samachara
www.samachara.com
ಬಾಲ್ಯದ ನೆನಪುಗಳು ಹಾಗೂ ಪತ್ರಕರ್ತೆ ಬಿಚ್ಚಿಟ್ಟ ಭಯಾನಕ ಕತೆ!
ಮೀಡಿಯಾ 2.0

ಬಾಲ್ಯದ ನೆನಪುಗಳು ಹಾಗೂ ಪತ್ರಕರ್ತೆ ಬಿಚ್ಚಿಟ್ಟ ಭಯಾನಕ ಕತೆ!

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

Summary

ಅಲ್ ಜಝೀರಾ, ಸಿಎನ್ಎನ್ ಹಾಗೂ ವೈಸ್ ನ್ಯೂಸ್ ಚಾನಲ್ಗಳಿಗಾಗಿ ಏಷಿಯಾದಿಂದ ನ್ಯೂಸ್ ಫಿಲ್ಮ್ಗಳನ್ನು ತಯಾರಿಸುತ್ತಿದ್ದಾಳೆ.ಇತ್ತೀಚೆಗೆ, ‘ಟೂ ಯಂಗ್ ಟು ವೆಡ್’ ಎಂಬ ಸಾಕ್ಷ್ಯ ಚಿತ್ರದ ಮೂಲಕ ಬಾಂಗ್ಲ ಬಾಲ್ಯ ವಿವಾಹ ಸಾಂಪ್ರದಾಯಿಕ ಮನಸ್ಥಿತಿಯನ್ನು ಜಗತ್ತಿನ ಮುಂದೆ ಈಕೆ ತೆರೆದಿಟ್ಟಿದ್ದಾಳೆ. ಈ ನ್ಯೂಸ್ ಫಿಲ್ಮ್ ಶೂಟಿಂಗ್ ಹೋದಾಗ ಆಕೆಯ ಮನಸ್ಥಿತಿ ಏನಾಗಿತ್ತು? ಅದಕ್ಕೆ ಪ್ರೇರಣೆ ನೀಡಿದ ಆಕೆಯ ಬಾಲ್ಯದ ನೆನಪುಗಳು ಯಾವವು? ಪತ್ರಕರ್ತೆಯಾಗಿ ಆಕೆಯ ಅನುಭವಗಳೇನು? ಮತ್ತಿತರ ಅಂಶಗಳನ್ನು ಆಕೆ ಬರೆದುಕೊಂಡಿದ್ದಾಳೆ. ಅದರ ಭಾವಾನುವಾದ ಇಲ್ಲಿದೆ. ಓವರ್ ಟು ತಾನಿಯಾ ರಶೀದ್…

ಪತ್ರಕರ್ತರಿಗೆ ಸಂವೇದನೆ ಇರಬೇಕು. ಇದ್ದರೆ, ಹೇಗೆಲ್ಲಾ ಸುದ್ದಿಗಳನ್ನು ಅರಸಬಹುದು ಎಂಬುದಕ್ಕೆ ತಾನಿಯಾ ರಶೀದ್ ಮಾದರಿ.

ಬಾಂಗ್ಲದೇಶದಲ್ಲಿ ಬಾಲ್ಯಗಳನ್ನು ಕಳೆದ ತಾನಿಯಾ ಹುಟ್ಟಿದ್ದು ಸೌದಿ ಅರೇಬಿಯಾದ ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದಲ್ಲಿ. ಬಾಂಗ್ಲದಲ್ಲಿ ಬಾಲ್ಯದ ನೆನಪುಗಳನ್ನು ಕಟ್ಟಿಕೊಳ್ಳುತ್ತಿದ್ದಾಗಲೇ ಆಕೆ ಕುಟುಂಬ ಅಮೆರಿಕಾಗೆ ವಲಸೆ ಹೋಯಿತು. ಅಲ್ಲಿ ಇತಿಹಾಸದ ಪದವಿ ಮುಗಿಸಿದ ತಕ್ಷಣ ‘ಆಲ್ ಗೋರ್ ಮಾಧ್ಯಮ ಸಮೂಹ’ದಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಿದಳು. ನಂತರ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಅಭ್ಯಾಸ ಮುಗಿಸಿ, ಸದ್ಯ ಸ್ವತಂತ್ರವಾಗಿ ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಿದ್ದಾಳೆ.

