samachara
www.samachara.com
ಸಮ್ಮಿಶ್ರ ಬಜೆಟ್‌; 5 ತಿಂಗಳಲ್ಲಿ 2ನೇ ವಾರ್ಷಿಕ ಆಯವ್ಯಯ ಕಂಡ ಕರ್ನಾಟಕ
LIVE

ಸಮ್ಮಿಶ್ರ ಬಜೆಟ್‌; 5 ತಿಂಗಳಲ್ಲಿ 2ನೇ ವಾರ್ಷಿಕ ಆಯವ್ಯಯ ಕಂಡ ಕರ್ನಾಟಕ

ಸಮ್ಮಿಶ್ರ ಸರಕಾರದ ಒಳಜಗಳಗಳ ಕಾರಣದಿಂದ ಮುಂದೂಡುತ್ತ ಬಂದ ಬಜೆಟ್‌ ಮಂಡನೆ ಜುಲೈ ಇಂದು ನಡೆಯಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದು, ಕ್ಷಣ ಕ್ಷಣ ಲೈವ್‌ ಮಾಹಿತಿಯನ್ನು ‘ಸಮಾಚಾರ’ ನೀಡಲಿದೆ.

ಬಜೆಟ್‌ ಭಾಷಣದ ನೇರ ಪ್ರಸಾರ:

Last updated

ಮೈತ್ರಿ ಸರಕಾರದ ಮೊದಲ ಬಜೆಟ್‌, 42,000 ಕೋಟಿಗಳಷ್ಟು ವಿತ್ತೀಯ ಕೊರತೆ:

ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ ಮಂಡನೆ ಮಾಡಿದ್ದಾರೆ. 2018-19ನೇ ಸಾಲಿನ ಈ ಆಯವ್ಯಯದ ಒಟ್ಟು ಮೌಲ್ಯ 2.18 ಕೋಟಿ ರೂಪಾಯಿಗಳನ್ನು ದಾಟುತ್ತದೆ. ಇದರಲ್ಲಿ 42,000 ಕೋಟಿಗಳಷ್ಟು ವಿತ್ತೀಯ ಕೊರತೆಯನ್ನೂ ಕೂಡ ಸರಕಾರ ಅನುಭವಿಸಲಿದೆ.

ಜಿಡಿಎಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಂಪರ್‌ ಕೊಡುಗೆಗಳನ್ನು ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ಗೆದ್ದ ಕ್ಷೇತ್ರಗಳು ಕೂಡ ಅನುದಾನವನ್ನು ಪಡೆದಿವೆ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದ ಜನತೆಗೆ ಕುಮಾರಸ್ವಾಮಿ ಯಾವ ಅನುದಾನವನ್ನೂ ನೀಡಿಲ್ಲ.

ಒಟ್ಟಾರೆ ಬಜೆಟ್‌ನ ಕುರಿತು ಈ ಸದ್ಯಕ್ಕೆ ಇದು ಆವರೇಜ್‌ ಬಜೆಟ್‌ ಎಂಬ ಅನಿಸಿಕೆಗಳು ವ್ಯಕ್ತವಾಗುತ್ತಿವೆ. ಈವರೆಗೂ ‘ಸಮಾಚಾರ’ ಲೈವ್‌ ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಬಜೆಟ್‌ ಕುರಿತಾದ ವಿಶ್ಲೇಷಣಾ ವರದಿಗಳಿಗಾಗಿ ನಿರೀಕ್ಷಿಸಿ.

Last updated

ಜನರ ಮೇಲೆ ತೆರಿಗೆ ಹೊರೆ:

ಮದ್ಯದ ಮೇಲಿನ ತೆರಿಗೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. ಮೊಟಾರ್‌ ವಾಹನಗಳ ಮೇಲಿನ ತೆರಿಗೆ ಶೇ.50ರಷ್ಟು ಏರಿಕೆಯಾಗಿದೆ. ವಿದ್ಯುತ್‌, ಪೆಟ್ರೋಲ್‌, ಡೀಸೆಲ್‌, ತಂಬಾಕುಗಳ ಮೇಲಿನ ತೆರೆಇಗೆ ಪ್ರಮಾಣವೂ ಕೂಡ ಹೆಚ್ಚಳವಾಗಿದೆ.

