samachara
www.samachara.com
'ಬಜೆಟ್ ದಿಕ್ಸೂಚಿ': ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ
ಸುದ್ದಿ ಸಾಗರ

'ಬಜೆಟ್ ದಿಕ್ಸೂಚಿ': ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ

2017-18ರ ಆಯವ್ಯಯ ಕೇಂದ್ರ ಹಣಕಾಸು ಸಚಿವರ ಪಾಲಿಗೆ ದುಃಸ್ವಪ್ನವಾಗಲಿದೆ...

ಹೀಗಂತ ಹೇಳಿದವರು ಜೆಎನ್ಯು ನಿವೃತ್ತ ಪ್ರಾಧ್ಯಾಪಕ, ಆರ್ಥಿಕ ತಜ್ಞ ಪ್ರೊ. ಅರುಣ್ ಕುಮಾರ್. ಬಜೆಟ್ ಪೂರ್ವಭಾವಿಯಾಗಿ ಇತ್ತೀಚಿಗೆ ‘ದಿ ವೈರ್’ ಜತೆಗೆ ಮಾತನಾಡಿದ ಅವರು ಫೆ. 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಆಯವ್ಯಯ, ದೇಶದ ಆರ್ಥಿಕತೆ, ಅನಾಣ್ಯೀಕರಣ, ಸಂಘಟಿತ ವಲಯದ ಉತ್ಪಾದನೆ ಕುಸಿತ, ಜಿಡಿಪಿ, ವಿತ್ತೀಯ ಕೊರತೆ, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳ ಕನ್ನಡಾನುವಾದವನ್ನು 'ಸಮಾಚಾರ' ಇಲ್ಲಿ ನೀಡುತ್ತಿದೆ. ಬಜೆಟ್ಗೆ ಎದುರು ನೋಡುತ್ತಿರುವ ಸಮಯದಲ್ಲಿ, ಪೂರ್ವಭಾವಿಯಾಗಿ ಒಂದಷ್ಟು ಅಗತ್ಯ ವಿಚಾರಗಳು, ಮುನ್ನೋಟಗಳು ಇಲ್ಲಿವೆ.

ಭಾರತದ ಸದ್ಯದ ಆರ್ಥಿಕತೆಯ ಹೇಗಿದೆ?

ಅರುಣ್ ಕುಮಾರ್:

ಸದ್ಯ ದೇಶದ ಆರ್ಥಿಕತೆ ಹಿಂಜರಿತ ಅನುಭವಿಸುತ್ತಿದೆ. ಬಂಡವಾಳ ಹರಿಯುವಿಕೆ ನಿಂತು ಹೋಗಿದೆ. ಅಕ್ಟೋಬರ್ ಬರುವಾಗಲೇ ಹೂಡಿಕೆ ಕಡಿತಗೊಳ್ಳುತ್ತಾ ಬಂದಿತ್ತು. ಅನಾಣ್ಯೀಕರಣದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಸದ್ಯ ಪೂರ್ತಿ ನಿಂತೇ ಹೋಗಿದೆ.

ಅದೇ ರೀತಿಯಲ್ಲಿ ಸಂಘಟಿತ ಉದ್ದಿಮೆ ಮತ್ತು ಅಸಂಘಟಿತ ಉದ್ದಿಮೆ ಎರಡರಲ್ಲೂ ನಿರುದ್ಯೋಗ ಹೆಚ್ಚಾಗಿದೆ. ಕಾರಣ ಈಗ ಬೇಡಿಕೆ ಕುಂದಿದೆ. ಬ್ಯಾಂಕುಗಳಿಗೆ ಭಾರಿ ಹಣ ಠೇವಣಿ ರೂಪದಲ್ಲಿ ಬಂದಿರುವುದರಿಂದ ಬ್ಯಾಂಕುಗಳೂ ಬಿಕ್ಕಟ್ಟು ಎದುರಿಸುತ್ತಿವೆ. ಈ ಠೇವಣಿಗಳಿಗೆ ಬಡ್ಡಿ ನೀಡಬೇಕಾದ ಅನಿವಾರ್ಯತೆ ಬ್ಯಾಂಕುಗಳಿಗೆ ಸೃಷ್ಟಿಯಾಗಿದೆ. ಬ್ಯಾಂಕುಗಳೂ ಬಿಕ್ಕಟ್ಟಿನಲ್ಲಿದ್ದು, ನಿರೋದ್ಯೋಗವೂ ಹೆಚ್ಚಾಗಿರುವಾಗ, ಬಂಡವಾಳ ಹೂಡುವಿಕೆಯೂ ಕಡಿಮೆ ಆದರೆ ಇದನ್ನು ಆರ್ಥಿಕ ಹಿಂಜರಿತ ಎನ್ನುತ್ತಾರೆ.

