‘ಕಾಂಗ್ರೆಸ್ ಮುಕ್ತ ಭಾರತ’ವನ್ನು ಎಚ್ಚರಿಸಿದ ಜನಾದೇಶ: ಕೆಲವೇ ಹೊತ್ತಿನಲ್ಲಿ ಪೂರ್ಣ ಚಿತ್ರಣ
COVER STORY

‘ಕಾಂಗ್ರೆಸ್ ಮುಕ್ತ ಭಾರತ’ವನ್ನು ಎಚ್ಚರಿಸಿದ ಜನಾದೇಶ: ಕೆಲವೇ ಹೊತ್ತಿನಲ್ಲಿ ಪೂರ್ಣ ಚಿತ್ರಣ

ಬಿಜೆಪಿ ಅಧಿಕಾರದಲ್ಲಿರುವ ಮೂರು ರಾಜ್ಯಗಳು ಸೇರಿ ಒಟ್ಟು ಐದು ರಾಜ್ಯಗಳಿಗೆ ಕಳೆದ ಎರಡೂವರೆ ತಿಂಗಳ ಅಂತರದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಅವುಗಳ ಮತ ಎಣಿಕೆ ಮಂಗಳವಾರ 8 ಗಂಟೆಗೆ ಆರಂಭವಾಗಿದೆ.

2019ರ ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದುಕೊಳ್ಳಲಾಗಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಮಂಗಳವಾರ ಮಧ್ಯಾಹ್ನದ ವೇಳೆಗೆ ಖಚಿತವಾಗಿ ಹೊರ ಬೀಳಲಿದೆ. ಯಾರು ಗೆಲ್ಲಲಿದ್ದಾರೆ, ಸೋಲಲಿದ್ದಾರೆ ಎಂಬುದು ರಾಷ್ಟ್ರೀಯ ಪಕ್ಷಗಳ ಜತೆಗೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಭವಿಷ್ಯವನ್ನೂ ನಿರ್ಧರಿಸಲಿದೆ. ಈ ಚುನಾವಣೆಗಳು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಪರೀಕ್ಷೆಯೂ ಹೌದು. ಅದರಲ್ಲೂ ಮುಖ್ಯವಾಗಿ ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ನೇರ ಪರಿಣಾಮಗಳನ್ನು ಬೀರಲಿದೆ.

ಬಿಜೆಪಿ ಅಧಿಕಾರದಲ್ಲಿರುವ ಮೂರು ರಾಜ್ಯಗಳು ಸೇರಿ ಒಟ್ಟು ಐದು ರಾಜ್ಯಗಳಿಗೆ ಕಳೆದ ಎರಡೂವರೆ ತಿಂಗಳ ಅಂತರದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಅವುಗಳ ಮತ ಎಣಿಕೆ ಈಗಷ್ಟೇ 8 ಗಂಟೆಗೆ ಆರಂಭವಾಗಿದೆ.

ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಮಧ್ಯ ಪ್ರದೇಶದಲ್ಲಿ 230 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ ಬಹುಮತಕ್ಕೆ 116 ಸ್ಥಾನಗಳು ಅಗತ್ಯವಾಗಿವೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.

ರಾಜಸ್ಥಾನದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿನ 199 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಬಹುಮತಕ್ಕೆ 100 ಸ್ಥಾನಗಳನ್ನು ಗೆಲ್ಲುವುದು ಅಗತ್ಯವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದು ಮುಖ್ಯಮಂತ್ರಿ ಗಾದಿಯತ್ತ ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ದೃಷ್ಟಿ ನೆಟ್ಟಿದ್ದಾರೆ.

ಛತ್ತೀಸ್‌ಗಢದಲ್ಲಿ ಬಿಜೆಪಿಯ ರಮಣ್‌ ಸಿಂಗ್‌ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಒಟ್ಟು 90 ಸ್ಥಾನಗಳಿದ್ದು ಅಧಿಕಾರ ಹಿಡಿಯಲು 46 ಸ್ಥಾನಗಳು ಅಗತ್ಯವಾಗಿವೆ. 2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್‌ ಪ್ರಬಲ ಪೈಪೋಟಿಯನ್ನು ನೀಡಿತ್ತು. ಈ ಬಾರಿಯೂ ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ ಇದೆ ಎಂಬುದಾಗಿ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

40 ಸದಸ್ಯ ಬಲದ ಮಿಜೋರಾಂನಲ್ಲಿ ಸದ್ಯ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಎಂಎನ್‌ಪಿ ಎಂಬ ಸ್ಥಳೀಯ ಪಕ್ಷ ಪೈಪೋಟಿ ನೀಡುತ್ತಿದೆ.

ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಅಧಿಕಾರದಲ್ಲಿದೆ. ಇಲ್ಲಿನ 119 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಟಿಆರ್‌ಎಸ್‌ ವಿರುದ್ಧ ಕಾಂಗ್ರೆಸ್‌, ಟಿಡಿಪಿ, ಕಮ್ಯೂನಿಸ್ಟ್‌ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷ ‘ತೆಲಂಗಾಣ ಜನ ಸಮಿತಿ’ ಒಟ್ಟಾಗಿ ಕಣಕ್ಕಿಳಿದಿವೆ. ಇವರಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ.

ಈ ಹೊತ್ತಿನ ಮತ ಎಣಿಕೆಯ ಅಂಕಿ ಅಂಶಗಳು ಹೀಗಿವೆ:

ರಾಜಸ್ಥಾನ - 199

ಬಿಜೆಪಿ - 72

ಕಾಂಗ್ರೆಸ್‌ - 102

ಮಧ್ಯ ಪ್ರದೇಶ - 230

ಬಿಜೆಪಿ - 106

ಕಾಂಗ್ರೆಸ್‌ - 115

ಛತ್ತೀಸ್‌ಗಢ - 90

ಬಿಜೆಪಿ - 18

ಕಾಂಗ್ರೆಸ್‌ - 63

ಬಿಎಸ್‌ಪಿ - 8

ತೆಲಂಗಾಣ - 119

ಟಿಆರ್‌ಎಸ್‌ - 87

ಕಾಂಗ್ರೆಸ್‌+ - 22

ಬಿಜೆಪಿ - 1

ಮಿಝೋರಾಂ - 40

ಬಿಜೆಪಿ - 1

ಕಾಂಗ್ರೆಸ್‌ - 5

ಎಂಎನ್‌ಎಫ್‌ - 26