ಲಕ್ಷಾಂತರ ಗೋಮಾತೆಗಳನ್ನು ಕೊಲ್ಲಲು ಮುಂದಾದ ನ್ಯೂಜಿಲ್ಯಾಂಡ್ ಸರಕಾರ!
COVER STORY

ಲಕ್ಷಾಂತರ ಗೋಮಾತೆಗಳನ್ನು ಕೊಲ್ಲಲು ಮುಂದಾದ ನ್ಯೂಜಿಲ್ಯಾಂಡ್ ಸರಕಾರ!

ನ್ಯೂಜಿಲ್ಯಾಂಡ್ ಸರಕಾರ ಮತ್ತು ಕೃಷಿ ವಲಯದ ನಾಯಕರು ಈ ಮಾರಣಹೋಮವನ್ನು ನಡೆಸಲು ಒಟ್ಟಾಗಿದ್ದಾರೆ. ಬರೋಬ್ಬರಿ 1,26,000 ಹಸುಗಳ ಉಸಿರು ನಿಲ್ಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಖರ್ಚು ಮಾಡುತ್ತಿರುವುದು 560 ಮಿಲಿಯನ್‌ ಡಾಲರ್‌ಗಳು. 

ಜಾನುವಾರುಗಳಿಗೆ ತಗುಲುವ ಮೈಕೋಪ್ಲಾಸ್ಮಾ ಬೋವಿಸ್‌ ಎಂಬ ಸೋಂಕು ರೋಗವನ್ನು ನಿರ್ಮೂಲನೆ ಮಾಡಲು ನ್ಯೂಜಿಲ್ಯಾಂಡ್‌ ಮುಂದಾಗಿದೆ. ಅದಕ್ಕಾಗಿ ಈಗಾಗಲೇ ರೋಗ ತಗುಲಿರುವ 1,00,000ಕ್ಕೂ ಹೆಚ್ಚು ಹಸುಗಳನ್ನು ಕೊಲ್ಲಲು ಯೋಜನೆ ಸಿದ್ಧವಾಗಿದೆ. ಈ ಮೂಲಕ ಮೈಕೋಪ್ಲಾಸ್ಮಾ ಬೋವಿಸ್‌ ರೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಮುಂದಾಗಿದೆ. ಇಷ್ಟು ಪ್ರಮಾಣದ ಹಸುಗಳನ್ನು ಕೊಲ್ಲಲು ನ್ಯೂಜಿಲ್ಯಾಂಡ್‌ ಮುಂದಾಗಿರುವುದು ಇದೇ ಮೊದಲ ಬಾರಿ.

ಕೆನಡಾದ ಸರಕಾರ ಮತ್ತು ಕೃಷಿ ವಲಯದ ನಾಯಕರು ಇಂತಹದ್ದೊಂದು ಮಾರಣಹೋಮವನ್ನು ನಡೆಸಲು ಒಟ್ಟಾಗಿದ್ದಾರೆ. ಬರೋಬ್ಬರಿ 1,26,000 ಹಸುಗಳ ಉಸಿರು ನಿಲ್ಲಿಸಲಿದ್ದಾರೆ. ಇದಕ್ಕಾಗಿ ಕೆನಡಿಯನ್ನರು ಖರ್ಚು ಮಾಡುತ್ತಿರುವುದು ಬರೋಬ್ಬರಿ 560 ಮಿಲಿಯನ್‌ ಅಮೆರಿಕನ್‌ ಡಾಲರ್‌ಗಳು. ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ 37,800 ಕೋಟಿ ರೂಪಾಯಿಗಳು. ಮುಂದಿನ ಹತ್ತು ವರ್ಷಗಳಲ್ಲಿ ಲಕ್ಷಾಂತರ ಹಸುಗಳನ್ನು ಇಲ್ಲಿ ಕೊಲ್ಲಲಾಗುವುದು ಎಂದು ಸರಕಾರ ಪ್ರಕಟಿಸಿದೆ.

ಲಕ್ಷಾಂತರ ಗೋಮಾತೆಗಳನ್ನು ಕೊಲ್ಲಲು ಮುಂದಾದ ನ್ಯೂಜಿಲ್ಯಾಂಡ್ ಸರಕಾರ!