ಈಗಾಗಲೇ ಆರ್ಥಿಕ ಹಿಂಜರಿತದ ಪರಿಸ್ಥಿತಿ ಉಂಟಾಗಿ ಒಂದೂವರೆ ತಿಂಗಳು ಕಳೆದಿದೆ. ನೀವದನ್ನು ಮತ್ತೆ ಹಿಂದಿನ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಕಾರಣ ಬೇಡಿಕೆ ಒಮ್ಮಿಂದೊಮ್ಮೆಗೆ ಹೆಚ್ಚಾಗಲು ಸಾಧ್ಯವಿಲ್ಲ. ಪ್ರತಿಫಲ ಕೂಡಾ ಹಾಗೆಯೇ...

ನನ್ನ ಅನುಮಾನಗಳ ಪ್ರಕಾರ ಬಜೆಟ್ ರೂಪಿಸಲು ಸರಕಾರದ ಬಳಿ ಸರಿಯಾದ ಅಂಕಿ ಅಂಶಗಳೇ ಇಲ್ಲ. ಕಾರಣ ಬಜೆಟ್ ಎಂದರೆ ಇಲ್ಲಿವರೆಗೆ ಏನಾಗಿದೆ ಮತ್ತು ಮುಂದೆ ಏನಾಗಲಿದೆ ಎಂಬುದನ್ನು ಕಂಡುಕೊಳ್ಳುವುದು. ಕಳೆದ ಅಕ್ಟೋಬರ್ ವರೆಗೆ ಏನು ನಡೆದಿದೆ ಎನ್ನುವುದು, ಮುಂದೆ ಏನು ನಡೆಯಲಿದೆ ಎಂಬುದರ ಸೂಚನೆಯಂತೂ ಅಲ್ಲ. ಹಾಗಾಗಿ ಅದನ್ನು ಪರಿಗಣಿಸುವಂತಿಲ್ಲ.

ಹೀಗಾಗ ನೀವು ಅನಾಣ್ಯೀಕರಣಕ್ಕೂ ಮುಂಚಿನ 7 ತಿಂಗಳ ಅಂಕಿ ಅಂಶಗಳನ್ನೇ ಇಟ್ಟುಕೊಳ್ಳುತ್ತಿರೋ, ಇಲ್ಲ 9 ತಿಂಗಳ ಅಂಕಿ ಅಂಶಗಳನ್ನು ಇಟ್ಟುಕೊಂಡು ಬಜೆಟ್ ತರುತ್ತೀರೋ? ಇದರಿಂದ ಹೇಳುತ್ತಿದ್ದೇನೆ ಈ ಬಾರಿ ಬಜೆಟ್ ರಚನೆ ಸುಲಭವಲ್ಲ. ಇದಲ್ಲದೆ ಸಂಖ್ಯಾಶಾಸ್ತ್ರಜ್ಞರು ತಮ್ಮ  ಬಳಿ ಅನಾಣ್ಯೀಕರಣ ಪರಿಣಾಮಗಳ ಬಗ್ಗೆ ದಾಖಲೆಗಳಿಲ್ಲ ಎನ್ನುತ್ತಿದ್ದಾರೆ. ರಿಸರ್ವ್ ಬ್ಯಾಕ್ ಕೂಡಾ ಅದನ್ನೇ ಹೇಳುತ್ತಿದೆ. ಹೀಗಿರುವಾಗ ಯಾವುದನ್ನು ಆಧಾರವಾಗಿಟ್ಟುಕೊಂಡು ಬಜೆಟ್ ತಯಾರಿಸುತ್ತೀರಿ?

ಈಗ ಪ್ರಶ್ನೆ ಇರುವುದು ನೀವು ಜಿಡಿಪಿ ಕುಸಿದತದ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ? ಆರ್ಥಿಕತೆಗೆ ಉತ್ತೇಜನ ನೀಡಲು ಹೊರಟಿದ್ದೇ ಆದರೆ ಈಗಲೂ ಸಮಸ್ಯೆ ಎದುರಾಗುತ್ತದೆ. ಬೆಳವಣಿಗೆ ಋಣಾತ್ಮಕವಾಗಿದೆ. ಇದರಿಂದ ಅಂದುಕೊಂಡಷ್ಟು ತೆರಿಗೆ ಸಂಗ್ರಹ ಆಗಿಲ್ಲ. ಇದರಿಂದ ವಿತ್ತೀಯ ಕೊರತೆ ಉಂಟಾಗುತ್ತದೆ. ಸಾಲ ಕೊಡುವ ಸಂಸ್ಥೆಗಳು ನಿಮ್ಮನ್ನು ಕೆಳಕ್ಕೆ ತಳ್ಳುತ್ತವೆ. ವಿತ್ತೀಯ ಕೊರತೆ ಹೆಚ್ಚಾಗಬಾರದು ಎಂದಾದರೆ ನೀವು ಸಾಮಾಜಿಕ ವಲಯಕ್ಕೆ ಖರ್ಚು ಹೆಚ್ಚು ಮಾಡಬಾರದು. ಆದರೆ ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ನೀವು ಖರ್ಚು ಮಾಡಲೇಬೇಕು.

