samachara
www.samachara.com
‘ನೀನ್ ಯಾವನೋ ನಾಯಿ’ (387 ಸಲ), ಬೇವರ್ಸಿ (107 ಸಲ): ಇತಿ ಚೈತ್ರಾ ಕುಂದಾಪುರ!
COVER STORY

‘ನೀನ್ ಯಾವನೋ ನಾಯಿ’ (387 ಸಲ), ಬೇವರ್ಸಿ (107 ಸಲ): ಇತಿ ಚೈತ್ರಾ ಕುಂದಾಪುರ!

ಆಶಿಕ್ ಕಲ್ಲಾಜೆಗೆ ನಿಮ್ಮ ಅಪ್ಪ-ಅಮ್ಮ ಕಲಿಸಿದ ಬುದ್ಧಿ ಇದೇನಾ ಎಂದು ಪ್ರಶ್ನಿಸಿಸುತ್ತಲೇ ಚೈತ್ರಾ ಕುಂದಾಪುರ ಬಾಯಿಂದ ಉದುರಿದ ಪದಗಳು ನಾಯಿ, ಬೇವರ್ಸಿ, ನಾಯಿ ಬಾಲ... ಮತ್ತು ಇತರ ಕರ್ಣಕಠೋರ ಶಬ್ದಗಳು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ನಡೆದ ಹಲ್ಲೆಗೆ ಮೂಲ ಕಾರಣವಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಾರಣ ಸೋ ಕಾಲ್ಡ್‌ ಹಿಂದೂ ಕಾರ್ಯಕರ್ತೆ, ಕಾಳಿಕಾ ಛಾಯೆ ಅಲಿಯಾಸ್‌ ಚೈತ್ರಾ ಕುಂದಾಪುರ ಬಾಯಿಯಿಂದ ಉದುರಿದ ಭರಪೂರ ನಾಯಿ, ಬೇವರ್ಸಿ ಪದಪುಂಜಗಳ ಸುರಿಮಳೆ.

ಆಗಿದ್ದೇನು?

ಕೆಲವು ದಿನಗಳ ಹಿಂದೆ ಗುರುಪ್ರಸಾದ್ ಪಂಜ (ಸುಳ್ಯ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ) ಅವರಿಗೆ ಚೈತ್ರಾ ಕುಂದಾಪುರ ಮಿಸ್‌ ಕಾಲೊಂದನ್ನು ಕೊಟ್ಟಿದ್ದರು. ಪ್ರತಿಯಾಗಿ ಗುರು ಸ್ನೇಹಿತ ಆಶಿಕ್‌ ಕಲ್ಲಾಜೆ ಚೈತ್ರಾಳಿಗೆ ಕರೆ ಮಾಡಿದ್ದರು. ಅದೇ ಆತ ಮಾಡಿದ ಮಹಾಪರಾಧವಾಗಿತ್ತು. ಅಷ್ಟಕ್ಕೇ ರೌದ್ರಾವತಾರ ತಾಳಿದ ಚೈತ್ರಾ ಕುಂದಾಪುರ ಬಾಯಿಂದ ಮುಂದಿನ ಸುಮಾರು 7 ನಿಮಿಷ ಭರಪೂರ ‘ಸಂಸ್ಕೃತ’ ಪದಗಳ ಪ್ರಯೋಗವಾಗಿದೆ. ಕೀರಲು ಸ್ವರದಲ್ಲಿ ಆಕೆ ಹೇಳಿದ್ದು ಒಂದೂ ಕೇಳುವುದಿಲ್ಲವಾದರೂ ನಾಯಿ, ಬೇವರ್ಸಿ ಪದಗಳು ಮಾತ್ರ ಮತ್ತೆ ಮತ್ತೆ ಕಿವಿಗೆ ಅಪ್ಪಳಿಸುತ್ತವೆ.

ಇದರ ಮಧ್ಯೆಯೇ ಆಕೆ ಹಿಂದೂ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಅಪ್ಪ ಅಮ್ಮ ಕಲಿಸಿದ ಬುದ್ಧಿ ಇದೇನಾ ಎಂದು ಆಶಿಕ್ ಕಲ್ಲಾಜೆಯನ್ನು ಪ್ರಶ್ನಿಸಿದ್ದಾರೆ. ಹಾಗೆ ಪ್ರಶ್ನಿಸುತ್ತಲೇ ಆಕೆ ಹೇಳಿದ್ದು ಮತ್ತದೇ ನಾಯಿ, ಬೇವರ್ಸಿ, ನಾಯಿ ಬಾಲ... ಮತ್ತು ಇತರ ಕರ್ಣಕಠೋರ ಶಬ್ದಗಳು.

