samachara
www.samachara.com
‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!
ಮೀಡಿಯಾ 2.0

‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!

ಹ್ಯೂ ಹೆಫ್ನರ್ ಮನೆ ಮಾರಾಟಕ್ಕಿದೆ ಎಂಬ ಸುದ್ದಿ ಇದೇ ಜನವರಿಯಲ್ಲಿ ಹೊರಬೀಳುತ್ತಿದ್ದಂತೆ ‘ಪ್ಲೇ ಬಾಯ್ ಮ್ಯಾನ್ಶನ್’ ಸುತ್ತ ರಂಗು ರಂಗಿನ ಕತೆಗಳು ಹುಟ್ಟಿಕೊಳ್ಳುತ್ತಿವೆ.

Summary

ಹ್ಯೂ ಬದುಕಿದ ರೀತಿಯೇ ಹಾಗಿದೆ. ಅದು ಮನುಷ್ಯನ ಒಳಗೆ ಹುದುಗಿರುವ ಲೈಂಗಿಕತೆ ಎಂಬ ಕಾಂಕ್ಷೆಯೊಂದಕ್ಕೆ ಬಾಹ್ಯ ಪ್ರದರ್ಶನ ರೂಪ ನೀಡಿ ಅನಾವರಣಗೊಳಿದ ‘ರೆಬಲ್’ ಆತ. ಹ್ಯೂ ಹೆಫ್ನರ್ ಹುಟ್ಟಿದ್ದು 1926ರ ಏಪ್ರಿಲ್ ತಿಂಗಳಿನಲ್ಲಿ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಆತನ ತಂದೆ ತಾಯಿ ಶಿಕ್ಷಕರಾಗಿದ್ದವರು. ಮಗ ಬುದ್ಧಿವಂತ; ಮನಶಾಸ್ತ್ರದಲ್ಲಿ ಪದವಿ ಮುಗಿಸಿದ. ಮುಂದೆ ಎರಡನೇ ಮಹಾಯುದ್ಧದ ವೇಳೆಗೆ ಮಿಲಿಟರಿ ವಾರ್ತಾ ಪತ್ರಕ್ಕಾಗಿ ಕೆಲಸ ಮಾಡಿದ. ಯುದ್ಧ ಮುಗಿದ ನಂತರ ‘ಎಸ್ಕೇರ್’ ಎಂಬ ಮ್ಯಾಗ್ಸಿನ್ ಸೇರಿಕೊಂಡ. ಅಲ್ಲಿ ಐದು ಡಾಲರ್ ಸಂಬಳ ಹೆಚ್ಚು ಮಾಡಲಿಲ್ಲ ಎಂದು ಮುನಿಸಿಕೊಂಡು ಕೆಲಸ ಬಿಟ್ಟ. ತನ್ನ ಮನೆಯಲ್ಲಿದ್ದ ಪೀಠೋಪರಣಗಳನ್ನು ಮಾರಿ ಒಂದಷ್ಟು ದುಡ್ಡು ಕೈಲಿ ಹಿಡಿದುಕೊಂಡು ಹೊಸ ಸಾಹಸ ಮಾಡಲು ಮುಂದಾದ. ಅವು ಪತ್ರಿಕೋದ್ಯಮದ ಸಾಹಸಗಳು. ಅವತ್ತಿಗೆ ಯಾರಿಗೂ ಹ್ಯೂ ಹೆಫ್ನರ್ ಏನಾದರೂ ಮಾಡಬಲ್ಲ ಎಂಬ ನಂಬಿಕೆ ಇರಲಿಲ್ಲ; ಆತನ ತಾಯಿಗೂ ಕೂಡ. ಆದರೂ ಆಕೆ ಮಗನಿಗೆ ಒಂದು ಸಾವಿರ ಡಾಲರ್ ಸಾಲ ನೀಡಿ, ಹೊಸ ಸಾಹಸಕ್ಕೆ ಹರಸಿ ಕಳುಹಿಸಿದಳು. ಹ್ಯೂ ಕೂಡ ಬ್ಯಾಂಕೊಂದರಿಂದ 600 ಡಾಲರ್ ಸಾಲ ಪಡೆದು ತನ್ನ ಮೊದಲ ಪತ್ರಿಕೆಯನ್ನು ಮುದ್ರಿಸಿದ; ಅದು 1953ರ ಡಿಸೆಂಬರ್ ತಿಂಗಳು.ಹೊಸ ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದಂತೆ ಇಡೀ ಅಮೆರಿಕಾವೇ ಬೆಚ್ಚಿ ಬಿದ್ದಿತು.

