samachara
www.samachara.com
ಅರ್ಮೇನಿಯಾ ಅಸಹಕಾರಿ ಚಳವಳಿ: ಪುಟ್ಟ ದೇಶದಲ್ಲಿ ಹುಟ್ಟಿದ ಜನಾಂದೋಲನ
COVER STORY

ಅರ್ಮೇನಿಯಾ ಅಸಹಕಾರಿ ಚಳವಳಿ: ಪುಟ್ಟ ದೇಶದಲ್ಲಿ ಹುಟ್ಟಿದ ಜನಾಂದೋಲನ

ಅರ್ಮೇನಿಯಾ ರಾಜಕೀಯ ಕ್ಷೋಭೆಯಿಂದ ಹತ್ತಿ ಉರಿಯುತ್ತಿದೆ. ರಾಜಧಾನಿ ಯೆರೆವಾನ್ ನಗರದಲ್ಲಿ ಸೇರಿದ ಸಾವಿರಾರು ಮಂದಿ ಆಡಳಿತ ಪಕ್ಷದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಜಾಗತಿಕ ಮಟ್ಟದ ಈ ಬೆಳವಣಿಗೆ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. 

govindaby chaguppe

govindaby chaguppe

ಅರ್ಮೇನಿಯಾ ಏಷ್ಯಾ ಮತ್ತು ಯುರೋಪ್ ನಡುವೆ ಇರುವ ಬೆಟ್ಟಗಳಿಂದ ಕೂಡಿರುವ ಸುಂದರವಾದ ಪುಟ್ಟ ರಾಷ್ಟ್ರ. ಯುಎಸ್‌ಎಸ್‌ಆರ್‌ ಛಿದ್ರಗೊಂಡ ಮೇಲೆ ಹುಟ್ಟಿಕೊಂಡ ರಾಷ್ಟ್ರಗಳಲ್ಲಿ ಅರ್ಮೇನಿಯಾ ಕೂಡ ಒಂದು. ಟರ್ಕಿ ಗಡಿಗೆ ಹೊಂದಿಕೊಂಡಂತಿರುವ ಇದರ ಜನಸಂಖ್ಯೆ ಹೆಚ್ಚೂ ಕಡಿಮೆ 30 ಲಕ್ಷ. ಕರ್ನಾಟಕದ ಹತ್ತನೇ ಒಂದು ಭಾಗದಷ್ಟು ಅದರ ಭೂ ವಿಸ್ತಾರ. ಸದ್ಯ ಈ ಪುಟ್ಟ ದೇಶ ರಾಜಕೀಯ ಹೋರಾಟದ ಕಣವಾಗಿದೆ. 
ಅರ್ಮೇನಿಯಾದ  ಸುಂದರ ಚಿತ್ರಣ. 
ಅರ್ಮೇನಿಯಾದ  ಸುಂದರ ಚಿತ್ರಣ. 

ಅರ್ಮೇನಿಯಾದಲ್ಲಿ ಸರಕಾರದ ಬದಲಾವಣೆಗೆ ಜನ ಬೀದಿಗೆ ಇಳಿದಿದ್ದಾರೆ. ದೇಶದ ರಾಜಧಾನಿ ಯೆರೆವಾನ್ ನಗರದ ರಿಪಬ್ಲಿಕ್ ವೃತ್ತದಲ್ಲಿ ಸೇರಿದ ಸಾವಿರಾರು ಮಂದಿ ಆಡಳಿತ ಪಕ್ಷ ರಿಪಬ್ಲಿಕನ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ದೇಶಾದ್ಯಂತ ಇರುವ ರೈಲು, ಮೆಟ್ರೋ, ಬಸ್‌ಗಳನ್ನು ತಡೆದು ಜನರು ಸರ್ಕಾರದ ವಿರುದ್ಧ ಅಸಹಕಾರ ಪ್ರತಿಭಟನೆ ಮಾಡುತ್ತಿದ್ದಾರೆ.