ದೇಶದಲ್ಲಿ ಸಹಸ್ರಾರು ಡೈರಿಗಳಿದ್ದು, ಡೈರಿಯಲ್ಲಿನ ಯಾವುದಾದರೂ ಹಸುವಿಗೆ ಸೋಂಕು ತಗುಲಿದ್ದರೆ, ರೋಗಪೀಡಿತ ಹಸುವಿನ ಜತೆಗೆ ಉಳಿದ ಆರೋಗ್ಯಪೂರ್ಣ ಹಸುಗಳನ್ನೂ ಕೂಡ ಕೊಲ್ಲಲಾಗುತ್ತದೆ. ಈ ರೋಗ ಬಂದಿರುವ ಹಸುಗಳ ಮಾಂಸವನ್ನು ಆಹಾರವಾಗಿ ಬಳಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ಪೂರ್ತಿಯಾಗಿ ರೋಗಕ್ಕೆ ತುತ್ತಾಗಿರುವ ಹಸುಗಳನ್ನಷ್ಟೇ ಮಣ್ಣು ಮಾಡಲಾಗುತ್ತದೆ. ಹೀಗೆ ಸಾಯಿಸಿದ ಹಸುಗಳನ್ನು ಮಣ್ಣು ಮಾಡಲು ಸರಕಾರ ನಿರ್ದಿಷ್ಟ ಜಾಗವೊಂದನ್ನು ಗುರುತಿಸಿದ್ದು, ಅಲ್ಲೇ ಹಸುಗಳನ್ನು ಹೂಳಬೇಕಿದೆ. ಇದೊಂದು ರೀತಿಯಲ್ಲಿ, ಕೋಳಿ ಸ್ವರ ಬಂದಾಗ ನಮ್ಮಲ್ಲಿ ಕೋಳಿಗಳ ಮಾರಣಹೋಮ ನಡೆಸಿದಂತೆ ಕಾಣಿಸುತ್ತಿದೆ.

ಹಸುಗಳನ್ನು ಕೊಲ್ಲಲು ಸರಕಾರವೇ ಜನರನ್ನು ನೇಮಿಸಲಿದೆ. ಅಧಿಕಾರಿಗಳು ಹಸು ಕೊಲ್ಲಲು ನೇಮಕಗೊಂಡವರ ಜತೆಯಲ್ಲಿದ್ದು ಕೆಲಸ ಮಾಡಿಸಬೇಕು. ಕೆಲವು ಜನ ತಮ್ಮ ಹಸುಗಳನ್ನು ಕೊಲ್ಲಲು ನಿರಾಕರಿಸಬಹುದು. ಆದರೆ ಒತ್ತಾಯಪೂರ್ವಕವಾಗಿ ಆ ಹಸುಗಳನ್ನು ಕೊಲ್ಲುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೋಗಗ್ರಸ್ತ ಹಸುಗಳನ್ನು ಕೊಲ್ಲಲು ಜನ ಅಡ್ಡ ಬರುವುದಿಲ್ಲ ಎಂಬ ನಂಬಿಕೆಯನ್ನು ಸರಕಾರ ಹೊಂದಿದೆ.

ಲಕ್ಷಾಂತರ ಗೋಮಾತೆಗಳನ್ನು ಕೊಲ್ಲಲು ಮುಂದಾದ ನ್ಯೂಜಿಲ್ಯಾಂಡ್ ಸರಕಾರ!