ಅಮೆರಿಕಾದ ಲಾಸ್ ಆಂಜಲೀಸ್ನಲ್ಲಿರುವ ಹೋಂಬಿ ಹಿಲ್ಸ್ ಬಳಿ ಮನೆಯೊಂದು ಮಾರಾಟಕ್ಕಿದೆ. ಬೆಲೆ 20 ಕೋಟಿ ರೂಪಾಯಿಗಳು. 20 ಸಾವಿರ ಚದರ ಅಡಿಗಳಿಗೆ ಹರಡಿಕೊಂಡಿರುವ ಈ ಬೃಹತ್ ಬಂಗಲೆಯಲ್ಲಿ 29 ಕೊಠಡಿಗಳಿವೆ. ಅತಿಥಿಗಳಿಗಾಗಿ ನಾಲ್ಕು ಪ್ರತ್ಯೇಕ ರೂಮುಗಳಿವೆ. ಖಾಸಗಿ ಪ್ರಾಣಿ ಸಂಗ್ರಹಾಲಯಕ್ಕೆ ವಿಶೇಷ ಅನುಮತಿಯೂ ಇದೆ. ಇವತ್ತು ಅಮೆರಿಕಾದ ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟಕ್ಕಿರುವ ದುಬಾರಿ ಮನೆಯಿದು. ನಿಮಗೆ, ಹೀಗೆ ಹೇಳುವುದಕ್ಕಿಂತ ಈ ಮನೆಯನ್ನು ‘ಪ್ಲೇ ಬಾಯ್ ಮ್ಯಾನ್ಶನ್’ ಎಂದು ಕರೆಯುತ್ತಾರೆ ಎಂದು ಹೇಳುವುದೇ ಸೂಕ್ತ.

ನಿಜ, ಇದು ಜಗತ್ತಿನ ಪತ್ರಿಕೋದ್ಯಮಕ್ಕೆ ಬೆತ್ತಲೆ ಚಿತ್ರಗಳ ಮೂಲಕ ಹೊಸ ಆಯಾಮವನ್ನೇ ನೀಡಿದ ಹ್ಯೂ ಹೆಫ್ನರ್ ಮನೆ ಇದು; ಆತನಿಗೀಗ 89 ವರ್ಷ.ಈ ಮನೆಯನ್ನು ಕೊಳ್ಳುವವರು 20 ಕೋಟಿ ಕೊಟ್ಟರೆ ಸಾಲುವುದಿಲ್ಲ. ಜತೆಗೆ ವಯಸ್ಸಾದ ಹ್ಯೂ ಹೆಫ್ನರ್ ಇರುವವರೆಗೂ ಆತನಿಗೆ ಅಲ್ಲಿ ತನ್ನ ಬದುಕನ್ನು ಮುಂದುವರಿಸಲು ಅವಕಾಶ ನೀಡಬೇಕು. ಮನೆ ಮಾರಾಟಕ್ಕೆ ಮುಂಚೆ ವಿಧಿಸಿರುವ ಷರತ್ತು ಇದು. ಹ್ಯೂ ಹೆಫ್ನರ್ ಮನೆ ಮಾರಾಟಕ್ಕಿದೆ ಎಂಬ ಸುದ್ದಿ ಇದೇ ಜನವರಿಯಲ್ಲಿ ಹೊರಬೀಳುತ್ತಿದ್ದಂತೆ ‘ಪ್ಲೇ ಬಾಯ್ ಮ್ಯಾನ್ಶನ್’ ಸುತ್ತ ರಂಗು ರಂಗಿನ ಕತೆಗಳು ಹುಟ್ಟಿಕೊಳ್ಳುತ್ತಿವೆ. ಜತೆಗೆ, ಮನೆಯ ವಾಸ್ತುವಿನಿಂದ ಶುರುವಾಗಿ, 1980ರ ನಂತರ ಬದಲಾಗದ ಅದರ ಒಳಾಂಗಣದ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

