samachara
www.samachara.com
ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್
ಸುದ್ದಿ ಸಾಗರ

ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

samachara

samachara

ರಾಜ್ಯದ ಬರ ಪರಿಸ್ಥಿತಿ, ರಾಜಕಾರಣಿಗಳ ಹೊಣೆಗೇಡಿತನ ಹಾಗೂ ಮಹದಾಯಿ ನೀರಿನ ನಿರೀಕ್ಷೆಯಲ್ಲಿರುವ ರೈತರ ಪರ ದನಿಗಳು ಬುಧವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿವೆ.

ಕಳೆದ ಹಲವು ದಿನಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಇಂದಿನಿಂದ ಸಿಎಂ ಸಿದ್ದರಾಮಯ್ಯ ಕೂಡ ಬರ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬರ ಪರಿಹಾರದ ವಿಚಾರದಲ್ಲಿ ಬ್ಯಾಟಿಂಗ್ ಶುರುಮಾಡಿದ್ದಾರೆ.

ಇಂತಹ ಬೆಳವಣಿಗೆಗಳ ನಡುವೆಯೇ ಬುಧವಾರ ಬೆಳಗ್ಗೆ, ಟ್ವಿಟರ್ ಮೂಲಕ ಯುವಕ- ಯುವತಿಯರು #DyingForADrop ಎಂಬ ಹ್ಯಾಶ್ ಟ್ಯಾಗ್ ಇಟ್ಟುಕೊಂಡು ಉತ್ತರ ಕರ್ನಾಟಕದ ಬವಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಪ್ರಯತ್ನ ನಡೆಸಿದ್ದಾರೆ. ಸದ್ಯ ಬೆಂಗಳೂರು ಮಟ್ಟಿಗೆ ನಂ. 1 ಟ್ರೆಂಡಿಗ್ ಆಗಿರುವ ಈ ವಿಚಾರದಲ್ಲಿ ಸಾಕಷ್ಟು ಒಳನೋಟಗಳನ್ನು ಹರಿಯ ಬಿಡಲಾಗುತ್ತಿದೆ.

'ನದಿ ಎಂದರೆ ಕಾವೇರಿ ಮಾತ್ರ ಅಲ್ಲ; ಕಳಸ ಬಂಡೂರಿ ಕೂಡ ಇದೆ' ಎಂದು ಶಾರದಾ ಡೈಮಂಡ್ ಹೆಸರಿನ ಅಕೌಂಟ್ ಟ್ವೀಟ್ ಮಾಡಿದೆ. ಇತ್ತೀಚೆಗೆ ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, 'ಡೆಡ್ ಸ್ಟೋರೇಜ್' ಮಟ್ಟವನ್ನು ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, "ಬೆಂಗಳೂರಿಗೆ ಯಾವುದೇ ಸಮಸ್ಯೆ ಇಲ್ಲ,'' ಎಂದು ಜಲಮಂಡಳಿ ಇದೇ ಸಮಯದಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

ನೀರಿನ ಸುತ್ತ ಭಾವನಾತ್ಮಕ ಸ್ಪಂದನೆಗಳಿಗಿಂತ; ವಾಸ್ತವಿಕ ಅಂಶಗಳನ್ನು ಗಮನಿಸುವುದು ಸೂಕ್ತ ಎಂದು ಮೇಲಿ ಟ್ವೀಟ್ ಆಶಯ ವ್ಯಕ್ತಪಡಿಸುತ್ತಿದೆ.

ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

ನಮ್ಮ ರಾಜ್ಯದ ಸಂಸದರನ್ನು ತರಾಟೆಗೆ ತೆಗೆದುಕೊಂಡಿರುವ ಮೇಲಿನ ಟ್ವೀಟ್, ಮಹದಾಯಿ ಯೋಜನೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ಪ್ರಶ್ನಿಸುತ್ತಿದೆ.

ಹೊರಗೆ ಬರದ ಛಾಯೆ ಕಾಣಿಸಿಕೊಂಡಿರುವಾಗ, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಯುವ ಸಮುದಾಯ ಅದಕ್ಕೆ ಸ್ಪಂದಿಸಲು ಇಂತಹ ಹಾದಿಗಳನ್ನು ಕಂಡುಕೊಂಡಿದೆ. ಇದನ್ನು ಸಂಬಂಧಪಟ್ಟವರು ಗಮನಿಸಬೇಕಿದೆ.