samachara
www.samachara.com
‘ಕೋಡಿದ್ದರೇನು ಬಂತು; ಬದುಕಿಗೆ ಅದೇ ಕಂಟಕ’: ಅಸಲಿ ಘೇಂಡಾ ಮೃಗಗಳ ಉಳಿವಿಗೆ ‘ಶಸ್ತ್ರ ಚಿಕಿತ್ಸೆ’!
ಫೋಕಸ್

‘ಕೋಡಿದ್ದರೇನು ಬಂತು; ಬದುಕಿಗೆ ಅದೇ ಕಂಟಕ’: ಅಸಲಿ ಘೇಂಡಾ ಮೃಗಗಳ ಉಳಿವಿಗೆ ‘ಶಸ್ತ್ರ ಚಿಕಿತ್ಸೆ’!

ಇದು ಅಸಲಿ ಘೆಂಡಾಮೃಗಗಳ ಕತೆ... ವ್ಯಥೆ ಅಂತನಾದರೂ ಅನ್ನಿ. ಇವುಗಳ ಕೋಡಿಗೆ ಇರುವ ಡಿಮ್ಯಾಂಡು ಬದುಕಿಗೇ ಕಂಟಕವಾಗಿ ಪರಿಣಮಿಸಿದೆ. ಅದಕ್ಕಾಗಿ ಕೋಡನ್ನು ತೆಗೆದು ಜೀವಿಸಲು ಅನುವು ಮಾಡಿಕೊಡಲಾಗುತ್ತಿದೆ; ದೂರದ ಆಫ್ರಿಕಾದಲ್ಲಿ. ಕೆಳಗೆ ಚಿತ್ರಗಳಿವೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಮನುಷ್ಯನ ವಿಚಿತ್ರ ಖಯಾಲಿಗಳಿಗೆ ಅಳಿವಿನಂಚಿಗೆ ಬಂದು ನಿಂತಿರುವ ಪ್ರಾಣಿಗಳ ಪೈಕಿ ಘೇಂಡಾಮೃಗಗಳ ಸಂತತಿಯೂ ಒಂದು. ಘೇಂಡಾಮೃಗಗಳ ಸಾಮೂಹಿಕ ಆಹುತಿಗೆ ಕಾರಣವಾಗಿರುವುದು ಅವುಗಳ ಕೋಡು.

ಅದಕ್ಕಾಗಿ ಆಫ್ರಿಕಾದಲ್ಲಿ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ಬಳಸಿ, ಜೀವಂತ ಘೆಂಡಾಮೃಗಗಳ ಕೋಡು (ಕೊಂಬು)ಗಳನ್ನು ತೆಗೆದು, ಬದುಕಲು ಬಿಡುತ್ತಿದ್ದಾರೆ.

ಕೇಳಲು ಭಯಾನಕ ಅನ್ನಿಸುವ ಈ ‘ಪ್ರಾಣಿ ಹಿಂಸೆ’ಯಲ್ಲಿ ರಕ್ತ ಹರಿಯುವುದಿಲ್ಲ. ಪ್ರಾಣಕ್ಕೂ ಅಪಾಯ ಇಲ್ಲ. ಆದರೆ ನಿದ್ದೆಯಿಂದ ಎದ್ದ ಘೇಂಡಾ ಮೃಗ ತನ್ನ ಕೋಡಿಲ್ಲದೆ ಭೂಮಿಯ ಮೇಲೆ ಬದುಕು ಸಾಗಿಸಬೇಕಿದೆ. ಇಷ್ಟಕ್ಕೂ ಘೇಂಡಾ ಮೃಗದ ಕೊಂಬು ತಗೊಂಡು ಯಾರೇನು ಮಾಡುತ್ತಾರೆ ಎಂದರೆ ಅದಕ್ಕೂ ಒಂದು ಜಿಗುಪ್ಸೆ ಮೂಡಿಸುವ ಕಾರಣ ಇದೆ.

ಘೆಂಡಾಮೃಗ ಸಂತತಿ ಕುರಿತು ಬಂದಿರುವ ‘ಸಮಾಚಾರ’ ವರದಿ ಹಾಗೂ ‘ಅಲ್‌ ಜಝೀರಾ’ ಇಂಗ್ಲಿಷ್ ಸುದ್ದಿವಾಹಿನಿಯ ಒಂದು ತನಿಖಾ ವರದಿ ಇಲ್ಲಿವೆ. ಆಸಕ್ತರು ಗಮನಿಸಿ...