ಅಲ್ ಜಝೀರಾ, ಸಿಎನ್ಎನ್ ಹಾಗೂ ವೈಸ್ ನ್ಯೂಸ್ ಚಾನಲ್ಗಳಿಗಾಗಿ ಏಷಿಯಾದಿಂದ ನ್ಯೂಸ್ ಫಿಲ್ಮ್ಗಳನ್ನು ತಯಾರಿಸುತ್ತಿದ್ದಾಳೆ.ಇತ್ತೀಚೆಗೆ, ‘ಟೂ ಯಂಗ್ ಟು ವೆಡ್’ ಎಂಬ ಸಾಕ್ಷ್ಯ ಚಿತ್ರದ ಮೂಲಕ ಬಾಂಗ್ಲ ಬಾಲ್ಯ ವಿವಾಹ ಸಾಂಪ್ರದಾಯಿಕ ಮನಸ್ಥಿತಿಯನ್ನು ಜಗತ್ತಿನ ಮುಂದೆ ಈಕೆ ತೆರೆದಿಟ್ಟಿದ್ದಾಳೆ. ಈ ನ್ಯೂಸ್ ಫಿಲ್ಮ್ ಶೂಟಿಂಗ್ ಹೋದಾಗ ಆಕೆಯ ಮನಸ್ಥಿತಿ ಏನಾಗಿತ್ತು? ಅದಕ್ಕೆ ಪ್ರೇರಣೆ ನೀಡಿದ ಆಕೆಯ ಬಾಲ್ಯದ ನೆನಪುಗಳು ಯಾವವು? ಪತ್ರಕರ್ತೆಯಾಗಿ ಆಕೆಯ ಅನುಭವಗಳೇನು? ಮತ್ತಿತರ ಅಂಶಗಳನ್ನು ಆಕೆ ಬರೆದುಕೊಂಡಿದ್ದಾಳೆ. ಅದರ ಭಾವಾನುವಾದ ಇಲ್ಲಿದೆ. ಓವರ್ ಟು ತಾನಿಯಾ ರಶೀದ್…

ಬಾಲ್ಯದ ನೆನಪುಗಳು ಹಾಗೂ ಪತ್ರಕರ್ತೆ ಬಿಚ್ಚಿಟ್ಟ ಭಯಾನಕ ಕತೆ!
“ನಾನು ಬೆಳೆದಿದ್ದು ಬಾಂಗ್ಲದೇಶದಲ್ಲಿ. ಶಾಲೆಗೆ ಹೋಗುವುದು ಓಕೆ. ಆದ್ರೆ ಸರಿಯಾಗಿ ಓದದಿದ್ರೆ, ಶ್ರೀಮಂತ ವರನನ್ನು ನೋಡಿ ಮದುವೆ ಮಾಡಿಕೊಡುವುದಾಗಿ ನಾನು ಚಿಕ್ಕವಳಿದ್ದಾಗ ಅಮ್ಮ ಹೇಳುತ್ತಿದ್ದಳು. ಇದು ತುಂಬಾ ವರ್ಷಗಳ ಹಿಂದಿನ ಮಾತು. ಆದರೆ ಇವತ್ತಿಗೂ ಅದರ ನೆನಪು ಆಗಾಗ್ಗೆ ಕಾಡುತ್ತಿರುತ್ತದೆ. ನನ್ನನ್ನು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಡಬೇಕು ಎಂದು ಬಯಸುತ್ತಿದ್ದ ನನ್ನ ಅನೇಕ ಸಂಬಂಧಿಕರಲ್ಲಿ ಅಮ್ಮ ಕೂಡ ಒಬ್ಬಳಷ್ಟೆ.ನನ್ನ ಅಜ್ಜನಿಗೆ ನನ್ನನ್ನು ಸಂಬಂಧಿಕನೊಬ್ಬನಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಆಲೋಚನೆ ಇತ್ತು. ಆಗ ಅವನು ನನಗಿಂತ 20 ವರ್ಷ ದೊಡ್ಡವನಾಗಿದ್ದ. ಆದರೆ ತೀರಿಕೊಂಡ ಕಾರಣ ನನ್ನ ಮದುವೆಯಾಗುವ ಅವಕಾಶ ತಪ್ಪಿಸಿಕೊಂಡಿದ್ದ. ಬಾಂಗ್ಲದೇಶದಲ್ಲಿ ಇಂತಹ ಬಾಲ್ಯ ವಿವಾಹಗಳು ಕುಟುಂಬದ ಮರ್ಯಾದೆಯನ್ನು ಕಾಪಾಡುವ ಹಾಗೂ ಮಹಿಳೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಹಂಬಲದಿಂದಾಗಿ ನಡೆದುಕೊಂಡು ಬರುತ್ತಿವೆ. ಅಲ್ಲಿನ ಸಂಪ್ರದಾಯದ ಭಾಗವಾಗಿರುವ ಇವು ರೂಢಿಯಲ್ಲಿವೆ.ಆದರೆ, ನಾನು ಮಾತ್ರ ಈ ಹಣೆಬರಹಕ್ಕೆ ಒಗ್ಗಿ ಬರಲಿಲ್ಲ. ನಾನು ಚಿಕ್ಕವಳಿರುವಾಗಲೇ ನನ್ನ ಕುಟುಂಬ ಅಮೆರಿಕಾದ ಲಾಸ್ ಆಂಜಲೀಸ್ಗೆ ವಲಸೆ ಬಂತು.ಹೀಗಾಗಿ, ಅಲ್ಲಿಗಿಂತ ಭಿನ್ನವಾದ ಪ್ರಪಂಚಕ್ಕೆ ನಾನು ತೆರೆದುಕೊಂಡೆ. ನನ್ನ ಕುಟುಂಬದ ಆಚರಣೆಗಳನ್ನು ಪ್ರಶ್ನಿಸುವ ವಾತಾವರಣ ಶುರುವಾಗಿತು; ನಾನು ರೆಬಲ್ ಆಗಿದ್ದೆ. ಇದು ನನ್ನ ಬಾಂಗ್ಲದೇಶಿ ಪೋಷಕರಿಗೆ ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಯಿತು.ನನಗೆ ಕುಟುಂಬದ ಆಲೋಚನೆಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಲ್ಲಿ ಅವರದ್ದೇ ಕಟ್ಟುಪಾಡುಗಳಿದ್ದವು. ನಾನು ಶಾಲೆಯಲ್ಲಿ ಒಳ್ಳೆಯ ಅಂಕ ಗಳಿಸಬೇಕು, ಹುಡುಗರಿಂದ ದೂರ ಇರಬೇಕು, ಖುರಾನ್ ಪಠಿಸಬೇಕು ಹಾಗೂ ಮೈ ತುಂಬ ಬಟ್ಟೆ ಹಾಕಿಕೊಳ್ಳಬೇಕು ಎಂಬ ಚೌಕಟ್ಟುಗಳು. ನಾನು ಕದ್ದು ತಂದಿಟ್ಟುಕೊಳ್ಳುತ್ತಿದ್ದ ಟಾಪ್ ಹಾಗೂ ಪ್ಯಾಂಟ್ಗಳನ್ನು ಅಮ್ಮ ಕೆಲವೊಮ್ಮೆ ಮನೆಯಿಂದ ಹೊರಕ್ಕೆ ಎಸೆಯುತ್ತಿದ್ದರು.