samachara
www.samachara.com
‘ನನ್ನ ನೀನು ಮರೆಯಲಾರೆ’: ಮತ್ತೆ ರಸ್ತೆಗಿಳಿಯಲಿದೆ ಮೈಸೂರು ಮೂಲದ ‘ಜಾವಾ’
FEATURE STORY

‘ನನ್ನ ನೀನು ಮರೆಯಲಾರೆ’: ಮತ್ತೆ ರಸ್ತೆಗಿಳಿಯಲಿದೆ ಮೈಸೂರು ಮೂಲದ ‘ಜಾವಾ’

1960-70 ರ ದಶಕದಲ್ಲಿ ಅಕ್ಷರಶಃ ಭಾರತೀಯ ರಸ್ತೆಗಳನ್ನು ರಾಜನಂತೆ ಆಳಿದ ಮೈಸೂರು ಮೂಲದ ಜಾವಾ ಮೋಟಾರ್ ಸೈಕಲ್‌ಗಳು ಮತ್ತೆ ರಸ್ತೆಗಿಳಿದಿವೆ.

ವಸಂತ ಕೊಡಗು

ವಸಂತ ಕೊಡಗು

“ಅದು 1972 ನೇ ಇಸವಿ. ಸುಮಾರು 120 ಮನೆಗಳಿದ್ದ ನಮ್ಮ ಪುಟ್ಟ ಹಳ್ಳಿ ತಾಕೇರಿಯಲ್ಲಿ ಇದ್ದುದೇ ಮೂರೇ ಬೈಕ್‌ಗಳು. ಆಗ ನಾನು 6,800 ರೂಪಾಯಿ ನೀಡಿ ನಾಲ್ಕನೆಯವನಾಗಿ ಕಪ್ಪು ಬಣ್ಣದ ಬೈಕ್ ತೆಗೆದುಕೊಂಡೆ. ಮೈಸೂರಿನಿಂದ ಬೈಕ್‌ನ್ನು ಮನೆಗೆ ತಂದಾಗ ಸಂಜೆ 4.30 ಗಂಟೆಯಾಗಿತ್ತು. ನನ್ನ ಆಗಮನಕ್ಕಾಗಿ ಇಡೀ ಊರಿನವರೆಲ್ಲ ಕಾದು ಕುಳಿತಿದ್ದರು. ನನಗಿಂತ ಹೆಚ್ಚಾಗಿ ಅವರೆಲ್ಲಾ ಗುಡು-ಗುಡು ಶಬ್ದ ಹೊರಡಿಸುತ್ತಿದ್ದ ಬೈಕ್‌ ನೋಡಲು ನೆರೆದಿದ್ದರು….”

ಹೀಗೆ ತಮ್ಮ ನೆನಪಿನ ಬುತ್ತಿಯನ್ನು ತೆರೆದಿಡುತ್ತಾ ಹೋದರು ತಾಕೇರಿಯ ರಾಜಪ್ಪ. ಅಂದ ಹಾಗೆ ಅವರ ಆ ಬೈಕಿನ ಹೆಸರು ‘ಜಾವಾ’.

“ಬೈಕ್‌ ತಂದಾಗ ಎಲ್ಲರೂ ನೋಡಲು ಬರುವವರೇ. ಮಕ್ಕಳಂತೂ ಬೈಕ್‌ನ ಪೆಟ್ರೋಲ್ ಟ್ಯಾಂಕಿನ ಕ್ರೋಮಿಯಂನಲ್ಲಿ ತಮ್ಮ ಮುಖಗಳನ್ನು ನೋಡಿಕೊಳ್ಳುತ್ತಾ ಖುಷಿ ಪಡುತ್ತಿದ್ದರು. ಬೈಕ್‌ ಬಿಟ್ಟು ಅವರು ಕದಲುತ್ತಿರಲಿಲ್ಲ,” ಎಂದು ಅಂದಿನ ದಿನವನ್ನು ಕಣ್ಣಿಗೆ ಕಟ್ಟಿದಂತೆ ಬಿಡಿಸಿಟ್ಟರು 75 ರ ಹರೆಯದ ರಾಜಪ್ಪ.

1960-70 ರ ದಶಕದಲ್ಲಿ ಅಕ್ಷರಶಃ ಭಾರತೀಯ ರಸ್ತೆಗಳನ್ನು ರಾಜನಂತೆ ಆಳಿದ ಮೈಸೂರು ಮೂಲದ ಜಾವಾ ಮೋಟಾರ್ ಸೈಕಲ್‌ಗಳ ಕಥೆ ಇದು.