ಹಾಗಾಗಿ ಬಜೆಟ್ ಅಡಕತ್ತರಿಯಲ್ಲಿದೆ. ನೀವು ಖರ್ಚು ಹೆಚ್ಚು ಮಾಡುತ್ತೀರೋ ಖರ್ಚು ಕಡಿಮೆ ಮಾಡುತ್ತೀರೋ? ಏನೇ ಮಾಡಲು ಹೊರಟರೂ ಹಣಕಾಸು ಸಚಿವರಿಗೆ ದೊಡ್ಡ ತಲೆನೋವಾಗಲಿದೆ.

ನೀವೇ ಬಜೆಟ್ ಮಾಡುವುದಿದ್ದರೆ 2017-18ನೇ ಆರ್ಥಿಕ ವರ್ಷಕ್ಕೆ ನೀವು ಎಷ್ಟು ಜಿಡಿಪಿ ಅಂದಾಜು ಮಾಡುತ್ತೀರಿ?

ಈ ಹಿಂದೆ ಜಿಡಿಪಿ ಶೇಕಡಾ 12 ಇರಬಹುದು ಎಂದು ಅಂದುಕೊಳ್ಳಲಾಗಿತ್ತು. ಆದರೆ ಕಳೆದ ಎರಡು ತಿಂಗಳ ಅಂತದಲ್ಲಿ ಜಿಡಿಪಿ ಶೇಕಡಾ 0 ಆಗಿದೆ. ಹೀಗಾಗಿ ನಿಮ್ಮ ಆದಾಯ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ಹೀಗಾಗಿ ಅನಿವಾರ್ಯವಾಗಿ ಖರ್ಚು ಕಡಿಮೆ ಮಾಡಬೇಕಾಗುತ್ತದೆ. ಹೀಗಾದಾಗ ಮಾತ್ರ ವಿತ್ತೀಯ ಕೊರತೆಯನ್ನು ತಡೆಯಬಹುದು. ಈಗಾಗಲೇ ರೇಟಿಂಗ್ ಏಜೆನ್ಸಿಗಳು ಇದನ್ನೆಲ್ಲಾ ಗಮನಿಸುತ್ತಿವೆ.

ಇನ್ನೊಂದರ್ಥದಲ್ಲಿ ಹೇಳುವುದಾದರೆ ಈ ಹಂತದಲ್ಲಿ ಬಜೆಟ್ ತಯಾರಿಸುವುದು ದೊಡ್ಡ ಬಿಕ್ಕಟ್ಟೇ ಸರಿ. ಹಣಕಾಸು ಸಚಿವರ ಪಾಲಿಗೆ ಇದು ದುಃಸ್ವಪ್ನ.

ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ ಜಿಡಿಪಿ ಬೆಳವಣಿಗೆ ಸಾಮಾನ್ಯ ಸ್ಥಿತಿಗೆ ಮರಳಿದೆ, ಬಜೆಟಿನಲ್ಲಿ ಅಂದುಕೊಂಡಂತೆ ಆದಾಯ ಬರುತ್ತಿದೆ ಅಂತ?

ಹೌದು ಆದಾಯ ಹೆಚ್ಚಾಗಿದೆ. ಅಕ್ಟೋಬರ್ ವರೆಗೆ ಮತ್ತು ಆ ನಂತರದ ದಿನಗಳನ್ನು ನೋಡಿದರೆ ನೇರ ತೆರಿಗೆ ಹೆಚ್ಚಾಗಿದೆ. ಪರೋಕ್ಷ ತೆರಿಗೆ ದೊಡ್ಡ ಮಟ್ಟಕ್ಕೆ ಹೆಚ್ಚಾಗುತ್ತಿದೆ.

ಅಂದರೆ ನೀವು ಹೇಳುವುದು ಆದಾಯ ಬೆಳವಣಿಗೆಯನ್ನು ಸೂಚಿಸುವುದಿಲ್ಲ ಅಂತ?