ಲಲನೆಯರಿಗೆ ಒಂದು ಕಾಲದಲ್ಲಿ ಸೂರು ಒದಗಿಸಿದ್ದ ಮನೆಯ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಿರುವವರು ಬೇರೆ ಯಾರೂ ಅಲ್ಲ, ಹ್ಯೂ ಹೆಫ್ನರ್ ನ ಒಂದು ಕಾಲದ ಗೆಳತಿಯರು; ಅದೇ ಮನೆಯಲ್ಲಿ ಆಡಿ ಬೆಳೆದವರು! ‘ಪ್ಲೇ ಬಾಯ್’ ಮ್ಯಾಗ್ಸಿನ್ ಬಗ್ಗೆ ನೀವು ಕೇಳಿರಬಹುದು. ಅದರ ರಸವತ್ತಾದ ಕತೆಗಳನ್ನು ಟಿವಿ ಶೋಗಳಲ್ಲಿ ನೋಡಿರಬಹುದು. ಅಮೆರಿಕಾದ ಆಧುನಿಕ ಇತಿಹಾಸವನ್ನು ನೀವು ಬಲ್ಲವರಾಗಿದ್ದರೆ, ‘ಪ್ಲೇ ಬಾಯ್’ ಮತ್ತದರ ಸೃಷ್ಟಿಕರ್ತನ ಬಗ್ಗೆಯೂ ಒಂದಷ್ಟು ಮಾಹಿತಿ ಇರಬಹುದು. ಹೀಗಿದ್ದೂ, ಹ್ಯೂ ಹೆಫ್ನರ್ ಎಂಬ ಪತ್ರರ್ಕತನ ಬಗೆಗೆ ಇರುವ ಕತೆಗಳು ಖಾಲಿಯಾಗುವುದಿಲ್ಲ.

ಹ್ಯೂ ಬದುಕಿದ ರೀತಿಯೇ ಹಾಗಿದೆ. ಅದು ಮನುಷ್ಯನ ಒಳಗೆ ಹುದುಗಿರುವ ಲೈಂಗಿಕತೆ ಎಂಬ ಕಾಂಕ್ಷೆಯೊಂದಕ್ಕೆ ಬಾಹ್ಯ ಪ್ರದರ್ಶನ ರೂಪ ನೀಡಿ ಅನಾವರಣಗೊಳಿದ ‘ರೆಬಲ್’ ಆತ. ಹ್ಯೂ ಹೆಫ್ನರ್ ಹುಟ್ಟಿದ್ದು 1926ರ ಏಪ್ರಿಲ್ ತಿಂಗಳಿನಲ್ಲಿ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಆತನ ತಂದೆ ತಾಯಿ ಶಿಕ್ಷಕರಾಗಿದ್ದವರು. ಮಗ ಬುದ್ಧಿವಂತ; ಮನಶಾಸ್ತ್ರದಲ್ಲಿ ಪದವಿ ಮುಗಿಸಿದ. ಮುಂದೆ ಎರಡನೇ ಮಹಾಯುದ್ಧದ ವೇಳೆಗೆ ಮಿಲಿಟರಿ ವಾರ್ತಾ ಪತ್ರಕ್ಕಾಗಿ ಕೆಲಸ ಮಾಡಿದ. ಯುದ್ಧ ಮುಗಿದ ನಂತರ ‘ಎಸ್ಕೇರ್’ ಎಂಬ ಮ್ಯಾಗ್ಸಿನ್ ಸೇರಿಕೊಂಡ. ಅಲ್ಲಿ ಐದು ಡಾಲರ್ ಸಂಬಳ ಹೆಚ್ಚು ಮಾಡಲಿಲ್ಲ ಎಂದು ಮುನಿಸಿಕೊಂಡು ಕೆಲಸ ಬಿಟ್ಟ. ತನ್ನ ಮನೆಯಲ್ಲಿದ್ದ ಪೀಠೋಪರಣಗಳನ್ನು ಮಾರಿ ಒಂದಷ್ಟು ದುಡ್ಡು ಕೈಲಿ ಹಿಡಿದುಕೊಂಡು ಹೊಸ ಸಾಹಸ ಮಾಡಲು ಮುಂದಾದ. ಅವು ಪತ್ರಿಕೋದ್ಯಮದ ಸಾಹಸಗಳು. ಅವತ್ತಿಗೆ ಯಾರಿಗೂ ಹ್ಯೂ ಹೆಫ್ನರ್ ಏನಾದರೂ ಮಾಡಬಲ್ಲ ಎಂಬ ನಂಬಿಕೆ ಇರಲಿಲ್ಲ; ಆತನ ತಾಯಿಗೂ ಕೂಡ. ಆದರೂ ಆಕೆ ಮಗನಿಗೆ ಒಂದು ಸಾವಿರ ಡಾಲರ್ ಸಾಲ ನೀಡಿ, ಹೊಸ ಸಾಹಸಕ್ಕೆ ಹರಸಿ ಕಳುಹಿಸಿದಳು. ಹ್ಯೂ ಕೂಡ ಬ್ಯಾಂಕೊಂದರಿಂದ 600 ಡಾಲರ್ ಸಾಲ ಪಡೆದು ತನ್ನ ಮೊದಲ ಪತ್ರಿಕೆಯನ್ನು ಮುದ್ರಿಸಿದ; ಅದು 1953ರ ಡಿಸೆಂಬರ್ ತಿಂಗಳು.ಹೊಸ ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದಂತೆ ಇಡೀ ಅಮೆರಿಕಾವೇ ಬೆಚ್ಚಿ ಬಿದ್ದಿತು.