ನಾನು ಹಾಕುವ ಪ್ಯಾಂಟ್ ಮೈಗೆ ಅಂಟಿದಂತೆ ಇರುತ್ತದೆ. ನಾನು ಹಿಂದೂ ಹುಡುಗನೊಬ್ಬನ ಜತೆ ಓಡಾಡುವ ಮೂಲಕ ಕುಟುಂಬ ಮರ್ಯಾದೆ ಕಳೆಯುತ್ತಿದ್ದೇನೆ ಎಂದು ನನ್ನ ಅಂಕಲ್ ಒಬ್ಬರು ಹೇಳಿದ ದಿನ ನೆನಪಿದೆ. ಅವತ್ತು ನಾನು ಅವರ ಮುಖಕ್ಕೆ ಹೊಡೆದಂತೆ ಮಾತನಾಡಿದ್ದೆ. ಆದರೆ ನಾನು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿ ಆತ ನನ್ನನ್ನು ಹತೋಟಿಗೆ ತೆಗೆದುಕೊಳ್ಳಲು ಬೇರೆಯದ್ದೇ ಯೋಜನೆ ಹಾಕಿಕೊಂಡಿದ್ದ.ನನ್ನ ಚಿಕ್ಕಮ್ಮ 40 ವರ್ಷದ ಶ್ರೀಮಂತನೊಬ್ಬ ಮದುವೆಯಾಗಲು ಚಿಕ್ಕ ವಯಸ್ಸಿನ ಹುಡುಗಿ ಹುಡುಕುತ್ತಿದ್ದಾನೆ ಎಂಬುದನ್ನು ಗೊತ್ತು ಮಾಡಿಕೊಂಡರು. ನನಗಾಗ 16 ವರ್ಷ. ನನ್ನ ಚಿಕ್ಕಪ್ಪ ಆತನಿಗೆ ನನ್ನ ಜತೆ ಮದುವೆ ಮಾಡಿಸಿಯೇ ತೀರಬೇಕು ಎಂದು ನಿರ್ಧರಿಸಿ ಬಿಟ್ಟಿದ್ದ.ಒಮ್ಮೆ ಇದ್ದಕ್ಕಿದ್ದಂತೆ ಕೆನಡಾದಲ್ಲಿದ್ದ ನನ್ನ ಸಂಬಂಧಿಕರ ಮನೆಗೆ ನನ್ನನ್ನು ಕಳುಹಿಸಿಕೊಟ್ಟರು. ನಾನು ಅನಿರೀಕ್ಷಿತ ರಜೆ ದಿನಗಳನ್ನು ಕಳೆಯಲು ಹೋಗುತ್ತಿದ್ದೇನೆ ಎಂದುಕೊಂಡಿದ್ದೆ. ಅಲ್ಲಿಗೆ ಹೋದಾಗ ನನ್ನ ಸಂಬಂಧಿಕರು ಬೆಂಗಾಲಿ ಶೈಲಿಯಲ್ಲಿ ಭೂರಿ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು. ಬೊಕ್ಕತಲೆಯ, ದಢೂತಿ, ವಯಸ್ಸಾಗ ವ್ಯಕ್ತಿಯೊಬ್ಬ ಪಕ್ಕದ ಕೋಣೆಯಲ್ಲಿ ಕುಳಿತುಕೊಂಡಿದ್ದ. ಊಟವಾದ ಮೇಲೆ ನನ್ನ ಸಂಬಂಧಿ ನನ್ನೊಬ್ಬಳನ್ನೇ ಆತ ಜತೆ ಬಿಟ್ಟು ಹೊರಗೆ ಹೋದರು. ಆತ ಮಾತನಾಡಲು ಶುರುಮಾಡುತ್ತಿದ್ದಂತೆ ಇಲ್ಲೇನು ನಡೆಯುತ್ತಿದೆ ಎಂಬುದು ನನಗೆ ಗೊತ್ತಾಗಿ ಹೋಯಿತು. ತನ್ನ ಮನೆತನದ ದೊಡ್ಡಸ್ತಿಕೆ, ಹೊಂದಿರುವ ಆಸ್ತಿಗಳ ವಿವರಗಳ ಬಗ್ಗೆ ದೊಡ್ಡ ದೊಡ್ಡ ಮಾತನಾಡತೊಡಗಿದ. ಮುಂದುವರಿದ ಆತ, ಗಂಡಸರಲ್ಲಿ ಏನನ್ನು ಬಯಸುತ್ತೇನೆ ಎಂದು ಪ್ರಶ್ನಿಸಿದ. ನಾನು ಮರಗಟ್ಟಿ ಹೋಗಿದ್ದೆ. ಅವತ್ತು