samachara
www.samachara.com
‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!
COVER STORY

‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!

ಈ ಸಂದೇಶ ಹೇಳುವ ಪ್ರಕಾರ 2013ರ ಡಿಸೆಂಬರ್ 21ರಂದು ಹೋಲಿ ಚರ್ಚ್‌ನ ಪ್ರತಿನಿಧಿಗಳು ದೆಹಲಿಯಲ್ಲಿ ಕರ್ನಾಟಕದ ರಾಜಕೀಯ ನಾಯಕರ ಜತೆ ಸಭೆ ಸೇರಿದ್ದರು. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಈ ಸಭೆಯಲ್ಲಿ ಮನವೊಲಿಸಿದ್ದರು.

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇರುವಲ್ಲಿ ಸುಳ್ಳು ಇ-ಮೇಲ್‌ಗಳು ಸುದ್ದಿಕೇಂದ್ರಕ್ಕೆ ಬಂದಿವೆ. ಭಾರತದ ಕ್ಯಾಥೋಲಿಕ್‌ ಬಿಷಪ್‌ ಸಮ್ಮೇಳನ ಕಡೆಯಿಂದ ಬೆಂಗಳೂರಿನ ಪ್ರಧಾನ ಬಿಷಪ್‌ಗೆ ಇ-ಮೇಲ್ ಸಂದೇಶವೊಂದು ಬಂದಿದ್ದು , ಕರ್ನಾಟಕದಲ್ಲಿನ ಲಿಂಗಾಯತರನ್ನು ಕ್ಯಾಥೋಲಿಕ್‌ ಧರ್ಮಕ್ಕೆ ಮತಾಂತರ ಮಾಡುವಂತೆ ಸೂಚಿಸುತ್ತದೆ. ಈ ಸುಳ್ಳು ಇ-ಮೇಲ್ ಈಗ ವಾಟ್ಸಪ್‌ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸುಳ್ಳು ಸಂದೇಶ ಹೇಳುವ ಪ್ರಕಾರ 2013ರ ಡಿಸೆಂಬರ್ 21ರಂದು ಹೋಲಿ ಚರ್ಚ್‌ನ ಪ್ರತಿನಿಧಿಗಳು ದೆಹಲಿಯಲ್ಲಿ ಮೊದಲ ಬಾರಿಗೆ ಕರ್ನಾಟಕದ ರಾಜಕೀಯ ನಾಯಕರ ಜತೆ ಸಭೆ ಸೇರಿದ್ದರು. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಈ ಸಭೆಯಲ್ಲಿ ಮನವೊಲಿಸಿದ್ದರು. ಇ-ಮೇಲ್‌ ಹೇಳುವಂತೆ ಆ ನಂತರದ ದಿನಗಳಲ್ಲಿ ಕರ್ನಾಟಕ ಸರಕಾರದ ಹಲವಾರು ಬಾರಿ ಸಭೆಗಳನ್ನು ನಡೆಸಿ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಮನವೊಲಿಸಲಾಗಿತ್ತು.

‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!

ಸರಕಾರದ ಜತೆಗಿನ ಮಾತುಕತೆ ಅಷ್ಟೇ ಅಲ್ಲದೇ ಲಿಂಗಾಯತರನ್ನು ಕ್ಯಾಥೋಲಿಕ್ ಧರ್ಮಕ್ಕೆ ಹೇಗೆ ಮತಾಂತರಿಸಬೇಕು ಎಂಬುದರ ಕುರಿತು 9 ಹಂತಗಳ ಪಟ್ಟಿಯನ್ನೂ ಕೂಡ ನೀಡಲಾಗಿತ್ತು. ಇದರ ಭಾಗವಾಗಿ 100 ಜನ ಲಿಂಗಾಯತ ಸಮುದಾಯದ ಮೇಧಾವಿಗಳಿಗೆ ಹಣ ನೀಡಿ, ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ ವಿಭಿನ್ನ ಎನ್ನುವ ಪಟ್ಟಿ ತಯಾರಿಸಲು ಸೂಚಿಸಿತ್ತು. ಇದರ ಜತೆಗೆ 2020ರ ಅವಧಿಯೊಳಗೆ ಲಿಂಗಾಯತ ಸಂತರು ಮತ್ತು ಮಠಮಾನ್ಯಗಳ ಜತೆ ಭಾವನಾತ್ಮಕ ಸಂಬಂಧಗಳನ್ನು ಬೆಳಸಿಕೊಂಡು, 2024ರ ಅವಧಿಯೊಳಗೆ ಕಡಿಮೆಯೆಂದರೆ ಶೇ.5ರಷ್ಟು ಲಿಂಗಾಯತರನ್ನು ಕ್ಯಾಥೋಲಿಕ್‌ ಧರ್ಮಕ್ಕೆ ಮತಾಂತರಿಸಬೇಕಿತ್ತು. ಯುರೋಪಿಯನ್‌ ಒಕ್ಕೂಟದ ಯೋಜನೆಗಳ ಅಡಿಯಲ್ಲಿ ಈ ಕಾರ್ಯವನ್ನು ನಡೆಸಬೇಕಿದ್ದು, ಹೋಲಿ ಸೀ ರಾಯಭಾರಿ ಕಛೇರಿ ಇದಕ್ಕೆ ಅಗತ್ಯವಾದ ದೇಣಿಗೆಯನ್ನು ನೀಡುತ್ತಿತ್ತು ಎಂಬ ಸಂದೇಶವನ್ನು ಇ-ಮೇಲ್‌ ಒಳಗೊಂಡಿತ್ತು.