ಜನ ಹೋರಾಟ ಯಾಕೆ?:

ವಾರದ ಹಿಂದೆ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ನಿಕೋಲ್ ಪಶಿನಿಯನ್ ನಾಯಕತ್ವದ ಅರ್ಮೆನಿಯನ್ ನ್ಯಾಷನಲ್ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅರ್ಮೆನಿಯನ್ ಸಂವಿಧಾನದಂತೆ ಪ್ರಧಾನಿಯಾಗಲು 105 ಸದಸ್ಯ ಬಲದ ಸಂಸತ್ ಸ್ಥಾನಗಳಲ್ಲಿ ಕನಿಷ್ಠ 53 ಸ್ಥಾನಗಳಲ್ಲಿ ಗಳಿಸಬೇಕು. ಪನಿಶಿಯನ್ ನೇತೃತ್ವದ ಪಕ್ಷ 45 ಸ್ಥಾನಗಳನ್ನು ಗಳಿಸಿದೆ. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಆಡಳಿತರೂಢ ರಿಪಬ್ಲಿಕ್ ಪಕ್ಷ ಅಧಿಕಾರ ತೊರೆಯಲು ನಿರಾಕರಿಸಿದೆ.

ಅಲ್ಲದೆ ಇದೇ ಕಾರಣವೊಡ್ಡಿ ರಿಪಬ್ಲಿಕ್ ಪಕ್ಷದ ರಾಷ್ಟ್ರಪತಿ ಅತಿ ಹೆಚ್ಚು ಸ್ಥಾನ ಗಳಿಸಿರುವ ಅರ್ಮೆನಿಯಾ ಕಾಂಗ್ರೆಸ್ ನಾಯಕ ಪಶಿನಿಯನ್ ಪ್ರಧಾನಿ ಅಭ್ಯರ್ಥಿತ್ವವನ್ನು ತಿರಸ್ಕರಿಸಿದರು. ಅಲ್ಲದೆ ರಾಷ್ಟ್ರಪತಿ ತನ್ನದೇ ಪಕ್ಷದ ಅಭ್ಯರ್ಥಿಯನ್ನು ಪ್ರಧಾನಿಯಾಗಿ ಕೂರಿಸಿದ್ದಾರೆ. ಹೀಗಾಗಿ ಅಧಿಕಾರ ತೊರೆಯುವಂತೆ ಪನಿಶಿಯನ್ ದೇಶಾದ್ಯಂತ ಸರ್ಕಾರದ ವಿರುದ್ದ ಶಾಂತಿಯುತ ಅಸಹಕಾರ ಚಳವಳಿಗೆ ಕರೆ ನೀಡಿದ್ದಾರೆ.

ಕಳೆದ 20 ವರ್ಷಗಳಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರುದ್ಯೋಗ ಇತ್ಯಾದಿಗಳು ದೇಶವನ್ನು ಮುಳುಗಿಸಿವೆ. ಹೀಗಾಗಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಪನಿಶಿಯನ್ ಗುಡುಗಿದ್ದಾರೆ. ನಿರುದ್ಯೋಗ, ಆರ್ಥಿಕ ಹಿಂಜರಿತ ಇತ್ಯಾದಿಗಳಿಂದ ಮೊದಲೇ ಆಕ್ರೋಶ ಜನರ ಸಿಟ್ಟು ಸ್ಫೋಟಗೊಂಡಿದೆ. ಭಾರಿ ಸಂಖ್ಯೆಯ ಜನ ಪಶಿನಿಯನ್ ಕರೆಗೆ ಧನಿಗೂಡಿಸಿದ್ದಾರೆ.

ಪಶಿನಿಯನ್ ಬೇಡಿಕೆ ಏನು?:

