ಪೆಟ್ರೋಲ್ ದರ ದಾಖಲೆ ಏರಿಕೆ: ಟ್ವಿಟರ್ ಮಿಡಿತಗಳು ಹೀಗಿವೆ...
ದೇಶ

ಪೆಟ್ರೋಲ್ ದರ ದಾಖಲೆ ಏರಿಕೆ: ಟ್ವಿಟರ್ ಮಿಡಿತಗಳು ಹೀಗಿವೆ...

ಪೆಟ್ರೋಲ್ ದರ ಮುನ್ನುಗ್ಗುತ್ತಿದೆ. ಇದು ವಾಹನ ಸವಾರರು ಮತ್ತು ಹಣ ದುಬ್ಬರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ.

ನಾಲ್ಕು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಹಿಂದಿನ ಎಲ್ಲ ದರ ದಾಖಲೆಯನ್ನು ಹಿಂದಿಕ್ಕಿ ಗಗನಮುಖಿಯಾಗಿದೆ.

ಈ ಹಿಂದೆ 2013ರ ಸೆಪ್ಟೆಂಬರ್‌ 14ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.06 ಆಗಿತ್ತು. ಇದು ಈವರೆಗಿನ ಗರಿಷ್ಠ ದರವಾಗಿತ್ತು. ಇದೀಗ ಆ ದಾಖಲೆಯನ್ನೂ ಮುರಿದು ಪೆಟ್ರೋಲ್ ದರ ಮುನ್ನುಗ್ಗುತ್ತಿದೆ. ಇದು ವಾಹನ ಸವಾರರು ಮತ್ತು ಹಣ ದುಬ್ಬರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ.

ಸಾಮಾಜಕ ಜಾಲತಾಣಗಳಲ್ಲಿ ಸರ್ಕಾರವನ್ನ ತಮ್ಮದೇ ದಾಟಿಯಲ್ಲಿ ಜನ ತರಾಟೆ ತೆಗೆದುಕೊಳ್ತಿದಾರೆ. ಆ ಕೆಲ ಮಾದರಿಗಳನ್ನು ಇಲ್ಲಿ ಕೊಡಲಾಗಿದೆ.

ದೆಹಲಿಯ ಸೋನಿಯಾ ಗೊಗೋಯ್ ಎಂಬವರು “ಹೌದು ಪೆಟ್ರೋಲ್ ದರಗಳು ಈಗ ಹೆಚ್ಚಾಗಿದೆ. ಕಾರಣ ಬಿಜೆಪಿ ಸರ್ಕಾರ ಪೆಟ್ರೋಲ್ ನಲ್ಲಿ ಶುದ್ಧ ಗಂಗಾಜಲ ಹಾಗೂ ಗೋಮೂತ್ರವನ್ನು ಸೇರಿಸಿ ಕೊಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಕಲಬೆರಕೆ ಪೆಟ್ರೋಲ್ ನೀಡುತ್ತಿತ್ತು” ಎಂದು ಮೋದಿ ಸರ್ಕಾರವನ್ನು ಲೇವಡಿ ಮಾಡುವ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ.

ಹೈದರಾಬಾದ್ ಗೊಂಗುರಾಜ್ ಎಂಬುವರು 2014 ಮತ್ತು 2018ರ ನಡುವೆ ಇರುವ ಪೆಟ್ರೋಲ್ ಮತ್ತು ಡೀಸಲ್ ದರಗಳ ನಡುವಿನ ದರಗಳನ್ನು ಬಿಡಿಸಿಟ್ಟಿದ್ದಾರೆ. ಆಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ಬೆಲೆ ಈಗಿನದ್ದಕ್ಕಿಂತಲೂ ದುಬಾರಿಯಾಗಿತ್ತು. ಆದರೆ ಅಂದಿನ ಯುಪಿಎ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕ್ರಮವಾಗಿ 9.2, ಮತ್ತು 3.36 ಪೈಸೆ ಎಕ್ಸೈಜ್ ಅಬಕಾರಿ ತೆರಿಗೆ ವಿಧಿಸುತ್ತಿತ್ತು. ಆದರೆ ಎನ್.ಡಿ.ಎ. ಕ್ರಮವಾಗಿ 19.48 , 15.33 ರೂಪಾಯಿ ತೆರಿಗೆ ವಿಧಿಸುತ್ತಿದೆ. ಯುಪಿಎ ತೆರಿಗೆಗಳಿಗಿಂತ ಇದು ಕ್ರಮವಾಗಿ ಶೇ. 211.7 , 443.06 ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ.