ಈ ಸುಳ್ಳು ಈ ಮೇಲ್‌ಅನ್ನು ಹಲವಾರು ಜನ ಶೇರ್‌ ಮಾಡಿದ್ದರು. ಸ್ವಾಮಿ ನಿಶ್ಚಲಾನಂದರ ಟ್ವಿಟ್ಟರ್‌ ಖಾತೆಯಿಂದಲೂ ಶೇರ್‌ ಆಗಿತ್ತು. ನಂತರದಲ್ಲಿ ಈ ಖಾತೆಯಿಂದ ಸಂದೇಶವನ್ನು ಅಳಿಸಿಹಾಕಲಾಗಿತ್ತು.

‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!

ಸ್ವಾಮಿ ನಿಶ್ಚಲಾನಂದರ ಪೋಸ್ಟ್ಅನ್ನು ಸುಬ್ರಮಣಿಯನ್‌ ಸ್ವಾಮಿ ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಲಾಗಿತ್ತು.

‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!

ಇದು ಫೇಕ್‌ ಇ-ಮೇಲ್‌ ಎಂದು ತಿಳಿದಿದ್ದೇಗೆ?

ಇ-ಮೇಲ್‌ನಲ್ಲಿದ್ದ ತಪ್ಪುಗಳೇ ಇದು ಫೇಕ್‌ ನ್ಯೂಸ್‌ ಎನ್ನುವುದನ್ನು ಸಾಬೀತುಪಡಿಸಿವೆ. ಮೇಲ್‌ನೊಳಗಿನ ವಾಕ್ಯದೋಷಗಳು ಇದು ನಿಜವಾದ ಮೇಲ್‌ ಅಲ್ಲ ಎಂಬುದನ್ನು ಸ್ವಷ್ಟ ಪಡಿಸುತ್ತದೆ. ಇಂಗ್ಲೀಷ್‌ ಭಾ‍ಷೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ‘The’ ಪದ ಹಲವಾರು ಕಡೆಗಳಲ್ಲಿ ಕಂಡುಬಂದಿಲ್ಲ. ಈ ಅಂಶ ಇದು ಇಂಗ್ಲೀಷ್‌ ಭಾಷೆಯನ್ನು ಸರಿಯಾಗಿ ಬಲ್ಲ ವ್ಯಕ್ತಿ ಬರೆದಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಇ-ಮೇಲ್‌ನಲ್ಲಿ ಮಧ್ಯೆ “Harvesting of souls” ಎಂಬ ಪದಗಳು ಬಳಕೆಯಾಗಿವೆ. ಈ ಪದಗಳನ್ನು ಬಳಸುವುದು ದೇಶದೊಳಗಿನ ಬಲಪಂಥೀಯ ಹಿಂದುತ್ವವಾದಿಗಳು. ಮತಾಂತರ ಮಾಡುವವರನ್ನು ಚುಚ್ಚುವ, ಅವಹೇಳನಕಾರಿಯಾಗಿ ಮಾತನಾಡುವ ಸಂಧರ್ಭದಲ್ಲಿ ಈ ‘ಆತ್ಮಗಳ ಕೊಯ್ಲು’ ಎನ್ನುವ ರೂಪಕವನ್ನು ಹಿಂದುತ್ವವಾದಿಗಳು ಬಳಸುತ್ತಾರೆ. ‘reap’ ಪದವನ್ನು ‘rip’ ಎಂದು ಬರೆಯಲಾಗಿದೆ. ಇನ್ನೂ ಹಲವು ತಪ್ಪುಗಳು ಇ-ಮೇಲ್‌ನಲ್ಲಿದ್ದು, ತಪ್ಪುಗಳೇ ಇದು ಸುಳ್ಳು ಸಂದೇಶ ಎನ್ನುವುದನ್ನು ಸಾರುತ್ತದೆ.

