'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?
ಸುದ್ದಿ ಸಾಗರ

'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

ದೆಹಲಿಯ ಜನಪಥ್ ನಲ್ಲಿ ಮಾಜಿ ಸೈನಿಕರೊಬ್ಬರು ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಡೆದಿತ್ತು. ಈ ಘಟನೆಯೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೇ ವಿಚಾರವಾಗಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದ ಮೋದಿ ವಿರುದ್ಧ ವಿರೋಧ ಪಕ್ಷಗಳು ಹರಿಹಾಯುತ್ತಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ.

ದೆಹಲಿಯ ಜಂತರ್ ಮಂತರ್ನಲ್ಲಿ ದೀರ್ಘ ಕಾಲದಿಂದ ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ಮಾಜಿ ಸೈನಿಕರು ಧರಣಿ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಈ ಧರಣಿಯನ್ನು ‘ಜನಪಥ್’ಗೆ ವರ್ಗಾಯಿಸಲಾಗಿತ್ತು. ಮಂಗಳವಾರ ಇಲ್ಲಿ ಧರಣಿ ನಡೆಯುತ್ತಿದ್ದ ವೇಳೆ ನಿವೃತ್ತ ಸೈನಿಕ 70 ವರ್ಷ ವಯಸ್ಸಿನ ರಾಮ್ ಕಿಷನ್ ಗ್ರೆವಾಲ್ ವಿಷ ಸೇವಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅವರು ಕೊನೆಯುಸಿರೆಳೆದಿದ್ದರು.

ಗ್ರೆವಾಲ್ ಆಪ್ತರು ಹೇಳುವ ಪ್ರಕಾರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭೇಟಿಯಾಗಲು ಗ್ರೆವಾಲ್’ಗೆ ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ ಬೇಸತ್ತು ‘ಸಲ್ಫಾಸ್ ಟಾಬ್ಲೆಟ್ಸ್’ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ‘ಏಕ ಶ್ರೇಣಿ ಏಕ ಪಿಂಚಣಿ’ಯ ಪೂರ್ಣ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮನವಿ ನೀಡಲು ಪರಿಕ್ಕರ್ ಭೇಟಿಗಾಗಿ ಅವರು ಇಚ್ಛಿಸಿದ್ದರು ಎಂದು ತಿಳಿದು ಬಂದಿದೆ.

'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

ಗ್ರೆವಾಲ್ ಸಾವನ್ನಪ್ಪುತ್ತಿದ್ದಮತೆ ಮಾಜಿ ಸೈನಿಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಾದ ನಂತರ ಗ್ರೆವಾಲ್ ಕುಟುಂಬವನ್ನು ಭೇಟಿಯಾಗುವ ನೆಪದಲ್ಲಿ ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಪ್ರತಿಭಟನೆಗೆ ಧುಮುಕಿದ್ದಾರೆ. ಇದರಿಂದ ಕೇಂದ್ರ ಸರಕಾರ ಮೂವರನ್ನೂ ಬುಧವಾರ ಬಂಧಿಸಿ ಬಿಡುಗಡೆ ಮಾಡಬೇಕಾಗಿ ಬಂದಿತ್ತು. ರಾಮ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರ ಪ್ರಕಾರ, “ಮಂಗಳವಾರ ಮಧ್ಯಾಹ್ನ ನಂತರ ಮಾಜಿ ಸೈನಿಕ ರಾಮ್ ಕಿಶನ್ ಗ್ರೆವಾಲ್ ರನ್ನು ಆಸ್ಪತ್ರೆಗೆ ಕರೆದು ತರಲಾಗಿತ್ತು. ಆದರೆ ಅದಾದ ಕೆಲವೇ ಕ್ಷಣದಲ್ಲಿ ಅವರು ಸಾವಿಗೀಡಾಗಿದ್ದಾರೆ,” ಎಂದು ಹೇಳಿದ್ದಾರೆ.