ಸಾಕಷ್ಟು ಮಂದಿ ಸಿಕ್ಕಿದ್ದೆಲ್ಲವನ್ನೂ ಆಕ್ರಮಿಸಿಕೊಂಡು ನುಂಗಿ ಆಕ್ಟೋಪಸ್ ಪ್ರಾಣಿಗೆ ಮೋದಿ ದೇಹವನ್ನು ಕೊಲಾಜ್ ಮಾಡಿದ ಚಿತ್ರವನ್ನ ರೀಟ್ವೀಟ್ ಮಾಡಿದ್ದಾರೆ. ಅದರ ಒಂದೊಂದು ಅಂಗಕ್ಕೂ ಪೆಟ್ರೋಲ್ ಪೈಪನ್ನು ಸೇರಿಸಲಾಗಿದ್ದು, ಕೈಗೆ ಸಿಲಿಂಡರ್ ಗಳನ್ನ ಕೊಡಲಾಗಿದೆ. ಪೆಟ್ರೋಲ್, ಡೀಸಲ್ ಹಾಗೂ ಗ್ಯಾಸ್ ಅರಸಿ ಬಂದ ಜನರಿಗೆ ಈ ಮೋದಿಯವರ ಅಕ್ಟೋಪಸ್ ಪೆಟ್ರೋಲ್ ಬರುವುದಿಲ್ಲ. ಬದಲಾಗಿ ಅವು ತಮ್ಮ ಅಂಗಗಳಿಂದ ಜನರನ್ನು ಥಳಿಸುತ್ತವೆ. ನಗರಗಳ ಜನರು ಪೆಟ್ರೋಲ್ ಗಾಗಿ ಹೆಣಗುವ ದೃಷ್ಯವನ್ನು ಇದರಲ್ಲಿ ಕಟ್ಟಿ ಕೊಡಲಾಗಿದೆ.

ಮನೀಸ್ ಸೂದ್ ಎಂಬುವರು “ಕಾರ್ಪೋರೇಟ್ ಸ್ನೇಹಿ ಬಿಜೆಪಿ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲೆ ಭಾರಿ ತೆರಿಗೆ ಹೇರಿ ಜನರನ್ನು ಲೂಟಿ ಮಾಡುತ್ತಿದೆ. ಇದಕ್ಕೆ ಪ್ರತಿಭಟನೆಯೊಂದೇ ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರು ಮುಂದುವರೆದ ದೇಶಗಳ ತಲಾ ಆದಾಯ, ಪೆಟ್ರೋಲ್ ದರ ಮತ್ತು ಪ್ರತಿ ವ್ಯಕ್ತಿ ಮೇಲೆ ಹೇರುತ್ತಿರುವ ತೆರಿಗೆಯನ್ನ ಪಟ್ಟಿಯನ್ನು ಲಗತ್ತಿಸಿದ್ದಾರೆ. ಚೀನಾ, ಜಪಾನ್, ಅಮೆರಿಕಾ ಇತ್ಯಾದಿ ದೇಶಗಳ ತಲಾ ಆದಾಯ ಭಾರತಕ್ಕಿಂತ 5 ರಿಂದ 30ರಷ್ಟು ಜಾಸ್ತಿ ಇದ್ದರೂ ಅಲ್ಲಿ ಪೆಟ್ರೋಲ್ ದರ ಭಾರತಕ್ಕಿಂತ ಕಡಿಮೆ ಇದೆ. ಉದಾ ಅಮೆರಿಕಾದಲ್ಲಿ ಪೆಟ್ರೋಲ್ ದರ 0.5ರಷ್ಟು ತೆರಿಗೆ ಸೇರಿಸಿ 0.83 ಡಾಲರ್ ( ಭಾರತಕ್ಕಿಂತ ಶೇ.40ರಷ್ಟು ಕಡಿಮೆ) ಇದೆ. ಆದರೆ ಅಲ್ಲಿನ ತಲಾ ಆದಾಯ 170 ಡಾಲರ್ ಇದೆ. ಇದನ್ನೇ ಭಾರತಕ್ಕೆ ಹೋಲಿಸಿದರೆ ಕ್ರಮವಾಗಿ 19.8 ರೂ.ತೆರಿಗೆ ಇದ್ದರೆ, ಆರು ಡಾಲರ್ ತಲಾ ಆದಾಯವಿದೆ. ಆದರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.16 ಡಾಲರ್ ( ಸುಮಾರು 80 ರೂ) ಇದೆ.

