ಕಟ್ಟಿಕೊಂಡು ತಳಮಟ್ಟದಿಂದ ಆರ್ಥಿಕ ಆಯಾಮದವರೆಗೆ ಮಂಗಳೂರಿನಲ್ಲಿ ಭಜರಂಗ ದಳದ ಸಾಮ್ರಾಜ್ಯ ವ್ಯಾಪಿಸಿಕೊಂಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ದಿನ ನಿತ್ಯದ ಅಗತ್ಯಗಳನ್ನು ಹೊಂದಿಸಿಕೊಳ್ಳಲು ಒದ್ದಾಡುವವರಿಗೆ ಇದೇ ಭಜರಂಗದಳ ಭದ್ರತಾ ದಂಧೆಯ ಉದ್ಯೋಗ ಆಸರೆಯಾಗಿ ಕಾಣಿಸುತ್ತದೆ. ಇದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

1984ರಲ್ಲಿ ಅಯೋಧ್ಯೆ ಆಂದೋಲನಕ್ಕೆ ಹೆಚ್ಚೆಚ್ಚು ಹಿಂದೂಗಳನ್ನು ಎಳೆದು ತರಲು ವಿಎಚ್‌ಪಿಯ ಭಾಗವಾಗಿ ಈ ಭಜರಂಗ ದಳ ಹುಟ್ಟಿಕೊಂಡಿತ್ತು. ಸದ್ಯಕ್ಕೆ ಅಯೋಧ್ಯೆಯ ಆಂದೋಲನ ಮುಗಿದಿದೆ. ಇದೀಗ ಭದ್ರತಾ ದಂಧೆ ನಡೆಸುತ್ತಾ ಭಜರಂಗದಳ ಮಂಗಳೂರಿನಲ್ಲಿ ಬದುಕುಳಿದಿದೆ. ತನ್ನ ವಿಶಿಷ್ಟ ಆರ್ಥಿಕ ಮಾದರಿಯಿಂದಾಗಿ ಚರ್ಚ್ ದಾಳಿ, ನೈತಿಕ ಪೊಲೀಸ್ ಗಿರಿಗಳಂಥ ಘಟನೆಗಳ ನಂತರವೂ ಇಲ್ಲಿ ಭಜರಂಗದಳ ಸ್ವತಂತ್ರವಾಗಿ ಉಸಿರಾಡುತ್ತಿದೆ. ಹ್ಯಾಟ್ಸ್ ಆಫ್ ಟು ಕರ್ನಾಟಕ ಪೊಲೀಸ್!