ಹಸುಗಳಿಗೆ ಅಂಟಿಕೊಂಡಿರುವ ಮೈಕೋಪ್ಲಾಸ್ಮಾ ಬೋವಿಸ್‌ ಸೋಂಕನ್ನು ನಿರ್ಮೂಲನೆ ಮಾಡುವುದರ ಜತೆಗೆ ರಾಷ್ಟ್ರದ ಆರ್ಥಿಕತೆಯ ದೊಡ್ಡ ಭಾಗವಾಗಿರುವ, ಹಾಲು ಕೊಡುವ ಹಸುಗಳನ್ನು ಉಳಿಸಿಕೊಳ್ಳುವುದು ನ್ಯೂಜಿಲ್ಯಾಂಡ್‌ ಮುಂದಿರುವ ಗುರಿ. ಈ ಗುರಿಯನ್ನು ಸಾಧಿಸಲು ಹಸುಗಳನ್ನು ಕೊಲ್ಲುವುದು ನ್ಯೂಜಿಲ್ಯಾಂಡ್‌ಗೆ ಅನಿವಾರ್ಯವಾಗಿ ಕಾಣಿಸಿಕೊಂಡಿದೆ. ನ್ಯೂಜಿಲ್ಯಾಂಡ್‌ನಲ್ಲಿ ಒಟ್ಟು ಜನಸಂಖ್ಯೆ 50 ಲಕ್ಷಕ್ಕಿಂತಲೂ ಕಡಿಮೆ, ಆದರೆ ನ್ಯೂಜಿಲ್ಯಾಂಡ್‌ ಜನರು ಹೊಂದಿರುವ ಹಸುಗಳ ಸಂಖ್ಯೆ 1 ಕೋಟಿಗೂ ಹೆಚ್ಚು. ರೋಗ ತಗುಲಿರುವ 1 ಲಕ್ಷ ಹಸುಗಳನ್ನು ಹಾಗೆಯೇ ಬಿಟ್ಟರೆ ಅದರ 10ರಷ್ಟು ಹಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ನ್ಯೂಜಿಲ್ಯಾಂಡ್‌ನ ಚಿಂತೆ. ಜತೆಗೆ ನ್ಯೂಜಿಲ್ಯಾಂಡ್‌ ಎರಡನೇ ದೊಡ್ಡ ಆದಾಯ ಮೂಲ ಕೂಡ ಹಸುಗಳೇ.

ನ್ಯೂಜಿಲ್ಯಾಂಡ್‌ನಲ್ಲಿ ಮೈಕೋಪ್ಲಾಸ್ಮಾ ಬೋವಿಸ್‌ ಸೋಂಕು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪತ್ತೆಯಾಗಿತ್ತು. ಅಮೆರಿಕಾ ಮತ್ತು ಯುರೋಪಿಯನ್‌ ದೇಶಗಳಲ್ಲಿದ್ದ ಈ ಸೋಂಕು ನ್ಯೂಜಿಲ್ಯಾಂಡ್‌ಗೂ ಕೂಡ ಕಾಲಿಟ್ಟಿತ್ತು. ಸೋಂಕು ತಗುಲಿದ ಹಸುಗಳು ಕೆಚ್ಚಲುಗಳ ಉರಿಯೂತದಿಂದ ನರಳುತ್ತಿದ್ದವು. ತೀವ್ರವಾದ ನ್ಯುಮೋನಿಯಾಕ್ಕೆ ತತ್ತರಿಸುತ್ತಿದ್ದವು. ಕಿವಿಗಳಲ್ಲೂ ಕೂಡ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಮೈಕೋಪ್ಲಾಸಾ ಬೋವಿಸ್‌ ಮಾರಿ ಮುತ್ತಿದಾಗಿನಿಂದ ಸುಮಾರು 26,000 ಹಸುಗಳನ್ನು ಬಲಿತೆಗೆದುಕೊಂಡಿತ್ತು. ಈ ಮಹಾಮಾರಿಯನ್ನು ತಡೆಹಿಡಿಯಲು ನ್ಯೂಜಿಲ್ಯಾಂಡ್‌ ನೂರಾರು ಕೋಟಿಗಳನ್ನು ಖರ್ಚು ಮಾಡಿತ್ತು.

ಲಕ್ಷಾಂತರ ಗೋಮಾತೆಗಳನ್ನು ಕೊಲ್ಲಲು ಮುಂದಾದ ನ್ಯೂಜಿಲ್ಯಾಂಡ್ ಸರಕಾರ!

