samachara
www.samachara.com
LIVE ನಿರೀಕ್ಷೆಗಳ ಮೂಟೆ ಹೊತ್ತ ಮಧ್ಯಂತರ ಬಜೆಟ್‌
LIVE
live

LIVE ನಿರೀಕ್ಷೆಗಳ ಮೂಟೆ ಹೊತ್ತ ಮಧ್ಯಂತರ ಬಜೆಟ್‌

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರೀ ಕುತೂಹಲ ಮೂಡಿಸಿರುವ 2019-20ನೇ ಸಾಲಿನ ಕೇಂದ್ರ ಬಜೆಟ್‌ನ್ನು ವಿತ್ತ ಸಚಿವ ಪಿಯೂಷ್‌ ಗೋಯಲ್‌ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ತೆರಿಗೆ ವಿನಾಯಿತಿ

5 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಿಂದ ಪೂರ್ಣ ವಿನಾಯಿತಿ. ಇತರ ಹೂಡಿಕೆಗಳ ಮೂಲಕ 6.5 ಲಕ್ಷ ಆದಾಯ ಇರುವವರೂ ಪೂರ್ಣ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Last updated

ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

2014-15ರಲ್ಲಿ 6.38 ಲಕ್ಷ ಕೋಟಿ ರೂಪಾಯಿಗಳ ನೇರ ತೆರಿಗೆ ಸಂಗ್ರಹ ಮೊತ್ತ 12 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ತೆರಿಗೆ ಪಾವತಿಸುವವರ ಪ್ರಮಾಣವೂ 3.79 ಕೋಟಿಯಿಂದ 6.85 ಕೋಟಿಗೆ ಏರಿಕೆಯಾಗಿದೆ,

Last updated

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ್‌ ಯೋಜನೆಗೆ ಚಾಲನೆ

ಯೋಜನೆಯ ಪ್ರಕಾರ ಅಸಂಘಟಿತ ವಲಯದ ಕಾರ್ಮಿಕರು ತಿಂಗಳಿಗೆ 100 ರೂಪಾಯಿ ನೀಡುವ ಮೂಲಕ 60 ವರ್ಷಗಳ ನಂತರ ತಿಂಗಳಿಗೆ 3,000 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದಾಗಿದೆ.

Last updated

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ನಿಧಿ

2 ಹೆಕ್ಟೇರ್‌ವರೆಗೆ ಜಮೀನು ಇರುವ ರೈತರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ನೇರವಾಗಿ ಖಾತೆಗೆ ವರ್ಗಾವಣೆ. ಮೂರು ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳಂತೆ ಹಣ ವರ್ಗಾವಣೆ. ಇದರಿಂದ 12 ಕೋಟಿ ರೈತರಿಗೆ ಇದರಿಂದ ಉಪಯೋಗವಾಗಲಿದೆ. ಇದಕ್ಕಾಗಿ 75,000 ಕೋಟಿ ರೂಪಾಯಿಗಳನ್ನು ಸರಕಾರ ಬಜೆಟ್‌ನಲ್ಲಿ ಮೀಸಲಿಡಲಿದೆ.

Last updated

ವಿಪಕ್ಷಗಳ ಗದ್ದಲದ ನಡುವೆ ಬಜೆಟ್‌ ಮಂಡನೆ

ಪಿಯೂಷ್‌ ಗೋಯಲ್‌ ಬಜೆಟ್‌ ಭಾಷಣಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಗದ್ದಲದ ನಡುವೆ ಬಜೆಟ್‌ ಮಂಡನೆ ಮುಂದುವರಿದಿದೆ.

Last updated

ಬಜೆಟ್‌ ಮಂಡನೆ ಆರಂಭಿಸಿದ ಪಿಯೂಷ್‌ ಗೋಯಲ್‌

ವಿತ್ತ ಸಚಿವ ಅರುಣ್‌ ಜೇಟ್ಲಿಯವರನ್ನು ನೆನೆದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಹಂಗಾಮಿ ವಿತ್ತ ಸಚಿವ ಪಿಯೂಷ್‌ ಗೋಯಲ್‌ 2019-20ನೇ ಬಜೆಟ್‌ ಮಂಡನೆ ಆರಂಭಿಸಿದ್ದಾರೆ.

Last updated

ಬಜೆಟ್ ಮಂಡನೆಗೆ ಕ್ಷಣಗಣನೆ

ವಿತ್ತ ಸಚಿವ ಪಿಯೂಷ್‌ ಗೋಯಲ್‌ ಸಂಸತ್‌ ಭವನ ತಲುಪಿದ್ದು 11 ಗಂಟೆಗೆ ಸರಿಯಾಗಿ ಮಧ್ಯಂತರ ಬಜೆಟ್‌ ಮಂಡನೆ ಆರಂಭವಾಗಲಿದೆ.

Last updated