ಹೌದು. ಇದಕ್ಕೆ ಕಾರಣಗಳೂ ಇವೆ.  ಯಾಕೆ ಪೆಟ್ರೋಲಿಯಂ ಉತ್ಪನ್ನಗಳ ಆದಾಯ ದೊಡ್ಡ ಮಟ್ಟಕ್ಕೆ ಹೆಚ್ಚಳವಾಯಿತು. ಕಾರಣ ಹಳೆ ನೋಟುಗಳನ್ನು ಬಳಸಿಕೊಳ್ಳಬಹುದಾಗಿತ್ತು. ಕಾಲು ಟ್ಯಾಂಕ್ ಫುಲ್ ಮಾಡುವವರು ಫುಲ್ ಟ್ಯಾಂಕ್ ಮಾಡಿಕೊಂಡಿದ್ದಾರೆ. ಅದೇ ರೀತಿ ಜನರು ಮೂರು ನಾಲ್ಕು ತಿಂಗಳಿಗೆ ಬೇಕಾದ ಔಷಧವನ್ನೂ ಖರೀದಿಸಿಟ್ಟುಕೊಂಡಿದ್ದಾರೆ. ನವೆಂಬರಿನಿಂದ ಮಾರ್ಚ್ ವರೆಗಿನ ಅಂಕಿ ಅಂಶಗಳನ್ನು ತಗೆದುಕೊಂಡರೆ ಇದು ಸ್ಪಷ್ಟವಾಗುತ್ತದೆ.

ನೀವು ತುಂಬಾ ಆಸಕ್ತಿಕರ ಅಂಶಗಳನ್ನು ಹೇಳಿದ್ದೀರಿ. ನನಗೆ ಮುಂಬೈನ ಕೆಲವು ಸಂಶೋಧಕರೂ ಇದನ್ನೇ ಹೇಳುತ್ತಿದ್ದರು. ಈಗ ಜನ ಮಾರ್ಚ್ ಏಪ್ರಿಲ್ ವರೆಗೆ ಖರೀದಿಸುವುದಿಲ್ಲ ಎಂದು. ಹಾಗಾಗಿ ಈ ಅವಧಿಯ ದಾಖಲೆಗಳು ಮುಖ್ಯವಾಗುತ್ತವೆ.

ಖಂಡಿತವಾಗಿಯೂ. ಅಲ್ಲದೆ ಮುಖ್ಯ ಸಂಖ್ಯಾಶಾಸ್ತ್ರಜ್ಞರು ಮತ್ತು ಆರ್ಬಿಐಗೆ ಜಿಡಿಪಿ ಲೆಕ್ಕ ಹಾಕಲು ಅನಾಣ್ಯೀಕರಣದ ಪರಿಣಾಮಗಳನ್ನು ಲೆಕ್ಕವನ್ನು ಪರಿಗಣಿಸಿಲ್ಲ. ಹೀಗಿರುವಾಗ ಬಜೆಟ್ ಯಾವ ಆಧಾರದ ಮೇಲೆ ರೂಪಿಸುತ್ತಾರೆ? ಬಜೆಟಿನಲ್ಲಿ ಆದಾಯಕ್ಕಾಗಿ ಯೋಜನೆ ರೂಪಿಸಬೇಕು, ಖರ್ಚಿಗಾಗಿ ಯೋಜನೆ ರೂಪಿಸಬೇಕು, ತೆರಿಗೆ ನಿರ್ಧರಿಸುವುದು ತುಂಬಾ ಮುಖ್ಯ. ಹೀಗಿರುವಾಗ  ಮಾಹಿತಿಯೇ ಇಲ್ಲದೆ ಬಜೆಟ್ ಯಾವ ಆಧಾರದಲ್ಲಿ ತಯಾರಿಸುತ್ತಾರೆ?

ಎರಡನೇ ಪ್ರಶ್ನೆ, ಹೊಸ ಯೋಜನೆಗಳೇನು? ಈಗಾಗಲೇ ಪ್ರಧಾನಮಂತ್ರಿಗಳು ತಮ್ಮ ಡಿಸೆಂಬರ್ 31ರ ಭಾಷಣದಲ್ಲಿ ಒಂದಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಈಗ ನೀವು ಅದಕ್ಕೂ ಹಣ ನೀಡಬೇಕು. ಹೀಗಾಗಿ ಇಲ್ಲಿ ಹೆಚ್ಚುವರಿ ಖರ್ಚಾಗಲಿದೆ.

ವಿಶ್ವದರ್ಜೆಯಲ್ಲಿ ಜನರಿಗೆ ಮೂಲ ವೇತನ ನೀಡಬೇಕು ಎಂಬ ಮಾತೊಂದಿದೆ.. ಇದರಿಂದ ದೇಶದ ಶೇಕಡಾ 90-95 ಜನಕ್ಕೆ ಪ್ರಯೋಜನ ಪಡೆಯಲಿದ್ದಾರೆ..