ಬಂಧನ, ಬಿಡುಗಡೆ

'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

ಬುಧವಾರ ಮುಂಜಾನೆ ರಾಹುಲ್ ಗಾಂಧಿ ಆಸ್ಪತ್ರೆ ಬಳಿ ಬಂದಿದ್ದಾರೆ. ಆದರೆ ಅವರನ್ನು ಆಸ್ಪತ್ರೆ ಪ್ರವೇಶಿಸದಂತೆ ಪೊಲೀಸರು ತಡೆದಿದ್ದರು. ಮಾತ್ರವಲ್ಲ ಸಿಸೋಡಿಯಾ ಆಸ್ಪತ್ರೆ ಆವರಣಕ್ಕೇ ಪ್ರವೇಶಿಸಲು ಬಿಟ್ಟಿರಲಿಲ್ಲ. ನಂತರ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದ್ದರು. ಮತ್ತೊಂದು ಕಡೆ ಗ್ರೆವಾಲ್ ದೇಹದ ಮರಣೋತ್ತರ ಪರೀಕ್ಷೆಗಾಗಿ ಲೇಡಿ ಹಾರ್ಡಿಂಗೆ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅಲ್ಲಿಗೆ ಬಂದ ಅರವಿಂದ್ ಕೇಜ್ರಿವಾಲರನ್ನು ಬಂಧಿಸಲಾಗಿತ್ತು

ಲೇಡಿ ಹಾರ್ಡಿಂಗೆ ಆಸ್ಪತ್ರೆಯ ಹೊರಗೆ ಗಂಟೆಗಟ್ಟಲೆ ಕೇಜ್ರಿವಾಲರನ್ನು ಕಾರಿನಿಂದ ಇಳಿಯಲು ಬಿಡದ ಪೊಲೀಸರು ನಂತರ ಅವರನ್ನು ಆರ್.ಕೆ.ಪುರಂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಮಧ್ಯ ರಾತ್ರಿವರೆಗೂ ಅವರು ಠಾಣೆಯಲ್ಲೇ ಇರಿಸಿಕೊಂಡು ನಂತರ ಬಿಡುಗಡೆ ಮಾಡಲಾಗಿತ್ತು. ನಂತರ ಗ್ರೆವಾಲ್ ಕುಟುಂಬವನ್ನು ಭೇಟಿಯಾಗಲು ಹೊರಟ ರಾಹುಲ್ ಗಾಂಧಿಗೂ ಅವಕಾಶ ನಿರಾಕರಿಸಲಾಯಿತು. ಇದೇ ರೀತಿ ಗ್ರೆವಾಲ್ ಇಬ್ಬರು ಮಕ್ಕಳೂ ಸೇರಿ, ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲ ಮತ್ತು ಕಿರಣ್ ಚೌಧರಿಯನ್ನು ಬೇರ ಬೇರೆ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು.

ಏನಿದು ಒಆರ್'ಒಪಿ?

'ಏಕ ಶ್ರೇಣಿ ಏಕ ಪಿಂಚಣಿ' ಅಂದರೆ ಮೊದಲಿನಿಂದಲೂ ಪಿಂಚಣಿ ಪಡೆಯುತ್ತಿರುವ ಮಾಜಿ ಯೋಧರ ಪಿಂಚಣಿಯನ್ನು 2013ರಲ್ಲಿ ನಿವೃತ್ತಿ ಹೊಂದಿದ ಯೋಧರ ಪಿಂಚಣಿ ದರಕ್ಕೆ ಸರಿಹೊಂದಿಸುವುದು ಹಾಗೂ 2014ರ ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿ ಮಾಡುವುದು ಯೋಧರ ಬೇಡಕೆಯಾಗಿತ್ತು. ಇದಕ್ಕೆ ಸರಕಾರ ಒಪ್ಪಿ ಅಧಿಸೂಚನೆ ಹೊರಡಿಸಿದೆ. ಆದರೆ ಜಾರಿಗೊಳಿಸಿಲ್ಲ.

ಸಮಾನ ಹುದ್ದೆ ಮತ್ತು  ಸಮಾನ ಸೇವಾವಧಿಯ ಮಾಜಿ ಸೈನಿಕರ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಸರಾಸರಿ ಮೊತ್ತವನ್ನು ಹೊಸ ಪಿಂಚಣಿ ಎಂದು ನಿಗದಿಪಡಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು.