Last updated

ಆದಿ ಶಂಕರಾಚಾರ್ಯ ಜಯಂತಿ:

ಶ್ರೀ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿಯ ಮೇರು ವ್ಯಕ್ತಿಯಾದ್ದಾರೆ ಎಂದಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಶಂಕರಾಚಾರ್ಯರ ಜಯಂತಿ ಆಚರಿಸುವುದಾಗಿ ತಿಳಿಸಿದ್ದಾರೆ.

Last updated

ಬೆಟ್ಟ ಗುಡ್ಡಗಳಿಗೆ ಬೇಲಿ ಹಾಕಲು 40 ಕೋಟಿ ರೂ:

ಅರಣ್ಯ ಪ್ರದೇಶ ವೃದ್ಧಿಯಾಗುವ ಸಲುವಾಗಿ ಸರಕಾರಿ ಬಟ್ಟ ಗುಡ್ಡ ಪ್ರದೇಶಗಳಲ್ಲಿ ಮಾನವನ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಬೇಲಿ ಹಾಕಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಇದಕ್ಕಾಗಿ 40 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ.

Last updated

ಬಡ ಬ್ರಾಹ್ಮಣರಿಗೂ ಅನುದಾನ:

ಕುಮಾರಸ್ವಾಮಿ ಬಡ ಬ್ರಾಹ್ಮಣರನ್ನೂ ಕೂಡ ಮರೆತಿಲ್ಲ. ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಗ್ರೀನ್‌ ಸಿಗ್ನಲ್‌ ದೊರೆತಿದೆ.

Last updated

ಮಾತೃಶ್ರೀ ಯೋಜನೆಯಡಿಯಲ್ಲಿ 1,000 ರೂ:

ಕುಮಾರಸ್ವಾಮಿ ತಮ್ಮ ಕನಸಿನ ಮಾತೃಶ್ರೀ ಯೋಜನೆಯನ್ನು ಜಾರಿಗೆ ತರಲು 350 ಕೋಟಿ ರೂ ಅನುದಾನವನ್ನು ಮೀಸಲಿರಿಸಿದೆ. ಪ್ರಸವಪೂರ್ವ 3 ತಿಂಗಳು ಮತ್ತು ಹೆರಿಗೆ ನಂತರ 3 ತಿಂಗಳ ಕಾಲ ಬಿಪಿಎಲ್‌ ಕಾರ್ಡ್ ಹೊಂದಿರುವ ಸ್ತ್ರೀಯರಿಗೆ ಮಾಸಿಕ 1,000 ರೂಪಾಯಿಗಳನ್ನು ನೀಡಲಿದೆ. ಹಂತ ಹಂತವಾಗಿ ಈ ಮೊತ್ತವನ್ನು ಹೆಚ್ಚಿಸಲಾಗುತ್ತದೆ.

Last updated

ಜಿಲ್ಲೆಗೊಂದು ವೃದ್ಧಾಶ್ರಮ:

ಪ್ರತಿ ಜಿಲ್ಲೆಗೆ ಒಂದರಂತೆ ವೃದ್ಧಾಶ್ರಮವನ್ನು ತೆರೆಯಲು ಸರಕಾರ ನಿರ್ಧರಿಸಿದೆ. ವಿಕಲಚೇತನರ ಅಭಿವೃದ್ಧಿಗಾಗಿ ಸರಕಾರ ಯೋಜನೆ ರೂಪಿಸಿದ್ದು, ವಿಕಲ ಚೇತನರ ಕ್ಯಾಂಪಸ್‌ ಹಾಗೂ ವಿಕಲ ಚೇತನರ ಸಾಲವನ್ನು ಮನ್ನಾ ಮಾಡಲು ಸರಕಾರ ನಿರ್ಧರಿಸಿದೆ.

Last updated

ಅನ್ನಭಾಗ್ಯಕ್ಕೆ ಕತ್ತರಿ:

ಸಿದ್ಧರಾಮಯ್ಯರ ಮಹತ್ವಾಕಾಂಕ್ಷೆಯ ಯಾಜನೆ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಇನ್ನು ಮುಂದೆ 7 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಯಷ್ಟೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ದೊರೆಯಲಿದೆ. 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ, 1 ಲಿಟರ್‌ ಪಾಮ್‌ ಎಣ್ಣೆ ಮತ್ತು ಅರ್ಧ ಕೆಜಿ ತೊಗರಿ ಬೇಳೆಯನ್ನು ನೀಡಲು ಸರಕಾರ ನಿರ್ಧರಿಸಿದೆ.

Last updated

ಸರಕಾರಿ ಶಾಲೆಗಳ ವಿಲೀನ:

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿಗಳನ್ನು ತೆರೆಯಲು ನಿರ್ಧರಿಸುವ ಸರಕಾರ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಹತ್ತಿರದ ಶಾಲೆಯ ಜತೆಗೆ ವಿಲೀನಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.

Last updated

ಮಠಗಳಿಗೆ ಬಂಪರ್‌ ಕೊಡುಗೆ:

ರಾಜ್ಯದೊಳಗಿನ ಮಠ ಮಾನ್ಯಗಳಿಗೆ ಸಮ್ಮಿಶ್ರ ಸರಕಾರ ಬಂಪರ್‌ ಕೊಡುಗೆ ನೀಡಿದೆ. ದಾಸೋಹ, ಶಿಕ್ಷಣ, ಅಭಿವೃದ್ಧಿಗಳಿಗಾಗಿ ಶ್ರಮಿಸುತ್ತಿರುವ ಮಠಗಳಿಗೆ 25 ಕೋಟಿ ಅನುದಾನ ನೀಡಲು ಸರಕಾರ ನಿರ್ಧರಿಸಿದೆ.

Last updated

ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ?:

ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7,462 ಕೋಟಿ, ಆರೋಗ್ಯ ಇಲಾಖೆಗೆ 9,317 ಕೋಟಿ, ಪ್ರಾಥಮಿಕ ಶಿಕ್ಷಣಕ್ಕೆ 4,000 ಕೋಟಿ, ಶಿಕ್ಷಣ ಇಲಾಖೆಗೆ 26, 500 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ 14,440 ಕೋಟಿ ರೂಪಾಯಿಗಳು, ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ಅನುದಾನವನ್ನು ನೀಡಲು ಸರಕಾರ ನಿರ್ಧರಿಸಿದೆ.

Last updated

ಅಂಟುವಾಳ ಕಾಯಿ ಬೆಳೆಗೆ 10 ಕೋಟಿ:

ಪರಿಸರ ಸ್ನೇಹಿ ಡಿಟರ್ಜೆಂಟ್‌ಅನ್ನು ಬಳಕೆಗೆ ತರುವ ಉದ್ದೇಶದಿಂದ ಅಂಟುವಾಳ ಕಾಯಿ ಮರಗಳನ್ನು ಹೆಚ್ಚಾಗಿ ಬೆಳೆಸಲು ಸರಕಾರ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ 10 ಕೋಟಿ ರೂಗಳನ್ನು ಮೀಸಲಿರಿಸಿದೆ.

Last updated

ಬೆಳ್ಳಂದೂರು ಕೆರೆಗೆ 50 ಕೋಟಿ:

ಬೆಂಕಿ ಹೊತ್ತಿ ಉರಿಯುತ್ತಿದ್ದ ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕಾಗಿ ಕುಮಾರಸ್ವಾಮಿ 50 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿದ್ದಾರೆ.

