ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಜತೆಜತೆಗೆ ಇನ್ನೂ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಗರಣದ ಬಗ್ಗೆ ದೇಶದ ಸುದ್ದಿ ಮಾಧ್ಯಮಗಳು ಪ್ರತಿನಿತ್ಯ ಒಂದಿಲ್ಲೊಂದು ವಿಷಯವನ್ನಿಡಿದು ಜನರ ಮುಂದೆ ಬರುತ್ತಿವೆ. ತನಿಖೆಯ ಕ್ಷಣಕ್ಷಣದ ಮಾಹಿತಿ, ಸಂಕ್ಷಿಪ್ತ ಸುದ್ದಿ, ವಿವರಣಾತ್ಮಕ ಲೇಖನ, ಅಂಕಣ, ಸ್ಪೆಷಲ್ ಸೀರೀಸ್, ಹೀಗೆ ಹಲವಾರು ನಮೂನೆಗಳಲ್ಲಿ ಹಗರಣದ ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆ. ಈ ಮಧ್ಯೆ ಗಮನ ಸೆಳೆಯುತ್ತಿರುವುದು ಹಗರಣದ ಕುರಿತಾದ ವ್ಯಂಗ್ಯ ಚಿತ್ರಗಳು.

ಹಲವಾರು ಸಾಲುಗಳ ಮಾಹಿತಿಯನ್ನು ಒಂದೊಂದೇ ವ್ಯಂಗ್ಯ ಚಿತ್ರಗಳು ಕಟ್ಟಿಕೊಡುತ್ತವೆ. ಹಗರಣದ ಹಿನ್ನಲೆ, ಮೊತ್ತ, ಆರೋಪಿ, ಹಗರಣ ನಡೆದ ರೀತಿಯನ್ನು ಕಣ್ಣಗೆ ಕಟ್ಟುವಂತೆ ಚಿತ್ರಿಸುವ ಈ ಕಾರ್ಟೂನ್ಗಳು, ಹಾಸ್ಯಪೂರಿತವಾಗಿ ವಿಷಯದ ಅಗಾಧತೆಯನ್ನು ಅರ್ಥ ಮಾಡಿಸುತ್ತವೆ. ಹೀಗೆ ನೀರವ್ ಮೋದಿಯ ಪಿಎನ್ಬಿ ಹಗರಣ ಕುರಿತಂತೆ ಕೆಲವು ಪ್ರಮುಖ ವ್ಯಂಗ್ಯ ಚಿತ್ರಗಳು ಇಲ್ಲಿವೆ…

1. ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಪಿ. ಮೊಹಮ್ಮದ್ರ ವ್ಯಂಗ್ಯ ಚಿತ್ರ.

2. ಇದು ಒನ್ ಇಂಡಿಯಾದಲ್ಲಿನ ವ್ಯಂಗ್ಯ ಚಿತ್ರ. ನೀರವ್ ಮೋದಿಗೆ ಸಾಲ ಕೊಟ್ಟ ಪಿಎನ್ಬಿಯ ಸಧ್ಯದ ಪರಿಸ್ಥಿತಿಯನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ.

3. ಸತೀಶ್ ಆಚಾರ್ಯ ಚಿತ್ರಿಸಿರುವ ವ್ಯಂಗ್ಯ ಚಿತ್ರವಿದು. ಪಿಎನ್ಬಿಗೆ ಮೋಸ ಮಾಡಲು ನೀರವ್ ಮೋದಿ ಬಳಸಿದ ‘ಲೆಟರ್ ಆಫ್ ಅಂಡರ್ಟೇಕಿಂಗ್’ಗಳನ್ನು ಇಲ್ಲಿ ಪ್ರೀತಿಯೊಂದಿಗೆ ಹೋಲಿಕೆ ಮಾಡಿದ್ದಾರೆ.

4. ಮಲಯಾಳ ಮನೋರಮಾದಲ್ಲಿ ಪ್ರಕಟಿತವಾಗಿರುವ ವ್ಯಂಗ್ಯ ಚಿತ್ರವಿದು. ಪ್ರಸ್ತುತ ಭಾರತವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ.

5. ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ನಲ್ಲಿ ದೊರೆತ ವ್ಯಂಗ್ಯ ಚಿತ್ರ. ಅನಾಣ್ಯೀಕರಣ ಮತ್ತು ಹಗರಣ, ಎರಡರ ಹೋಲಿಕೆ ಈ ಚಿತ್ರದಲ್ಲಿದೆ. ಸತೀಶ್ ಆಚಾರ್ಯ ಇದನ್ನು ಚಿತ್ರಿಸಿದ್ದಾರೆ.

6. ಇದು ಸತೀಶ್ ಆಚಾರ್ಯರ ಮತ್ತೊಂದು ವ್ಯಂಗ್ಯ ಚಿತ್ರ. ದೇಶದ ಬ್ಯಾಂಕ್ಗಳು ಅನುಸರಿಸುತ್ತಿರುವ ಬಡವ ಮತ್ತು ಶ್ರೀಮಂತ ಎಂಬ ಧೋರಣೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ.

7. ಈ ಚಿತ್ರ ಸಧ್ಯದ ಹೈಟೆಕ್ ದರೋಡೆಯನ್ನು ಪ್ರತಿಬಿಂಬಿಸುತ್ತದೆ.

8. ಸತೀಶ್ ಆಚಾರ್ಯ ಬರೆದಿರುವ ಈ ಚಿತ್ರ ನೀರವ್ ಮೋದಿ ಹಗರಣದ ಕುರಿತಾಗಿ ನರೇಂದ್ರ ಮೋದಿ ಅನುಸರಿಸುತ್ತಿರುವ ಮೌನ ಧೋರಣೆಯನ್ನು ಚಿತ್ರಿಸುತ್ತದೆ.

9. ಸತೀಶ್ ಆಚಾರ್ಯರ ಈ ಚಿತ್ರ ಸಮಸ್ಯೆಗೆ ಕೊನೆ ಹಾಡುವುದರ ಬದಲು ಹಿಂದಿನ ಸರಕಾರಗಳನ್ನು ದೂರುತ್ತಾ ಕುಳಿತಿರುವ ಮೋದಿ ಸರಕಾರವನ್ನು ವಿಢಂಬಿಸುತ್ತದೆ.

10. ಹೈಟೆಕ್ ಕಳ್ಳತನವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ. ಸತೀಶ್ ಆಚಾರ್ಯರ ಚಿತ್ರವಿದು.

10. ಹೈಟೆಕ್ ಕಳ್ಳತನವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ. ಸತೀಶ್ ಆಚಾರ್ಯರ ಚಿತ್ರವಿದು.

12. ನರೇಂದ್ರ ಮೋದಿಯ ಡಿಜಿಟಲೈಸೇಷನ್ ಮತ್ತು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಈ ಚಿತ್ರ ತಳಕುಹಾಕಿದೆ.