ನಾನು ಹೇಳುವುದೇನೆಂದರೆ ಅನಾಣ್ಯೀಕರಣ ದೇಶದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಅನಿಶ್ಚಿತತೆ ಹೆಚ್ಚಾಗಿದೆ. ಹೀಗಿರುವಾಗ ನೀವು ಯಾವುದೇ ಸಿದ್ಧತೆಗಳಿಲ್ಲದೆ ಇಂಥಹದ್ದೊಂದು ಬಹುದೊಡ್ಡ ಯೋಜನೆ ಘೋಷಿಸಿದರೆ, ಸದ್ಯದ ಪರಿಸ್ಥಿತಿಯಲ್ಲಿ ಜಾರಿಗೊಳಿಸುವುದು ತುಂಬಾ ಕಷ್ಟವಾಗುತ್ತದೆ.

ಆದರೆ ಇದೊಂದು ಒಳ್ಳೆ ಐಡಿಯಾ ಇದೆ. ನಾವು ಬಡವರಿಗೆ ಕೊಡಬೇಕು. ಬಡವರ ವಿಚಾರದಲ್ಲಿ ನಾವು ಋಣಾತ್ಮಕ ತೆರಿಗೆ ನೀತಿ ಹೊಂದಿರಬೇಕು. ಇದಕ್ಕಾಗಿ  ನಾವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಾಗುತ್ತದೆ. ಯಾರು ಬಡವರು? ಹಣ ಎಲ್ಲಿ ಹೋಗುತ್ತದೆ? ಹೇಗೆ ಹಣ ಪಾವತಿಸುತ್ತೇವೆ? ಎಂಬುದನ್ನೆಲ್ಲಾ ನಿರ್ಧರಿಸಬೇಕಾಗುತ್ತದೆ.

ಕೆಲವು ಆರ್ಥಿಕ ತಜ್ಞರು ಈಗಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಕೈ ಬಿಟ್ಟು ಜಾಗತಿಕ ಆಧಾರದಲ್ಲಿ ಮೂಲ ವೇತನ ನೀಡುತ್ತಾರೆ ಎನ್ನುತ್ತಿದ್ದಾರೆ. ಇದೂ ಅಡಚಣೆ ಉಂಟು ಮಾಡುತ್ತದೆ…ಅಲ್ವಾ?

ನೋಡಿ ಏನಾಗುತ್ತದೆ ಎಂದರೆ, ಜನ ಈಗಿರುವ ಬೇರೆ ಬೇರೆ ಯೋಜನೆಗಳ ಹೆಸರಿನಲ್ಲಿ ಅವರು ಏನು ಪಡೆಯುತ್ತಿದ್ದಾರೋ ಅದಕ್ಕೆ ಅಡ್ಜಸ್ಟ್ ಆಗಿರುತ್ತಾರೆ. ಈಗ ಅದು ನಿಂತು ಹೋಗುತ್ತದೆ. ಹೊಸ ಯೋಜನೆಗಳು ಯಾವಾಗ ಆರಂಭವಾಗುತ್ತವೆ? ಎಷ್ಟು ಬೇಗ ಅವುಗಳನ್ನು ಆರಂಭಿಸಲು ಸಾಧ್ಯ? ಫಲಾನುಭವಿಗಳನ್ನು ಹೇಗೆ ಗುರುತಿಸುತ್ತೀರಿ? ಇದಕ್ಕೆಲ್ಲಾ ಸಮಯ ಬೇಕು. ಹೀಗಾಗಿ ಇದರ ಮಧ್ಯೆ ಅಡಚಣೆಯಾಗುತ್ತದೆ. ಯೋಜನೆ ವಿನ್ಯಾಸ ಬಹಳ ಮುಖ್ಯವಾದುದು. ಅಧಿಕಾರಿಗಳ ವಲಯದಲ್ಲಿ ಸೋರಿಕೆಯಿಂದಾಗಿ ಭಾರತದಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವುದು ತುಂಬಾನೇ ಕಷ್ಟ.

ಅನಾಣ್ಯೀಕರಣದಿಂದ ಜಿಡಿಪಿ ಇಳಿಕೆಯಾಗಿದೆಯಾ? ಮತ್ತು ಹೇಗೆ?

ಅನಾಣ್ಯೀಕರಣದಿಂದ ಜಿಡಿಪಿ ಕುಸಿತವಾಗಿದೆ. ಹೇಗೆಂದರೆ ಜಿಡಿಪಿಗೆ ಹಣ ಚಲಾವಣೆಯಲ್ಲಿರಬೇಕು. ಅದರಲ್ಲೂ ಮುಖ್ಯವಾಗಿ ಅಸಂಘಟಿತವಲಯದಲ್ಲಿ. ಜಿಡಿಪಿಯಲ್ಲಿ ಅಸಂಘಟಿತ ವಲಯದ ಪಾಲು ಶೇಕಡಾ 40. ವರದಿಗಳ ಪ್ರಕಾರ ಈ ವಲಯದ ಶೇಕಡಾ 80 ರಷ್ಟು ಘಟಕಗಳಲ್ಲಿ ಸಮಸ್ಯೆಯಾಗಿದೆ ಮತ್ತು ಶೇಕಡಾ 40 ಉತ್ಪಾದನೆ ಕುಸಿತವಾಗಿದೆ. ಈಗ ಶೇಕಡಾ 40 ಜಿಡಿಪಿಯಲ್ಲಿ ಶೇಕಡಾ 50 ಕುಸಿತವಾದರೆ, ಒಟ್ಟಾರೆ ಜಿಡಿಪಿ ಶೇಕಡಾ 20 ಕುಸಿತವಾದಂತಾಯಿತು.