Last updated

ಇಸ್ರೇಲ್‌ ಕೃಷಿ ಮಾದರಿಯ ನೀರಾವರಿಗೆ ಮನ್ನಣೆ:

ಕುಮಾರಸ್ವಾಮಿ ತಮ್ಮ ಕನಸಿನ ಇಸ್ರೇಲ್‌ ಕೃಷಿ ಮಾದರಿನ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದ್ದಾರೆ. ರಾಮನಗರ, ಕೋಲಾರ, ಚಿತ್ರದುರ್ಗ ಇತ್ಯಾದಿ ಕಡೆಗಳಲ್ಲಿ 5,000 ಹೆಕ್ಟೇರ್‌ ಪ್ರದೇಶದಲ್ಲಿ ಈ ನೀರಾವರಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ 150 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.

Last updated

ಚಲನ ಚಿತ್ರ ವಿಶ್ವ ವಿದ್ಯಾಲಯ:

ರಾಜ್ಯದಲ್ಲಿ ಚಲನ ಚಿತ್ರಗಳ ನಿರ್ಮಾಣವನ್ನು ಪೋಷಿಸಲು ರಾಮನಗರದಲ್ಲಿ ಚಲನಚಿತ್ರ ವಿಶ್ವ ವಿದ್ಯಾಲಯವನ್ನು ತೆರೆಯಲು ಸರಕಾರ ನಿರ್ಧರಿಸಿದೆ. ಇದಕ್ಕಾಗಿ 30 ಕೋಟಿ ಅನುದಾನ ಮೀಸಲಿರಿಸಿದೆ.

Last updated

ಎಲ್ಲಾ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್‌:

ರಾಜ್ಯದ ಎಲ್ಲಾ 247 ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯುವ ಉದ್ದೇಶವನ್ನು ಮೈತ್ರಿ ಸರಕಾರ ಹೊಂದಿದೆ. ಮೊಬೈಲ್‌ ಕ್ಯಾಂಟೀನ್‌ಗಳನ್ನೂ ತೆರೆಯುವ ಉದ್ದೇಶವಿದೆ. 211 ಕೋಟಿ ರೂ ವೆಚ್ಚವನ್ನು ಮಾಡಲು ಸಮ್ಮಿಶ್ರ ಸರಕಾರ ನಿರ್ಧರಿಸಿದೆ.

Last updated

ತೈಲಬೆಲೆ ಹೆಚ್ಚಳ:

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ಅನ್ನು ಶೇ.ರಿಂದ ಶೆ.32ಕ್ಕೆ ಏರಿಸಲಾಗಿದೆ. ಪೆಟ್ರೋಲ್‌ ಬೆಲ್ 1.14 ರೂ ಹೆಚ್ಚಲಿದ್ದು, ಡೀಸೆಲ್‌ ಬೆಲೆ 1.12ರೂಪಾಯಿಗಳಷ್ಟು ಹೆಚ್ಚಾಗಲಿದೆ. ವಿದ್ಯುತ್‌ ದರವೂ ಕೂಡ ಹೆಚ್ಚಾಗಿದ್ದು, ಪ್ರತಿ ಯೂನಿಟ್‌ಗೆ 20 ಪೈಸೆ ಜಾಸ್ತಿಯಾಗಲಿದೆ.

Last updated

ರೈತರ ಸಾಲಮನ್ನಾಗೆ 34,000 ಕೋಟಿ:

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ರಾಜ್ಯದ ರೈತರ 34,000 ಕೋಟಿ ಸಾಲದ ಮೊತ್ತವನ್ನು ಮನ್ನ ಮಾಡಲಿದ್ದಾರೆ. ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ.

Last updated

ಕರ್ನಾಟಕ ಮುಂಚೂಣಿ ರಾಜ್ಯ:

ಕರ್ನಾಟಕ ಹಲವಾರು ವಿಷಯಗಳಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ ಇಲ್ಲಿಗೇ ತೃಪ್ತಿ ಪಡದೆ ಇನ್ನಿತರೆ ವಲಯಗಳಲ್ಲೂ ಕೂಡ ಮುಂಚೂಣಿಗೆ ಬರಬೇಕಿದೆ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Last updated

ಮೈತ್ರಿ ಸರಕಾರದ ಪ್ರಥಮ ಮುಂಗಡ ಪತ್ರ:

ಮೈತ್ರಿ ಸರಕಾರದ ಒಲವು ನಿಲುವುಗಳನ್ನು ಈ ಮೈತ್ರಿ ಬಜೆಟ್‌ನಲ್ಲಿ ಒಳಗೊಂಡಿದೆ ಎಂದು ಕುಮಾರಸ್ವಾಮಿ ಬಜೆಟ್‌ ಮಂಡನೆ ಆರಂಭಿಸಿದ್ದಾರೆ. ಬದಲಾಗುತ್ತಿರುವ ರಾಜಕೀಯ ವಾತಾವರಣದಲ್ಲಿ ದೇಶದಲ್ಲಿ ಮೈತ್ರಿ ಸರಕಾರಗಳು ಅನಿವಾರ್ಯವಾಗುತ್ತಿವೆ. ಕರ್ನಾಟಕದಲ್ಲೂ ಹೀಗೇ ಆಗಿದೆ. ನಾವೀಗ ಮೈತ್ರಿ ಸರಕಾರದ ಬಜೆಟ್‌ ಮಂಡಿಸುತ್ತಿದ್ದೇವೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತೇವೆ ಮತ್ತು ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಕೆಲಸ ನಿರ್ವಹಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ ಕುಮಾರಸ್ವಾಮಿ.

Last updated

ವಿಧಾನಸಭೆಗೆ ಆಗಮನ:

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಇದೀಗ ತಾನೇ ವಿಧಾನಸಭೆಗೆ ಅಗಮಿಸಿದ್ದಾರೆ. ಸ್ಫಿಕರ್ ರಮೇಶ್‌ ಕುಮಾರ್‌ 2018-19ನೇ ಸಾಲಿನ ಆಯವ್ಯಯ ಮಂಡಿಸಲಿರುವುದಾಗಿ ಘೋಷಿಸಿದ್ದಾರೆ.

Last updated

ಬಜೆಟ್‌ ಗಾತ್ರ 2.18 ಲಕ್ಷ ಕೋಟಿ?!

ಇಡೀ ರಾಜ್ಯದ ಗಮನ ಈಗ ಕುಮಾರಸ್ವಾಮಿ ಮಂಡಿಸಲಿರುವ ವಾರ್ಷಿಕ ಬಜೆಟ್‌ನತ್ತ ಹರಿದಿದೆ. ಕುಮಾರಸ್ವಾಮಿ ಬರೋಬ್ಬರಿ 2.18 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿಯ ಬಜೆಟ್‌ನ ಒಟ್ಟು ಮೌಲ್ಯ 2.09 ಲಕ್ಷ ಕೋಟಿಗಳಷ್ಟಿತ್ತು.

Last updated

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌:

ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಬೆಳಗ್ಗೆ 11:30ರಿಂದ ಬಜೆಟ್‌ ಮಂಡನೆ ಆರಂಭಿಸಲಿದ್ದಾರೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆ ವಿಧಾನಸೌಧಕ್ಕೆ ಬರುವ ಮುನ್ನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ. ಬಳಿಕ ಗೃಹ ಕಚೇರಿ ಕೃಷ್ಣಾಗೆ ತೆರಳಿ, ಬಜೆಟ್‌ ಪ್ರತಿಯಳ್ಳ ಸೂಟ್‌ಕೇಸ್‌ ಜತೆಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

Last updated