ನಡೆದ ಬಹುತೇಕ ವಿಚಾರಗಳನ್ನು ನಾನು ನೆನಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ. ಇವತ್ತಿಗೆ ನೆನಪಿರುವುದು ಏನು ಎಂದರೆ, ಆತನ ಜತೆಗಿನ ಮಾತುಕತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎದ್ದು ಬಂದಿದ್ದು. ನಂತರ ನಾನು ಮನೆ ಬಿಟ್ಟು ಓಡಿ ಹೋಗಿದ್ದು.ಹೀಗೆ, ಸ್ವಾತಂತ್ರ್ಯ ಗಿಟ್ಟಿಸಿಕೊಂಡ ಕೆಲವೇ ಬಾಂಗ್ಲಾ ಹುಡುಗಿಯರಲ್ಲಿ ನಾನೂ ಒಬ್ಬಳು. ಅಲ್ಲಿ ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದರೂ, ಬಾಂಗ್ಲದೇಶ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಯುನಿಸೆಫ್ ವರದಿ ಪ್ರಕಾರ ಶೇ. 65ರಷ್ಟು ಇಲ್ಲಿನ ಹೆಣ್ಣುಮಕ್ಕಳು ಅವರ ಹದಿನೆಂಟರ ಹುಟ್ಟಹಬ್ಬಕ್ಕೂ ಮುನ್ನವೇ ಮದುವೆಯಾಗುತ್ತಾರೆ. ಶೇ. 29ರಷ್ಟು ಹೆಣ್ಣು ಮಕ್ಕಳನ್ನು 15 ವರ್ಷ ತುಂಬುವ ಮೊದಲೇ ಮದುವೆ ಮಾಡಿಕೊಡಲಾಗುತ್ತಿದೆ.ಕಳೆದ ತಿಂಗಳು ನಾನು ಬಾಂಗ್ಲದೇಶದ ಉತ್ತರ ಭಾಗಗಳಲ್ಲಿ ಓಡಾಡಿದೆ. ದೇಶದ ಅತಿ ಹೆಚ್ಚಿನ ಬಾಲ್ಯ ವಿವಾಹಗಳಿಗೆ ಸಾಕ್ಷಿಯಾಗುತ್ತಿರುವ ಪ್ರದೇಶಗಳವು. ತಲೆಮಾರಿನಿಂದ ತಲೆಮಾರಿನಿಂದ ಇದು ಯಾಕೆ ನಡೆದುಕೊಂಡು ಬರುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿತ್ತು.ಹಾದಿಯಲ್ಲಿ ಎಂಟು ಹುಡುಗಿಯರನ್ನು ಭೇಟಿ ಮಾಡಿದೆ. ಅಲ್ಲಿನ್ನೂ ಬಾಲ್ಯ ಮದುವೆಗಳು ನಿಗೂಢವಾಗಿ, ಕಣ್ಣು ಮುಚ್ಚಿ ಬಿಡುವುದರೊಳಗಾಗಿ ನಡೆದು ಹೋಗುತ್ತವೆ. ನಾನು ಭೇಟಿ ಮಾಡಿದ ಹುಡುಗಿಯರ ಕಣ್ಣುಗಳಲ್ಲಿ ಭಯ ಇಣುಕಾಡುತ್ತಿತ್ತು. ಗೊಂದಲಗೊಂಡ ಮನಸ್ಸು ಮತ್ತು ಕಣ್ಣೀರಿನಿಂದ ಒದ್ದೆಯಾಗಿದ್ದರು. ಗಿರಾಕಿಗಾಗಿ ಸಂತೆಯಲ್ಲಿ ಕಾಯುವ ಹಸುಗಳನ್ನು ಅವರು ನನಗೆ ನೆನಪಿಸಿದರು. ಅವರ ನಿಸ್ಸಾಹಯಕ ಪರಿಸ್ಥಿತಿಯನ್ನು ನೋಡುವುದು ಕಷ್ಟವಾಗುತ್ತಿತ್ತು.