samachara
www.samachara.com
'ಡಿಜಿಟಲ್ ಕಣ್ಗಾವಲು': ಪತ್ರಕರ್ತರಿಗೆ ಎಚ್ಚರಿಕೆ ಪಾಠ ಹೇಳಿದ ಯುನೆಸ್ಕೋ ವರದಿ!
ಮೀಡಿಯಾ 2.0

'ಡಿಜಿಟಲ್ ಕಣ್ಗಾವಲು': ಪತ್ರಕರ್ತರಿಗೆ ಎಚ್ಚರಿಕೆ ಪಾಠ ಹೇಳಿದ ಯುನೆಸ್ಕೋ ವರದಿ!

ನಮ್ಮಲ್ಲಿ ಟಿವಿ ವಾಹಿನಿಗಳಿಂದಾಗಿ ಪತ್ರಿಕೋದ್ಯಮ ಆಗಾಗ್ಗೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಪ್ರಬಲವಾಗಿರುವ ಈ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಪರೀಕ್ಷೆಗೆ ಒಳಗಾಗುತ್ತಿವೆ. ಪತ್ರಿಕೋದ್ಯಮ ಎಂಬುದು ಸಂವಿಧಾನದ 'ಕಾವಲು ನಾಯಿ' ಎಂಬುದು ಹಳೆಯ ತಿಳಿವಳಿಕೆ. ಪತ್ರಿಕೋದ್ಯಮದ ಪಾಲಿಗೆ ಸಾಮಾಜಿಕ ಜಾಲತಾಣಗಳು 'ಕಾವಲು ನಾಯಿ'ಗಳಾಗುತ್ತಿರುವ ದಿನಗಳಿವು. ಸದ್ಯ ನಮ್ಮಲ್ಲಿ ಪತ್ರಿಕೋದ್ಯಮ ಮತ್ತು ನೈತಿಕತೆ ಚರ್ಚೆಗಳು ಸೀಮಿತಗೊಂಡಿವೆ. ಆದರೆ ಪ್ರಪಂಚದಾದ್ಯಂತ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಮಾಹಿತಿ ಮೂಲಗಳ ರಕ್ಷಣೆ ಕುರಿತು ಚರ್ಚೆ ಆರಂಭವಾಗಿದೆ. ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಯುನೆಸ್ಕೋ 'ಪ್ರೊಟೆಕ್ಟಿಂಗ್ ಜರ್ನಲಿಸಂ ಸೋರ್ಸಸ್ ಇನ್ ದಿ ಡಿಜಿಟಲ್ ಏಜ್' ಎಂಬ ಸಂಶೋಧನೆಯೊಂದನ್ನು ನಡೆಸಿತ್ತು. ಇದನ್ನು ಮುನ್ನಡೆಸಿದ ವೊಲ್ಲೊಂಗಾಂಗ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಜೋಲಿ ಪೊಸೆಟ್ಟಿ 'ದಿ ಕನ್ವರ್ಸೇಶನ್'ಗೆ ಲೇಖನವೊಂದನ್ನು ಬರೆದಿದ್ದಾರೆ. ಅದರ ಭಾವಾನುವಾದ ಇಲ್ಲಿದೆ. ಪತ್ರಕರ್ತರು ಹಾಗೂ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ಇದು ಅಗತ್ಯವಾಗಿರುವ ಮಾಹಿತಿ. 
ನಿರ್ಭಯವಾಗಿ ವರದಿ ಮಾಡುವ ಪತ್ರಕರ್ತರ ಸ್ವಾತಂತ್ರ್ಯ ಬಿಸಿಲಿಗಿಟ್ಟ ಮಂಜುಗಡ್ಡೆಯಂತೆ ಕರಗುತ್ತಿದೆ. ಇದಕ್ಕೆ ಸಾಮೂಹಿಕ ಕಣ್ಗಾವಲು ಮತ್ತು ನವ ತಂತ್ರಜ್ಞಾನದ ಯುಗದಲ್ಲಿ ಕೂಡಿಟ್ಟ ಮಾಹಿತಿಗಳೇ ಕಾರಣ.