‘ಪ್ಲೇ ಬಾಯ್’ ಪತ್ರಿಕೆಯ ಮುಖಪುಟವನ್ನು ಅವತ್ತು ಆವರಿಸಿಕೊಂಡಿದ್ದು ಮರ್ಲಿನ್ ಮನ್ರೂ ಎಂಬ ಬೆಡಗಿಯ ಬೆತ್ತಲೆ ಚಿತ್ರ. ಮನ್ರೂ ಮೋಡಿಗೆ ಅಮೆರಿಕಾ ಸೋತು ಹೋಯಿತು. ‘ಪ್ಲೇ ಬಾಯ್’ನ ಸುಮಾರು 50 ಸಾವಿರ ಪತ್ರಿಗಳು ಮಾರಾಟವಾಗಿದ್ದವು. ಅಲ್ಲಿಂದ ಮುಂದೆ ಹ್ಯೂ ಹೆಫ್ನರ್ ತಿರುಗಿ ನೋಡಲಿಲ್ಲ. ತನ್ನದೇ ಹಾದಿಯಲ್ಲಿ ತನಗೆ ಸರಿ ಅನ್ನಿಸಿದ ಪತ್ರಿಕೋದ್ಯಮವನ್ನು ಆತ ಮುಂದುವರಿಸಿದ. ಮಧ್ಯದಲ್ಲಿ ಅಮೆರಿಕಾದ ಪೋಸ್ಟಲ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಬೆತ್ತಲೆ ಚಿತ್ರಗಳನ್ನು ಹಂಚಿದ ಆರೋಪದ ಮೇಲೆ ಬಂಧಿತನಾದನಾದರೂ, ನ್ಯಾಯಾಲಯದಲ್ಲಿ ಆರೋಪ ಉಳಿದುಕೊಳ್ಳಲಿಲ್ಲ.