ಜೋರ್ಸೆ ತೋಕೊ ಪ್ರೋಫೈಲ್ ಹೆಸರಿನ ಒಬ್ಬರಂತೂ 2011ರಲ್ಲಿ ನಟ ಅಕ್ಷಯ್ ಕುಮಾರ್ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ಹಾಕಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅವರು “ ರಾಕೆಟ್ ನಂತೆ ಏರಿರುವ ಪೆಟ್ರೊಲ್ ಬೆಲೆ ಹೆಚ್ಚಳದಿಂದಾಗಿ ವಾಹನಗಳೆಲ್ಲವೂ ಬಂಕ್ ಮುಂದೆ ನಿಂತುಬಿಟ್ಟಿದ್ದವು. ಹಾಗಾಗಿ ನಾನು ಇಂದು ರಾತ್ರಿ ಮನೆ ತಲುಪಲಾಗಲೇ ಇಲ್ಲ” ಇಂದು ಟ್ವೀಟ್ ಮಾಡಿದ್ದರು. ಅದಕ್ಕೆ ಫ್ರೊಫೈಲ್ ಅಡ್ಮಿನ್, “ಅಕ್ಷಯ್ ಕುಮಾರ್ ಇಂದು ಸುಮ್ಮನಿದ್ದೀರಿ. ಆದರೆ ಅಂದು ಇಂಥ ಟ್ವೀಟ್ ಮಾಡಲು ಎಷ್ಟು ಹಣ ಪಡೆದಿದ್ರಿ ಮತ್ತು ಅದನ್ನು ನಂತರ ಡಿಲೀಟ್ ಮಾಡಲು ಎಷ್ಟು ಪಡೆದಿದ್ರೀ” ಲೇವಡಿ ಮಾಡಿದ್ದಾರೆ.

ರಿಂಕೇಶ್ ಮೆಶ್ರಾಮ್ ಎಂಬುವರಂತೂ ತಮ್ಮ ದ್ವಿಚಕ್ರ ವಾಹನದ ಮೇಲೆ ಕುಳಿತೂ ಗಾಡಿಯನ್ನೂ ಚಾಲೂ ಮಾಡದೆ ಮುಂದೆ ಓಡುತ್ತಿರುವ ಕತ್ತೆ ಬಾಲವನ್ನು ಹಿಡಿದುಕೊಂಡು ಗಾಡಿ ಚಲಾಯಿಸುವ ವಿಡಿಯೋ ಹಾಕಿ ಏರಿದ ತೈಲ ಬೆಲೆ ಮತ್ತು ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಕೀರ್ತಿ ಎಂಬುವವರು ಮೋದಿಯವರು 2014 ಸಂಸತ್ ಚುನಾವಣೆಗೆ ಮೊದಲು ತಮ್ಮ ಚುನಾವಣಾ ಪ್ರಚಾರದ ಅಂಗವಾಗಿ ರಸ್ತೆ ರಸ್ತೆಗಳಲ್ಲಿ ಹಾಕಿದ್ದ “ ಜನರ ಮೇಲೆ ನಡೆಯುತ್ತಿರುವ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆಯ ಶೋಷಣೆಯನ್ನು ಇನ್ನು ತಡೆಯಲಾಗದು”, ಕಟೌಟ್ ಚಿತ್ರವನ್ನು ಪೋಸ್ಟ್ ಮಾಡಿ "ಮೋದಿಜಿ ರಷ್ಯಾ ಪ್ರವಾಸ ಚೆನ್ನಾಗಿರಲಿ, ಆದರೆ ಇನ್ನಾದರೂ ಪೆಟ್ರೋಲ್ ಬೆಲೆ ಇಟ್ಟುಕೊಂಡು ರಾಜಕೀಯ ಮಾಡಬೇಡಿ,” ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಡೆಮಾಕ್ರಸಿ ಎಂದರೇನು ಎಂದು ಪ್ರಶ್ನಿಸಿರುವ ತಪನ್ ಶರ್ಮಾ ಎಂಬುವರು , ಅದಕ್ಕೆ ಅವರೇ “ ಬಿಜೆಪಿ ಸರ್ಕಾರ, ಬಿಜೆಪಿಗಾಗಿ ಸರ್ಕಾರ, ಬಿಜೆಪಿಯಿಂದ ಸರ್ಕಾರ” ಬರೆದು ಕಮಲದ ಹೂವನ್ನು ಮತ ಹಾಕಿದ ಕೈ ಬೆರಳಾಗಿ ಕೊಲಾಜ್ ಮಾಡಿ ಚಿತ್ರವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಎಂಎ ಇನ್ ಎಂಟೈರ್ ಪೋಲ್ ಸೈನ್ಸ್ ಹೆಸರಲ್ಲಿ ಟ್ವೀಟ್ ಮಾಡಿರುವ ಒಬ್ಬರು “ ಪೆಟ್ರೋಲ್ ಪ್ರೈಸ್ ಏರುತ್ತಿದ್ದರೂ, ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟಿಸುತ್ತಿದ್ದರೂ ಮೋದಿ ಭಕ್ತರು ಮಾತ್ರ ಗಡತ್ ನಿದ್ದೆ ಮಾಡುತ್ತಿರು ವಚಿತ್ರವನ್ನು ಹಾಕಿದ್ದಾರೆ. ಅದಕ್ಕೆ “ನನ್ನ ನಂಬುಗೆಯಂತೆ ಭಕ್ತರು ಇದಾವುದಕ್ಕೂ ಪ್ರತಿಕ್ರಿಯಿಸಲಾರರು “ ಎಂದು ಲೇವಡಿ ಮಾಡಿದ್ದಾರೆ.