ಝೆಕೋಸ್ಲಾವಿಯಾದಿಂದ ಮೈಸೂರಿಗೆ

ಜಾವಾದ ಮೂಲ ಝೆಕೋಸ್ಲಾವಿಯಾ (ಸದ್ಯ ಚೆಕ್‌ ಗಣರಾಜ್ಯದೊಂದಿಗೆ ವಿಲೀನವಾಗಿದೆ). ಅಲ್ಲಿ 1929ರಲ್ಲೇ ಉತ್ಪಾದನೆ ಆರಂಭಿಸಿದ್ದ ಕಂಪನಿಯ ಬೈಕುಗಳು 1960ರ ಸುಮಾರಿಗೆ ಭಾರತಕ್ಕೆ ಬಂದಿದ್ದವು. ಆ ದಿನಗಳಲ್ಲೇ ಜಾವಾ ಬರೋಬ್ಬರಿ 120 ದೇಶಗಳಿಗೆ ರಫ್ತಾಗುತ್ತಿತ್ತು. ಭಾರತದಲ್ಲು ಬೈಕ್‌ಗೆ ಉತ್ತಮ ಬೇಡಿಕೆ ಕಂಡು ಬಂತು. ಪರಿಣಾಮ ಮಾರಾಟ ಹೆಚ್ಚಾಗುತ್ತಿದ್ದಂತೆ ನಿಧಾನಕ್ಕೆ ಇಲ್ಲಿಯೇ ಉತ್ಪಾದನೆಗೆ ಮನಸ್ಸು ಮಾಡಿತು. ಆಗ ಕಂಡ ಜಾಗವೇ ಮೈಸೂರು.

ಅಂದಿನ ಮೈಸೂರು ರಾಜ್ಯದ ರಾಜ್ಯಪಾಲರೂ ಆಗಿದ್ದ ಜಯಚಾಮರಾಜ ಒಡೆಯರ್‌ ಅವರ ವಿಶೇಷ ಆಸಕ್ತಿಯಿಂದ 1961ರಲ್ಲಿ ಮೈಸೂರಿನಲ್ಲಿ ಜಾವಾ ಬೈಕ್‌ಗಳ ಉತ್ಪಾದನಾ ಘಟಕ ಆರಂಭಗೊಂಡಿತು. ನೋಡ ನೋಡುತ್ತಾ ಇಡೀ ಭಾರತವನ್ನೇ ಜಾವಾ ಆವರಿಸಿಕೊಂಡಿತು. ರಾಜ್‌ ಕುಮಾರ್‌ ಸಿನಿಮಾದಿಂದ ಜನ ಸಾಮಾನ್ಯರವರೆಗೆ ಜಾವಾಕ್ಕೆ ಮರುಳಾಗದವೇ ಇರಲಿಲ್ಲ.

ಜಾವಾ ಭಾರತೀಯ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಂತೂ ಚಲಾಯಿಸಲು ಹೇಳಿ ಮಾಡಿಸಿದಂತಿತ್ತು. ಅಂದಿಗೆ ಕೆಲ ಗ್ರಾಮೀಣ ಭಾಗದ ಸವಾರರು ಪೆಟ್ರೋಲ್ ಟ್ಯಾಂಕಿನ ಜತೆಯಲ್ಲೇ ಸೀಮೆ ಎಣ್ಣೆ ಟ್ಯಾಂಕ್‌ ಮಾಡಿಕೊಂಡು ಈ ಬೈಕ್‌ ಓಡಿಸಿದವರಿದ್ದಾರೆ. ಮುಂದೆ ಯೆಜ್ದಿ ಹೆಸರಿನಲ್ಲಿ ಹೊರ ಬಂದ ಜಾವಾ ಬೈಕ್‌ಗಳನ್ನೂ ಜನರು ಅಪ್ಪಿಕೊಂಡರು. ಹಾಗಂಥ ಮೈಸೂರಿನಲ್ಲಿ ತಯಾರಾಗುತ್ತಿದ್ದ ಬೈಕ್‌ಗಳನ್ನು ಭಾರತೀಯರು ಮಾತ್ರ ಮೆಚ್ಚಿಕೊಂಡಿರಲಿಲ್ಲ. ಇಲ್ಲಿ ತಯಾರಾದ ಸುಮಾರು 19 ಪ್ರಕಾರದ ಬೈಕ್‌ಗಳು ವಿದೇಶಗಳಿಗೂ ರಫ್ತಾಗುತ್ತಿದ್ದವು.