ಅಷ್ಟೊತ್ತಿಗಾಗಲೇ ಅಮೆರಿಕಾ, ‘ಸೆಕ್ಸ್ ರೆವೆಲ್ಯೂಷನ್’ ಎಂಬ ಜ್ವರವನ್ನು ಏರಿಸಿಕೊಂಡಿತ್ತು. ದೇಶ ಲೈಂಗಿಕತೆ ಕುರಿತು ಹೊಸ ಬಗೆಯಲ್ಲಿ ಆಲೋಚನೆ ಮಾಡಲು ಶುರು ಮಾಡಿತ್ತು. ‘ಹಿಪ್ಪಿ ಚಳವಳಿ’ ಎಂದು ಇವತ್ತು ಗುರುತಿಸುವ ವಿನೂತನ ಟ್ರೆಂಡ್ ಒಂದು ಹುಟ್ಟಿಕೊಂಡಾಗಿತ್ತು.ಇಂತಹ ವೇಳೆಯಲ್ಲೇ ಹ್ಯೂ ಹೆಫ್ನರ್, ತನ್ನ ‘ಪ್ಲೇ ಬಾಯ್’ ಮಾಗ್ಸಿನ್ ಮೂಲಕ ಜನರಲ್ಲಿ ಸುಪ್ತವಾಗಿದ್ದ ಲೈಂಗಿಕ ಭಾವನೆಗಳಿಗೆ ಹೊಸ ಆಯಾಮವನ್ನೇ ನೀಡಿದ್ದ. ಅದರ ಜತೆಗೆ ತನ್ನ ಖಾಸಗಿ ಬದುಕಿನಲ್ಲೂ ಇರಬೇಕಾದ ಎಲ್ಲೆಗಳನ್ನು ಮೀರಿ ಬದುಕುವುದನ್ನು ಆತ ಕಂಡುಕೊಂಡಿದ್ದ. “ಜಗತ್ತಿನಲ್ಲಿ ಬದಲಾವಣೆಯಾಗುವದಕ್ಕೆ ಮೂಲ ಕಾರಣ ಧರ್ಮವಲ್ಲ; ಬದಲಿಗೆ ಕಾಮ,’’ ಎಂದವನು ನಂಬಿಕೊಂಡಿದ್ದ ಮತ್ತು ಪ್ರತಿಪಾದಿಸಲು ಶುರು ಮಾಡಿದ್ದ. ಆತನ ಇಂತಹ ಸಿದ್ಧಾಂತಗಳ ಬಗ್ಗೆ ಹ್ಯೂನ ಒಂದು ಕಾಲದ ಗೆಳತಿ, ಇಸಾಬೆಲ್ ಸೈಂಟ್ ಜೇಮ್ಸ್ 2010ರಲ್ಲಿ ‘ಬನ್ನಿ ಟೇಲ್ಸ್’ ಎಂಬ ಪುಸ್ತಕವೊಂದನ್ನು ಬರೆದಳು. ಪುಸ್ತಕದಲ್ಲಿ ‘ಪ್ಲೇ ಬಾಯ್ ಮತ್ತು ಆತನ ಮ್ಯಾನ್ಶನ್’ನ ಅಂತರಂಗದ ಕತೆಗಳನ್ನು ಬಿಚ್ಚಿಡಲಾಯಿತು.

‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!

ಹ್ಯೂ ಹೆಫ್ನರ್ ಅಧಿಕೃತವಾಗಿಯೇ ನಾಲ್ಕು ಮದುವೆಗಳನ್ನು ಆದ. ಆತನ ಕೊನೆಯ ಮದುವೆ ಕ್ರಿಸ್ಟಲ್ ಹ್ಯಾರಿಸ್ ಎಂಬ ಮಾಡೆಲ್ ಜತೆ. ಆಗ ಆತನಿಗೆ ಆಗ 86; ಆಕೆಗೆ 26 ವರ್ಷ ವಯಸ್ಸಾಗಿತ್ತು. ಆತನ ಗೆಳತಿಯರ ಪಟ್ಟಿ ಮಾಡಿದರೇ ಐನೂರಕ್ಕೂ ಹೆಚ್ಚು ಪದಗಳ ಅಗತ್ಯ ಬೀಳುತ್ತದೆ. ಕಾರಣ ಇಷ್ಟೆ, ತನ್ನ ವೃತ್ತಿ ಮತ್ತು ಖಾಸಗಿ ಬದುಕಿನ ನಡುವೆ ಹೆಫ್ನರ್ಗೆ ಹೆಚ್ಚಿನ ಅಂತರಗಳಿರಲಿಲ್ಲ. ‘ಪ್ಲೇ ಬಾಯ್’ ಕವರ್ ಪೇಜ್ ಅಲಂಕರಿಸುತ್ತಿದ್ದ ಬಹುತೇಕ ಲಲನೆಯರ ಜತೆ ಆತ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದ ಎಂಬ ವರದಿಗಳಿವೆ. ಇವರೆಲ್ಲರೂ ಇದೇ ‘ಪ್ಲೇ ಬಾಯ್ ಮ್ಯಾನ್ಶನ್’ನಲ್ಲಿ ಒಟ್ಟಿಗೆ ಬದುಕುವುದಕ್ಕೆ ಆತ ಅನುವು ಮಾಡಿಕೊಟ್ಟಿದ್ದ.