ಈ ಇ-ಮೇಲ್‌ಅನ್ನು ಒಸ್ವಾಲ್ಡ್ ಕಾರ್ಡಿನಲ್‌ ಗ್ರಾಸಿಯಸ್‌ ಹೆಸರಿನಲ್ಲಿ ಕಳಿಸಲಾಗಿದೆ. ಸಾಮಾನ್ಯವಾಗಿ ಇಂತಹ ಇ-ಮೇಲ್‌ಗಳನ್ನು ಕಳಿಸುವುದು ಕಾರ್ಯದರ್ಶಿಗಳು. ಆದರೆ ಇಲ್ಲಿ ಉಲ್ಲೇಖಿಸಲಾಗಿರುವ ಒಸಾಲ್ಡ್, ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫೆರೆನ್ಸ್ ಆಫ್‌ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.

‘ಲಿಂಗಾಯತರ ಮತಾಂತರ’: ಸುಳ್ಳು ಸುದ್ದಿಯ ಹೊಸ ಅವತಾರ!

ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫೆರೆನ್ಸ್‌ ಆಫ್‌ ಇಂಡಿಯಾ ಕೂಡ ಈ ಬಗ್ಗೆ ಮಾತನಾಡಿದ್ದು, ತಾನು ಯಾವುದೇ ಇ-ಮೇಲ್ ಕಳಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಈ ಸುಳ್ಳು ಇ-ಮೇಲ್‌ಅನ್ನು ಸಿದ್ಧಪಡಿಸುವವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದೆ. ಈ ಅಂಶವನ್ನು ಸ್ವತಃ ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫೆರೆನ್ಸ್ ಆಫ್‌ ಇಂಡಿಯಾದ ಕಾರ್ಯದರ್ಶಿಗಳಾದ ಬಿಷಪ್ ತಿಯೋಡರ್‌ ಮಸ್ಕರೆನ್ಹಾಸ್‌ ಸಹಿ ಹಾಕಿದ ಪತ್ರದ ಮೂಲಕ ತಿಳಿಸಿದ್ದಾರೆ.

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫೆರೆನ್ಸ್ ಆಫ್ ಇಂಡಿಯಾದ ಸ್ಪಷ್ಟೀಕರಣ ಪತ್ರ.
ಕ್ಯಾಥೋಲಿಕ್ ಬಿಷಪ್ಸ್ ಕಾನ್ಫೆರೆನ್ಸ್ ಆಫ್ ಇಂಡಿಯಾದ ಸ್ಪಷ್ಟೀಕರಣ ಪತ್ರ.
ಇ-ಮೇಲ್‌ನಲ್ಲಿರುವ ಅಂಶಗಳಿಗೂ ಮತ್ತು ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫೆರೆನ್ಸ್ ಆಫ್‌ ಇಂಡಿಯಾ ಅಥವಾ ಚಾರ್ಡಿನಲ್‌ ಗ್ರಾಸಿಯಾಸ್‌ರವರಿಗೂ ಯಾವುದೇ ಸಂಬಂಧವಿಲ್ಲ. ಇ-ಮೇಲ್‌ ಮುಖಾಂತಯರ ತಲುಪಿರುವ ಪತ್ರದಲ್ಲಿರುವ ವ್ಯಾಕರಣದ ತಪ್ಪುಗಳು ಈ ಪತ್ರ ನಮ್ಮ ಕಚೇರಿಯಲ್ಲಿ ಸಿದ್ಧವಾದ ಪತ್ರವಲ್ಲ ಎನ್ನುವುದನ್ನು ಸೂಚಿಸುತ್ತದೆ.
ಬಿಷಪ್ ಥಿಯೋಡರ್‌ ಮಸ್ಕರೆನ್ಹಾಸ್‌, ಕಾರ್ಯದರ್ಶಿಗಳು, ಕ್ಯಾಥೋಲಿಕ್‌ ಬಿಷಪ್ಸ್ ಕಾನ್ಫೆರೆನ್ಸ್ ಆಫ್‌ ಇಂಡಿಯಾ.

ಚುನಾವಣೆಗೆ ಕ್ಷಣಗಣನೆಯಲ್ಲಿರುವ ಕರ್ನಾಟಕದಲ್ಲಿ ಮತದಾರರ ದಿಕ್ಕು ತಪ್ಪಿಸಲು ನಡೆಯುತ್ತಿರುವ ಕುತಂತ್ರಗಳಿವು. ಇವೆಲ್ಲವುಗಳ ಮಧ್ಯೆ ಕರ್ನಾಟಕದ ಮತದಾರರು ಯಾರ ಪರವಾಗಿ ನಿಲ್ಲಲಿದ್ದಾರೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಮಾಹಿತಿ ಮೂಲ: ಬೂಮ್‌ ಲೈವ್‌.