ಆದರೆ ಎರಡು ಸ್ಟ್ರೋಕ್ ನ 250 ಸಿಸಿ ಎಂಜಿನ್‍ಗಳ ಈ ಬೈಕ್‌ನ ಮೈಲೇಜ್ ಕಡಿಮೆ ಇತ್ತು. ಹೀಗಿದ್ದೂ ಜಗತ್ತನ್ನೇ ಆಳುತ್ತಿದ್ದ ಜಾವಾಕ್ಕೆ ಅದೊಂದು ದಿನ ಇದೇ ಮೈಲೇಜ್‌ ವಿಚಾರವನ್ನು ಇಟ್ಟುಕೊಂಡು ಹೊಡೆತ ನೀಡಿತು ಜಪಾನ್‌.

ವಾಹನ ತಯಾರಿಕಾ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಜಪಾನ್ 1970 ರಲ್ಲೇ ನಾಲ್ಕು ಸ್ಟ್ರೋಕ್ ಗಳ 100 ಸಿಸಿ ಲಘು ದ್ವಿಚಕ್ರ ವಾಹನಗಳನ್ನು ಪರಿಚಯಿಸಿತು. ಇವು ಅಲ್ಲಿನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿದವು. 1985ರಲ್ಲಿ ಸರ್ಕಾರದ ಉದಾರ ನೀತಿಯ ಫಲವಾಗಿ ಜಪಾನಿನ 100 ಸಿಸಿ ಬೈಕ್ ಗಳಾದ ಯಮಾಹ, ಹೋಂಡಾ, ಕವಸಕಿ ಮತ್ತು ಸುಜುಕಿ ಮೋಟಾರ್ ಕಂಪೆನಿಗಳು ಭಾರತೀಯ ಮೋಟಾರ್ ಸೈಕಲ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಲ್ಲಿನ ಮಾರುಕಟ್ಟೆಯನ್ನು ಪ್ರವೇಶಿಸಿದವು.

ಈ ಬೈಕ್‌ಗಳು ಸಣ್ಣ ಶಬ್ದ , ಅಧಿಕ ಮೈಲೇಜ್ ಹಾಗೂ ಕಡಿಮೆ ಬೆಲೆಯಿಂದಾಗಿ ಶೀಘ್ರದಲ್ಲೇ ಭಾರತೀಯರ ಮನ ಗೆದ್ದುದಲ್ಲದೆ ರಸ್ತೆಗಳಲ್ಲೆಲ್ಲಾ ತುಂಬಿಕೊಂಡವು. ಜಾವಾ ಹಾಗೂ ಯೆಜ್ದಿ ಬೈಕ್‌ಗಳು ನಿಧಾನಕ್ಕೆ ಜನರಿಂದ ದೂರ ಸರಿದವು. ಅದೇ ವೇಳೆ ಝೆಕೋಸ್ಲಾವಿಯಾದಲ್ಲೂ ಕೆಲವು ರಾಜಕೀಯ ಬೆಳವಣಿಗೆಗಳು ಕಂಪನಿಗೆ ವಿರುದ್ಧವಾಗಿ ನಡೆದವು. ಕೊನೆಗೆ ಕೊಳ್ಳುವವರೇ ಇಲ್ಲವಾಗಿ 1996 ರಲ್ಲಿ ಮೈಸೂರಿನ ಏಕೈಕ ಕಾರ್ಖಾನೆ ಉತ್ಪಾದನೆಯನ್ನೇ ನಿಲ್ಲಿಸಿತು.

ಇದೀಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಅಂಗ ಸಂಸ್ಥೆ ‘ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್’ 293ಸಿಸಿಯ ಜಾವಾ ಬೈಕ್‌ಗಳನ್ನು ನವೆಂಬರ್ 14 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಧ್ಯ ಪ್ರದೇಶದ ಪಿತಾಂಪುರದ ಮಹೀಂದ್ರಾ ಘಟಕದಲ್ಲಿ ಈ ಬೈಕ್ ಗಳನ್ನು ತಯಾರಿಸಲಾಗುತ್ತಿದ್ದು ರೆಟ್ರೋ ಸ್ಟೈಲ್‌ನಲ್ಲಿ ಹೊಸ ಬೈಕ್‌ಗಳು ಕಂಗೊಳಿಸುತ್ತಿವೆ. ಜಾವಾ, ಜಾವಾ 42 ಮತ್ತು ಜಾವಾ ಪೇರಕ್ (334 ಸಿಸಿ) ಎಂಬ ಮೂರು ಮಾದರಿಗಳ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದ್ದು ದೆಹಲಿ ಶೋ ರೂಂ ದರ ಕ್ರಮವಾಗಿ ರೂ 1.64 ,1.55 ಹಾಗೂ 1.89 ಲಕ್ಷ ರೂಪಾಯಿಗಳಿವೆ.