“ವಾರಕ್ಕೆ ಒಂದು ಸಾರಿ ಎಲ್ಲರನ್ನೂ ಆತ ತನ್ನ ರೂಮಿಗೆ ಕರೆದು ಒಂದು ಸಾವಿರ ಡಾಲರ್ ಪಾಕೆಟ್ ಮನಿ ನೀಡುತ್ತಿದ್ದ,’’ ಎಂದು ಇಸಾಬೆಲ್ ಆ ದಿನಗಳ ಬಗ್ಗೆ ಬರೆದುಕೊಳ್ಳುತ್ತಾಳೆ.

ಹ್ಯೂ ಹೆಫ್ನರ್ ಬದುಕಿದ ರೀತಿಯೇ ಹಾಗಿತ್ತು. ಅದು ಬದಲಾಗುತ್ತಿದ್ದ ಅಮೆರಿಕಾದ ಮನಸ್ಥಿತಿಯ ಸಂಕೇತದಂತೆ ಕಾಣಿಸುತ್ತಿತ್ತು. ಒಂದು ಕಾಲದ ಸಾಂಪ್ರದಾಯಿಕ ಲೈಂಗಿಕ ಆಲೋಚನೆಗಳನ್ನು ಅಮೆರಿಕಾ ಕಳಚಿಕೊಳ್ಳುತ್ತಿದ್ದ ವೇಳೆಗೆ, ಹ್ಯೂ ಹೆಫ್ನರ್ ಹಾಗೂ ಆತನ ‘ಪ್ಲೇ ಬಾಯ್’ ಜನ್ಮ ತಾಳಿದವು. ಹೊಸ ಬದಲಾವಣೆಯೊಂದು ಸಮಾಜದ ಮೇಲೆ ಗುರುತಿಸುವಂತಹ ಪರಿಣಾಮ ಬೀರಿದೆ ಅಂದರೆ, ಅದರ ಜತೆ ಸಾಮಾಜಿಕ ಚಲನೆಯೂ ಪೂರಕವಾಗಿರಬೇಕು ಎಂಬುದಕ್ಕೆ ಹೆಫ್ನರ್ ಬದುಕೇ ಉದಾಹರಣೆ.ಇವತ್ತಿನ ಅಂತರ್ಜಾಲದ ಯುಗದಲ್ಲಿ ಅಶ್ಲೀಲ ಚಿತ್ರಗಳು ಮುಕ್ತ ಮಾರುಕಟ್ಟೆಯ ಸರಕು. ಆದರೆ, ಪತ್ರಿಕೋದ್ಯಮದಲ್ಲಿ ಹೀಗೊಂದು ಬೆಳವಣಿಗೆಯನ್ನು ಮೊದಲು ಗ್ರಹಿಸಿದ್ದು ಹ್ಯೂ ಹೆಫ್ನರ್. ಬಹುಶಃ ಆ ಕಾರಣಕ್ಕೆ ಆತ ಬದುಕಿನ ಬಂಗಲೆ ಇವತ್ತು ಮಾರಾಟಕ್ಕೆ ಇದೆ; ಅದೂ 20 ಕೋಟಿ ರೂಪಾಯಿಗೆ…!

  • photos: Internet