ಅತಿ ದೊಡ್ಡ ಪಕ್ಷವಾಗಿರುವ ಅರ್ಮೇನಿಯನ್ ಕಾಂಗ್ರೆಸ್ ನಾಯಕನಾದ ತಮ್ಮನ್ನು ಪ್ರಧಾನಿಯಾಗಿ ಘೋಷಿಸಬೇಕು. ದೇಶದ ಸಂವಿಧಾನವನ್ನು ತಮ್ಮ ಅಧಿಕಾರ ಉಳಿಸಿಕೊಳ್ಳಲು ಬೇಕಾದಂತೆ ತಿರುಚುವುದನ್ನು ನಿಲ್ಲಿಸಬೇಕು. ಬಡತನ, ನಿರುದ್ಯೋಗ ಇತ್ಯಾದಿಗಳಲ್ಲಿ ದೇಶವನ್ನು ಮುಳುಗಿಸಿರುವ ರಿಪಬ್ಲಿಕನ್ನರಿಗೆ ದೇಶವನ್ನು ಆಳುವ ಅರ್ಹತೆ ಇಲ್ಲ. ಹೀಗಾಗಿ ಅಧಿಕಾರವನ್ನು ತೊರೆಯಬೇಕು ಎಂಬುದು ಅವರ ಆಗ್ರಹ.

ಪ್ರಧಾನಿ ಸ್ಥಾನಕ್ಕೆ ಸಾರ್ಜಿಯನ್ ರಾಜೀನಾಮೆ:

ಚಳವಳಿ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದಂತೆ ಹೆದರಿದ ರಿಪಬ್ಲಿಕನ್ ಪಕ್ಷದ ಪ್ರಧಾನಿ ಸೆರ್ಜ್ ಸಾರ್ಜಿಯನ್ ಅಧಿಕಾರದಿಂದ ಕೆಳಗಿಳಿದಿದ್ದಾರೆ. ದೊಡ್ಡ ಪಕ್ಷವಾಗಿ ಉದಯಿಸಿರುವ ಅರ್ಮೇನಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕ ಪನಿಶಿಯನ್ ಪರವಾಗಿ ಸಾವಿರಾರು ಮಂದಿ ನಗರದ ವೃತ್ತದಲ್ಲಿ ಧರಣಿಯಲ್ಲಿ ತೊಡಗಿದ್ದಾರೆ. ಸರ್ಕಾರದ ವಿರುದ್ದ ಶೇಮ್ ಶೇಮ್ ಎಂಬ ಘೋಷಣೆಯನ್ನೂ, ಪಶಿನಿಯನ್ ಪರ ಜೈಕಾರವನ್ನೂ ಹಾಕುತ್ತಿದ್ದಾರೆ.

ಇನ್ನು ಹಂಗಾಮಿ ಪ್ರಧಾನಿಯಾಗಿ ತಮ್ಮನ್ನು ಘೋಷಿಸಬೇಕು ಎಂಬ ಬಗ್ಗೆ ರಿಪಬ್ಲಿಕ್ ಸರ್ಕಾರದ ಜೊತೆಗೆ ಪಶಿನಿಯನ್ ನಡೆಸಿದ ಚರ್ಚೆ ಒಂದೇ ಗಂಟೆಯಲ್ಲಿ ವಿಫಲವಾಯಿತು.

ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ರಿಪಬ್ಲಿಕನ್ನರು ವಿಫಲರಾಗಿದ್ದಾರೆ ಎಂದು ಪಶಿನಿಯನ್ ಆರೋಪಿಸಿದ್ದರೆ, ರಿಪಬ್ಲಿಕನ್ ಸ್ಪೀಕರ್ ಪಶಿನಿಯನ್ ಅವರು ಅಧಿಕಾರಕ್ಕಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಚಿಕ್ಕ ಮಕ್ಕಳನ್ನು ತಮ್ಮ ಪ್ರತಿಭಟನೆಗೆ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪಶಿನಿಯನ್ ಕೂಡ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಅಭಿವೃದ್ಧಿಗೊಳಿಸುವುದೇ ತಮ್ಮ ಅಂತಿಮ ಉದ್ದೇಶ ಎಂದಿದ್ದಾರೆ.

ಈ ಹಿಂದೆ ಹೋರಾಟಕ್ಕಿಳದ ಸಮಯದಲ್ಲಿ ಪಶಿನಿಯನ್ ಸೇರಿದಂತೆ ಸುಮಾರು 200 ಮಂದಿಯನ್ನು ಬಂಧಿಸಲಾಗಿತ್ತು. ಚಳವಳಿ ತೀವ್ರಗೊಂಡಂತೆ ಪ್ರಧಾನಿ ಸಾರ್ಜಿಯನ್ ರಾಜೀನಾಮೆ ನೀಡಿದ್ದರು. ಮಾನವಹಕ್ಕು ಕಾರ್ಯಕರ್ತರ ಪ್ರಯತ್ನದ ಫಲವಾಗಿ ಪಶಿನಿಯನ್ ಅವರನ್ನು ಬಿಡುಗಡೆ ಮಾಡಲಾಗಿತ್ತು.

