samachara
www.samachara.com
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಫೋಕಸ್

ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ: ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ

ಈ ಸೇತುವೆಯ ನಿರ್ಮಾಣಕ್ಕೆ ಬಳಕೆಯಾಗಿರುವ ಉಕ್ಕು ಬರೊಬ್ಬರಿ 4.20 ಲಕ್ಷ ಟನ್‌. ಈ ಉಕ್ಕಿನಿಂದ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿರುವ ವಿಶ್ವ ವಿಖ್ಯಾತ ಐಫೆಲ್‌ ಟವರ್‌ಅನ್ನು 60 ಬಾರಿ ನಿರ್ಮಿಸಬಹುದಿತ್ತು.

samachara

samachara

ವಿಶ್ವದಲ್ಲೆ ಅತೀ ಉದ್ದದ ಕ್ರಾಸ್‌-ಸೀ ಸೇತುವೆಯನ್ನು ನಿರ್ಮಿಸಿರುವ ಚೈನಾ, ಇದೇ ವರ್ಷ ಸಾರ್ವಜನಿಕ ಸಂಚಾರಕ್ಕೆ ಸಿದ್ಧವಾಗಿದೆ. ಈ ಸೇತುವೆಯು ಹಾಂಗ್‌ಕಾಂಗ್‌, ಮಚಾಉ ಮತ್ತು ಚೈನಾದ ಮುಖ್ಯ ಭೂಖಂಡಕ್ಕೆ ಸಂಪರ್ಕವನ್ನು ಒದಗಿಸಲಿದೆ.

6 ಪಥಗಳನ್ನು ಹೊಂದಿರುವ ಈ ಸೇತುವೆ 55 ಕಿಲೋಮೀಟರ್‌ ಉದ್ದವಿದೆ. ಇದರ ನಿರ್ಮಾನಕ್ಕಾಗಿ ಚೈನಾ ಸತತ 7 ವರ್ಷಗಳ ಕಾಲ ಶ್ರಮಿಸಿದೆ. ಈ ಸೇತುವೆ 4 ಸುರಂಗಗಳ ಮೂಲಕ ಹಾದು ಹೋಗಲಿದ್ದು, ಸೇತುವೆಯ ನಿರ್ಮಾಣಕ್ಕಾಗಿ 4 ಕೃತಕ ನಡುಗಡ್ಡೆಗಳನ್ನು ಸೃಷ್ಟಿಸಲಾಗಿದೆ.

ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಸಿದ್ಧವಾಗಿರುವ ಈ ಸೇತುವೆಯ ನಿರ್ಮಾಣಕ್ಕೆ ತಗುಲಿರುವ ವೆಚ್ಚ ನೂರಾರು ಬಿಲಿಯನ್‌ ಡಾಲರ್‌ಗಳು. ಈ ಸೇತುವೆಯ ನಿರ್ಮಾಣಕ್ಕೆ ಬಳಕೆಯಾಗಿರುವ ಉಕ್ಕು ಬರೊಬ್ಬರಿ 4.20 ಲಕ್ಷ ಟನ್‌. ಈ ಉಕ್ಕಿನಿಂದ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿರುವ ವಿಶ್ವ ವಿಖ್ಯಾತ ಐಫೆಲ್‌ ಟವರ್‌ಅನ್ನು 60 ಬಾರಿ ನಿರ್ಮಿಸಬಹುದಿತ್ತು.

ಪ್ರತಿನಿತ್ಯ ಈ ಸೇತುವೆಯ ಮೇಲೆ 40,000ಕ್ಕೂ ಅಧಿಕ ವಾಹನಗಳು ಸಂಚರಿಸಲಿವೆ. ಬಸ್‌ ವ್ಯವಸ್ಥೆಯನ್ನೂ ಕೂಡ ಕಲ್ಪಿಸುವ ಯೋಚನೆಯನ್ನು ಚೈನಾ ಸರಕಾರ ಹೊಂದಿದ್ದು, 10 ನಿಮಿಷಕ್ಕೆ ಒಂದರೆಂತೆ ಬಸ್‌ಗಳ ಲಭ್ಯವಿರಲಿವೆ.

ಈ ಸೇತುವೆಯ ನಿರ್ಮಾಣ ಕಾಮುಗಾರಿಯಲ್ಲಿ ಇಂಗ್ಲೆಂಡ್‌, ಅಮೆರಿಕಾ, ಡೆನ್ಮಾರ್ಕ್‌, ಸ್ಡಟ್ಜರ್‌ಲ್ಯಾಂಡ್‌ ಹಾಗೂ ನೆದರ್‌ಲ್ಯಾಂಡ್‌ ಸೇರಿದಂತೆ ಒಟ್ಟು 14 ದೇಶಗಳ ತಂತ್ರಜ್ಞರು ಬೆವರು ಹರಿಸಿದ್ದಾರೆ. 2011ರಿಂದ ಪ್ರಾರಂಭವಾದ ಸೇತುವೆ ನಿರ್ಮಾಣ ಕಾಮುಗಾರಿ 7 ಜನರ ಸಾವಿಗೆ ಕಾರಣವಾದೆ. ಜತೆಗೆ 129 ಮಂದಿ ಕಾರ್ಮಿಕರು ಮಾರಣಾಂತಿಕ ಅವಗಢಗಳಿಗೆ ಒಳಗಾಗಿದ್ದರು.