ಇದು ಸಂಘಟಿತ ವಲಯದಲ್ಲಿ ಏನು ಆಗಿಯೇ ಇಲ್ಲ ಎಂದು ಅಂದುಕೊಂಡು ಮಾತ್ರ ಹೇಳುತ್ತಿರುವುದು. ಆದರೆ ಅಲ್ಲೂ ಅನುಮಾನವಿದೆ. ಇದರಿಂದ ಏನಾಗುತ್ತದೆ? ಆರ್ಥಿಕತೆ ಋಣಾತ್ಮಕ ದಿಕ್ಕಿನತ್ತ ಹೊರಳುತ್ತದೆ ಅಷ್ಟೆ. ಅಸಂಘಟಿತ ವಲಯದಲ್ಲಿ ಬೇಡಿಕೆ ಕಡಿಮೆಯಾಗಿ, ಸಂಘಟಿತ ವಲಯದಲ್ಲೂ  ಉತ್ಪಾದನೆ ಕಡಿಮೆ ಆದರೆ ಜಿಡಿಪಿ ಕುಸಿತ ಇನ್ನೂ ಹೆಚ್ಚಾಗುತ್ತದೆ. ಇದು ಉತ್ತರ..

ನಾವು ತೆರಿಗೆ ಸುಧಾರಣೆಗಳನ್ನು ಬಜೆಟ್ಟಿನಿಂದ ನಿರೀಕ್ಷಿಸಬಹುದಾ? ಯಾವ ರೀತಿಯ ತೆರಿಗೆ ಸುಧಾರಣೆಗಳನ್ನು?

ಈ ಬಜೆಟ್ ಬಲು ಜನಪ್ರಿಯ ಬಜೆಟ್ ಆಗಿರಲಿದೆ. ಯಾಕೆಂದರೆ ಅನಾಣ್ಯೀಕರಣದಿಂದ ತುಂಬಾ ಸಮಸ್ಯೆಯಾಗಿದೆ. ಬಡವರಿಗೆ ಇದರಿಂದ ತುಂಬಾ ಕಷ್ಟವಾಗಿದೆ. ಚುನಾವಣೆಗಳು ತುಂಬಾ ಮುಖ್ಯ, ಉತ್ತರ ಪ್ರದೇಶ, ಪಂಜಾಬ್ ಚುನಾವಣೆಗಳು ಬರುತ್ತಿವೆ. ಹಾಗಾಗಿ ಅವರಿಗೆ ಇದನ್ನು ಜನಪ್ರಿಯ ಬಜೆಟ್ ಆಗಿಸಲೇಬೇಕು. ಹಾಗಾಗಿ ಕೆಲವು ತೆರಿಗೆ ರಿಯಾಯತಿಗಳನ್ನು ಘೋಷಿಸಿಯೇ ಘೋಷಿಸುತ್ತಾರೆ.

ಆದರೆ ಸಮಸ್ಯೆ ಇರುವುದು, ನೀವು ಆರ್ಥಿಕ ಹಿಂಜರಿತದ ಪರಿಸ್ಥಿತಿಯಲ್ಲಿದ್ದೀರಿ. ತೆರಿಗೆ ಆದಾಯ ಕಡಿಮೆಯಾಗಲಿದೆ. ನೀವೀಗ ಇನ್ನೂ ತೆರಿಗೆ ಕಡಿಮೆ ಮಾಡಿದರೆ ನಿಮ್ಮ ಖರ್ಚುಗಳ ಗುರಿ ಮುಟ್ಟುವುದು ಹೇಗೆ? ಹಲವು ವಲಯಗಳಿಗೆ ಬೆಣ್ಣೆ ಹಚ್ಚಲೇಬೇಕು, ಡಿಸೆಂಬರ್ 31ರಂದು ಪ್ರಧಾನಿ ಮಾಡಿದ ಹಾಗೆ. ಹಾಗಾಗಿ ಬಜೆಟ್ಟಿನಲ್ಲಿ ವಿತ್ತೀಯ ಕೊರತೆ ಹೆಚ್ಚಾಗುತ್ತದೆ.