ಖದೀಜ ಬೇಗಂ ಅವರಲ್ಲಿ ಒಬ್ಬಳು. ಅವಳ ಮದುವೆ ದಿನವೇ ನಾನು ಭೇಟಿಯಾದೆ. ಅವಳಿಗಾಗ 12 ವರ್ಷ. ಅವಳ ಕುಟುಂಬದಲ್ಲಿ ಬಡತನವಿತ್ತು. ತಂದೆ 30 ವರ್ಷದ ರಿಕ್ಷಾ ಚಾಲಕನೊಬ್ಬನಿಗೆ ವರದಕ್ಷಿಣೆ ನೀಡುವುದಕ್ಕಾಗಿ ಕಷ್ಟಪಟ್ಟು ಹಣವನ್ನು ಸಂಪಾದಿಸಿದ್ದರು. ಅವಳ ಮದುವೆ ದಿನ ಬೆಳಗ್ಗೆಯೇ ಅವಳನ್ನು ಅವಳ ಅಜ್ಜಿಯ ಮನೆಯಲ್ಲಿ ಬಚ್ಚಿಡಲಾಯಿತು. ಸ್ಥಳೀಯ ಅಧಿಕಾರಿಗಳಿಗೆ ಗೊತ್ತಾದರೆ ಕಷ್ಟ ಅಂತ. ನಾನು ಅಲ್ಲಿ ಅವಳನ್ನು ಭೇಟಿ ಮಾಡಿದಾಗ, “ನನಗೆ ಈ ಮದುವೆ ಇಷ್ಟ ಇಲ್ಲ. ಯಾಕೆ ಎಲ್ಲ ಸೇರಿಕೊಂಡು ನನ್ನನ್ನು ಈ ಸ್ಥಿತಿಗೆ ದೂಡುತ್ತಿದ್ದಾರೆ ಎಂದು ಗೊತ್ತಿಲ್ಲ,’’ ಎಂದಳು. ಆಗವಳ ನೋಟ ನೆಲವನ್ನು ದಿಟ್ಟಿಸುತ್ತಿತ್ತು.ಅವಳ ಮುಖದ ಬಳಿ ಹೋಗಿ ಕೈಯಿಂದ ಚಿಟಕಿ ಹೊಡೆದೆ. ಅವಳ ಮುಖದಲ್ಲಿ ನಗು ಅರಳಿತು. ಅವಳಲ್ಲಿದ್ದ ಮಗುವಿನ ಮನಸ್ಸನ್ನು ನಾನು ಕಂಡೆ. ಅವಳ ಬಾಲ್ಯ ಹಾಗೂ ಶಿಕ್ಷಣದ ಕನಸನ್ನು ಅವಳಿಂದ ಕಿತ್ತುಕೊಂಡ ಬಗೆಯನ್ನು ಅರ್ಥಮಾಡಿಕೊಂಡೆ. ನಾನು ನನ್ನ ಸಂಬಂಧಿಕರ ಮನೆಯಿಂದ ತಪ್ಪಿಸಿಕೊಂಡ ಬಂದ ದಿನ ಇದ್ದ ಅಸಹಾಯಕ ಪರಿಸ್ಥಿತಿಯಲ್ಲಿಯೇ ಅವಳೂ ಇದ್ದಳು. ವ್ಯತ್ಯಾಸ ಅಂದರೆ, ಆಕೆ ವಿವಾಹದಿಂದ ತಪ್ಪಿಸಿಕೊಳ್ಳಲಾಗಲಿಲ್ಲ; ಅಷ್ಟೆ. ನಾನು, ‘ಟೂ ಯಂಗ್ ಟು ವೆಡ್’ ನ್ಯೂಸ್ ಫಿಲ್ಮ್ ಶೂಟ್ ಮಾಡುವ ಸಮಯದಲ್ಲಿ ಗಂಡಸರನ್ನು ಮಾತನಾಡಿಸಿದೆ. ಅವರು ಬಾಲ್ಯ ವಿವಾಹದಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಉದಾಹರಣೆಗೆ ಶ್ಯಾಮಲ್ ಎಂಬಾತನ್ನು ತೆಗೆದುಕೊಳ್ಳಿ. ಆತ 25 ವರ್ಷದ ಟೀ ಅಂಗಡಿ ಇಟ್ಟುಕೊಂಡಿರುವ ಯುವಕ. ಅವನು ನೆರೆಹೊರೆಯಲ್ಲಿಯೇ ಬೀಝ್ಲೀ ಎಂಬ ಹುಡುಗಿಯನ್ನು ಮದುವೆಗೆ ಗೊತ್ತುಮಾಡಿಕೊಂಡಿದ್ದ. ಅವಳಿಗೆ ಆಗ 13 ವರ್ಷ. ಆಕೆಯ ಮನೆಯವರು ಕಡಿಮೆ ವರದಕ್ಷಿಣೆ ಕೊಡುತ್ತಿದ್ದರೂ, ಆತ ಆಕೆ ಚಿಕ್ಕ ವಯಸ್ಸಿನವಳು ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದ. ತನ್ನ ಗೆಳೆಯರಿಗೆ ಆಕೆಯ ಫೋಟೊಗಳನ್ನು ತೋರಿಸಿ, ತನ್ನ ಚಿಕ್ಕ ವಯಸ್ಸಿನ ವಧು ಚೆನ್ನಾಗಿ ಕಾಣುತ್ತಾಳಲ್ಲ ಎಂದು ಖಾತ್ರಿ ಪಡಿಸಿಕೊಳ್ಳುತ್ತಿದ್ದನ್ನು ನಾನು ಕಂಡೆ.“ನಾನು ಅವಳ ನಡೆತೆಯನ್ನು ಇಷ್ಟಪಟ್ಟೆ. ಅವಳ ಕನ್ಯೆ. ಬಹುತೇಕ ಹುಡುಗಿಯರು ಹುಡುಗರ ಜತೆ ಸೇರಿತ್ತಾರೆ ಮತ್ತು ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಹುಡುಗಿಯರು ಶಾಲೆಗೆ ಹೋಗಿ ನೇರವಾಗಿ ಮನೆಗೆ ವಾಪಾಸಾಗುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ,’’ ಎಂದು ಶ್ಯಾಮಲ್ ಹೇಳಿದ.ಇದು ಬಡತನ ಮತ್ತು ಅನಕ್ಷರತೆ ಆಚೆಗೆ ಸಾಂಪ್ರದಾಯಿಕವಾಗಿ ಬಂದಿರುವ ಮನಸ್ಥಿತಿ. ನನಗೆ ಅನ್ನಿಸುವುದು ಮಹಿಳೆಯರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ತಂತ್ರ. ನಾನು ಇದಕ್ಕೆ ಬಲಿಯಾಗಲಿಲ್ಲ ಎಂದು ಸಮಾಧಾನವಾಗುತ್ತದೆ. ನನ್ನ ಭವಿಷ್ಯ ನನ್ನ ಕೈಲಿದೆ; ನಾನು ಸ್ವತಂತ್ರಗಳು. ಖಾದೀಜ, ಬೀಝ್ಲೀ ತರಹ ಸಾವಿರಾರು ಹೆಣ್ಣು ಮಕ್ಕಳಿಗೆ ಈ ಭಾಗ್ಯ ಇಲ್ಲ…