ಘೆಂಡಾಮೃಗದ ಕೊಂಬು ಏಕೆ ಬೇಕು?:

ಪಾಶ್ಚಿಮಾತ್ಯ ದೇಶಗಳಲ್ಲಿ ಘೇಂಡಾಮೃಗದ ಕೋಡುಗಳು ಕಾಮವನ್ನು ಉತ್ತೇಜಿಸುತ್ತವೆ ಎಂಬ ನಂಬಿಕೆಯಿದೆ. ಕೋಡುಗಳು ಕಾಮಪ್ರಚೋದಕ ಎನ್ನಲಾಗುತ್ತದೆ. ಈ ಕಾರಣಕ್ಕಾಗಿಯೇ ಘೇಂಡಾ ಮೃಗಗಳ ವಧೆ ನಡೆಯುತ್ತಿದೆ. ಆದರೆ ವೈಜ್ಞಾನಿಕವಾಗಿ ಅದೊಂದು ಶ್ರೀಮಂತ ವರ್ಗದಲ್ಲಿ ಹುಟ್ಟಿಕೊಂಡು ನಂಬಿಕೆ ಅಷ್ಟೆ.

ಘೇಂಡಾ ಮೃಗದ ಕೋಡುಗಳನ್ನು ಹೊಂದಿರುವ ಪ್ರತಿಷ್ಠೆಯ ಸಂಕೇತವೂ ಆಗಿದೆ. ಕೋಡುಗಳನ್ನು ಬಳಸಿ ಹಲವಾರು ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಒಂದು ವರ್ಗದ ಖಯಾಲಿಗಳಿಗಾಗಿ ಈ ಕೋಡನ್ನು ಹೊಂದಿರುವ ಘೇಂಡಾ ಮೃಗಗಳನ್ನು ಬೇಟೆಯಾಡುವ ಮಾಫಿಯಾ ಒಂದು ಬೆಳೆದು ಬಂದಿತ್ತು.

ಘೇಂಡಾಮೃಗಗಳ ಕೋಡಿನಿಂದ ತಯಾರಾದ ಅಲಂಕಾರಿಕ ವಸ್ತುಗಳು.
ಘೇಂಡಾಮೃಗಗಳ ಕೋಡಿನಿಂದ ತಯಾರಾದ ಅಲಂಕಾರಿಕ ವಸ್ತುಗಳು.

ಕಳೆದ ಒಂದು ದಶಕದ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಒಂದರಲ್ಲೇ ಸರಿ ಸುಮಾರು 7,000 ಘೇಂಡಾ ಮೃಗಗಳ ಹತ್ಯೆ ಮಾಡಲಾಗಿದೆ. ಪ್ರತಿವರ್ಷ ಚೀನಾದಲ್ಲಿ 1,000 ಘೇಂಡಾ ಮೃಗಗಳ ಕೋಡುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಕಳೆದ ಮಾರ್ಚ್‌ ತಿಂಗಳಲ್ಲಿ ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗ ಸಾವನ್ನಪ್ಪಿತ್ತು. ‘ಸುಡಾನ್‌’ ಹೆಸರಿನ ಈ ಘೇಂಡಾಮೃಗವನ್ನು ಕೀನ್ಯಾದ ಒಲ್‌ ಪೆಜೆಟಾ ಸಂರಕ್ಷಿತ ಅರಣ್ಯದಾಮದಲ್ಲಿ ಇರಿಸಲಾಗಿತ್ತು. ಸತತ 24 ಗಂಟೆಗಳ ಕಾಲ ಅದರ ಸುತ್ತ ಸಶಸ್ತ್ರ ಸೈನಿಕರು ನಿಂತು ಕಾವಲು ಕಾಯುತ್ತಿದ್ದರು. ವಯೋಸಹಜವಾಗಿ ಬಿಳಿ ಘೇಂಡಾಮೃಗ ಸಾವನ್ನಪ್ಪಿತ್ತು. ಅದನ್ನು ಬಳಸಿಕೊಂಡು ಕೃತಕ ಸಂತಾನೋತ್ಪತ್ತಿಗೆ ಯತ್ನಿಸಿದ ಪ್ರಯತ್ನವೂ ಫಲಿಸದೆ, ಈಗ ಬಿಳಿ ಘೇಂಡಾ ಮೃಗಗಳ ಸಂತತಿ ಭೂಮಿಯಿಂದ ಅಳಿದು ಹೋದಂತಾಗಿದೆ. ಉಳಿದಿರುವುದು ಬೆರಳೆಣೆಕೆಯ ಕಪ್ಪು ಘೇಂಡಾ ಮೃಗಗಳು ಮಾತ್ರ.