ಕೇಂದ್ರ ಸರಕಾರದ ವಿರುದ್ಧ ಆಕ್ರೋಷ

ಇದಾದ ನಂತರ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಭಾರಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, “ನಾನು ಕೇವಲ 2 ನಿಮಿಷ ಕುಟುಂಬವನ್ನು ಭೇಟಿಯಾಗಲು ಇಚ್ಚಿಸಿದ್ದೆ. ನಾನು ಬರುವಾಗ ಆಸ್ಪತ್ರೆ ಗೇಟುಗಳನ್ನು ಮುಚ್ಚಲಾಗಿತ್ತು. ಕುಟುಂಬಸ್ಥರು ನನ್ನನ್ನು ಭೇಟಿಯಾಗಲಿ ಬಂದಾಗ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಲಾಗಿದೆ,” ಎಂದು ದೂರಿದ್ದಾರೆ. ಮಾತ್ರವಲ್ಲ, “ಸೈನಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ತೊಂದರೆ ಪಡುವಂತಾಗಬಾರದು. ಸರಿಯಾದ ದಾರಿಯಲ್ಲಿ ಒಆರ್.ಒಪಿ ಜಾರಿಗೆ ತರಲೇಬೇಕು,” ಎಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅರವಿಂದ್ ಕೇಜ್ರಿವಾಲ್, ಸೇ”ನೆಯನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಳ್ಳಲಾಗಿದೆ, ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ಆದರೆ ಇದೇ ದಾರಿಯಲ್ಲಿ ಗ್ರವಾಲ್ ರನ್ನು ಹುತಾತ್ಮರಾಗಿಸಲು ಬಿಡುವುದಿಲ್ಲ,” ಎಂದು ಹೇಳಿದ್ದಾರೆ. ಇನ್ನು ಬಂಧಿಸಿದ್ದನ್ನು ‘ಪ್ರಜಾತಂತ್ರವ ವಿರೋಧಿ ಧೋರಣೆ,’ ಎಂದು ಮನೀಸ್ ಸಿಸೋಡಿಯಾ ವ್ಯಾಖ್ಯಾನಿಸಿದ್ದಾರೆ.

ಆದರೆ ಎಂದಿನಂತೆ ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಗಾಂಧಿ ಮತ್ತು ಕೇಜ್ರಿವಾಲ್ ಸೈನಿಕರ ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.

ಬಿಜೆಪಿ ತಿರುಗೇಟು

'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

“ಮಾಜಿ ಸೈನಿಕ ಸಾವನ್ನಪ್ಪಿದ್ದಕ್ಕೆ ನಮಗೆ ಸಂತಾಪವಿದೆ. ಆದರೆ ಅದಕ್ಕಿಂತಲೂ ಬೇಸರದ ವಿಚಾರವೆಂದರೆ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು,” ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಮಾತ್ರ ಗ್ರೇವಲ್ ಸಾವಿಗೆ ತಮ್ಮ ‘ಮನಪೂರ್ವಕ ಸಂತಾಪಗಳು,’ ಎಂದು ಹೇಳಿದ್ದಾರೆ. ಆದರೆ ಮಾಜಿ ಮೇಜರ್ ಜನರಲ್ ಮತ್ತು ಕೇಂದ್ರ ಸಚಿವ ವಿ.ಕೆ ಸಿಂಗ್ ‘ಗ್ರೆವಾಲ್ ಮನಸ್ಥಿತಿ’ಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಾತ್ರವಲ್ಲ “ಒಆರ್’ಒಪಿ ಯನ್ನು ರಾಜಕೀಯದಿಂದ ಮುಕ್ತವಾಗಿಡಬೇಕು,” ಎಂದೂ ಹೇಳಿದ್ದಾರೆ.

ನಾಯಕರ ಆಸ್ಪತ್ರೆ ಭೇಟಿಯನ್ನು ನಿರಾಕರಿಸಿದ್ದಕ್ಕೆ ಕೇಂದ್ರ ಸರಕಾರದ ಅಧೀನದಲ್ಲಿರುವ ದೆಹಲಿ ಪೊಲೀಸರು “ಆಸ್ಪತ್ರೆ ಸೇವೆಗೆ ಅಡ್ಡಿಯಾಗುತ್ತದೆ,” ಎಂಬ ಕಾರಣ ನೀಡಿದ್ದಾರೆ. ದೆಹಲಿ ಪೊಲೀಸ ಆಕ್ಟ್ ನ ಸೆಕ್ಷನ್ 65ರ ಅಡಿಯಲ್ಲಿ ರಾಜಕೀಯ ನಾಯಕರನ್ನೆಲ್ಲಾ ವಶಕ್ಕೆ ಪೆಡೆಯಲಾಗಿತ್ತು.

ನಡೆದಿದ್ದೇನು?