ರಮನ್ ಶರ್ಮ ಎಂಬುವವರು ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಿದೇಶ ಸುತ್ತಿತ್ತಿರುವುದಕ್ಕೆ ಲೇವಡಿ ಮಾಡುತ್ತಾ ಪ್ರಧಾನಿ ಮೋದಿಯನ್ನು ಫಾರಿನರ್ ಎಂದು ಚುಚ್ಚಿದ್ದಾರೆ. ಅದಕ್ಕೆ ‘ ಮೋದಿ ಮರಳಿ ವಿದೇಶದಿಂದ ಬಂದಾಗ ಆರೆಸೆಸ್ ಭಕ್ತರು ಹೂವ್ ಮಾಲೆ ಹಾಕಿ ಸ್ವಾಗತಿಸುವ ಚಿತ್ರವನ್ನು ಹಾಕಿ ಗೇಲಿ ಮಾಡಿದ್ದಾರೆ.

ಜೈರಾಜ್ ಪಿ. ಎಂಬುವರಂತೂ “ಮೋದಿ ಹೇಗೆ 2014ರಲ್ಲಿ ಸರ್ಕಾರ್ ಬದಲೋ ಎಂದು ಘೋಷಣೆ ನೀಡಿದ್ದರು. ಆದರೆ 2019ಕ್ಕೆ ಅವರು ಫಿರ್ ಏಕ್ ಬಾರ್ ಎನ್ನುತ್ತಿದ್ದರೆ ಮತದಾರ ಸರ್ಕಾರ್ ಬದಲೋ ಎನ್ನುವ ಮೂಲಕ ಮೋದಿಗೇ ಟಾಂಗ್ ನೀಡುವ ಚಿತ್ರವನ್ನು ಹಾಕಿ ವಾಸ್ತವವನ್ನು ಬಿಡಿಸಿಟ್ಟಿದ್ದಾರೆ.

ಪ್ರಧಾನಿ ಮೋದಿಯನ್ನು ಲೇವಡಿ ಮಾಡಲು ರವಿ ಕುಂದುರ್ತಿ ಎನ್ನುವವರು ರಾಬಿನ್ ಹುಡ್ ಎಂದು ಕರೆದು ಅವರು ರಾಮನ ವೇಶದಲ್ಲಿರುವ ಫೋಟೋ ಹಾಕಿದ್ದಾರೆ.

ಇಲ್ಲಿರುವವು ಆಯ್ದ ಸ್ಯಾಂಪಲ್‌ಗಳು ಮಾತ್ರ. ಹೆಚ್ಚಿನ ಟ್ವೀಟ್‌ಗಳಿಗಾಗಿ ನೀವು ನೇರವಾಗಿಯೇ ಟ್ವಿಟರ್‌ಗೆ ಭೇಟಿ ನೀಡಬಹುದು. ಇಂಧನ ದರ ಏರಿಕೆಗೆ ಇನ್ನೂ ಪ್ರತಿಪಕ್ಷಗಳು ಬೀದಿಗಳಿದಿಲ್ಲ. ಆದರೆ ಜನ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ; ಸಾಮಾಜಿಕ ಜಾಲತಾಣಗಳಲ್ಲಿ.