ಇದರಿಂದ ಏನಾಗುತ್ತದೆ ಎಂದರೆ ವರ್ಷದ ಅಂತ್ಯಕ್ಕೆ ಇದರಲ್ಲಿ ಹಲವು ಗುರಿಗಳನ್ನು ನಿಮಗೆ ಮುಟ್ಟಲಾಗುವುದೇ ಇಲ್ಲ. ಯುಪಿಎ ಎರಡನೇ ಅವಧಿಯಲ್ಲಿ ಇದನ್ನೇ ಮಾಡಿದ್ದು. ಅವರು ತಮ್ಮ 5 ವರ್ಷಗಳ ಅವಧಿಯಲ್ಲಿ 6.5ಲಕ್ಷ ಕೋಟಿ ಖರ್ಚು ಕಡಿತಗೊಳಿಸಿದರು. ಪ್ರತಿ ವರ್ಷ 1 ಲಕ್ಷ ಕೋಟಿ ಕಡಿತ ಮಾಡುತ್ತಿದ್ದರು. ನೀವು ದೊಡ್ಡ ಆದಾಯ ತೋರಿಸುತ್ತೀರಿ, ಅದಕ್ಕೆ ಸರಿಯಾಗಿ ಖರ್ಚುಗಳ ಲೆಕ್ಕ ತೋರಿಸುತ್ತೀರಿ. ಆದರೆ ಆ ಆದಾಯಗಳು ಬರುವುದಿಲ್ಲ.  ಕೊನೆಗೆ ನೀವು ನಿಮ್ಮ ಖರ್ಚು ಕಡಿಮೆ ಮಾಡಬೇಕಾಗುತ್ತದೆ.

ಇಂಥಹುದೇ ಏನಾದರೂ ನಡೆಯುತ್ತದೆ. ಸರಕಾರ ಹೇಳಿದ ಯೋಜನೆಗಳನ್ನು ಜಾರಿಗೊಳಿಸಲು ಆಗುವುದೇ ಇಲ್ಲ. ಅನ್ನಿಸುತ್ತಾ?

ಸಂಘಟಿತ ವಲಯ ಭಾರೀ ಬಂಡವಾಳ ಬೇಡುತ್ತದೆ. ಆದರೆ ಉದ್ಯೋಗ ನೀಡುವುದಿಲ್ಲ. ಕಳೆದು 20 ವರ್ಷಗಳಲ್ಲಿ ಖಾಸಗಿ ಸಂಘಟಿತ ವಲಯದಲ್ಲಿ ಉದ್ಯೋಗದ ಸಂಖ್ಯೆ 75 ಲಕ್ಷದಿಂದ 95 ಲಕ್ಷಕ್ಕೆ ಏರಿಕೆಯಾಗದೆ. ಅದೂ ನೀರಿನಂತೆ ಬಂಡವಾಳ ಹರಿದು ಬಂದಾಗಲೂ. ಆದರೆ ಇದು ಏನೇನು ಅಲ್ಲ. ಯಾಕೆಂದರೆ ಈ ಅವಧಿಯಲ್ಲಿ ಮಾನವ ಸಂಪನ್ಮೂಲ 25 ಕೋಟಿಯಿಂದ 45 ಕೋಟಿಗೆ ಏರಿಕೆಯಾಗಿದೆ. 20 ಕೋಟಿ ಮಾನವ ಸಂಪನ್ಮೂಲ ಹೆಚ್ಚಾಗಿರುವಾಗ 20 ಲಕ್ಷ ಉದ್ಯೋಗ ಹೆಚ್ಚಾಗಿರುವುದು ಏನೇನೂ ಅಲ್ಲ.  ಸಂಘಟಿತ ವಲಯ ಏನೇನೂ ಉದ್ಯೋಗ ಸೃಷ್ಟಿಸುತ್ತಿಲ್ಲ. ಅದಕ್ಕಾಗಿ ಜನ ಅಸಂಘಟಿತ ವಲಯದತ್ತ ಹೋಗುತ್ತಾರೆ. ಕಳೆದ 25 ವರ್ಷಗಳಲ್ಲಿ ಸಂಘಟಿತ ವಲಯದಲ್ಲಿ 20 ಲಕ್ಷ ಜನ ಹಾಗೂ ಅಸಂಘಟಿತ ವಲಯದಲ್ಲಿ ಉಳಿದ 19.8 ಕೋಟಿ ಜನ ಉದ್ಯೋಗ ಕಂಡುಕೊಂಡಿದ್ದಾರೆ.

ಕೊನೆಯದಾಗಿ ಒಂದು ಪ್ರಶ್ನೆ ಇದಕ್ಕೆ ನಿಮ್ಮ ರಾಜಕೀಯ ಓದನ್ನು ಬಳಸಬೇಕು. ಅನಾಣ್ಯೀಕರಣದ ಮಧ್ಯೆಯೂ ಗುಜರಾತ್ ಪಂಜಾಯತ್ ಚುನಾವಣೆ ಮತ್ತು ಉಳಿದ ಕಡೆಗಳಲ್ಲಿ ಬಿಜೆಪಿ ಗೆಲ್ಲಲು ಹೇಗೆ ಸಾಧ್ಯ? ನೀವು ಭಾರತೀಯ ಮತದಾರರ ನಾಡಿ ಮಿಡತವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ.