‘ನನ್ನ ನೀನು ಮರೆಯಲಾರೆ’: ಮತ್ತೆ ರಸ್ತೆಗಿಳಿಯಲಿದೆ ಮೈಸೂರು ಮೂಲದ ‘ಜಾವಾ’

ಈ ಬೈಕ್ ಮುಂಭಾಗದಿಂದ ಹಾಗೂ ಬದಿಯಿಂದ ನೋಡಲು ರಾಯಲ್ ಎನ್‌ಫೀಲ್ಡ್‌ನ್ನೇ ಹೋಲುತ್ತಿದೆ. 350 ಸಿಸಿಗಳ ಬುಲೆಟ್ ಬೈಕ್ ಗಳ ಆರಂಭಿಕ ದರ ರೂ 1.47 ಲಕ್ಷ ರೂಪಾಯಿಗಳಾಗಿದ್ದು ಇದಕ್ಕಿಂತ ಜಾವಾ ಬೈಕ್ ಗಳ ದರ ತುಸು ಹೆಚ್ಚಾಗಿದೆ. ದೇಶದಲ್ಲಿ ಬುಲೆಟ್ ಬೈಕ್‌ಗಳಿಗೆ ಸದ್ಯ ಉತ್ತಮ ಮಾರುಕಟ್ಟೆ ಇದ್ದು ಇದರಲ್ಲಿ ಪಾಲು ಕಸಿಯುವುದು ಜಾವಾ ಯೋಜನೆಯಾಗಿದೆ. ಈಗಾಗಲೇ ದೇಶದಾದ್ಯಂತ 105 ಡೀಲರ್‌ಗಳನ್ನು ಕಂಪನಿ ನೇಮಕ ಮಾಡಿಕೊಂಡಿದ್ದು ಬುಕ್ ಮಾಡಿದವರಿಗೆ ಜನವರಿ 2019 ರಿಂದ ವಾಹನಗಳು ದೊರೆಯಲಿವೆ ಎಂದು ಕಂಪೆನಿ ತಿಳಿಸಿದೆ.

ಭಾರತದಲ್ಲೂ ದುಬಾರಿ ಬೈಕ್ ಗಳಿಗೆ ಉತ್ತಮ ಮಾರುಕಟ್ಟೆ ಇದ್ದು ಶ್ರೀಮಂತ ಯುವಕರಿಗೆ ಈ ಬೈಕ್ ಗಳು ಅಚ್ಚುಮೆಚ್ಚಾಗಿವೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಈ ಬೈಕ್ ಗಳ ಯಶಸ್ಸು ಅಥವಾ ವಿಫಲತೆ ತಿಳಿಯಲಿದೆ.

ಆದರೂ ಇತ್ತೀಚಿನ ವರ್ಷಗಳಲ್ಲಿ ಮೈಸೂರು-ಬೆಂಗಳೂರಿನ ಯೆಜ್ಡಿ ಬೈಕ್ ಗಳ ಮಾಲೀಕರು ಕ್ಲಬ್ ಒಂದನ್ನು ಮಾಡಿಕೊಂಡಿದ್ದು ರ್ಯಾಲಿಗಳನ್ನೂ ಏರ್ಪಡಿಸತೊಡಗಿದರು. ಈಗ ಈ ಕ್ಲಬ್ ಗಳ ಕಾರಣದಿಂದ ಹಳೇ ಜಾವಾ ಯೆಜ್ಡಿ ಬೈಕ್ಗಳಿಗೂ ಅತ್ಯತ್ತಮ ಪ್ರೀಮಿಯಂ ಬೆಲೆ ಸಿಗುತ್ತಿದೆ ಎನ್ನಲಾಗಿದೆ.

