samachara
www.samachara.com
ಜಗತ್ತಿನ ಬಲಿಷ್ಠ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಹೊಡೆದುರುಳಿಸಿದಾತ ಮಿಲಿಟರಿ ಸ್ನೈಪರ್ ಆಗಿದ್ದ!
ಸುದ್ದಿ ಸಾಗರ

ಜಗತ್ತಿನ ಬಲಿಷ್ಠ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಹೊಡೆದುರುಳಿಸಿದಾತ ಮಿಲಿಟರಿ ಸ್ನೈಪರ್ ಆಗಿದ್ದ!

ಗುರುವಾರ ಅಮೆರಿಕಾ ಪೊಲೀಸರ ಪಾಲಿನ ಕರಾಳ ದಿನ. ವಿಶ್ವದಲ್ಲೇ ಬಲಿಷ್ಠ ಪೊಲೀಸ್ ಪಡೆ ಬೆಚ್ಚಿ ಬಿದ್ದ ದಿನ. ತಮ್ಮನ್ನು ಯಾರು ಮುಟ್ಟಲಾರರು ಎಂದುಕೊಂಡಿದ್ದ ಪೊಲೀಸರಿಗೆ ಒಂದು ಕಡೆ ಅಘಾತ; ಇನ್ನೊಂದು ಕಡೆ ಮರ್ಯಾದೆಯ ಪ್ರಶ್ನೆ. 

samachara

samachara

ಗುರುವಾರ ಅಮೆರಿಕಾ ಪೊಲೀಸರ ಪಾಲಿನ ಕರಾಳ ದಿನ. ವಿಶ್ವದಲ್ಲೇ ಬಲಿಷ್ಠ ಪೊಲೀಸ್ ಪಡೆ ಬೆಚ್ಚಿ ಬಿದ್ದ ದಿನ. ತಮ್ಮನ್ನು ಯಾರು ಮುಟ್ಟಲಾರರು ಎಂದುಕೊಂಡಿದ್ದ ಪೊಲೀಸರಿಗೆ ಒಂದು ಕಡೆ ಅಘಾತ; ಇನ್ನೊಂದು ಕಡೆ ಮರ್ಯಾದೆಯ ಪ್ರಶ್ನೆ. ಗುರುವಾರ ರಾತ್ರಿ ಅಮೆರಿಕಾದ ದಲ್ಲಾಸ್ ನಗರದಲ್ಲಿ ಕರಿಯ ಜನಾಂಗದವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಕಪ್ಪು ಜನಾಂಗದವರನ್ನು ಪೊಲೀಸರು ಹತ್ಯೆ ಮಾಡಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಸ್ನೈಪರ್ಸ್ಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಪೊಲೀಸರು ಸಾವನ್ನಪ್ಪಿದ್ದಾರೆ. ಈ ಘಟನೆ ಅಮೆರಿಕಾ ಸರಕಾರಕ್ಕೆ ಆಘಾತ ಉಂಟು ಮಾಡಿದೆ.

ಸ್ನೈಪರ್ಸ್ ಎಂದರೆ ಯಾರು? : ಅನತಿ ದೂರದಲ್ಲಿ ನಿಂತು, ವೈರಿಗೆ ಕಾಣಿಸದಂತೆ ಮರೆಯಿಂದ ಶೂಟ್ ಮಾಡುವವರನ್ನು ಸ್ನೈಪರ್ಸ್ ಎನ್ನುತ್ತಾರೆ. ಈ ರೀತಿ ಶೂಟ್ ಮಾಡಲು ಅತ್ಯಾಧುನಿಕ ಆಯುಧಗಳು ಬೇಕಾಗುತ್ತವೆ. ಇದಕ್ಕೆ ವಿಶೇಷ ಪರಿಣತಿಯೂ ಬೇಕು. ಇಲ್ಲಿ ಬುಲೆಟ್ ಚಲಿಸುವ ವೇಗ, ಗಾಳಿಯ ಚಲನೆಯ ದಿಕ್ಕು, ವೈರಿ ಇರುವ ಅಂತರವನ್ನೆಲ್ಲಾ ಗಣನೆಗೆ ತೆಗೆದುಕೊಂಡು ಶೂಟ್ ಮಾಡಬೇಕಾಗುತ್ತದೆ. ವಿಶೇಷ ಪರಿಣತಿ ಇರುವವರು ಮಾತ್ರ ಈ ಕೆಲಸಕ್ಕೆ ಕೈ ಹಾಕುತ್ತಾರೆ. ಸುಪಾರಿ ಕಿಲ್ಲರ್ಗಳೂ ಈ ಮಾದರಿ ಅನುಸರಿಸುವುದಿಲ್ಲ. ಹೀಗಾಗಿ ಈ ಘಟನೆ ವಿರಳಾತಿ ವಿರಳ.