ಏನೇ ಪ್ರಯತ್ನಗಳನ್ನು ನಡೆಸಿದರೂ ಕೂಡ ಮೈಕೋಪ್ಲಾಸ್ಮಾ ಬೋವಿಸ್‌ ಮಾತು ಕೇಳಿರಲಿಲ್ಲ. ಮೊದಲಿಗೆ ನ್ಯೂಜಿಲ್ಯಾಂಡ್‌ನ ದಕ್ಷಿಣ ದ್ವೀಪ ಭಾಗದಲ್ಲಿದ್ದ ಹಸುಗಳಲ್ಲಿ ಕಂಡು ಬಂದ ಈ ಸೋಂಕು, ಕೆಲವೇ ದಿನಗಳಲ್ಲಿ ಉತ್ತರ ದ್ವೀಪದಲ್ಲಿನ ಹಸುಗಳಿಗೂ ವ್ಯಾಪಿಸಿತ್ತು. ನ್ಯೂಜಿಲ್ಯಾಂಡ್‌ನ ಪೊಲೀಸ್‌ ಇಲಾಖೆ ಮತ್ತು ಪ್ರಾರ್ಥಮಿಕ ಕಾರ್ಖಾನೆಗಳ ಸಚಿವಾಲಯಗಳು ದಕ್ಷಿಣ ದ್ವೀಪದಲ್ಲಷ್ಟೇ ಇದ್ದ ಸೋಂಕು ಸಮುದ್ರ ದಾಟಿ ಉತ್ತರ ದ್ವೀಪಕ್ಕೆ ಬಂದಿದ್ದೇಗೆ ಎನ್ನುವುದರ ಕುರಿತು ಜಂಟಿ ತನಿಖೆ ಕೈಗೊಂಡಿದ್ದವು.

ನ್ಯೂಜಿಲ್ಯಾಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಆರ್ಡೆರ್ನ್‌ ಮಾಧ್ಯಮಗಳ ಜತೆ ಮಾತನಾಡಿ, “ನಾವೀಗ ಕಷ್ಟದ ಕೆಲಸಕ್ಕೆ ಕೈಹಾಕಿದ್ದೇವೆ. ಇಂತಹದ್ದೊಂದು ಮಾರಣಹೋಮವನ್ನು ನೋಡಲು ಯಾರೂ ಕೂಡ ಬಯಸುವುದಿಲ್ಲ. ಆದರೆ ಇದಕ್ಕಿಂತ ಸುಲಭ ಮಾರ್ಗ ನಮ್ಮ ಮುಂದಿಲ್ಲ. ಮೈಕೋಪ್ಲಾಸ್ಮಾ ಸೋಂಕು ಇತರೆ ಹಸುಗಳಿಗೆ ಹರಡದಂತೆ ತಡೆಯಲು ಈ ಮಾರಣಹೋಮವನ್ನು ನಡೆಸಲೇಬೇಕಿದೆ. ದೇಶದೊಳಗಿನ 20,000 ಹಾಲಿನ ಡೈರಿಗಳು ಮತ್ತು ದನದ ಮಾಂಸದ ಫಾರ್ಮ್‌ಗಳನ್ನು ಉಳಿಸಿಕೊಳ್ಳಬೇಕೆಂದರೆ ನಾವು ಈ ಕ್ರೌರ್ಯಕ್ಕೆ ಕೈಹಾಕಲೇಬೇಕು,” ಎಂದಿದ್ದಾರೆ.

ಪ್ರಧಾನ ಮಂತ್ರಿ ಜಸಿಂಡಾ ಆರ್ಡೆರ್ನ್‌ ಹೇಳುವ ಪ್ರಕಾರ ಮೈಕೋಪ್ಲಾಸ್ಮಾ ಸೋಂಕು ದೇಶದ ಎಲ್ಲಾ ಭಾಗಗಳಲ್ಲಿನ ಹಸುಗಳಿಗೆ ಹರಡಿಲ್ಲ. ಎಲ್ಲಾ ಭಾಗಗಳನ್ನು ಸೋಂಕು ಆವರಿಸುವುದಕ್ಕೂ ಮುಂಚೆ ಕ್ರಮ ಕೈಗೊಳ್ಳಬೇಕಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ದೇಶ ನ್ಯೂಜಿಲ್ಯಾಂಡ್‌. ಜಗತ್ತಿನ ಜನರು ಬಳಸುವ ಹಾಲಿನ ಶೇ.3ರಷ್ಟನ್ನು ಈ ಪುಟ್ಟ ದೇಶವೊಂದೇ ಉತ್ಪಾದಿಸುತ್ತದೆ. ಒಟ್ಟಾರೆ 66 ಲಕ್ಷ ಹಾಲು ಕರೆಯುವ ಹಸುಗಳು ನ್ಯೂಜಿಲ್ಯಾಂಡ್‌ನಲ್ಲಿವೆ.