ಈ ಸೇತುವೆ ಹಾಂಗ್‌ಕಾಂಗ್‌ನಿಂದ ಚೈನಾ ಮುಖ್ಯ ಭೂಭಾಗವನ್ನು ತಲುಪಲು ಬೇಕಿದ್ದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ. ಜತೆಗೆ ಮಾರಕ ಅಪಘಾತಗಳನ್ನು ತಪ್ಪಿಸಲಿದೆ ಎಂಬ ನಿರೀಕ್ಷೆ ಇದೆ.

ಸೇತುವೆಯ ನಿರ್ಮಾಣ ಕಾಮುಗಾರಿ ಸಂಪೂರ್ಣವಾಗಿ ಮುಗಿದಿದ್ದು, ಕೆಲವೇ ದಿನಗಳಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಸೇತುವೆಯನ್ನು ಚೈನಾ ಲೋಕಾರ್ಪಣೆಗೊಳಿಸಲಿದೆ.

ಬ್ರಿಟೀಷ್ ವಸಹಾತುಶಾಹಿ ವ್ಯವಸ್ಥೆಯ ಅಡಿಯಲ್ಲಿದ್ದ ಹಾಂಗ್‌ಕಾಂಗ್‌ 1997ರಲ್ಲಿ ಬ್ರಿಟೀಷರ ಕೈಯಿಂದ ಚೈನಾಗೆ ವರ್ಗಾಯಿಸಲ್ಪಟ್ಟಿತ್ತು. “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಎಂಬ ತತ್ವದ ಮೇಲೆ ಚೈನಾ ಗಡಿಭಾಗದೊಳಗೆ ಸೇರಿಕೊಂಡಿತ್ತು. ತನ್ನದೇ ಆದ ಸ್ವಂತ ಕಾನೂನು ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಂದಿದೆ.

ತೃತೀಯ ಜಗತ್ತಿನ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿರುವ ಹಾಂಗ್‌ಕಾಂಗ್‌ನಲ್ಲಿ ಹಲವಾರು ಹೋರಾಟಗಾರರು ಹತ್ತಾರು ವರ್ಷಗಳ ಅವಧಿಯಿಂದ ಚೈನಾದ ವಿರುದ್ಧ ಧನಿ ಏರಿಸುತ್ತಲೇ ಬಂದಿದ್ದಾರೆ. ತಮ್ಮ ಸ್ವಾತಂತ್ರ್ಯಕ್ಕೆ ಚೀನಾ ದಕ್ಕೆ ತರುತ್ತಿದೆ ಎಂಬುದು ಈ ಹೋರಾಟಗಾರರ ಆರೋಪ.

ಆದರೆ ಈ ಕುರಿತು ಚೈನಾ ಸರಕಾರ ತೆಲೆ ಕೆಡಿಸಿಕೊಂಡಂತಿಲ್ಲ. ತನ್ನ ಪಾಡಿಗೆ ತಾನು ಚೈನಾ ಮತ್ತು ಹಾಂಗ್‌ಕಾಂಗ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಬೃಹತ್‌ ಸೇತುವೆಯನ್ನು ನಿರ್ಮಿಸಿ, ಜಗದ ಕಣ್ಣನ್ನು ಅಗಲವಾಗಿಸಿದೆ.ಇಷ್ಟೇ ಅಲ್ಲದೇ ಇದೇ ಪ್ರದೇಶದಲ್ಲಿ ಅತಿ ವೇಗದ ರೈಲು ಸಂಚಾರಕ್ಕೆ ಹಳಿ ನಿರ್ಮಿಸುವ ಯೋಜನೆಯನ್ನೂ ಕೈಗೆತ್ತಿಕೊಂಡಿದೆ.

ಈ ಸೇತುವೆ ಕೆಲವು ಮನೋಹರ ದೃಷ್ಯಗಳು ಇಲ್ಲಿವೆ:

ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ
ಅತಿ ದೊಡ್ಡ ಕ್ರಾಸ್‌-ಸೀ ಸೇತುವೆ:  ಸಂಚಾರಕ್ಕೆ ಮುಕ್ತವಾಗಲಿರುವ ಈ ಅದ್ಭುತವನ್ನು ಕಣ್ತುಂಬಿಕೊಳ್ಳಿ

ಚಿತ್ರ ಕೃಪೆ: Xinhua net