ಈ ಸಂದರ್ಬದಲ್ಲೇ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಅಂಗ ಕಂಪೆನಿ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ 293

ಸಿಸಿ ಗಳ ಈ ಜಾವಾ ಬೈಕ್ ಗಳನ್ನು ನವೆಂಬರ್ 14 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮದ್ಯ ಪ್ರದೇಶದ ಪಿತಾಂಪುರ ದ ಮಹೀಂದ್ರಾ ಘಟಕದಲ್ಲಿ ಈ ಬೈಕ್ ಗಳನ್ನು ತಯಾರಿಸಲಾಗುತಿದ್ದು ಈಗ ಜಾವಾ, ಜಾವಾ 42 ಮತ್ತು ಜಾವಾ ಪೇರಕ್ (334 ಸಿಸಿ) ಎಂಬ ಮಾದರಿಗಳ ದೆಹಲಿ ಎಕ್ಸ್ ಶೋ ರೂಂ ದರ ಕ್ರಮವಾಗಿ ರೂ 1.64 ,1.55 ಹಾಗೂ 1.89 ಲಕ್ಷ ರೂಪಾಯಿಗಳಾಗಿವೆ.

‘ನನ್ನ ನೀನು ಮರೆಯಲಾರೆ’: ಮತ್ತೆ ರಸ್ತೆಗಿಳಿಯಲಿದೆ ಮೈಸೂರು ಮೂಲದ ‘ಜಾವಾ’

ಫೀಲ್ಡಿಗಿಳಿದ ಜಾವಾ, ಎನ್‌ಫೀಲ್ಡ್‌ಗೆ ಪೈಪೋಟಿ!

ಈ ಬೈಕ್ ಮುಂಭಾಗದಿಂದ ಹಾಗೂ ಬದಿಯಿಂದ ನೋಡಲು ರಾಯಲ್ ಎನ್‌ಫೀಲ್ಡ್‌ ಬೈಕ್ ಗಳನ್ನೇ ಹೋಲುತ್ತಿದೆ. 350 ಸಿಸಿಗಳ ಬುಲೆಟ್ ಬೈಕ್ ಗಳ ಆರಂಭಿಕ ದರ ರೂ 1.47 ಲಕ್ಷ ರೂಪಾಯಿಗಳಾಗಿದ್ದು ಇದಕ್ಕಿಂತ ಜಾವಾ ಬೈಕ್ ಗಳ ದರ ತುಸು ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಬುಲೆಟ್ ಬೈಕ್ ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಇದರಲ್ಲಿ ಪಾಲು ಕಸಿಯುವ ಯತ್ನದಲ್ಲಿ ಜಾವಾ ಇದೆ. ಈಗಾಗಲೇ ದೇಶದಾದ್ಯಂತ 105 ಡೀಲರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಬುಕ್ ಮಾಡಿದವರಿಗೆ ಜನವರಿ 2019 ರಿಂದ ವಾಹನಗಳು ದೊರೆಯಲಿವೆ ಎಂದು ಕಂಪೆನಿ ತಿಳಿಸಿದೆ.

ಹೀಗೆ ಜಾವಾ ಬೈಕ್‌ಗಳು ಪುನಃ ರಸ್ತೆಗಿಳಿದು ಗುಡು-ಗುಡು ಸದ್ದು ಮಾಡಲಿದೆ ಎಂಬ ಸುದ್ದಿಯೇ ರಾಜಪ್ಪರಂಥ ಹಲವರ ಕಿವಿ ನೆಟ್ಟಗಾಗಿಸಿದೆ. ಆದರೆ ಏನು ಮಾಡುವುದು ಅವರಿಗೆ ಈ ಬೈಕ್‌ ಓಡಿಸುವ ವಯಸ್ಸಲ್ಲ. ಆದರೆ ಈಗಿನ ಯುವ ಜನತೆ ಜಾವಾ ಮೋಡಿಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳೇ ಅದಕ್ಕೆ ಕನ್ನಡಿ ಹಿಡಿಯುತ್ತಿವೆ. ಉದ್ಯಮಿಗಳು, ಸಿನಿಮಾ ತಾರೆಯರೆಲ್ಲಾ ಹೊಸ ಬೈಕ್‌ ಮೋಡಿಗೆ ಮರುಳಾಗಿದ್ದಾರೆ.

ಸದ್ಯ ನೋಡಲು ಬೈಕ್‌ ಕಣ್ಣು ಕುಕ್ಕುತ್ತಿದೆ. ಆದರೆ ಭವಿಷ್ಯವನ್ನು ಬೈಕ್‌ನ ಪರ್ಫಾರ್ಮೆನ್ಸ್‌ ನಿರ್ಧರಿಸಲಿದೆ. ಸದ್ಯಕ್ಕೆ ಕಾದು ನೋಡುವುದು ಉತ್ತಮ.

Join Samchara Official. CLICK HERE