ಪ್ರಮುಖ ಅಂಶ ಎಂದರೆ ನರೇಂದ್ರ ಮೋದಿ ಮೇಲೆ ಜನ ಇಟ್ಟಿರುವ ನಂಬಿಕೆ ದೊಡ್ಡದು. ಜನ ನಿಜವಾಗಿಯೂ ಮೋದಿ ಕಪ್ಪ ಹಣ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಂಬಿದ್ದಾರೆ. ಸಮಯ ಸರಿದಾಗ ಮಾತ್ರ ಅವರಿಗೆ ನಾವು ಅಂದುಕೊಂಡಿದ್ದು ನಿಜಕ್ಕೂ ನಡೆಯಲ್ಲ ಎಂದು ಅರ್ಥವಾಗುತ್ತದೆ. ರೈತರು ಇರಲಿ ಯಾರೇ ಇರಲಿ ಆಕ್ರೋಶ ನಿಧಾನಕ್ಕೆ ಹುಟ್ಟಿಕೊಳ್ಳುತ್ತಿದೆ.

ಅಂದರೆ ನೀವು ಹೇಳುತ್ತಿರುವುದು ನರೇಂದ್ರ ಮೋದಿಗೆ ರಾಜಕೀಯ ಬಂಡವಾಳ ಇದೆ ಆದರೆ ಅವರು..

ನಿಧಾನಕ್ಕೆ ರಾಜಕೀಯ ಬಂಡವಾಳವನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲದೆ ಕಪ್ಪು ಕುಳಗಳಿಂದ ಹಣ ತೆಗೆದು ಬಡವರಿಗೆ ಕೊಡುತ್ತೇನೆ ಎನ್ನುವ ರೀತಿಯಲ್ಲಿ  ಬಿಂಬಿಸಿ ತಾವೊಬ್ಬ ರಾಬಿನ್ ಹುಡ್ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಬಡವರ ವಲಯದಲ್ಲಿ ಅವರಿಗೆ ಆ ಇಮೇಜ್ ತಂದುಕೊಟ್ಟಿದೆ. ಆದರೆ ಮೋದಿ ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ.

ಮತ್ತೊಂದು ಏನೆಂದರೆ ಬಡವರು ಬೇಗ ಒಟ್ಟಾಗುವುದಿಲ್ಲ. ಅವರು ಒಟ್ಟಾಗಲು ಯಾವುದಾದರೂ ಸಾಮಾಜಿಕ ಶಕ್ತಿಗಳು ಬೇಕು, ಇಲ್ಲದಿದ್ದಲ್ಲಿ ರಾಜಕೀಯ ಶಕ್ತಿಗಳು ಬೇಕು. ಆಗ ಮಾತ್ರ ಒಟ್ಟಾಗುತ್ತಾರೆ. ಆದರೆ ನಮ್ಮ ರಾಜಕೀಯ ವರ್ಗವೂ ಈ ವಿಚಾರದಲ್ಲಿ ಸ್ವಲ್ಪ ಹಿಂಜರಿಕೆ ತೋರಿಸುತ್ತಿದೆ. ಎಲ್ಲಿ ಇದನ್ನು ವಿರೋಧಿಸಿದರೆ ನಾವು ಕಪ್ಪು ಹಣ ಹೊಂದಿದವರು ಎಂದು ಬಿಂಬಿಸಲ್ಪಡುತ್ತೇವೆಯೋ ಏನೋ ಎಂದು ಅವುಗಳು ಚಿಂತಿತವಾಗಿವೆ. ಹಾಗಾಗಿ ಅವರಿಗೆ ಹಾಗೆ ಬ್ರಾಂಡ್ ಆಗುವುದು ಬೇಕಿಲ್ಲ. ಇದೆಲ್ಲಾ ಜನಕ್ಕೆ ನಿಧಾನಕ್ಕೆ ಅರ್ಥವಾಗುತ್ತದೆ. ಭಾರತದಲ್ಲಿ ಬಡವರು ಸ್ವಯಂಚಾಲಿತರಾಗಿ ಒಟ್ಟಾಗುವುದಿಲ್ಲ ಅಷ್ಟೆ.

ಮೂಲ ಸಂದರ್ಶನವನ್ನು ಓದಲು

ಕ್ಲಿಕ್ ಮಾಡಿ.

ಮಾಹಿತಿ ಕೃಪೆ:

ದಿ ವೈರ್.