samachara
www.samachara.com

       ಮೋದಿ-ಅಮಿತ್ ಶಾ ದರ್ಬಾರ್
ಮೋದಿ-ಅಮಿತ್ ಶಾ ದರ್ಬಾರ್
ದೇಶ

ಕರ್ನಾಟಕ ಫಲಿತಾಂಶ: ಮೋದಿ, ಅಮಿತ್ ಶಾ ಏನೆಂದರು? 

ಕಾಂಗ್ರೆಸ್ ವಿರುದ್ಧ ವಾಗ್ದಾಳಿ, ಸರಕಾರ ರಚಿಸಲು ಒತ್ತಾಸೆ. ಕರ್ನಾಟಕದ ವಿಧಾನಸಭೆ ಚುನಾವಣೆ ನಂತರ ದಿಲ್ಲಿಯಲ್ಲಿ ಮಾತನಾಡಿದ ನಾಯಕರು ಹೇಳಿದ್ದಿಷ್ಟು...

Team Samachara

ಕರ್ನಾಟಕದ ಜನತೆ ಬಿಜೆಪಿಯನ್ನು ಪ್ರಚಂಡ ಮತಗಳಿಂದ ಗೆಲುವಿನ ಬಳಿ ತಂದು ನಿಲ್ಲಿಸಿದ್ದಾರೆ. ನಾವು ಅಲ್ಲಿ ಪ್ರಜಾತಂತ್ರವನ್ನು ತರಲು ಹೋರಾಟವನ್ನು ಮುಂದುವರೆಸುತ್ತೇನೆ ಎನ್ನುವ ಮೂಲಕ ಪ್ರಧಾನಿ ಮೋದಿ ಪರೋಕ್ಷವಾಗಿ ಸರ್ಕಾರ ರಚಿಸುವ ಹಕ್ಕುದಾರಿಕೆಯನ್ನು ಮಂಡಿಸಿದ್ದಾರೆ.

ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಕರ್ನಾಟಕದಲ್ಲಿ ದೊಡ್ಡ ಪಕ್ಷವಾಗಿ ಹೊರಮ್ಮಿದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಕರ್ನಾಟಕದ ಗೆಲುವು ನಮಗೆ ಸಾಕಷ್ಟು ಉತ್ಸಾಹ ತುಂಬಿದೆ. ಇದು ಸಾಮಾನ್ಯ ಜಯವಲ್ಲ, ಅಭೂತಪೂರ್ವ ಜಯ. ಇದರ ಯಶಸ್ಸು ಕಾರ್ಯಕರ್ತರು ಹಾಗೂ ರಾಜ್ಯಾಧ್ಯಕ್ಷರಿಗೆ ಸಲ್ಲಬೇಕು. ಕರ್ನಾಟಕದ ಜನರ ಉತ್ಸಾಹವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯಲು ನಾವು ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಅವರು ರಾಜ್ಯದಲ್ಲಿ ಅಧಿಕಾರ ರಚಿಸಲು ಪ್ರಯತ್ನ ಮಾಡುವ ಸೂಚನೆ,” ನೀಡಿದ್ದಾರೆ.

“ಅಲ್ಲಿನ ಪಕ್ಷಗಳು ಬಿಜೆಪಿ ಹಿಂದಿ ಪಾರ್ಟಿ, ಉತ್ತರ ಭಾರತದ ಪಾರ್ಟಿ ಇತ್ಯಾದಿಯಾಗಿ ನಮ್ಮ ವಿರುದ್ಧ ಸುಳ್ಳಿನ ಕಂತೆಯನ್ನೇ ಬಿಂಬಿಸಿದವು. ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಯಿತು. ಹೀಗೆ ವಿಕೃತವಾಗಿ ಯೋಚಿಸುವವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಏಕ್ ಭಾರತ್ ಶ್ರೇಷ್ಠ ಭಾರತ್ ಆಶಯದಲ್ಲಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪಾರ್ಟಿಯಾಗಿದೆ” ಎಂದು ಪ್ರತಿಪಾದಿಸಿದರು.

“ಸ್ವಾತಂತ್ರ್ಯ ನಂತರ ಯಾವ ಪಕ್ಷವೂ ಇಂತಹ ವಿಜಯವನ್ನು ದಾಖಲಿಸಿರಲಿಲ್ಲ. ಅನೇಕ ದಿಗ್ಗಜ ನಾಯಕರ ಆಶೀರ್ವಾದಿಂದ ದೊಡ್ಡ ಸಾದನೆ ನಾವು ಮಾಡಿದ್ದೇವೆ. ಆದರೆ ವಿಪಕ್ಷಗಳು ಭಾರತದ ಪ್ರಜಾಪ್ರಭುತ್ವ, ಫೆಡರಲಿಸಂನ್ನು ನಾಶ ಮಾಡುವ ಎಲ್ಲಾ ಕೆಲಸಗಳನ್ನು ಮಾಡಿದವು. ಚುನಾವಣೆ ಗೆಲ್ಲಲು ದೇಶವನ್ನೇ ಹೊಡೆಯಲು ಅವರು ಯಾವ ಕೆಲಸಕ್ಕೂ ಸಿದ್ದರಿದ್ದರು” ಎಂದು ಆರೋಪಿಸಿದ ಅವರು, “ಆದರೆ ಜನರು ನಮ್ಮ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬಲ ನೀಡಿದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಮೋದಿ. 
ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಮೋದಿ. 