ಪ್ರತಿಭಟನೆ ವೇಳೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಕಾರ್ ಪಾರ್ಕಿಂಗ್ನಲ್ಲಿದ್ದ ಶಂಕಿತನ ಮೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಶಂಕಿತ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಈತ ಅಮೆರಿಕಾದ ಮಾಜಿ ಸೈನಿಕನಾಗಿದ್ದು ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸಿದ. 25 ವರ್ಷದ ಈ ಮಾಜಿ ಸೈನಿಕ "ಯಾವುದೇ ಅಪರಾಧ ಹಿನ್ನಲೆ ಹೊಂದಿಲ್ಲ. ಉಗ್ರರೊಂದಿಗೂ ಸಂಪರ್ಕ ಇರಲಿಲ್ಲ. ಕೇವಲ ತನ್ನ ಸ್ವಂತ ನಿರ್ಧಾರದ ಮೇಲ ದಾಳಿ ನಡೆಸಿದ್ದಾನೆ," ಎಂದು ಅಲ್ಲಿನ ಸೇನಾ ವಕ್ತಾರರು ತಿಳಿಸಿದ್ದಾರೆ.ಇನ್ನು ಮೂವರನ್ನು ಪೊಲೀಸರು ಬಂಧಿಸಿದ್ದು ಓರ್ವ ಮಹಿಳೆಯೂ ಸೇರಿದ್ದಾಳೆ. ಈ ವೇಳೆ ಮಾತನಾಡಿದ ದಲ್ಲಾಸ್ ಪೊಲೀಸ್ ಮುಖ್ಯಸ್ಥ "ಎಲ್ಲಾ ಶಂಕಿತರನ್ನು ಬಂಧಿಸಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ," ಎಂದಿದ್ದಾರೆ. ಇನ್ನೂ ಹಲವರು ಈ ಕೃತ್ಯದಲ್ಲಿ ಕೈ ಜೋಡಿಸಿರುವ ಸಾಧ್ಯತೆ ಇದೆ.

ಟೆಕ್ಸಾಸ್ ರಾಜ್ಯದ ದಲ್ಲಾಸ್ನ ಕೇಂದ್ರ ಭಾಗದ ‘ಬೆಲೊ ಗಾರ್ಡನ್ ಪಾರ್ಕ್’ ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದು ಪ್ರತಿಭಟನೆ ನಡೆಯುವ ಸಾಮಾನ್ಯ ಜಾಗಗಳಲ್ಲಿ ಒಂದು. ಈ ಪಾರ್ಕ್ ಸುತ್ತ ಮುತ್ತ ಎತ್ತರದ ಕಟ್ಟಡಗಳಿವೆ. ಗುರುವಾರ ರಾತ್ರಿ ಇಲ್ಲಿ ಪ್ರತಿಭಟನೆ ವೇಳೆ ಈ ಗುಂಡಿನ ದಾಳಿ ನಡೆದಿದೆ.ಮಿನ್ನೊಸೋಟಾ ಮತ್ತು ಲೂಸಿಯಾನದಲ್ಲಿ ಈ ಹಿಂದೆ ಇಬ್ಬರು ಕರಿಯ ಜನರನ್ನು ಪೊಲೀಸರ ಹೊಡೆದುರುಳಿಸಿದ್ದರು. ವಿನಾ ಕಾರಣ ಕರಿಯರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯೂ ಅಷ್ಟೇ ಶಾಂತವಾಗಿ ಶಿಸ್ತಿನಿಂದ ನಡೆಯುತ್ತಿತ್ತು. ನೂರಾರು ಜನರು ಪಾಲ್ಗೊಂಡಿದ್ದ ಪ್ರತಿಭಟನೆಯ ವೇಳೆ ರಕ್ಷಣೆಗಾಗಿ ಪೊಲೀಸರು ನಿಯೋಜಿತರಾಗಿದ್ದರು.ಈ ಪೊಲೀಸರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆ. ಎತ್ತರದ ಸುರಕ್ಷಿತ ಜಾಗದಿಂದ ಕಣ್ಣಿಗೆ ಕಾಣಿಸಿದಂತೆ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 11 ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, 5 ಪೊಲೀಸರು ಸಾವನ್ನಪ್ಪಿದ್ದಾರೆ. ಇದಲ್ಲದೇ 7 ಪೊಲೀಸರಿಗೆ ಗಾಯಗಳಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಇನ್ನು ಘಟನೆಯಲ್ಲಿ ಇಬ್ಬರು ನಾಗರಿಕರೂ ಗಾಯಗೊಂಡಿದ್ದಾರೆ.ನಂತರ ಕಾರಿಗೆ ಬಾಂಬ್ ತುಂಬಿಸಿ, ರೋಬೊಟ್ ಸಹಾಯದಿಂದ ಹಂತಕನನ್ನು ಬಳಿಗೆ ತೆಗೆದುಕೊಂಡಿ ಹೋಗಿ ಪೊಲೀಸರು ಸ್ಫೋಟಿಸಿದ್ದರು. ಈ ಬಗ್ಗೆ ಈಗ ವ್ಯಾಪಕ ಚರ್ಚೆ ಆರಂಭವಾಗಿದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಘಟನೆಯನ್ನು ಖಂಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು ನಗರದ ಮೂಲೆ ಮೂಲೆಯಲ್ಲೂ ತಪಾಸಣೆ ಆರಂಭಿಸಿದ್ದಾರೆ. ಆಕಾಶದಲ್ಲಿ ಹೆಲಿಕಾಪ್ಟರ್ಗಳು ಸುತ್ತಾಡುತ್ತಿದ್ದು ನಗರದ ಮೂಲೆಗಳಲ್ಲಿ ಅಟೋಮ್ಯಾಟಿಕ್ ಗನ್ ಹಿಡಿದ ಪೊಲೀಸ್ ಸಿಬ್ಬಂದಿಗಳು ನಿಂತಿದ್ದಾರೆ.

ಇದೇ ವೇಳೆ ಕರಿಯ ಜನಾಂಗದವರ ಹತ್ಯೆ ಖಂಡಿಸಿ ಅಮೆರಿಕಾದಾದ್ಯಂತ ಗುರುವಾರ ನಡೆದ ಇತರ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ. ಸೆಪ್ಟೆಂಬರ್ 11, 2001ರ ನಂತರ ಅಮೆರಿಕಾದ ಕಾನೂನು ಸುವ್ಯವಸ್ಥೆ ಮೇಲೆ ನಡೆದ ಅತೀ ದೊಡ್ಡ ದಾಳಿ ಇದಾಗಿದೆ.