ಇದೇ ಅಡಿಯೋ ಬುಧವಾರ ಹಲ್ಲೆಗೆ ಮೂಲ ಕಾರಣವಾಗಿತ್ತು. ಸವಾಲು-ಪ್ರತಿ ಸವಾಲು ನಡೆದು ದೂರದ ಕುಂದಾಪುರದಿಂದ ಐಷಾರಾಮಿ ಇನ್ನೋವಾ ಕಾರಿನಲ್ಲಿ ತನ್ನ ಪಟಾಲಂ ಕರೆದುಕೊಂಡ ಬಂದ ಚೈತ್ರಾ ಕುಂದಾಪುರ ಸುಬ್ರಹ್ಮಣ್ಯದ ಕಾಶಿಕಟ್ಟೆಯಲ್ಲಿ ಗುರುಪ್ರಸಾದ್ ಪಂಜ ಮತ್ತು ಅವರ ಇತರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದರು. ಅಂದ ಹಾಗೆ ಇಲ್ಲಿಂದ ಕೂಗಳತೆಗೂ ಸಮೀಪದಲ್ಲೇ ಪೊಲೀಸ್‌ ಠಾಣೆ ಇದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಮತ್ತು 8 ಜನರ ಮೇಲೆ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗುರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿ ಕರ್ನಾಟಕದ ಸ್ಥಳೀಯ ವಾಹಿನಿ ಮುಕ್ತ ಟಿವಿ ಈ ಆಡಿಯೋವನ್ನು ಮೊದಲ ಬಾರಿಗೆ ಪ್ರಸಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ. ಅಂದ ಹಾಗೆ ಒಂದು ಕಾಲದಲ್ಲಿ ಇದೇ ಚೈತ್ರಾ ಕುಂದಾಪುರ ಇದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಆಡಿಯೋ ಸುಮಾರು 1,700 ಬಾರಿ ಶೇರ್‌ ಆಗಿದ್ದು, 600 ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಕಾಮೆಂಟ್‌ಗಳಲ್ಲಿ ಸ್ವತಃ ಆಕೆಯ ಅಭಿಮಾನಿಗಳೇ ಚೈತ್ರಾ ವಿರುದ್ಧ ಕಿಡಿಕಾರಿದ್ದಾರೆ.

ಹಲವರು ಈ ವಿಡಿಯೋವನ್ನು ಡೌನ್ಲೋಡ್‌ ಮಾಡಿ ಮತ್ತೆ ಮತ್ತೆ ಶೇರ್‌ ಮಾಡುತ್ತಿದ್ದು ಕಳೆದೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಚೈತ್ರಾ ಕುಂದಾಪುರ ಸಂಭಾಷಣೆ ಮನರಂಜನೆಯ ವಸ್ತುವಾಗಿದೆ. ಅದಕ್ಕೊಂದು ಉದಾಹರಣೆ ಈ ಕೆಳಗಿನ ಪೋಸ್ಟ್‌ನಲ್ಲಿದೆ.

ಈ ರೋಮಾಂಚಕ ಆಡಿಯೋದಲ್ಲಿ ನಾಯಿ... ಅನ್ನೋ ಶಬ್ದವನ್ನು ಎಷ್ಟು ಬಾರಿ ಬಳಸಲಾಗಿದೆ ಎಂಬುದನ್ನು ಹೇಳಿದವರಿಗೆ ಒಂದು ಡಾಬರ್ ಮನ್ ನಾಯಿ ಗಿಫ್ಟ್ ಕೊಡಲಾಗುವುದು.

Posted by Dinesh Kumar Dinoo on Thursday, October 25, 2018

ಈ ಫೋನ್‌ ಸಂಭಾಷಣೆಯಲ್ಲಿ ಆಕೆ ಗಂಭೀರ ಆರೋಪವನ್ನೂ ಆಶಿಕ್ ಮತ್ತು ಅವರ ಸಂಗಡಿಗರ ಮೇಲೆ ಹೊರಿಸಿದ್ದು ‘ಮಹಿಳೆಯರ ಕಳ್ಳಸಾಗಣೆ ಮಾಡುತ್ತೀರಿ’ ಎಂದು ಹೇಳಿದ್ದಾರೆ. ಇದೇ ರೀತಿ ಗಂಗಾವತಿಯಲ್ಲಿ ಮಾಜಿ ಶಾಸಕ ‘ಇಕ್ಬಾಲ್‌ ಅನ್ಸಾರಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಬಿಜಿನೆಸ್ ಮಾಡ್ತಾರೆ. ಡೀಲ್ ಮಾಡ್ತಾರೆ’ ಎಂದಿದ್ದಳು. ಇಲ್ಲೂ ಕೂಡ ಅದೇ ರೀತಿಯ ಆರೋಪ ಮಾಡಿದ್ದಾಳೆ. ಹೀಗೊಂದು ಕಾರ್ಯಸೂಚಿಯನ್ನು ಈಕೆ ಮಾಡಿಕೊಂಡಂತೆ ಅನಿಸುತ್ತಿದ್ದು, ಸದ್ಯ ಜೈಲು ಪಾಲಾಗಿರುವ ಚೈತ್ರಾಳಿಗೆ ಸಾಮಾಜಿಕ ಚೌಕಟ್ಟಿನ ಪಾಠ ಹೇಳುವ ಅಗತ್ಯವಿದೆ.