“ಚುನಾವಣೆ ಬರುತ್ತವೆ, ಹೋಗುತ್ತವೆ. ಆದರೆ ಚುನಾವಣೆ ಹೆಸರಲ್ಲಿ ದೇಶದ ಮೂಲಭೂತ ಆಶಯಗಳಿಗೆ ಹೊಡೆತ ನೀಡುವುದು ಅತ್ಯಂತ ಕೆಟ್ಟ ನಡವಳಿಕೆ. 2014ರ ನಂತರ ನಮನ್ನು ಜನರು ಆಶೀರ್ವದಿಸುತ್ತಲೇ ಇದ್ದಾರೆ. ಆದರೆ ನಮ್ಮ ವಿರುದ್ಧ ವಿಪಕ್ಷಗಳು ಸುಳ್ಳುಗಳನ್ನು ಸಾರುತ್ತಿವೆ. ಕರ್ನಾಟಕದಲ್ಲಿ ಕೆಲವರು ನನಗೆ ಅಲ್ಲಿನ ಭಾಷೆ ಬರಲ್ಲ ಎಂದು ಟೀಕಿಸಿದರು. ಆದರೆ ಜನತೆ ಅವನ್ನು ಗಮನಕ್ಕೆ ತೆಗೆದುಕೊಳ್ಳದೆ ನಮಗೆ ಪ್ರೀತಿ ತೋರಿಸಿದ್ದಾರೆ. ಇದೊಂದು ನಮಗೆ ಅದ್ಬುತ ಅನುಭವ. ವಿಘಟನೆ ಶಕ್ತಿಗಳಿಗೆ ಜನರು ಬುದ್ದಿ ಕಲಿಸಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮೋದಿ, ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಲೋಕತಂತ್ರದ ಹತ್ಯೆಯಾಗಿದೆ. ನಾಮಿನೇಶನ್ ನಿಂದ ಹಿಡಿದು ಚುನಾವಣೆ ವರೆಗೂ ಅಲ್ಲಿ ಎಲ್ಲ ವಿಕೃತಗಳೂ ನಡೆದವು. ನಮ್ಮ ನಿರ್ದೋಶಿ ಕಾರ್ಯಕರ್ತರ ಹತ್ಯೆ ನಡೆಯಿತು. ಬಂಗಾಳದ ದೇಶಕ್ಕೆ ಉತ್ತಮ ಸಂಸ್ಕೃತಿ ನೀಡಿದ ನೆಲ. ಆದರೆ ಈಗ ಅಲ್ಲಿ ಮಾರಣ ಹೋಮಗಳು ಮಾತ್ರ ನಡೆಯುತ್ತಿವೆ ಎಂದು ಮೊನ್ನೆ ಬಂಗಾಳ ಸ್ಥಳೀಯ ಚುನಾವಣೆ ವೇಳೆ ನಡೆದ ಹತ್ಯೆಗಳನ್ನು ಮೋದಿ ಖಂಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, “ನಮ್ಮ ಅಭ್ಯರ್ಥಿಗಳು ಭಾರಿ ಬಹುಮತದಿಂದ ಜಯವನ್ನು ದಾಖಲಿಸಿದ್ದಾರೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಕರ್ನಾಟಕದಲ್ಲಿ ಕೆಟ್ಟ ರೀತಿಯಲ್ಲಿ ಚುನಾವಣಾ ಪ್ರಚಾರ ಮಾಡಿತು. ಮತೀಯ ಪಿಎಫ್ಐ, ಎಸ್ ಡಿಬಿಐಗೆ ಬೆಂಬಲ ನೀಡಿತು. ಲಿಂಗಾಯತ ಧರ್ಮಕ್ಕೆ ಕುಮ್ಮಕ್ಕು ನೀಡಿ ಧರ್ಮ ಹೊಡೆಯುವ ಕೆಲಸ ಮಾಡಿತು. ಬಿಜೆಪಿ ಎ.ಸಿ. ಎಸ್.ಟಿ.ಗಳಿಗೆ ಹಿಂಬಡ್ತಿ ನೀಡಿದೆ,” ಎಂದು ಆರೋಪಿದ ಎಂದು ಟೀಕಿಸಿದರು.

ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲ ರೀತಿಯ ಹಣಬಲ ತೋಳ್ಬಲ ಬಳಸಿತು. ಐಟಿ ರೇಡ್ ನಲ್ಲಿ ಕೋಟಿ ಕೋಟಿ ಹಣ ಸಿಕ್ತಾ ಇತ್ತು. ನಮ್ಮನ್ನು ಕಟ್ಟಿಹಾಕಲು ಏನೆಲ್ಲಾ ಮಾಡಿದರೂ ನಾವು ಗೆಲುವಿನ ಹತ್ತಿರ ಬಂದಿದ್ದೇವೆ. ಮೋದಿಜಿ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.