ಅವೂ ಕೂಡ ಅಳಿವಿನಂಚಿಗೆ ಬಂದು ನಿಂತಿವೆ. ಜಗತ್ತಿನಾದ್ಯಂತ ಕೇವಲ 30 ಸಾವಿರಕ್ಕೂ ಕಡಿಮೆ ಕಪ್ಪು ಘೇಂಡಾಮೃಗಗಳಿವೆ ಎಂದು ವರದಿಗಳು ಹೇಳುತ್ತವೆ. ಅವುಗಳಲ್ಲಿ 3,200 ಭಾರತದಲ್ಲಿ ಉಳಿದುಕೊಂಡಿವೆ. ಸುಮಾತ್ರನ್‌ ತಳಿಯ 76 ಮತ್ತು ಜಾವನ್‌ ತಳಿಯ 60 ಘೇಂಡಾ ಮೃಗಗಳು ನಮ್ಮಲ್ಲಿವೆ.

ಭಾರತೀಯ ಮೂಲದ ಜಾವ ಘೇಂಡಾ ಮೃಗಗಳು.
ಭಾರತೀಯ ಮೂಲದ ಜಾವ ಘೇಂಡಾ ಮೃಗಗಳು.

ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಘೇಂಡಾಮೃಗಗಳ ಸಂತತಿಯನ್ನು ಉಳಿಸುವ ಪ್ರಯತ್ನ ದಶಕದ ಹಿಂದೆಯೇ ಆರಂಭವಾಗಿದೆ. ಅದರ ಭಾಗವಾಗಿ ಈಗ ಅವುಗಳ ಕೋಡನ್ನು ಕತ್ತರಿಸುವ ನೋವಿಲ್ಲದ ‘ಪ್ರಾಣಿ ಹಿಂಸೆ’ಗೆ ಆಫ್ರಿಕಾದಲ್ಲಿ ಇಳಿದಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆಫ್ರಿಕಾದ ಕೆಲವು ಭಾಗಗಳಲ್ಲಿ 900 ಘೇಂಡಾ ಮೃಗಗಳಿಂದ ಒಟ್ಟಾರೆ 1,800 ಕೊಂಬುಗಳನ್ನು ಕದಿಯಲಾಗಿದೆ. ಅವುಗಳ ಜೀವಕ್ಕೂ ಅಪತ್ತು ತಂದೊಡ್ಡಲಾಗಿದೆ.

ಅದಕ್ಕಾಗಿ ಈಗ ತಂಡವೊಂದು ಹೆಲಿಕಾಫ್ಟರ್‌ ಏರಿ ಅರಣ್ಯಗಳಲ್ಲಿರುವ ಘೇಂಡಾಮೃಗಗಳನ್ನು ಹುಡುಕಿ, ಅವುಗಳಿಗೆ ಅರವಳಿಕೆ ಮದ್ದು ನೀಡಿ, ಆಧುನಿಕ ಉಪಕರಣಗಳನ್ನು ಬಳಸಿ ಘೇಂಡಾಮೃಗಗಳ ಕೊಂಬುಗಳನ್ನು ಕತ್ತರಿಸುತ್ತಿದೆ. ಕೊಂಬುಗಳನ್ನು ಕಳೆದುಕೊಂಡ ಘೇಂಡಾ ಮೃಗಗಳನ್ನು ಭೇಟೆಯಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದೊಂದು ದುಬಾರಿ ಯೋಜನೆ. ಸಾಕಷ್ಟು ಹಣವೂ ಖರ್ಚಾಗುತ್ತಿದೆ. "ಘೇಂಡಾಮೃಗಗಳನ್ನು ಉಳಿಸಲು ಈ ಕ್ರಮ ಅನಿವಾರ್ಯ ಎನ್ನುತ್ತಾರೆ,” ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಜತೆಗೆ ನಿರಂತರತೆಯನ್ನೂ ಕಾಪಾಡಿಕೊಳ್ಳಬೇಕಿದೆ. ಏಕೆಂದರೆ, ಕೊಂಬು ಕತ್ತಿರಿಸಿ ಕೆಲವು ತಿಂಗಳ ನಂತರ ಪ್ರಾಕೃತಿಕವಾಗಿ ಘೇಂಡಾಮೃಗದ ಕೊಂಬುಗಳು ಮತ್ತೆ ಬೆಳೆಯುತ್ತವೆ. ಆದ್ದರಿಂದ 18-24 ತಿಂಗಳಿಗೊಮ್ಮೆ ಘೇಂಡಾಮೃಗಗಳ ಕೊಂಬು ಕತ್ತರಿಸುವ ಕಾರ್ಯಯೋಜನೆಯನ್ನು ಆಫ್ರಿಕನ್ ಅರಣ್ಯಾಧಿಕಾರಿಗಳು ಹೊಂದಿದ್ದಾರೆ.