'OROP ಹೈಡ್ರಾಮ': ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

ಗ್ರೇವಾಲ್ ಗೆಳೆಯರು ಮತ್ತು ಕುಟುಂಬ ಸದಸ್ಯರ ಪ್ರಕಾರ ಜನಪಥ್ ನಲ್ಲಿ ಒಆರ್’ಒಪಿ ಜಾರಿಗಾಗಿ ನಡೆಯುತ್ತಿರುವ ಮಾಜಿ ಸೈನಿಕರ ದೀರ್ಘ ಕಾಲದ ಪ್ರತಿಭಟನೆಯಲ್ಲಿ ಗ್ರೆವಾಲ್ ಕೂಡಾ ಭಾಗಿಯಾಗಿದ್ದರು. ಹರ್ಯಾಣದ ಭಿವಾನಿಯ ಗ್ರೇವಲ್ ಸುಮಾರು 30 ವರ್ಷಗಳ ಕಾಲ ಸೇನೆ ಮತ್ತು ‘ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್ಸಿ) ನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೂಲಗಳ ಪ್ರಕಾರ ಅವರಿಗೆ ಪರಿಷ್ಕೃತ ಪಿಂಚಣಿ ಸಿಗುತ್ತಿರಲಿಲ್ಲ. ಇದಕ್ಕೆ ಬ್ಯಾಂಕಿನ ಲೆಕ್ಕದಲ್ಲಿ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಸಚಿವರನ್ನು ನೇರವಾಗಿ ಭೇಟಿಯಾದರೆ ಸಮಸ್ಯೆ ಪರಿಹಾರವಾಗಬಹುದು ಎಂದು ಅವರು ಅಂದುಕೊಂಡಿದ್ದರು. ಆದರೆ ಪರಿಕ್ಕರ್ ಭೇಟಿಯನ್ನು ನಿರಾಕರಿಸಲಾಗಿತ್ತು.

ಈ ಕುರಿತು ಮಾತನಾಡಿರುವ ಗ್ರೇವಲ್ ಪುತ್ರ “ನಮ್ಮ ತಂದೆ ಒಆರ್;ಒಪಿಗಾಗಿ ಹುತಾತ್ಮರಾಗಿದ್ದಾರೆ,” ಎಂದು ಹೇಳಿದ್ದಾರೆ. “ನಾವು ಜಂತರ್ ಮಂತರ್ ನಿಂದ ಬಂದು ಜನಪಥ್ನ ಜವಹರ್ ಭವನದ ಪಕ್ಕದಲ್ಲಿ ಧರಣಿ ಕುಳಿತಿದ್ದೆವು. ಅವರು ಪ್ರಜ್ಞೆ ತಪ್ಪಿ ಬೀಳುವ ಮುನ್ನ ಏನೋ ಸೇವಿಸಿದ್ದನ್ನು ನೋಡಿದೆ. ನಾವು ಪೊಲೀಸರನ್ನು ಕರೆದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆವು,” ಎಂದು ನಿವೃತ್ತ ಸುಬೇದಾರ್ ಪೃಥ್ವಿ ಸಿಂಗ್ ಹೇಳಿದ್ದಾರೆ.

ಪಾಟ್ನಾ ಹೈ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ‘ಎಲ್ ನರಸಿಂಹ ರೆಡ್ಡಿ – ಒಆರ್’ಒಪಿ ಏಕ ಸದಸ್ಯ ನ್ಯಾಯಾಂಗ ಸಮಿತಿ’ ತನ್ನ ವರದಿ ಸಲ್ಲಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ವರದಿಯನ್ನು ನರಸಿಂಹ ರೆಡ್ಡಿ ಪರಿಕ್ಕರಿಗೆ ಸಲ್ಲಿಸಿದ್ದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ 'ಏಕ ಶ್ರೇಣಿ ಏಕ ಪಿಂಚಣಿ' ಬೇಡಿಕೆ ಕೇಳಿ ಬಂದಿತ್ತು. ಆದರೆ ಸೇನೆಯ ಬಗ್ಗೆ ಸದಾ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಇವತ್ತಿಗೂ ಈ ಸಮಸ್ಯೆಗೆ ಸಂಪೂರ್ಣವಾಗಿ ಇತಿಶ್ರೀ ಹಾಡಿಲ್ಲ. ಮೊನ್ನೆಯಷ್ಟೆ ದೀಪಾವಳಿಯನ್ನು ಸೈನಿಕರ ಜೊತೆಗೆ ಆಚರಿಸುತ್ತಾ ಒಆರ್'ಒಪಿಗಾಗಿ ಪ್ರತೀವರ್ಷ 5,500 ಕೋಟಿ ತೆಗೆದಿರಿಸುವುದಾಗಿ ಹೇಳಿದ್ದನ್ನು ಸ್ಮರಿಸಬಹುದು. ಆದರೆ ವಿವಾದವಿನ್ನೂ ಮುಂದುವರಿದಿದೆ.