ಹೀಗಂಥ ವಿಶ್ವಸಂಸ್ಥೆಯ ಅಂಗ ಸಂಸ್ಥೆ 'ಯುನೆಸ್ಕೊ'ಗಾಗಿ ನಾನು ನಡೆಸಿದ 'ಪ್ರೊಟೆಕ್ಟಿಂಗ್ ಜರ್ನಲಿಸಂ ಸೋರ್ಸಸ್ ಇನ್ ದಿ ಡಿಜಿಟಲ್ ಏಜ್' (ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಮಾಹಿತಿ ಮೂಲಗಳ ರಕ್ಷಣೆ) ಎಂಬ ಸಂಶೋಧನೆ ಇದನ್ನು ಪುಷ್ಟೀಕರಿಸಿದೆ.. ಅವ್ಯವಸ್ಥವಾಗಿರುವ ಮಾಹಿತಿ ಕಲೆ ಹಾಕುವ ಸಾವಾಲಿನ ಮಧ್ಯದಲ್ಲಿ ರಾಷ್ಟ್ರೀಯ ಭದ್ರತಾ ಕಾನೂನುಗಳು ಪತ್ರಕರ್ತರ ಪಾಲಿಗೆ ಅಪಾಯಗಳನ್ನು ತಂದೊಡ್ಡುತ್ತಿವೆ. ಆದರೆ ಇದಕ್ಕೆ ಸರಿ ಸಮನಾಗಿ ಪತ್ರಕರ್ತರ ಹಕ್ಕುಗಳನ್ನು ಎತ್ತಿ ಹಿಡಿಯುವ ಕಾನೂನುಗಳು ರೂಪುಗೊಳ್ಳುತ್ತಿಲ್ಲ ಎಂದು ವರದಿ ಹೇಳಿದೆ.2007-15ರ ಮಧ್ಯೆ ವಿಶ್ವದಲ್ಲಿ ಪತ್ರಕರ್ತರ ಮಾಹಿತಿ ಮೂಲಗಳಿಗೆ ಸಂಬಂಧಿಸಿದಂತೆ 121 ದೇಶಗಳ ಕಾನೂನಿನಲ್ಲಾದ ಬದಲಾವಣೆಗಳನ್ನು ಅವಲೋಕನ ಮಾಡಿ ಈ ವರದಿ ಸಿದ್ದಪಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕಂಡು ಬಂದಿದ್ದೇನೆಂದರೆ, ವರದಿಗಾರಿಕೆಯ ಸಮಯದಲ್ಲಿ ನಡೆಸಿದ ಕರೆಗಳು, ಟೆಕ್ಸ್ಟ್ ಮೆಸೇಜ್ ಗಳು ಮತ್ತು ಇಮೇಲ್ ಗಳು ಬಹಿರಂಗವಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳೇ ಈ ರೀತಿ ಸೂಕ್ಷ್ಮ ಮಾಹಿತಿ ಬೆನ್ನು ಬಿದ್ದು ಬಟಾಬಯಲುಗೊಳಿಸಿವೆಮಾತ್ರವಲ್ಲ ಇದೊಂದು ಕ್ರಿಮಿನಲ್ ಅಪರಾಧ, ಭಯೋತ್ಪಾದಕ ಕೃತ್ಯ, ಗೌಪ್ಯ ಮಾಹಿತಿಯ ಸೋರಿಕೆಯ ಎಂದೆಲ್ಲಾ ಹೇಳಿ ಪತ್ರಕರ್ತರ ಮೇಲೆಯೇ ತನಿಖೆಗೆ ಮುಂದಾಗಿವೆ.