ನಿಕೋಲ್ ಪಶಿನಿಯನ್ ಯಾರು?:

ಅರ್ಮೇನಿಯಾ ಅಸಹಕಾರಿ ಚಳವಳಿ: ಪುಟ್ಟ ದೇಶದಲ್ಲಿ ಹುಟ್ಟಿದ ಜನಾಂದೋಲನ

ಮೂಲತಃ ಪಶಿನಿಯನ್ ಒಬ್ಬ ಕ್ರೀಡಾ ತರಬೇತುಗಾರನ ಮಗ. ವೃತ್ತಿಯಿಂದ ಪತ್ರಕರ್ತ. 1995ರಲ್ಲಿ ಮೊದಲ ಬಾರಿಗೆ ಅವರು ರಿಪಬ್ಲಿಕನ್ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಸರಣಿ ಲೇಖನಗಳನ್ನು ಬರೆಯತೊಡಗಿದರು. ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್ ಸೇರಿದಂತೆ ಪ್ರಮುಖ ನಾಯಕರ ಯೋಜನೆ, ನೀತಿ, ಪಾಲಿಸಿಗಳನ್ನು ಕಟುವಾಗಿ ವಿಮರ್ಶೆ ಮಾಡಿದರು. ಹೀಗಾಗಿ ರಾತ್ರೋರಾತ್ರಿ ಅವರ ಪತ್ರಿಕೆ ದೇಶದ ಅತ್ಯಂತ ಹೆಚ್ಚು ಮಾರಾಟವಾಗುವ ಪತ್ರಿಕೆಯಾಗಿ ರೂಪುಗೊಂಡಿತು.

2008ರಲ್ಲಿ ಸರ್ಜಿಯನ್ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದನ್ನು ವಿರೋಧಿಸಿ ಪಶಿನಿಯನ್ ರೋಡಿಗಿಳಿದರು. ಅವರಿಗೆ ಜನ ಬೆಂಬಲವೂ ದೊರೆಯಿತು. ಸರ್ಕಾರ ಅವರ ಮೇಲೆ ಗೋಲಿ ಬಾರ್ ನಡೆಸಿತು. ಈ ವೇಳೆ ಸುಮಾರು 10 ಮಂದಿ ಸಾವಿಗೀಡಾದರು. ಹಿಂಸೆ, ದೇಶದ್ರೋಹ, ಪಿತೂರಿ ಇತ್ಯಾದಿ ಆರೋಪಗಳ ಮೇಲೆ ಸರ್ಕಾರ ಪಶಿನಿಯನ್ ಅವರನ್ನು 2011ರ ವರೆಗೆ ಎರಡು ವರ್ಷ ಜೈಲಿಗೆ ತಳ್ಳಿತ್ತು.

2012ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಪಶಿನಿಯನ್ ಸಂಸತ್ತಿಗೆ ಆಯ್ಕೆಯಾದರು. ಈ ನಂತರ ದೇಶದ ಬಗ್ಗೆ ಪ್ರಚಾರ ಮಾಡಿ ಅರ್ಥ ಜನರಿಗೆ ಮಾಡಿಸಿದರು. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸಲು ತಮ್ಮನ್ನು ಪ್ರಧಾನಿ ಮಾಡುವ ಬೇಡಿಕೆಯನ್ನು ಜನರ ಮುಂದಿಟ್ಟು ಹೋರಾಟ ಆರಂಭಿಸಿದ್ದರು. ಈಗ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವ ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ. ಪುಟ್ಟ ದೇಶದ ಈ ಜನಹೋರಾಟವನ್ನು ವಿಶ್ವ ಕುತೂಹಲದಿಂದ ನೋಡುತ್ತಿದೆ.