ಅರಣ್ಯ ಇಲಾಖೆಯೇ ಘೇಂಡಾ ಮೃಗಗಳ ಕೊಂಬುಗಳನ್ನು ಕತ್ತಿರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಕೊಂಬು ಕಳ್ಳರನ್ನು ತಡೆಯಬೇಕೇ ಹೊರತು, ಘೇಂಡಾಮೃಗದ ಕೊಂಬುಗಳನ್ನಲ್ಲ ಅಧಿಕೃತವಾಗಿ ಕದಿಯುವುದಲ್ಲ ಎಂದು ಕೆಲವರು ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

ಆದರೆ ಸಧ್ಯಕ್ಕೆ ಘೇಂಡಾ ಮೃಗಗಳನ್ನು ಶೀಘ್ರವಾಗಿ ರಕ್ಷಿಸಲು ಅಪಾಯರಹಿತವಾದ ಈ ಮಾರ್ಗವೇ ಉತ್ತಮ ಎಂದು ಸರಕಾರ ತೀರ್ಮಾನಿಸಿದೆ. ಈ ಕೆಳಗಿನ ಚಿತ್ರಗಳ ಕಡೆಗೆ ಒಮ್ಮೆ ಕಣ್ಣಾಡಿಸಿ....

ಅಭಯಾರಣ್ಯದಲ್ಲಿ ಕೋಡು ಇರುವ ಘೇಂಡಾ ಮೃಗ. 
ಅಭಯಾರಣ್ಯದಲ್ಲಿ ಕೋಡು ಇರುವ ಘೇಂಡಾ ಮೃಗ. 
ನಿದ್ದೆಗೆ ಜಾರಿ ಘೇಂಡಾ ಮೃಗ. 
ನಿದ್ದೆಗೆ ಜಾರಿ ಘೇಂಡಾ ಮೃಗ. 
ಶಶ್ತ್ರ ಚಿಕಿತ್ಸೆಗೆ ಮುನ್ನಡಿ. 
ಶಶ್ತ್ರ ಚಿಕಿತ್ಸೆಗೆ ಮುನ್ನಡಿ. 
ಕೊಂಬು ಕಟಾವು ಮಾಡುವ ಗರಗಸ. 
ಕೊಂಬು ಕಟಾವು ಮಾಡುವ ಗರಗಸ. 
ಅಂತಿಮ ತಪಾಸಣೆ. 
ಅಂತಿಮ ತಪಾಸಣೆ. 
ಶಶ್ತ್ರ ಚಿಕಿತ್ಸೆಯ ಒಂದು ನೋಟ. 
ಶಶ್ತ್ರ ಚಿಕಿತ್ಸೆಯ ಒಂದು ನೋಟ. 
ಸ್ಥಳೀಯರ ಕೈಲಿ ಘೇಂಡಾ ಮೃಗದ ಕೊಂಬು. 
ಸ್ಥಳೀಯರ ಕೈಲಿ ಘೇಂಡಾ ಮೃಗದ ಕೊಂಬು. 
ಬರದ ಖಾಂಡದಂತೆ ಭಾಸವಾಗುವ ಘೇಂಡಾ ಮೃಗದ ಕೊಂಬಿನ ಬುಡ. ಇನ್ನು ಮುಂದೆ ಕೋಡು ಬೆಳೆಯುವವರೆಗೂ ಬದುಕು ಹೀಗೆ, ವಿರೂಪಗೊಂಡು. ಅದಕ್ಕೆ ಹೇಳಿದ್ದು, ಕೊಂಬಿದ್ದರೆ ಏನು ಬಂತು, ಅದೇ ಬದುಕಿಗೆ ಕಂಟಕವಾಗಿರುವಾಗ. 
ಬರದ ಖಾಂಡದಂತೆ ಭಾಸವಾಗುವ ಘೇಂಡಾ ಮೃಗದ ಕೊಂಬಿನ ಬುಡ. ಇನ್ನು ಮುಂದೆ ಕೋಡು ಬೆಳೆಯುವವರೆಗೂ ಬದುಕು ಹೀಗೆ, ವಿರೂಪಗೊಂಡು. ಅದಕ್ಕೆ ಹೇಳಿದ್ದು, ಕೊಂಬಿದ್ದರೆ ಏನು ಬಂತು, ಅದೇ ಬದುಕಿಗೆ ಕಂಟಕವಾಗಿರುವಾಗ. 

ಚಿತ್ರ ಕೃಪೆ: ಗಾರ್ಡಿಯನ್.