ಇದರಿಂದ ಹೊರಬರಬೇಕಾದರೆಆನ್ಲೈನ್ ಯುಗದಲ್ಲಿ ವಿಷಲ್ ಬ್ಲೋವರ್ (ಗೌಪ್ಯ ಮಾಹಿತಿ ಸೋರಿಕೆ ಮಾಡುವವರು)ಗಳು ಮತ್ತು ಪತ್ರಕರ್ತರ ಮಾಹಿತಿ ಮೂಲಗಳನ್ನು ರಕ್ಷಿಸುವ ಕಾನೂನುಗಳು ಬೇಕಾಗಿವೆ. ಒಂದೊಮ್ಮೆ ಈ ರೀತಿಯ ಕಾನೂನುಗಳು ಬರದೇ ಹೋದಲ್ಲಿ ಅನಾಮಧೇಯ ವ್ಯಕ್ತಿಗಳನ್ನೇ ಮಾಹಿತಿ ಮೂಲಗಳಾಗಿ ನೆಚ್ಚಿಕೊಂಡು ತನಿಖಾ ಪತ್ರಿಕೊದ್ಯಮ ಳಿಯುವುದು ಕಷ್ಟವಾಗಲಿದೆ.ನವ ತಂತ್ರಜ್ಞಾನ ತಂದೊಡ್ಡಿದ ಸಮಸ್ಯೆಗಳು:ಮೊಬೈಲ್, ಇಮೇಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಸುವ ಯಾವುದೇ ಸಂವಹನಗಳನ್ನು ಸರಕಾರ ಲ್ಲವೇ ಕಾರ್ಪೋರೇಟ್ ಕಣ್ಗಾವಲು ಸಂಸ್ಥೆಗಳು ಬೆನ್ನಟ್ಟಬಹುದು. ಇಂಥ ಸಂದರ್ಭದಲ್ಲಿ ಪತ್ರಕರ್ತರ ಮೂಲಗಳು ಗೌಪ್ಯವಾಗಿ ಉಳಿದುಕೊಳ್ಳುವುದು ಕಷ್ಟವಾಗುತ್ತದೆ.ಅದರಲ್ಲೂ ಭಯೋತ್ಪಾದಕ ವಿರೋಧಿ ಶಾಸಕಾಂಗ ಗೌಪ್ಯ ಮಾಹಿತಿಗಳ ಅಡಿಯಲ್ಲಿ ಎಲ್ಲವನ್ನೂ ಎಳೆದು ತರುವುದರಿಂದ ಪತ್ರಕರ್ತರು ಕೆಲಸ ಮಾಡುವುದೇ ಕಷ್ಟಕರವಾಗಿಪರಿಣಮಿಸಿದೆ. ಹಲವು ಸಂದರ್ಭದಲ್ಲಿ ಪತ್ರಕರರ್ತರನ್ನು ಶಿಕ್ಷೆಗೆ ಒಳಪಡಿಸಿದ ಉದಾಹರಣೆಗಳೂ ಇವೆ.ಈ ಹಿಂದೆ ನ್ಯಾಯಾಲಯಗಳು ಮತ್ತು ಕಾನೂನು ಮಾತ್ರ ಪತ್ರಕರ್ತರ ಗೌಪ್ಯ ಮಾಹಿತಿಗಳ ಮೂಲವನ್ನು ಪ್ರಶ್ನಿಸುತ್ತಿದ್ದರು. ಆದರೆ ಈಗ ಪರಿಸ್ಥತಿ ಬದಲಾಗಿದೆಪ್ರತಿ ವ್ಯಕ್ತಿಯ ಹೆಜ್ಜೆ ಗುರುತುಗಳೂ ಅಲ್ಲಲ್ಲಿ ಉಳಿದು ಬಿಡುತ್ತವೆ. ಮಾಹಿತಿ ತನಿಖಾ ಸಂಸ್ಥೆಗಳ ಕೈ ತಲುಪುತ್ತಲೇ ಇರುತ್ತದೆ. ಈ ಅಪಾಯದಿಂದ ಪತ್ರಕರ್ತರನ್ನು ಬಚಾವ್ ಮಾಡಬೇಕಾಗಿದೆ.ಅಪಾಯ ಹೇಗೆ?: ತ್ತೀಚೆಗೆ ಆಸ್ಟ್ರೇಲಿಯಾ ತನಿಖಾ ಸಂಸ್ಥೆಯ ಅಧಿಕಾರಿಗಳು ಪತ್ರಕರ್ತರೊಬ್ಬರ ಬಳಿ ಇದ್ದ ಮಾಹಿತಿಯನ್ನು ವಾರಂಟ್ ಇಲ್ಲದೆ ಜಾಲಾಡಿದರು. ಇದಕ್ಕೆ ಕಾರಣ ದೇಶದಲ್ಲಿರುವ ಕಾನೂನು. ಇದೇ ರೀತಿಯ ಕಾನೂನು ಭಾರತದಲ್ಲೂ ಇದೆ. ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ಕಂಪೆನಿಗಳು ಬಳಕೆದಾರರ ಸಮಸ್ತ ಮಾಹಿತಿಯನ್ನು ಎರಡು ವರ್ಷ ಕಾಲ ತೆಗೆದಿಡುತ್ತವೆಅನುಮಾನಗಳಿದ್ದಲ್ಲಿ ಇದನ್ನೇ ತನಿಖೆಗೆ ಒಳಪಡಿಸಲಾಗುತ್ತದೆ.ಕೆಲವೇ ದೇಶಗಳಲ್ಲಿ ಮಾತ್ರ ಪತ್ರಕರ್ತರ ಮಾಹಿತಿಗಳನ್ನು ಜಾಲಾಡಲು ಸರಕಾರದ ಸಂಸ್ಥೆಗಳು ವಾರಂಟ್ ಹೊಂದಿರಬೇಕುಆದರೆ ಹಲವು ಸಂದರ್ಭದಲ್ಲಿ ಈ ರೀತಿಯ ವಾರಂಟ್ ಜಾರಿಯಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆಇಲ್ಲದಿರುವುದು ಮಾತ್ರ ವಿಪರ್ಯಾಸ.ಇನ್ನು ವಿವಿಧ ದೇಶಗಳಲ್ಲಿ ಪತ್ರಕರ್ತರ ಮಾಹಿತಿ ಮೂಲಗಳ ಗೌಪ್ಯತೆ ಕಾಪಾಡಲು ಇರುವ ಕಾನೂನುಗಳನ್ನು ತನ್ನ ಮಾನದಂಡಗಳ ಮೂಲಕ ಯುನೆಸ್ಕೋ ಪರಿಶೀಲನೆ ನಡೆಸಿದಾಗ 11 ರಲ್ಲಿ 7 ದೇಶಗಳ ಕಾನೂನುಗಳು ಪತ್ರಕರ್ತರ ಪರವಾಗಿಲ್ಲದಿರುವುದು ಬಹಿರಂಗವಾಗಿದೆ. ಇದು ಪತ್ರಿಕೋದ್ಯಮದ ಪಾಲಿಗೆ ಎಚ್ಚರಿಕೆಯ ಗಂಟೆ.ಮಾಹಿತಿ ಮೂಲಗಳ ರಕ್ಷಣೆಗೆ ಪರದಾಟ:ಆನ್‌ಲೈನ್‌ನಲ್ಲಿ ಯಾರನ್ನು ಸಂಪರ್ಕಿಸುತ್ತೇವೆ ಎಂಬುದನ್ನು ಗುಪ್ತವಾಗಿಡಲು ಪತ್ರಕರ್ತರು ಭಾರೀ ಹರ ಸಾಹಸ ಪಡುತ್ತಾರೆಕೆಲವೊಂದು ಸುರಕ್ಷಿತ ವಿಧಾನದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಮಾಹಿತಿ ಮೂಲಗಳಿಗೆ ಹೇಳುತ್ತಾರೆ. ಆದರೆ ಹೀಗಿದ್ದೂ ಅವರ ಚರಿತ್ರೆ ಒಂದಿಲ್ಲೊಂದು ಕಡೆ ಅಚ್ಚಳಿಯದೆ ಉಳಿಯುತ್ತದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಪ್ರೆಸ್ ಕೌನ್ಸಿಲ್ ಅಧ್ಯಕ್ಷ ಡೇವಿಡ್ ವೆಸ್ಬರ್ಟ್ "ಈ ರೀತಿ ಮಾಹಿತಿಯ ಮೂಲಗಳನ್ನು ಸಂಗ್ರಹಿಸಿಡುವುದು ತನಿಖಾ ಪತ್ರಿಕೋದ್ಯಮಕ್ಕೆ ಎಳ್ಳು ನೀರು ಬಿಡುತ್ತಿದೆ,” ಎಂದಿದ್ದಾರೆ.ಹಲವು ಬಾರಿ ಪತ್ರಕರ್ತರಿಗೆ ತಮ್ಮ ಗೌಪ್ಯ ಮಾಹಿತಿಯ ಮೂಲಗಳನ್ನು ಬಹಿರಂಗ ಪಡೆಸದೇ ಇರುವ ವಕಾಶಗಳಿದ್ದರೂ ಹಿಂಬಾಲಿ ಮೂಲಕ ಸಮಸ್ತ ಮಾಹಿತಿಯ ಕಣಜವನ್ನೇ ಪಡೆದುಕೊಳ್ಳುವ ಅವಕಾಶ ತನಿಖಾ ಸಂಸ್ಥೆಗಳಿಗೆ ಇರುವುದರಿಂದ ಪತ್ರಕರ್ತರು ಏನನ್ನೂ ಮುಚ್ಚಿಡಲಾಗದ ಪರಿಸ್ಥಿತಿ ಸೃಷ್ಠಿಯಾಗಿದೆ. ಇಂಟರ್ನೆಟ್ ಸಂಪರ್ಕ ಪಡೆಯುವವರು, ಸರ್ಜ್ ಎಂಜಿನ್ ಗಳು, ಸಾಮಾಜಿಕ ಜಾಲತಾಣಗಳು, ಫೋನ್ ಸೇವೆ ನೀಡುವ ಕಂಪೆನಿಗಳಲ್ಲಿ ಎಲ್ಲಾ ಮಾಹಿತಿಗಳೂ ಇರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಇವು ಸರಕಾರಿ ಸಂಸ್ಥೆಗಳ ಜತೆ ಕೈ ಜೋಡಿಸಿ ಬಿಡುತ್ತವೆ.ಇನ್ನು ಯುನೆಸ್ಕೋ ಅಧ್ಯಯನಕ್ಕೆ ಸಂದರ್ಶನ ನೀಡಿದ 'ಪ್ರೈವಸಿ ಇಂಟರ್ನ್ಯಾಷನಲ್' ಕಾನೂನು ಅಧಿಕಾರಿ ತೊಮೊಸೊ ಫಾಲ್ಶೆಟ್ಟಾ, “ಇಂಟರ್ನೆಟ್ ಮತ್ತು ಟೆಲಿಕಮ್ಯುನಿಕೇಶನ್ ಕಂಪೆನಿಗಳ ಬಳಿ ಸುಲಭವಾಗಿ ಮಾಹಿತಿ ಜಾಲಾಡುವಂತ ಅವಕಾಶಗಳನ್ನು ಕೊಡಿ ಎಂದು ಕಾನೂನು ಸುವ್ಯವಸ್ಥೆ ಕಾಪಾಡುವ ಕಂಪೆನಿಗಳು ಕೇಳುತ್ತಲೇ ಇರುತ್ತವೆ,” ಎಂದಿದ್ದಾರೆ.ಹೀಗೆ ಪತ್ರಕರ್ತರ ಪ್ರತಿ ಚಲನವಲಗಳೂ ಬಟಾಬಯಲಾಗುವ ಸಮಯ ಬಂದಿದೆ. ಇದರ ಮಧ್ಯೆ ಪತ್ರಿಕೋದ್ಯಮ ಅದರಲ್ಲೂ ತನಿಖಾ ಪತ್ರಿಕೋದ್ಯಮ ನಡೆಸುವುದು ಸವಾಲಿನ ಕೆಲಸವೇ ಸರಿ.
ಕೃಪೆ: ದಿ ಕನ್ವರ್ಸೇಶನ್